📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

    ಸುಪ್ರೀಂ ಕೋರ್ಟ್‌ನಲ್ಲೂ ಮಹೇಶ್ ಶೆಟ್ಟಿ ತಿಮರೋಡಿಗೆ ಹಿನ್ನಡೆ; ಗಡಿಪಾರು ಆದೇಶಕ್ಕೆ ತಡೆ ನೀಡಲು ನಿರಾಕರಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಹಾಗೂ ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಅವರ ವಿರುದ್ಧದ ಗಡಿಪಾರು ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಪ್ರಕರಣದಲ್ಲಿ ಅವರಿಗೆ ಮತ್ತೊಂದು ಕಾನೂನು ಹಿನ್ನಡೆಯಾಗಿದೆ.

    ಮಹೇಶ್ ಶೆಟ್ಟಿ ತಿಮರೋಡಿಯನ್ನು ಅಪರಾಧ ಹಿನ್ನೆಲೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಆಡಳಿತ ಆದೇಶ ಹೊರಡಿಸಿತ್ತು. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಯನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗಿತ್ತು.

    Also Read  ಹೆಚ್ಚು ಜಾಗೃತರಾಗಿ..!ಕೀನ್ಯಾದಿಂದ ವಾಟ್ಸಾಪ್ ಕರೆ, ಅಪ್ಪಟ ತುಳುವಿನಲ್ಲಿ ಮಾತಾಡಿ ಮಂಗಳೂರಿನ ಮಹಿಳೆಗೆ ₹57 ಲಕ್ಷ ದೋಖಾ !

    ಈ ಸಂಬಂಧ ಪುತ್ತೂರು ಉಪ ವಿಭಾಗಾಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ವಾಸಿಸುವಂತೆ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅವರು ಮೊದಲು ಕಾನೂನು ಹೋರಾಟ ನಡೆಸಿದ್ದು, ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಇದರಿಂದ ಪುತ್ತೂರು ಉಪ ವಿಭಾಗಾಧಿಕಾರಿಗಳು ಹೊರಡಿಸಿದ್ದ ಗಡಿಪಾರು ಆದೇಶ ಸದ್ಯಕ್ಕೆ ಜಾರಿಯಲ್ಲೇ ಮುಂದುವರಿಯಲಿದೆ.

    ಮಹೇಶ್ ಶೆಟ್ಟಿ ತಿಮರೋಡಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕರಾಗಿದ್ದು, ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟದ ಮೂಲಕ ರಾಜ್ಯಾದ್ಯಂತ ಪರಿಚಿತರಾಗಿದ್ದರು. ಆದರೆ, ಅವರ ವಿರುದ್ಧ ಹಲವು ಪ್ರಕರಣಗಳು ಹಾಗೂ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.

    Also Read  ಕೋಟಿ ನಕಲಿ ಔಷಧ ಜಾಲದ ವಿರುದ್ಧ ಬಿಗಿ ಕ್ರಮ..ಕಿಂಗ್‌ಪಿನ್ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಪತ್ತೆ…!

    ಸುಪ್ರೀಂ ಕೋರ್ಟ್‌ನ ಈ ಆದೇಶದೊಂದಿಗೆ ಪ್ರಕರಣ ಮತ್ತೊಮ್ಮೆ ಸಾರ್ವಜನಿಕ ಹಾಗೂ ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಯತ್ತ ಎಲ್ಲರ ಗಮನ ನೆಟ್ಟಿದೆ.

    ##MaheshTimarodi #DakshinaKannada #SupremeCourt #Mangaluru #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಕಲಿ ಔಷಧ ದಂಧೆ: ಜೀವ ಉಳಿಸಬೇಕಾದ ಔಷಧವೇ ಹಣ ಮಾಡುವ ದಂಧೆಯಾಯಿತೇ?
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
    ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
    MRPL ಸ್ಫೋಟದ ಭೀಕರತೆಗೆ 9 ಜನಕ್ಕೆ ತೀವ್ರ ಗಾಯ ….ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ…!
    ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ
    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ… ಕಾರಣ ನಿಗೂಢ
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    NEET ಕಿಚ್ಚಿನ ನಡುವೆ ಶಿಕ್ಷಣ ಖಾತೆ ಪ್ರಹ್ಲಾದ್ ಜೋಶಿಗೆ…!ಈದ್ಗಾ ಹೋರಾಟದ ಮೈದಾನದಿಂದ ಕೇಂದ್ರದ ಮಹತ್ವದ ಹೊಣೆಗಾರಿಕೆಯವರೆಗೆ!
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
    ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಏರ್ ವೈಸ್ ಮಾರ್ಷಲ್ ಆದ ಶಕ್ತಿ ಶರ್ಮಾ
    ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಹಸಿರು ಪಟಾಕಿಗೆ ಮಾತ್ರ ಅನುಮತಿ, ಆದ್ರೆ ಮಾರುಕಟ್ಟೆಯ ಹವಾ ನೋಡಿದ್ರೇ…!ಮೂಲಕ್ಕೇ ಕಡಿವಾಣ ಹಾಕದಿದ್ದರೆ ನಿಷೇಧಕ್ಕೆ ಅರ್ಥವೇನು?
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!