📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.

    ಮಂಗಳೂರು: ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವು ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ಗೊಂದಲ ಮತ್ತು ವಿಭಜನೆ ಸೃಷ್ಟಿಸುವಂತದ್ದು ಎಂದು ಅವರು ಆರೋಪಿಸಿದ್ದಾರೆ.

    ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, “ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿದೆ. ಇದು ಕಾಂಗ್ರೆಸ್‌ನ ಮುಸ್ಲಿಂ ತುಷ್ಠೀಕರಣದ ಪರಮಾವಧಿ ಹಾಗೂ ನ್ಯಾಯಾಲಯದ ಆದೇಶದ ಉಲ್ಲಂಘನೆ” ಎಂದು ಆರೋಪಿಸಿದರು.

    ರಾಜ್ಯ ಸರ್ಕಾರ ತನ್ನ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸಲು ಶಿಕ್ಷಣ ಕ್ಷೇತ್ರವನ್ನು ಬಳಸುತ್ತಿದೆ ಎಂದು ಅವರು ಟೀಕಿಸಿದರು. “ಶಿಕ್ಷಣ ಸಚಿವರು ದಿಕ್ಕುತೋಚದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸರ್ಕಾರ ತಕ್ಷಣ ಹಿಜಾಬ್ ಕುರಿತ ಆದೇಶವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

    Also Read  🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ

    ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಡಾ. ಭರತ್ ಶೆಟ್ಟಿ, “ಮಕ್ಕಳಲ್ಲಿ ಸಮಾನತೆ ಮೂಡಿಸಬೇಕಾದ ಶಾಲಾ-ಕಾಲೇಜುಗಳಲ್ಲೂ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣದ ಮೂಲಕ ಭಿನ್ನಾಭಿಪ್ರಾಯ ಬಿತ್ತುತ್ತಿದೆ” ಎಂದು ಕಿಡಿಕಾರಿದರು.

    “ಹಿಂದಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಲ್ಲಿ ಜಾತಿ-ಮತದ ಭೇದ ತೊಡೆದು ಒಗ್ಗಟ್ಟಿನ ಭಾವನೆ ಬೆಳೆಯಲೆಂದು ಕಟ್ಟುನಿಟ್ಟಿನ ಸಮವಸ್ತ್ರ ನಿಯಮ ಜಾರಿಗೊಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಹಿಂಪಡೆದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ” ಎಂದು ಅವರು ಹೇಳಿದರು.

    ಹಿಜಾಬ್ ವಿವಾದ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದಿರುವಾಗಲೇ ಸರ್ಕಾರ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗಿದೆ ಎಂದು ಅವರು ಆರೋಪಿಸಿದರು. “ದೇಶದ ಏಕತೆಗೆ ಹಾನಿ ಮಾಡುವ ರೀತಿಯಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ” ಎಂದು ಟೀಕಿಸಿದರು.

    Also Read  ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!

    ಶಾಸಕ ವೇದವ್ಯಾಸ ಕಾಮತ್ ಅವರು ಸಹ ಸರ್ಕಾರದ ಕ್ರಮವನ್ನು ಖಂಡಿಸಿ, “ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಹಾಗೂ ಏಕತೆ ತರುವ ಉದ್ದೇಶದಿಂದ ಜಾರಿಗೊಳಿಸಿದ್ದ ಸಮವಸ್ತ್ರ ನಿಯಮವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದು ಶಿಕ್ಷಣದ ವಾತಾವರಣ ಹಾಳುಗೆಡವಲು ಮುಂದಾಗಿದೆ” ಎಂದು ಹೇಳಿದರು.

    “ಸಮವಸ್ತ್ರದ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಜಾತಿ-ಮತ ಭೇದ ಮರೆಸಿ ಸಮಾನತೆಯ ಭಾವ ಮೂಡಿಸುವುದು. ಆದರೆ ಓಲೈಕೆ ರಾಜಕಾರಣಕ್ಕಾಗಿ ಸರ್ಕಾರವೇ ವಿದ್ಯಾರ್ಥಿಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಿದೆ” ಎಂದು ಆರೋಪಿಸಿದರು.

    ಹಿಜಾಬ್ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಹೇಳಿದ ಅವರು, “ರಾಜ್ಯದಲ್ಲಿ ಶಿಕ್ಷಕರ ಕೊರತೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮುಂತಾದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಬದಲು ಸರ್ಕಾರ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ‘ಹೊಸ Form 6’ಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ! CJI ಸ್ಪಷ್ಟನೆ
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರದ ಮಾಸ್ಟರ್ ಪ್ಲಾನ್: ಇನ್ವಿಟೇಶನ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕಡ್ಡಾಯ!
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    “ದಪ್ಪ, ಕಪ್ಪು ಎಂಬ ಅವಹೇಳನ… ವರದಕ್ಷಿಣೆ ಕಿರುಕುಳ… ಕೊನೆಗೆ ಕತ್ತು ಹಿಸುಕಿ ಹತ್ಯೆ! ಧಾರವಾಡದ ಘಟನೆ ಸಮಾಜದ ಮನಸ್ಸನ್ನೇ ನಡುಗಿಸಿದೆ”
    ಲಂಚದ ವಿರುದ್ಧ ದೂರು ನೀಡಿದ್ದಕ್ಕೆ ರೈತನ ಮಗನ ವೃಷಣಗಳನ್ನೇ ಒಡೆದ ಪೊಲೀಸ್ ಕ್ರೌರ್ಯ!
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!