📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಾಂಗ್ರೆಸ್ ನಿಂದ ”MLC ಮಾಡಿಸುತ್ತೇನೆ” ಎಂದು 1.5 ಕೋಟಿ ವಂಚನೆ ಆರೋಪ

    ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರನ್ನಾಗಿ ಸುವ ಆಮಿಷವಡ್ಡಿ ವ್ಯಕ್ತಿ ಒಬ್ಬ ಒಂದುವರೆ ಕೋಟಿ ಹಣವನ್ನು ಪ್ರೀತಿಸುತ್ತಿರುವ ಘಟನೆ ಇದೀಗ ಹೊರ ಬರುತ್ತಿದೆ. ಮೂಲತಹ ಮಂಗಳೂರಿನ ಮಹಿಳೆಯೊಬ್ಬರಿಗೆ ಟೋಪಿ ಬಿದ್ದಿದೆ ಎನ್ನಲಾಗಿದೆ.

    ಬೆಂಗಳೂರು: ”ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ MLC ಮಾಡಿಸುತ್ತೇನೆ” ಎಂದು ನಂಬಿಸಿ ಮಂಗಳೂರು ಮೂಲದ ಸಮಾಜಸೇವಕಿ ಮಹಿಳೆಯಿಂದ ಸುಮಾರು 1 ಕೋಟಿ 50 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಆರೋಪದ ಮೇಲೆ ಮೂವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

    ಘಟನೆಯ ವಿವರ

    ಮಂಗಳೂರು ಮೂಲದ ಮಹಿಳೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನದಲ್ಲಿ ಭಾಗವಹಿಸುತ್ತಿದ್ದ ವೇಳೆ ಯರ್ರಿಸ್ವಾಮಿ ಎಂಬಾತನ ಪರಿಚಯವಾಗಿದೆ.

    Also Read  ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!

    ”ನೀವು ಇಷ್ಟು ಸಮಾಜಸೇವೆ ಮಾಡುತ್ತೀರಿ, ನೀವು ಯಾಕೆ MLC ಆಗಬಾರದು” ಎಂದು ಹೇಳಿ ನಂಬಿಸಿದ್ದ ಯರ್ರಿಸ್ವಾಮಿ, ತಾನು ಪ್ರಮುಖ ಕಾಂಗ್ರೆಸ್ ನಾಯಕರಿಗೆ ಮಾಧ್ಯಮ ಸಲಹೆಗಾರನಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆಲ್ಲ ತನಗೆ ಗೊತ್ತು ಎಂದು ಹೇಳಿಕೊಂಡಿದ್ದಾನೆ. ರಾಜ್ಯದ ಪ್ರಮುಖ ನಾಯಕರೊಂದಿಗಿನ ಫೋಟೋಗಳನ್ನು ತೋರಿಸಿ ನಂಬಿಸಿದ್ದಾನೆ.

    ಕೋಟಿ ಕೋಟಿ ಡಿಮ್ಯಾಂಡ್

    ಆರಂಭದಲ್ಲಿ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದ ಆರೋಪಿ, ನಂತರ 1 ಕೋಟಿ 25 ಲಕ್ಷಕ್ಕೆ ಫೈನಲ್ ಮಾಡಿದ್ದಾನೆ. 2024ರ ಆಗಸ್ಟ್ ನಿಂದ 2025ರ ಜನವರಿವರೆಗೆ ಹಂತ ಹಂತವಾಗಿ ಒಟ್ಟು 1 ಕೋಟಿ 50 ಲಕ್ಷ ರೂಪಾಯಿ ಪಡೆದಿದ್ದಾನೆ.

    ತನ್ನ ಸಹಚರಾದ ಸಿದ್ದರಾಜು ಮತ್ತು ಬಸವರಾಜು ಅವರಿಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಶಿಕ್ಷಕರ ಸದನ ಮತ್ತು ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಹಣ ಕೊಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Also Read  ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”

    ದೆಹಲಿಯಲ್ಲಿ ಅಸಭ್ಯ ವರ್ತನೆ ಆರೋಪ

    MLC ಸೀಟ್ ಫೈನಲ್ ಮಾಡಿಸಲು ಎಂದು AICC ನಾಯಕರು ದೆಹಲಿಗೆ ಸಂದರ್ಶನಕ್ಕೆ ಕರೆದಿದ್ದಾರೆ ಎಂದು ಹೇಳಿ ಮಹಿಳೆಯನ್ನು ದೆಹಲಿಯ ಖಾಸಗಿ ಹೋಟೆಲ್‌ಗೆ ಕರೆದೊಯ್ದಿದ್ದಾನೆ.

    ಈ ವೇಳೆ ಮಹಿಳೆಯ ರೂಂ ಬಾಗಿಲು ಬಡಿದು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರತಿರೋಧ ತೋರಿ ರೂಂ ಲಾಕ್ ಮಾಡಿಕೊಂಡ ಮಹಿಳೆ ಬಳಿಕ ಹಣ ವಾಪಸ್ ಕೇಳಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

    ಪೊಲೀಸ್ ದೂರು

    ಈ ಕುರಿತು ಸಂತ್ರಸ್ತ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಯರ್ರಿಸ್ವಾಮಿ, ಬಸವರಾಜು ಮತ್ತು ಸಿದ್ದರಾಜು ಎಂಬುವವರ ವಿರುದ್ಧ ವಂಚನೆ, ಬೆದರಿಕೆ ಮತ್ತು ಅಸಭ್ಯ ವರ್ತನೆ ಆರೋಪಗಳಡಿ FIR ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ

    Also Read  ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ

    ಪಕ್ಷದ ಹೇಳಿಕೆ

    ಈ ಬಗ್ಗೆ  ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಪ್ರಸ್ತಾಪವಾಗಿದ್ದರು, ಕಾಂಗ್ರೆಸ್  ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಇಲ್ಲಿಯವರೆಗೆ.  ಬಲ್ಲ ಮೂಲಗಳ ಪ್ರಕಾರ “ಆರೋಪಿ ಪಕ್ಷದ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲ. ಒಬ್ಬ ಮಹಾನ್ ವಂಚಕನಂತೆ ಕಾಣುತ್ತಾನೆ. ಯಾರೇ ಪಕ್ಷದ ಹೆಸರು ಬಳಸಿ ವಂಚನೆ ಮಾಡಿದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಹೆಸರು ಹೇಳಲು ಇಚ್ಚಿಸದ ನಾಯಕನ ಕಡೆಯಿಂದ ವಿವರ ಬಂದಿದೆ ಅಷ್ಟೇ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಬಿಹಾರದಲ್ಲಿ ಭೀಕರ ನೆರೆ: 12 ಜಿಲ್ಲೆಗಳ 22 ಲಕ್ಷ ಜನ ಸಂಕಷ್ಟದಲ್ಲಿ; ಗಂಗಾ ಅಪಾಯದ ಮಟ್ಟ ಮೀರಿ ಹರಿವು
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ
    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    ‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    “ವಚನಾನಂದ ಶ್ರೀ ಸರದಿ ಸಾಲಿನಲ್ಲಿ ಮಕ್ಕಳನ್ನು ಕರೆಯುತ್ತಿದ್ದರು”– ಪೀಠದಿಂದ ಉಚ್ಚಾಟನೆ ಬಳಿಕ ಪೋಕ್ಸೋ ಕೇಸ್ ಶಾಕ್..ಮಠದಲ್ಲಿ ಭಾರೀ ಸಂಚಲನ .. ಭೇಟಿ ನೀಡಿದ ಮಕ್ಕಳ ಕಲ್ಯಾಣ ಸಮಿತಿ
    ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    “ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
    ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    ಕರ್ನಾಟಕದ ನಂದನ್ ನಿಲೇಕಣಿ ನೇತೃತ್ವದಲ್ಲಿ ಭಾರತದ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರದ ಬಿಗ್ ಪ್ಲಾನ್!ಈಗ ರಾಷ್ಟ್ರೀಯ ಪರೀಕ್ಷೆಗಳಿಗೆ ಹೊಸ ರೂಪ ನಿಲೇಕಣಿ ಕೈಯಲ್ಲಿ!
    ಬ್ಯಾಂಕ್ ಸಾಲವಿದ್ದ ಮನೆ ಮಾರಾಟ ಮಾರಿ ವಂಚನೆ
    ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?