📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್

    ಪವರ್ನಲ್ಲಿ ಕುಳಿತ ವ್ಯಕ್ತಿಗಳು ಆಡುವ ಮಾತು ಹೇಗೆ ಒಂದು ದೊಡ್ಡ ಶಕ್ತಿಯಾಗುತ್ತದೆ ಅನ್ನುವುದಕ್ಕೆ ಇದೊಂದು ಲೈವ್ ಎಕ್ಸಾಮ್ ನೋಡಿ. ನ್ಯಾಯಮೂರ್ತಿಗಳೊಬ್ಬರು, ಮಾತಿನ ಬರದಲ್ಲಿ ನೀಡಿದಂತಹ ಒಂದು ಸ್ಟೇಟ್ಮೆಂಟ್ ಒಂದು ದೇಶವನ್ನು ತನ್ನೆಡೆಗೆ ಸೆಳೆಯುವಂತೆ ಮಾಡುತ್ತದೆ ಎಂದರೆ ಅರ್ಥ ಏನು? ಸಿಂಪಲ್, ಜನರು ನಾನ ಕಾರಣಕ್ಕೆ ಅಸಹಣೆಗೆ ಒಳಗಾಗಿದ್ದರು ಈ ವ್ಯವಸ್ಥೆಯ ವಿರುದ್ಧ ಅನ್ನುವುದನ್ನು ಸೂಚಿಸುತ್ತದೆ. ಅಧಿಕಾರದಲ್ಲಿ ದ್ದವರು ಸಾಂವಿಧಾನಿಕ ಹುದ್ದೆ ಹಾಗೂ ರಕ್ಷಣೆಯಲ್ಲಿ ದ್ದವರು ದೇಶ ಹಾಗೂ ನಿಯಮ ಎರಡರ ಜೊತೆಜೊತೆಗೆ ಹೇಗೆ ನಡೆದುಕೊಂಡು ಹೋಗಬೇಕಾಗುತ್ತದೆ ಅನ್ನುವುದಕ್ಕೆ ಪಾಠ ಇದು.

    12 ವರ್ಷದಿಂದ ಯಾರಿಂದಲೂ ಮಾಡಲಾಗದಂತಹ ಸಾಧನೆಯನ್ನು ಒಂದು “ಕಾಕ್ಕ್ರೋಜ್” ಮಾಡುತ್ತದೆ. ದೊಡ್ಡ ದೊಡ್ಡ ಹೆಸರು ಮಾಡಿದ ನಾಯಕರುಗಳು, ಹೋರಾಟಗಾರರು ಏನೇ ತಿಪ್ಪರಲಾಗ ಹಾಕಿದರೂ ಒಂದೇ ಒಂದು ಬ್ಯಾಕ್ ಸ್ಟೆಪ್  ಮಾಡಿಸಲು ಸಾಧ್ಯವಾಗಿರ್ಲಿಲ್ಲ, ತಡೆವೊಡ್ಡಲಾಗಿರಲಿಲ್ಲ. ಆದರಿಗ, ಮೊದಲ ಬಾರಿಗೆ ಕೇಂದ್ರ ಸರ್ಕಾರಕ್ಕೆ ಬ್ಯಾಕ್ ಸ್ಟೆಪ್ ಅಂದರೇನು ಅನ್ನುವುದು ಗೊತ್ತಾಗುವಂತೆ ಮಾಡಿದೆ ಈ ಕಾಕ್ರೋಜ್.

    ನೀಟ್ ಎಕ್ಸಾಮ್ ಪೇಪರ್ ಲೀಕ್ ವಿಚಾರ, ಕೇವಲ ಒಂದು ನೆಪ. ಇಡೀ ದೇಶದ ಜನರು ಹಲವು ಕಾರಣಗಳಿಂದ ವ್ಯವಸ್ಥೆಯ ಬಗ್ಗೆ ರೋಸಿದ್ದರು. ಸರ್ಕಾರದ ಅಹಂಕಾರ ಹಾಗೂ ದರ್ಪದ ವಿಚಾರದಲ್ಲಿ ಅಸಹನೀಯರಾಗಿದ್ದರು. ಹಾಗಾಗಿ ಕಾಕ್ರೋಜ್ ಜನತಾ ಪಕ್ಷ ಎಂಬ ವಿಡಂಬನೆಯ ಹಾಗೂ ಟೀಕಾತ್ಮಕವಾಗಿ ರಚನೆಯಾದ ಒಂದು ಡಿಜಿಟಲ್ ಪಕ್ಷ ನೋಡ ನೋಡುತ್ತಲೇ ದೇಶವ್ಯಾಪಿ ಪ್ರಚಾರಕ್ಕೆ ಬಂತು. ಹಾಗೆಯೇ ಅದರ ಹಿಂಬಾಲಕರೂ ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾದರು.

    ಏಕ್ದಮ್,  ಒಂದು ಡಿಜಿಟಲ್ ಪಕ್ಷದ ಹಿಂಬಾಲಕರ ಸಂಖ್ಯೆ ವಿಶ್ವದ ನಂಬರ್ ಒನ್ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯ ಮೂರು ಪಟ್ಟು ಹೆಚ್ಚಾಗಿತ್ತು. ಅಂದರೆ ಜನರು ದೇಶದ ಆಡಳಿತ ವ್ಯವಸ್ಥೆಯ ವಿರುದ್ಧ ಎಷ್ಟು ಅಸಹನೀಯರಾಗಿದ್ದರು ಅನ್ನೋದನ್ನ ಮನಗಾಣಬಹುದು. ಯಾವಾಗ ಈ ಒಂದು ವಿಡಂಬನೆಯ, ಟೀಕಾತ್ಮಕವಾಗಿ ಹುಟ್ಟಿಕೊಂಡ ಪಕ್ಷದ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಏರುತ್ತದೆಯೋ, ಆಗ ಭಾರತೀಯ ಜನತಾಪಕ್ಷ ಹಾಗೂ ಅದರ ಹಿಂಬಾಲಕರು ಕಾಕ್ರೋಚ್ ವಿಚಾರವಾಗಿ ಒಂದಷ್ಟು  ಹೀಗಳೆಯುವ ಮಾತನಾಡುತ್ತಾರೆ. ನಮ್ಮಲ್ಲಿ “ಹಿಟ್” ಇದೆ, ನಾವು ಜಿರಳೆಗಳನ್ನು ಕ್ಲೀನ್ ಮಾಡುತ್ತೇವೆ ಅಂತೆಲ್ಲ ಸ್ಟೇಟ್ಮೆಂಟ್ ನೀಡುತ್ತಾರೆ, ಪೋಸ್ಟ್ ಹಾಕುತ್ತಾರೆ.

    Also Read  E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?

    ಇದೆಲ್ಲವುದರ ನಡುವೆ ಕಾಕ್ರೋಚ್ ಜನತಾ ಪಕ್ಷ, ಸೈಲೆಂಟಾಗಿ ಬೆಳೆಯುತ್ತ ಸಾಗುತ್ತದೆ. ಜನರ ಬೆಂಬಲ ಅನ್ನುವುದಕ್ಕಿಂತ ಹಿಂಬಾಲಕರನ್ನು ಹೆಚ್ಚಿಸಿಕೊಳ್ಳುತ್ತದೆ. ಇದಕ್ಕೆಲ್ಲ ಕಾರಣ, ಭಾರತೀಯ ಜನತಾ ಪಕ್ಷ ಹಾಗೂ ಅದರ ಹಿಂಬಾಲಕರ ಅಹಂಕಾರದ ನಡವಳಿಕೆ. ಅಹಂಕಾರದ ನಡವಳಿಕೆಯನ್ನು ಸಾಮಾನ್ಯ ಜನರು ಮೌನವಾಗಿ ವಿರೋಧಿಸಿಕೊಂಡು ಬಂದಿದ್ದರು. ಅವರೆಲ್ಲರೂ ಟೀಕೆಗಾಗಿ ಹುಟ್ಟಿಕೊಂಡ ಕಾಕ್ಕ್ರೋಜ್ ಜನತಾ ಪಕ್ಷವನ್ನು ಹಿಂಬಾಲಿಸಲು ಪ್ರಾರಂಭಿಸುತ್ತಾರೆ.

    ಇದೇ ಸಂದರ್ಭದಲ್ಲಿ ನೀಟ್ ಎಕ್ಸಾಮ್ ಪೇಪರ್ ಲೀಕ್ ನಿಂದಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಈಡಾಗುತ್ತಾರೆ. ಈ ಪೇಪರ್ ಲೀಕ್ ಹಿಂದೆ ರಾಜಕೀಯ ಪಕ್ಷಗಳಿಗೆ ಹತ್ತಿರದವರು ಹಾಗೂ ಅವರ ಜೊತೆಗೆ ಸಂಬಂಧ ಇಟ್ಟುಕೊಂಡವರು ಇರುವುದು ಗೊತ್ತಾಗುತ್ತದೆ. ಇದರ ನಡುವೆ, ಲೀಕ್ ವಿಚಾರವಾಗಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಒಳಗಾಗುತ್ತಾರೆ, ಆಡಳಿತ ಪಕ್ಷಗಳು ಸರಿಯಾಗಿ ಸ್ಪಂದಿಸಲಿಲ್ಲ. ವಿದ್ಯಾರ್ಥಿಗಳ ಆಕ್ರೋಶ ತಣಿಯುವ ಹಾಗೆ ನಡೆದುಕೊಳ್ಳಲಿಲ್ಲ. ಇದು ನಿಧಾನವಾಗಿ ಕಾಕ್ರೋಚ್ ಜನತಾ ಪಕ್ಷಕ್ಕೆ ಒಂದು ವೇದಿಕೆಯನ್ನು ಕಲ್ಪಿಸುತ್ತದೆ. ಅಲ್ಲಿಯವರೆಗೆ ಕೇವಲ ಡಿಜಿಟಲ್ ಪಕ್ಷವಾಗಿ ಕಾಣಿಸಿಕೊಂಡಿದ್ದ ಕಾಕ್ರೋಚ್, ಅಲ್ಲಿಂದ ವಿದ್ಯಾರ್ಥಿಗಳ ಜೊತೆಗೆ ನೇರವಾಗಿ ಹೋರಾಟಕ್ಕೆ, ಬಹಿರಂಗವಾಗಿ ಇಳಿಯುತ್ತದೆ. ಆ ನಂತರದ್ದು ಇತಿಹಾಸ.

    ಕಳೆದ ಸರಿಸುಮಾರು 20 ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಬಹುತೇಕ ತೆರೆ ಬೀಳುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಯಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಯನ್ನು, ಸರ್ಕಾರವು ಪಡೆಯಲೇ ಬೇಕಾಯಿತು. ಜಿರಳೆಗಳ ಆ ಹೋರಾಟವು ದೊಡ್ಡ ಮಟ್ಟಿಗಿನ ಒತ್ತಡವನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿತ್ತು.

    Also Read  ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ

    12 ವರ್ಷದ ಈ ಆಡಳಿತ ಅವಧಿಯಲ್ಲಿ ಎಂಥಹುದ್ದೆ ಘಟನೆ ನಡೆದರೂ, ನೈತಿಕ ಪ್ರದರ್ಶನವನ್ನು ತೋರ್ಪಡಿಸದೆ, ಅತ್ಯಂತ ಗಡುಸಾಗಿ, ಯಾವ ಬೇಡಿಕೆಗೂ ಜಗ್ಗದೆ, ಯಾವುದಕ್ಕೂ ಅಳುಕದೆ ಸಾಗುತ್ತಿದ್ದ ನರೇಂದ್ರ ಮೋದಿ ನೇತ್ರತ್ವದ ಈ ಸರ್ಕಾರ, ಪ್ರಥಮ ಬಾರಿಗೆ ಜನರ ಒತ್ತಡಕ್ಕೆ ಮಣಿಯಲೇ ಬೇಕಾಯಿತು. ಜನರ ಒತ್ತಡವನ್ನು ಕುಗ್ಗಿಸುವಲ್ಲಿ ಸೋಲ ಬೇಕಾಯಿತು. ಆಡಳಿತ ಪಕ್ಷದ ಹಿಂಬಾಲಕರಿಂದ, ಅನೇಕ ತುಚ್ಚ ಮಾತುಗಳನ್ನು ಕೇಳಿಸಿಕೊಂಡರೂ ಸಹ, ದೇಶದ್ರೋಹಿ ಅಂತ ಅನ್ನಿಸಿಕೊಂಡರೂ ಸಹ, ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದವರು ಅಂತ ಆರೋಪಿಸಿಕೊಂಡೂ ಸಹ, ಜಗ್ಗದೆ ಕುಗ್ಗದೆ ಮುಂದೆ ಸಾಗಿದ ಕಾಕ್ರೋಚ್,ಗಳು ಮೊದಲ ಗೆಲುವನ್ನು ಪಡೆದುಕೊಂಡಿದೆ. ಇದರ ಮಧ್ಯೆ ಹಲವು ನೋವುಗಳನ್ನು ಉಣ್ಣಬೇಕಾಯಿತು, ಪೊಲೀಸರ ಲಾಠಿ ಏಟು ತಿನ್ನಬೇಕಾಯಿತು, ಗಾಯಾಳುವಾಗಬೇಕಾಯಿತು. ಎಲ್ಲವನ್ನು ಮೆಟ್ಟಿ ನಿಂತ ಪರಿಣಾಮ ಇವತ್ತು ಈ ಒಂದು ಹೋರಾಟದಲ್ಲಿ ಒಂದೇ ಒಂದು ಜೀವ ಹಾನಿಯೂ ಆಗದಂತೆ ಅತ್ಯಂತ ಶಾಂತಿಯುತ ಪ್ರತಿಭಟನೆ ಕಾಣಲು ಸಾಧ್ಯವಾಯಿತು. ಪರಿಣಾಮ ದೊಡ್ಡ ಗೆಲುವನ್ನು ಈ ಸರ್ಕಾರದ ವಿರುದ್ಧ ಪಡೆಯಿತು ಈ ಜಿರಳೆಗಳು. ಯಾವ “ಹಿಟ್” ಕೆಲಸ ಮಾಡಲಿಲ್ಲ, ನಿಧಾನವಾಗಿ ದೆಹಲಿಯಿಂದ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಹೋರಾಟದ ಕಿಚ್ಚು ಹಬ್ಬಲು ಯಾವಾಗ ಪ್ರಾರಂಭವಾಯಿತೋ ಗೊತ್ತಿಲ್ಲ ನೋಡಿ, ಆಳುವವರು ಹೆದರಿದರು. ಈ ಹೋರಾಟ ತಮ್ಮ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂಬ ಭಯ ಶುರುವಾದ ಕಾರಣ, ತಕ್ಷಣವೇ ಧರ್ಮೇಂದ್ರ ಪ್ರಧಾನರವರ ರಾಜೀನಾಮೆಯನ್ನು ಪಡೆದುಕೊಂಡಿತು ಸರ್ಕಾರ. ಈ ಕೆಲಸ ಬಹುಶಃ 15 ದಿನದ ಮೊದಲೇ ಮಾಡಿದ್ದರೆ, ಇವತ್ತು ಕಾಕ್ರೋಚ್ ಪಾರ್ಟಿಗೆ ಬೀದಿಗೆ ಬರಲು ಅವಕಾಶವೇ ಇರುತ್ತಿರಲಿಲ್ಲ. ವಿದ್ಯಾರ್ಥಿಗಳು ತಮ್ಮ ಪವರ್ ತೋರಿಸಲು ಆಸ್ಪದವೇ ಇರುತ್ತಿರಲಿಲ್ಲ. ಸರ್ಕಾರ ಹಾಗೂ ಆ ಜಿಲ್ಲಾಡಳಿತ, ಪಕ್ಷದ ಅಹಂಕಾರದ ಕಾರಣದಿಂದ, ಅಂತಹ ಅಂದರೆ ಜಿರಳೆಗಳನ್ನು ಬಗ್ಗು ಪಡೆಯುವ ಅವಕಾಶ ಮಿಸ್ ಮಾಡಿಕೊಂಡರು. ಯಾವುದೇ, ಮಾಧ್ಯಮಗಳ ಸಹಕಾರವು ಇಲ್ಲದೆ, ಯಾವುದೇ ದೊಡ್ಡ ನಾಯಕರ ಮುಖಂಡತ್ವವೂ ಇಲ್ಲದೆ, ಯಾವುದೇ ಸೆಲೆಬ್ರಿಟಿಗಳ ಸಹಕಾರವಿಲ್ಲದೆ ಪ್ರಾರಂಭಿಸಿದ ಹೋರಾಟ ಕೊನೆಯ ಹಂತಕ್ಕೆ ಬರುತ್ತಿದ್ದಂತೆಯೇ ಹಲವು ಸೆಲೆಬ್ರಿಟಿಗಳು ಜೊತೆಗಾದರು. ಅಣ್ಣ ಹಜಾರೆ ಅಂತಹ ಹಿರಿಯ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದರು. ದೇಶದ ವಿರೋಧ ಪಕ್ಷದ ಬಹುತೇಕ ನಾಯಕರುಗಳು ಕಾಕ್ರೋಚ್ಗಳಿಗೆ ಹಸ್ತ ಲಾಗವ ಮಾಡಿದರು.

    Also Read  Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!

    ಇದೆಲ್ಲವೂ ಆಡಳಿತ ಪಕ್ಷದ ಮನೆಯೊಳಗೆ ನಡುಕ ಉಂಟು ಮಾಡಿತು. ಒಂದೊಮ್ಮೆ, ಪ್ರಧಾನಿ ನರೇಂದ್ರ ಮೋದಿಯವರು 15, 20 ದಿನದ ಮೊದಲೇ ವಿದ್ಯಾರ್ಥಿಗಳ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನಕ್ಕೆ ತಾವೇ ಇಳಿದಿದ್ದರೆ ಇವತ್ತು ಮಧ್ಯರಾತ್ರಿ ವಿಡಿಯೋ ಮಾಡಿ ಪೋಸ್ಟ್ ಮಾಡುವ ಅಗತ್ಯತೆ ಇರುತ್ತಿರಲಿಲ್ಲ. ದೇಶದ ಮುಖ್ಯಸ್ಥರಾದ ಪ್ರಧಾನಿಯವರು, ನಿಮ್ಮ ಜೊತೆಗೆ ನಾನಿದ್ದೇನೆ ಎಂಬ ಒಂದೇ ಒಂದು ಮಾತನ್ನು ಆವತ್ತು ಆಡಿದ್ದರೆ, ಬಹುಶಹ ಜಿರಳೆಗಳಿಗೆ ಜಂತರ್ ಮಂತರ್ನಲ್ಲಿ ಅವಕಾಶ ಇರುತ್ತಿರಲಿಲ್ಲ. ಇಷ್ಟು ದೊಡ್ಡ ಪ್ರಮಾಣದ ಬೆಂಬಲವು ದಕ್ಕುತ್ತಿರಲಿಲ್ಲ. ಇದೆಲ್ಲವೂ ಆಗಲು ಕಾರಣ, ಬಿಜೆಪಿ ಹಾಗೂ ಆಡಳಿತ ಪಕ್ಷದ ದರ್ಪದ ನಡೆ.

    ಒಟ್ಟಿನಲ್ಲಿ ಜಿರಳೆಗಳು ಸದ್ಯಕ್ಕೆ ಜಯ ಘೋಷ ಮೊಳಗಿಸುತ್ತಿದ್ದಾರೆ. ಆದರೆ ಆಡಳಿತದಲ್ಲಿರುವವರು ಇವರನ್ನು ಸುಮ್ಮನೆ ಬಿಡುತ್ತಾರೆಯೇ ಎಂಬ ಪ್ರಶ್ನೆಯೂ ಇದೆ. ಸೋಲಿನ ಸಿಟ್ಟು, ಹತಾಶೆ ಎರಡೂ ಆಡಳಿತ ಪಕ್ಷದ ನಾಯಕರನ್ನು ಸುಮ್ಮನೆ ಕೂರಿಸುತ್ತದಾ? ಜಿರಳೆಗಳು ಹುಷಾರಾಗಿರಬೇಕು.. ಏನಂತೀರಿ?

         –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ರಿಲಯನ್ಸ್ ವಿರುದ್ಧ ಇ.ಡಿ ಬಿಗ್ ಹ್ಯಾಮರ್ – ₹1,021 ಕೋಟಿ ಮುಟ್ಟುಗೋಲು
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
    ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಫೇಸ್‌ಬುಕ್ ಜಾಹೀರಾತು ನಂಬಿ ₹32.68 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ!
    ಸಾಲಗಾರರಿಗೆ ಶಾಕ್ ….RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?
    ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
    ಬಿಡದಿಯ ಭೂಮಿ ಯಾರಿಗೆ? ಹೋರಾಟಕ್ಕೆ ಹೊಸ ತಿರುವು.! ಭೂಸಮರದ ಒಳನೋಟ…!
    PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ರಾಜ್ಯ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೊಸ ಸಾರಥಿ!
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?