📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಹೀಗೇಕೆ ಅಂದ್ರು ಮೋದೀಜಿ…ವಿದೇಶ ಸುತ್ತಾಟ, ಚಿನ್ನದ ಶಾಪಿಂಗ್‌ಗೆ ‘ನೋ’!

    ಹೊಸದಿಲ್ಲಿ/ಬಿಷೇಕ್: “ದೇಶದ ಹಣ ದೇಶದಲ್ಲೇ ಉಳಿಯಲಿ, ಸ್ಥಳೀಯ ಉದ್ಯಮಕ್ಕೆ ಕೈಜೋಡಿಸೋಣ” — ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸ್ವದೇಶಿ ಕರೆಗೆ ಇದೇ ಸರಳ ಅರ್ಥ. 7.8% ಜಿಡಿಪಿ ಬೆಳವಣಿಗೆಯ ಬೆನ್ನಲ್ಲೇ ಅವರು ಭಾರತೀಯರು ‘ವೋಕಲ್ ಫಾರ್ ಲೋಕಲ್’ ಅನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಮೋದಿ ಮಾತಿನ ಹಿಂದಿದೆ ಆರ್ಥಿಕ ಲೆಕ್ಕ

    ವಿದೇಶಿ ವಸ್ತು, ವಿದೇಶಿ ಪ್ರವಾಸದ ಮೋಹಕ್ಕೆ ಮಿತಿ ಹಾಕಿ—ನಮ್ಮ ಹಣ ನಮ್ಮ ದೇಶದಲ್ಲೇ ಉಳಿಯುವಂತೆ ನಿರ್ಧಾರ ತೆಗೆದುಕೊಳ್ಳಿ!
    ನೀವು ಮಾಡುವ ಪ್ರತಿಯೊಂದು ಖರೀದಿಯೂ ಕೇವಲ ಖರ್ಚಲ್ಲ; ಅದು ಒಬ್ಬ ಭಾರತೀಯ ಉದ್ಯಮಿಯ ಬದುಕಿಗೆ, ಒಬ್ಬ ಕಾರ್ಮಿಕನ ದುಡಿಮೆಗೆ, ದೇಶದ ಆರ್ಥಿಕತೆಗೆ ಕೊಡುವ ನೇರ ಬೆಂಬಲ!

    ಆದರೆ ಇಲ್ಲಿ ಒಂದು ಮುಖ್ಯ ಗೊಂದಲಕ್ಕೆ ತೆರೆ ಎಳೆಯಬೇಕಿದೆ. ಕೆಲವರು ಹೇಳಬಹುದು ಮೋದಿ ವಿದೇಶ ಪ್ರವಾಸ ಮಾಡುತ್ತಾರೆ, ನಮಗೆ ಅಂದ್ರೆ ಜನರು ವಿದೇಶ ಪ್ರವಾಸ ಕಡಿಮೆ ಮಾಡಬೇಕು ಎಂಬ ಸಲಹೆ ಅಸಂಬದ್ಧ ……!!ಪ್ರಧಾನಿಯ ವಿದೇಶ ಪ್ರವಾಸ ದೇಶದ ಕೆಲಸ. ವ್ಯಾಪಾರ ಒಪ್ಪಂದ, ಹೂಡಿಕೆ, ರಫ್ತು ಅವಕಾಶ, ತಂತ್ರಜ್ಞಾನ, ರಕ್ಷಣಾ ಸಹಕಾರ, ಇಂಧನ ಹಾಗೂ ಹಲವು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಅವರು ವಿದೇಶಕ್ಕೆ ತೆರಳಲೇಬೇಕು.

    ಆದರೆ ಸಾಮಾನ್ಯ ಕುಟುಂಬದ ವಿದೇಶ ಪ್ರವಾಸ ವೈಯಕ್ತಿಕ ಮೋಜು ಮಸ್ತಿ ಖರ್ಚು. ಅದೇ ಹಣವನ್ನು ನಮ್ಮ ಸುತ್ತಮುತ್ತಲಿನ ಉಡುಪಿ, ಮಂಗಳೂರು, ಕೊಡಗು, ಮೈಸೂರು, ಹಂಪಿ, ಕೇರಳ ಅಥವಾ ದೇಶದ ಮತ್ತೊಂದು ಪ್ರವಾಸಿ ತಾಣದಲ್ಲಿ ಖರ್ಚು ಮಾಡಿದರೆ ಸ್ಥಳೀಯ ಹೋಟೆಲ್, ಟ್ಯಾಕ್ಸಿ, ಅಂಗಡಿ, ಗೈಡ್, ಹಸ್ತಕುಶಲ ವ್ಯಾಪಾರಿ ಹೀಗೆ ಹಲವರ ಬದುಕಿಗೆ ಆದಾಯವಾಗುತ್ತದೆ.ನಮ್ಮ ದೇಶದ ಆರ್ಥಿಕ ಉತ್ತೇಜನಕ್ಕೆ ನಾವೂ ಕೈ ಜೋಡಿಸಿದ ಹಾಗಾಗುತ್ತೆ.

    ಇದೇ ಕಾರಣಕ್ಕೆ ವಿದೇಶದಲ್ಲಿ ಅದ್ಧೂರಿ ಮದುವೆ ಮಾಡುವ ಬದಲು ಭಾರತದಲ್ಲೇ ಮದುವೆ ಆಯೋಜಿಸಿ, ಸ್ಥಳೀಯ ಸೇವಾ ಕ್ಷೇತ್ರಕ್ಕೆ ಅವಕಾಶ ನೀಡಿ ಎಂಬ ಸಂದೇಶವನ್ನೂ ಮೋದಿ ನೀಡಿದ್ದಾರೆ. ಅಂದರೆ ಮದುವೆಯ ಖರ್ಚು ಕೂಡ ದೇಶದೊಳಗಿನ ಆರ್ಥಿಕ ಚಟುವಟಿಕೆಗೆ ಬಲವಾಗಲಿ ಎಂಬ ಲೆಕ್ಕ.

    ಇನ್ನು ಚಿನ್ನದ ವಿಚಾರದಲ್ಲಿ, “ಚಿನ್ನ ಖರೀದಿಸಲೇಬೇಡಿ” ಎಂಬ ಸಂಪೂರ್ಣ ನಿರ್ಬಂಧದ ಮಾತಲ್ಲ. ಅಗತ್ಯವಿಲ್ಲದೆ ಹೆಚ್ಚು ಚಿನ್ನ ಖರೀದಿಸುವುದನ್ನು ತಪ್ಪಿಸಿ, ಬೇಕಾದಾಗ ಮಾತ್ರ ಖರೀದಿಸಿ ಎನ್ನುವುದು ಸಲಹೆ. ಭಾರತದಲ್ಲಿ ಚಿನ್ನದ ದೊಡ್ಡ ಪ್ರಮಾಣದ ಬೇಡಿಕೆಯನ್ನು ಆಮದು ಮೂಲಕ ಪೂರೈಸಲಾಗುವುದರಿಂದ, ಅನಗತ್ಯ ಖರೀದಿ ಕಡಿಮೆಯಾದರೆ ದೇಶದ ವಿದೇಶಿ ವಿನಿಮಯದ ಮೇಲಿನ ಒತ್ತಡವೂ ತಗ್ಗಬಹುದು.

    ಹೀಗಾಗಿ ಮೋದಿ ಅವರ ಮಾತಿನ ಸಾರ ಒಂದೇ—“ವಿದೇಶದ ಬಾಗಿಲು ಮುಚ್ಚಿ” ಎನ್ನುವುದಲ್ಲ; “ನಮ್ಮ ಮನೆಯ ಬಾಗಿಲಿನೊಳಗಿನ ಉದ್ಯಮಕ್ಕೂ ಅವಕಾಶ ಕೊಡಿ” ಎನ್ನುವುದು. ಸರ್ಕಾರ ಜಗತ್ತಿನೊಂದಿಗೆ ವ್ಯಾಪಾರ ಮಾಡಲಿ, ಒಪ್ಪಂದ ಮಾಡಲಿ; ಜನರು ತಮ್ಮ ದೈನಂದಿನ ಖರ್ಚಿನಲ್ಲಿ ಸಾಧ್ಯವಾದಷ್ಟು ‘ನಮ್ಮದು, ಸ್ಥಳೀಯದು’ ಆಯ್ಕೆ ಮಾಡಲಿ ಎಂಬುದು ಈ ಸ್ವದೇಶಿ ಕರೆಗೆ ಇರುವ ಆರ್ಥಿಕ ಹಿನ್ನೆಲೆ.

    ##VocalForLocal #MakeInIndia #Swadeshi #PMModi #IndianEconomy #LocalBusiness #AtmanirbharBharat #IndiaGrowth #DomesticTourism #SupportLocal

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
    ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
    ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
    19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಕಾಂಗ್ರೆಸ್ ನಿಂದ ”MLC ಮಾಡಿಸುತ್ತೇನೆ” ಎಂದು 1.5 ಕೋಟಿ ವಂಚನೆ ಆರೋಪ
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    sdfdf
    ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
    ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”