📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕವನ್ನು ತಕ್ಷಣವೇ ಬರ್ಕಾಸ್ತು ಮಾಡುವ ಘೋಷಣೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾಡಿದ್ದಾರೆ.

    ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸುವಾಗ ಒಂದಷ್ಟು ಸಿಂಪತಿ ಗಿಟ್ಟಿಸಿಕೊಳ್ಳುವ ಮಾತನ್ನಾಡಿದ್ದರು. ಈ ಸಂದರ್ಭವನ್ನು ಇನ್ನೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು  ಬಳಸುವ ಪ್ರಯತ್ನ ಮಾಡಿದರು. ಅಂದರೆ, ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆಗೆ ಆಕ್ರೋಶ ವ್ಯಕ್ತಪಡಿಸುವ ಹಾಗೆ ತಾವೂ ರಾಜೀನಾಮೆ ಕೊಡುತ್ತೇವೆ ರಾಜೀನಾಮೆಯ ನಾಟಕ ಶುರು ಮಾಡಿದ್ದರು. ಹೇಗಂದರೂ ರಾಜೀನಾಮೆ ಅಕ್ಸೆಪ್ಟ್ ಆಗುವುದಿಲ್ಲ, ನಮ್ಮನ್ನು ಅವರು ಸಂತೈಸುತ್ತಾರೆ ಅಂತಲೇ ಅವರ ಪ್ಲಾನ್ ಆಗಿತ್ತು. ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬೇಕು ಅನ್ನುವುದು ಆ ಎಲ್ಲಾ ನಾಟಕಕಾರರ ಲೆಕ್ಕಾಚಾರ ಆಗಿತ್ತು. ಅವರ ಮಾತನ್ನು ಕೇಳುತ್ತಾ ಹೋದರೆ  ಅದರಿಂದ ಆಗುವಬಹುದಾದ ಡ್ಯಾಮೇಜ್ ಎಷ್ಟಾಗಬಹುದು ಎನ್ನುವುದನ್ನು  ಅರಿತ ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಟ್ಟಿ ಮನಸ್ಸು ಮಾಡಿ, ಇಡೀ ಅಲ್ಪಸಂಖ್ಯಾತಕ ಘಟಕವನ್ನೇ ತತಕ್ಷಣದಿಂದಲೇ  ಬರ್ಕಾಸ್ತು ಮಾಡಿ ಆದೇಶ ಹೊರಡಿಸಿದ್ದಾರೆ.

    Also Read  ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!

    ಇತ್ತ, ಶಾಸಕ ರೀಜ್ವಾನ್ ಹರ್ಷದ್ ತಮ್ಮ ಒಪಿನಿಯನ್ನನ್ನು ಗಟ್ಟಿಯಾಗಿ ಹೇಳಿದ್ದಾರೆ. ನಮಗೆ ಪಕ್ಷಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪಕ್ಷವು ಎಲ್ಲರಿಗೂ ಒಮ್ಮೆಲೆನೆ ಮಣೆ ಹಾಕಲು ಆಗುವುದಿಲ್ಲ. ನಿಜವಾಗಿಯೂ ದಾವಣಗೆರೆ ದಕ್ಷಿಣದಲ್ಲಿ ಸಮುದಾಯದವರಿಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಅಲ್ಲಿ ಒಬ್ಬ ವ್ಯಕ್ತಿಗೇ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಯಿತು. ಸಮುದಾಯದ ಮೂರು ನಾಲ್ಕು ಕ್ಯಾಂಡಿಡೇಟ್ ಗಳ ಹೆಸರನ್ನು ಕಳುಹಿಸಿದ್ದರೆ ಆಗ ಅವು ಪರಿಗಣನೆಗೆ ಒಳಪಡುತ್ತಿದ್ದವು. ಆದರೆ ಇಲ್ಲಿ, ಒಬ್ಬ ವ್ಯಕ್ತಿಗೋಸ್ಕರ ಸಮುದಾಯದ ಹೆಸರನ್ನು ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂತು. ಅದು ಸರಿಯಲ್ಲ ಎಂದು ಸ್ವತಹ ಶಾಸಕ ರಿಜ್ವಾನ್ ಹರ್ಷದ್ ಆರೋಪಿಸಿದ್ದಾರೆ. ಈ ರೀತಿಯಾಗಿ ಪ್ಲಾನ್ ಮಾಡಿದ ಒಬ್ಬ ಮಹಾನ್ ವ್ಯಕ್ತಿ ಇಲ್ಲಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರವರು. ಇಂಥವರು ಪಕ್ಷದಲ್ಲೇ ಇರಬಾರದು. ಇದ್ದರೆ ಪಕ್ಷಕ್ಕೆ ಡ್ಯಾಮೇಜ್ ಖಚಿತ. ಪಕ್ಷದ ಒಳಗಿದ್ದು ಕೊಂಡೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಪಕ್ಷವು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂಬ ಆಗ್ರಹವನ್ನು ಶಾಸಕ ರಿಜ್ವಾನ್ ಮಾಡಿದ್ದಾರೆ. ಅವರು ಸಚಿವ ಜಮೀರ್ ಅಹಮದ್ ಹೆಸರನ್ನು ಹೇಳದೆಯೇ ಈ ರೀತಿಯ ಆಕ್ರೋಶದ ಮಾತನ್ನು ಆಡಿದ್ದಾರೆ.

    Also Read  ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!

    ಸಚಿವ ಜಮೀರ್ ಅಹಮದ್ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವಂತಹ ವ್ಯಕ್ತಿ. ಈ ವ್ಯಕ್ತಿಯ ವಿಚಾರದಲ್ಲಿ ಪಕ್ಷದ ಅನೇಕ ಮುಸ್ಲಿಂ ನಾಯಕರಲ್ಲಿ ಅಸಮಾಧಾನವಿದೆ. ಮುಖ್ಯಮಂತ್ರಿಗಳ ವಿಶ್ವಾಸವನ್ನು ಗಳಿಸಿಕೊಂಡು ತಮ್ಮನ್ನು ತಾವು ಮುಸ್ಲಿಂ ಸಮಾಜದ ಪ್ರಶ್ನತೀತ  ನಾಯಕ ಅಂತ ಬಿಂಬಿಸಿಕೊಳ್ಳಲು ಹೋಗುತ್ತಿರುವ ಬಗ್ಗೆ ಅಸಮಾಧಾನವಿದೆ. ಮೂಲ ಕಾಂಗ್ರೆಸ್ಸಿನ ಯಾವೊಬ್ಬ ನಾಯಕರೂ ಸಹ, ಪಕ್ಷಕ್ಕಿಂತ ಜಾತಿ ಹಾಗೂ ಸಮುದಾಯವೇ ದೊಡ್ಡದು ಅಂತ ಹೇಳುವುದಿಲ್ಲ. ಹಾಗೆಯೇ ಯಾರು ಸಹ, ಪಕ್ಷದ ಅಭ್ಯರ್ಥಿಯನ್ನು ಪಕ್ಷದಲ್ಲಿ ಇದ್ದುಕೊಂಡೆ ಸೋಲಿಸುವಂತಹ ಕೆಲಸ ಮಾಡುವುದಿಲ್ಲ. ಆದರೆ ದುರ್ದೈವ, ದಾವಣಗೆರೆ ಉಪಚುನಾವಣೆಯಲ್ಲಿ ಅಂತಹ ಪ್ರಯತ್ನವನ್ನು ನಮ್ಮವರೇ ಒಂದಿಷ್ಟು ಜನರು ಮಾಡಿದ್ದಾರೆ ಎಂದು ಅವರುಗಳು ಹೇಳುತ್ತಿರುವುದರ ಹಿಂದೆ ಅಸಮಾಧಾನದ ಬುಗ್ಗೆಯೇ ಇದೆ.

    ಇದೆಲ್ಲವದವನ್ನು ಗಮನಿಸಿ ಕೆಪಿಸಿಸಿ ಅಧ್ಯಕ್ಷರು, ತಕ್ಷಣವೇ ಪಕ್ಷದ ಅಲ್ಪಸಂಖ್ಯಾತ ಘಟಕವನ್ನು ವಿಸರ್ಜಿಸಿದ್ದಾರೆ. ಹೊಸದಾಗಿ ಆ ಘಟಕಕ್ಕೆ ನೇಮಕ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಕೂಡ.

    Also Read  ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ

    ಡಿಕೆ ಶಿವಕುಮಾರ್ ಅವರ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿಯ ದಾಳ ಉರುಳಿಸುತ್ತಾರೆ ನೋಡಬೇಕಿದೆ. ತಮ್ಮ ಆಪ್ತ ವಲಯದಲ್ಲಿರುವ ಜಮೀರ್ ಅಹ್ಮದ್ ಉಳಿಸಿಕೊಳ್ಳಲು ಏನು ಮಾಡಬಹುದು ಎಂಬ ಕುತೂಹಲವೂ ಇದೆ. ಈಗಾಗಲೇ ತಮ್ಮ ವಲಯದಲ್ಲಿದ್ದ ರಾಜಣ್ಣರನ್ನು ಕಳೆದುಕೊಂಡಾಗಿದೆ. ಈಗ ಜಮೀರ್ ಅವರನ್ನು ಕಳೆದುಕೊಂಡರೆ ತಮ್ಮ ಹಿಡಿತ ಸಡಿಲವಾಗುತ್ತಿದೆ ಎಂಬ ಮೆಸೇಜ್ ಹೋಗುವುದರಿಂದಾಗಿ ಡಿಕೆ ಶಿವಕುಮಾರ್ ತಂಡ ಬಲಿಷ್ಠವಾಗುತ್ತದೆ. ಇದು ತಮ್ಮ ರಾಜಕೀಯ ಹಿಡಿತದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ ಎಂಬುದನ್ನು ಅರಿಯದಷ್ಟು ದಡ್ಡರಲ್ಲ. ಹಾಗಾಗಿ ಈಗ ಯಾವ ರೀತಿಯ ದಾಳ ಉರುಳಿಸಬಹುದು ಎಂಬುದೇ ಪ್ರಶ್ನೆಯಾಗಿದೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಡೇಟಾ ಬೇಡವೇ? ಕರೆ-SMS ಬಳಕೆದಾರರಿಗೆ ಟ್ರಾಯ್‌ನಿಂದ ಹೊಸ ಆಯ್ಕೆ
    ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ
    ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
    ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
    ಅಪ್ಪ -ಅಮ್ಮ ಮಕ್ಕಳ–ಬಾಂಧವ್ಯಕ್ಕೆ ಎಚ್ಚರಿಕೆಯ ಗಂಟೆ……!ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ!
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ