📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದ ಗರ್ಭಿಣಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ದುಷ್ಕರ್ಮಿಯೊಬ್ಬ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ 6ರ ಬಳಿ ನಡೆದಿದೆ.

    ಮೆಜೆಸ್ಟಿಕ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಶಿಲ್ಪಾ ಅವರು ಕರ್ತವ್ಯದಲ್ಲಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಮೊಬೈಲ್ ಕಳೆದುಹೋಗಿದೆ ಎಂದು ದೂರು ನೀಡಲು ಉತ್ತರ ಭಾರತ ಮೂಲದ ಯುವಕನೊಬ್ಬ ಠಾಣೆಗೆ ಬಂದಿದ್ದ ಎನ್ನಲಾಗಿದೆ.

    ಈ ವೇಳೆ ಗರ್ಭಿಣಿಯಾಗಿದ್ದ ಶಿಲ್ಪಾ ಅವರು ಮಾತ್ರೆಯ ಡೋಸ್ ತೆಗೆದುಕೊಂಡ ಪರಿಣಾಮ  ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಗಮಿಸಿ ದೂರು ಸ್ವೀಕರಿಸುವಂತೆ ಆ ಯುವಕ ಕೂಗಾಡಿದರೂ, ತಕ್ಷಣ ಎದ್ದು ನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಶಿಲ್ಪಾ ಅವರ ಮೇಲೆ ಏಕಾಏಕಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

    Also Read  ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..

    ಆರೋಪಿ ಶಿಲ್ಪಾ ಅವರ ತಲೆಯ ಭಾಗಕ್ಕೆ ಏಳೆಂಟು ಬಾರಿ ರಾಡ್‌ನಿಂದ ಹೊಡೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಶಿಲ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಡ್ಯೂಟಿ ಹಂಚಿಕೆಯಲ್ಲೂ ಪ್ರಶ್ನೆ: PSI ವಿರುದ್ಧ ಆಕ್ರೋಶ

    ಘಟನೆ ಬೆನ್ನಲ್ಲೇ ಗರ್ಭಿಣಿ ಕಾನ್ಸ್‌ಟೇಬಲ್‌ಗೆ ಕರ್ತವ್ಯ ಹಂಚಿಕೆ ಮಾಡಿದ್ದ ರೀತಿಯ ಬಗ್ಗೆ ಪೊಲೀಸ್ ಇಲಾಖೆಯಲ್ಲೇ ಪ್ರಶ್ನೆಗಳು ಕೇಳಿಬಂದಿವೆ. ಆರೋಗ್ಯ ಪರಿಸ್ಥಿತಿ ಹಾಗೂ ಗರ್ಭಾವಸ್ಥೆಯನ್ನು ಪರಿಗಣಿಸದೆ ಠಾಣೆಯ ಮುಂಭಾಗದಲ್ಲಿ ಗಂಟೆಗಟ್ಟಲೆ ಸೆಂಟ್ರಿ ಡ್ಯೂಟಿ ನೀಡಲಾಗಿತ್ತೇ ಎಂಬ ಆರೋಪಗಳು ಕೇಳಿಬಂದಿವೆ.

    ಈ ಹಿಂದೆ ಕೂಡ ಸುರೇಖಾ ಎಂಬ ಕಾನ್ಸ್‌ಟೇಬಲ್ ಅವರು ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಠಾಣೆ ಕಾಯುವ ಕರ್ತವ್ಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಎರಡೂ ಘಟನೆಗಳ ಹಿನ್ನೆಲೆಯಲ್ಲಿ PSI ನಟರಾಜ್ ಅವರ ಕರ್ತವ್ಯ ಹಂಚಿಕೆ ಹಾಗೂ ಸಿಬ್ಬಂದಿಯ ಆರೋಗ್ಯದ ಬಗ್ಗೆ ಅವರು ವಹಿಸಿದ ಕಾಳಜಿಯ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

    Also Read  ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?

    ಆದರೆ, ಹಲ್ಲೆ ಪ್ರಕರಣದ ನೇರ ಕಾರಣ ಆರೋಪಿ ಯುವಕನ ಕೃತ್ಯವೇ ಆಗಿದ್ದು, ಕರ್ತವ್ಯ ಹಂಚಿಕೆಯಲ್ಲಿನ ಯಾವುದೇ ಲೋಪವಿದ್ದರೆ ಅದು ಪ್ರತ್ಯೇಕವಾಗಿ ತನಿಖೆಗೆ ಒಳಪಡಬೇಕಾಗಿದೆ.

    ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಒತ್ತಾಯ

    ಗರ್ಭಿಣಿ ಪೊಲೀಸ್ ಸಿಬ್ಬಂದಿಯ ಸುರಕ್ಷತೆ ಮತ್ತು ಆರೋಗ್ಯವನ್ನು ಕಡೆಗಣಿಸಿ ಕರ್ತವ್ಯ ಹಂಚಿಕೆ ಮಾಡಲಾಗಿದೆಯೇ? ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಸಿಬ್ಬಂದಿಯ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಲಾಗಿತ್ತೇ? ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತೇ? ಎಂಬ ಹಲವು ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.

    ಈ ಪ್ರಕರಣದಲ್ಲಿ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಗರ್ಭಿಣಿ ಕಾನ್ಸ್‌ಟೇಬಲ್‌ಗೆ ಕರ್ತವ್ಯ ಹಂಚಿಕೆಯಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿದೆಯೇ ಎಂಬುದನ್ನೂ ರೈಲ್ವೇ ಪೊಲೀಸ್ ಹಿರಿಯ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
    “ಜೈನ ಸಮುದಾಯದ ಪೂಜ್ಯ ಭಟ್ಟಾರಕರು,ಪ್ರಮುಖ ಗಣ್ಯರು ಡಿ.ಕೆ. ಶಿವಕುಮಾರ್ ಭೇಟಿ-ವಿಧಾನಸೌಧದಲ್ಲಿ ಮಹತ್ವದ ಚರ್ಚೆ…!
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ಮಂಗಳೂರು ಹೆದ್ದಾರಿಗಳಲ್ಲಿ ರಾತ್ರಿ ಟ್ರಾನ್ಸ್ಜೆಂಡರ್ ಕಿರುಕುಳಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ..!
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
    ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳುವುದೇ? ಮಂಗಳೂರಿನ PVS ರಸ್ತೆಯಲ್ಲೇ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಅಡಿಯಲ್ಲೇ ಸುತ್ತಲೂ ಒಣ ಕಸದ ಪ್ಲಾಸ್ಟಿಕ್ ಟಾರ್ಪಾಲಿನ್ ಮತ್ತು ಬಾಕ್ಸ್ ರಾಶಿ!
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ಮಂಗಳೂರು ದಸರಾ ರಜೆ ಇಲ್ಲ : ಕಾಲೇಜು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು! ಪೊಲೀಸ್ ಕ್ರಮಕ್ಕೆ ವಿಎಚ್‌ಪಿ ಖಂಡನೆ!
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!