📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ

    ತುಳು ಸಿನಿಮಾಗಳ ಮೂಲಕ ತುಳು ಭಾಷೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ.

    –ಡಾ ಎಂ ಮೋಹನ್ ಆಳ್ವ

    ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಪ್ರಮುಖ ಭಾಷೆಯಾಗಿದೆ. ನಾಟಕ, ಸಿನಿಮಾಗಳ ಮೂಲಕ ತುಳು ಭಾಷೆ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಎಲ್ಲರೂ ಇಷ್ಟ ಪಡುವ ಭಾಷೆ ತುಳು. ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ, ಈ ಹಿಂದೆ ತೆರೆಕಂಡ “ತುಡರ್” ಯಶಸ್ವಿ ಪ್ರದರ್ಶನ ದಾಖಲಿಸಿದೆ. ಅದೇ ತಂಡದಿಂದ “ಕಜ್ಜ” ತುಳು ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿ. ತುಳುವಿನಲ್ಲಿ 150 ಕ್ಕೂ ಮಿಕ್ಕಿದ ಸಿನಿಮಾಗಳು ತೆರೆಗೆ ಬಂದಿದೆ. ಎಲ್ಲವನ್ನು ಮೀರಿ ತುಳು ಚಿತ್ರರಂಗ ಬೆಳೆಯುತ್ತಿದೆ ಎಂದು ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ನುಡಿದರು.
    ಮಂಗಳೂರು ಪುರಭವನದಲ್ಲಿ ಜರಗಿದ ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸುವ “ಕಜ್ಜ” ತುಳು ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
    ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
    ತುಳು ಸಿನಿಮಾದ ಮೂಲಕ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರ ಜಗತ್ತಿಗೆ ಪಸರಿಸಲಿ. ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗ ಇಂದು ವಿಶಾಲವಾಗಿ ಬೆಳೆಯುತ್ತಿರುವುದು ಸಂತೋಷದ ವಿಚಾರ. “ಕಜ್ಜ” ಸಿನಿಮಾದ ಮೂಲಕ ಪ್ರಮುಖ ಪ್ರೊಡಕ್ಷನ್ ತಂಡ ತುಳು ಭಾಷೆಯಲ್ಲಿ ಸಿನಿಮಾ ಮಾಡುತ್ತಿದೆ. ದೈವ ದೇವರ ಮೇಲಿನ ನಂಬಿಕೆ, ಶ್ರದ್ದೆ ಭಕ್ತಿಯಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ. ತುಳುಭಾಷೆ ಇಂದು ಜಗತ್ತಿನಾದ್ಯಂತ ಪಸರಿಸಿದೆ ಎಂದರು.
    ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾಟಕ, ಸಿನಿಮಾ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ “ಕಜ್ಜ’ ತುಳು ಸಿನಿಮಾ ತುಳುವಿನಲ್ಲಿ ಮೈಲುಗಲ್ಲಾಗಲಿ ಎಂದರು.
    ಮುಖ್ಯ ಅತಿಥಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಮಾತನಾಡಿ “ಕಜ್ಜ” ಒಳ್ಳೆಯ ಸಿನಿಮಾ ಆಗಿ ಮೂಡಿಬಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿ ಎಂದರು.
    ಆಡಿಯೋ, ಟ್ರೇಲರ್ ಬಿಡುಗಡೆಗೊಳಿಸಿದ ನಟ ವಸಿಷ್ಠ ಸಿಂಹ ಮಾತನಾಡಿ ಇಲ್ಲಿಯ ಭಾಷೆ ಇಲ್ಲಿಯ ಜನರ ಒಡನಾಟದಿಂದ ನಾನು ತುಳು ಭಾಷೆ ಕಲಿಯುವಂತಾಯಿತು.‌ “ಕಜ್ಜ” ಸಿನಿಮಾದ ಚಿತ್ರೀಕರಣದ ವೇಳೆ ಒಂದು ಕುಟುಂಬದ ಸದಸ್ಯರಂತೆ ನಾವು ಇದ್ದೆವು. ಸಿನಿಮಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ತನಗಿದೆ ಎಂದರು.
    ಕರ್ನಾಟಕ ವಿಧಾನಾ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ ಆಧುನಿಕ ತಂತ್ರಜ್ಞಾನದಲ್ಲಿ ತುಳು ಭಾಷೆಯನ್ನು ಮರೆಯುತ್ತಾರೆ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಇಂದು ತುಳು ಸಿನಿಮಾಗಳ ಮೂಲಕ ಭಾಷೆ ಎತ್ತರಕ್ಕೆ ಬೆಳೆದಿದೆ ಎಂದರು.
    ತುಳು ಭಾಷೆಯ ಅಭಿಮಾದಿಂದ ತಯಾರಿಸಿದ “ಕಜ್ಜ” ಯಶಸ್ವಿಯಾಗಲಿ ಎಂದು ಪ್ರದೀಪ್ ಕಲ್ಕೂರ ನುಡಿದರು‌.
    ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಅನೇಕ ತುಳು ಭಾಷೆಯ ಸಿನಿಮಾಗಳು ತೆರೆಗೆ ಬರುತ್ತಿರುವುದನ್ನು ನಾವು ನೋಡುತ್ತೇವೆ. ಎಲ್ಲರೂ ತುಳು ಭಾಷೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು.
    ಸಮಾರಂಭದಲ್ಲಿ ಹರಿಕೃಷ್ಣ ಪುನರೂರು, ಅರವಿಂದ ಬೋಳಾರ್, ಎಂಪಿ ಶೈಣೈ, ವಿಶ್ವನಾಥ ಶೆಟ್ಟಿ ದುಬಾಯಿ, ಸತೀಶ್ ಬಂದಲೆ, ಉದಯ ಪೂಜಾರಿ ಬಲ್ಲಾಲ್ ಭಾಗ್, ರೈ ಮಸಾಲೆಯ ಮಾಲಕಿ ದಿವ್ಯಾ ರೈ, ನಿರ್ಮಾಪಕ ವಿಶಾಂತ್ ಮೆನೆಜೆಸ್, ಸಹ ನಿರ್ಮಾಪಕ ಪ್ರವೀಣ್ ಸುವರ್ಣ, ನಟ ಸಿದ್ದಾಥ್೯ ಶೆಟ್ಟಿ, ಸಂಗೀತ ನಿರ್ದೇಶಕ ಲಿಖಿತ್ ಪ್ರಸಾದ್ ಶೆಟ್ಟಿ, ಲಂಚುಲಾಲ್, ಹರೀಶ್ ಶೆಟ್ಟಿ, ಆರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
    ಪ್ರಕಾಶ್ ಮಹಾದೇವನ್ ಪ್ರಾರ್ಥಿಸಿದರು. ಚಿತ್ರದ ಕಥೆ ಹಾಗೂ ಸಾಹಿತ್ಯ ಬರೆದ ಮೋಹನ್ ರಾಜ್ ಸ್ವಾಗತಿಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
    “ಕಜ್ಜ” ಸಿನಿಮಾ ಮೇ 15 ರಂದು ತೆರೆ ಕಾಣಲಿದೆ.

    Also Read  KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ 'ಜೈ ಭೀಮ್'..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
    ಇನ್ಮುಂದೆ ಗೂಗಲ್‌ನಲ್ಲಿ ನಿಮ್ಮ ಹಳೆಯ ಕೋರ್ಟ್ ಕೇಸ್‌ಗಳ ವಿವರಗಳನ್ನುಮರೆಮಾಡಬಹುದು-ದೆಹಲಿ ಹೈಕೋರ್ಟ್ ಗೈಡ್‌ಲೈನ್ಸ್ ರಿಲೀಸ್! 
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    ಅಪ್ಪಿಕೊಳ್ಳುವ ಅಮ್ಮನ ಕೈಗಳೇ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ರೆ … ಎಂಥ ದುರ್ವಿಧಿ..!
    ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    BRICS ಸಭೆಯಲ್ಲಿ UAE ಮೇಲೆ ಇರಾನ್ ಕಿಡಿ! ಇಸ್ರೇಲ್–ಇರಾನ್ ಯುದ್ಧ – ಇಸ್ರೇಲ್‌ಗೆ UAE ಗುಪ್ತ ಬೆಂಬಲವೇ?
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಬೆಂಗಳೂರಿಗರಿಗೆ BIG TRAFFIC ALERT! ಸೆ.4ರಿಂದ ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್… ಬೈಕ್, ಆಟೋ ಸವಾರರು ಈ ಮಾಹಿತಿ ತಪ್ಪದೇ ಓದಿ!
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    ಕೋಟ್ಯಂತರದ ಒಡೆಯ… ಒಂದು ದಿನಕ್ಕೆ ಭಿಕ್ಷುಕನಾದ ಬಿಜಿಪಿ ಶಾಸಕ…!ಜೈನ ಮುನಿಯ ಮಾತಿಗೆ ಐಷಾರಾಮಿ ಬದುಕು ಬದಿಗಿಟ್ಟು ಬೀದಿಗಿಳಿದ ಮಹಾರಾಷ್ಟ್ರದ ಶಾಸಕ