📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು

    ಬೆಂಗಳೂರು: ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಹೊತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರವೇಶಾತಿ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆಯೊಂದು ಸುಮಾರು ₹6 ಲಕ್ಷಗಳ ಆರ್ಥಿಕ ಹೊರೆಯಾಗುವ ಪರಿಸ್ಥಿತಿ ನಿರ್ಮಿಸಿತ್ತು. ಈ ಸಂದರ್ಭದಲ್ಲಿ ಸಚಿವ ಬಾಲಣ್ಣ ಅವರು ಮಾನವೀಯತೆ ಮೆರೆದು ವಿದ್ಯಾರ್ಥಿನಿಯ ಕುಟುಂಬದ ನೆರವಿಗೆ ಧಾವಿಸಿ, ಕೊನೆಗೂ ಆಕೆಯ ಪ್ರವೇಶಾತಿ ಸಮಸ್ಯೆ ಬಗೆಹರಿಯುವಂತೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

    ಭೀಮನ ಅಮಾವಾಸ್ಯೆಯ ಪೂಜೆಯನ್ನು ಮುಗಿಸಿ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ್ದ ಸಚಿವ ಬಾಲಣ್ಣ ಅವರನ್ನು ದಾಸರಹಳ್ಳಿ ಕ್ಷೇತ್ರದಿಂದ ತಂದೆ-ತಾಯಿಯೊಂದಿಗೆ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು ಭೇಟಿಯಾಗಿದ್ದಳು. ಆಕೆಯ ಮುಖದಲ್ಲಿದ್ದ ಆತಂಕವನ್ನು ಗಮನಿಸಿದ ಸಚಿವರು ಸಮಸ್ಯೆ ಏನೆಂದು ವಿಚಾರಿಸಿದಾಗ, ಆಕೆಯ ಉನ್ನತ ಶಿಕ್ಷಣದ ಕನಸಿಗೆ ಎದುರಾಗಿದ್ದ ಸಂಕಷ್ಟದ ವಿವರ ಹೊರಬಂದಿದೆ.

    Indian Council of Agricultural Research (ICAR) ವ್ಯಾಪ್ತಿಗೆ ಒಳಪಡುವ UHS ಬಾಗಲಕೋಟೆ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆಯಬೇಕಿದ್ದ ವಿದ್ಯಾರ್ಥಿನಿಗೆ, ಪೋರ್ಟಲ್‌ನಲ್ಲಿ ಭಾರತದಲ್ಲಿ ವಾಸಿಸುವ ದೃಢೀಕರಣ ಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸುಮಾರು ₹6 ಲಕ್ಷ ಪ್ರವೇಶ ಶುಲ್ಕ ಪಾವತಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು.

    Also Read  ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು

    ಒಂದೆಡೆ ಉನ್ನತ ಶಿಕ್ಷಣದ ಕನಸು; ಮತ್ತೊಂದೆಡೆ ಆರು ಲಕ್ಷ ರೂಪಾಯಿಗಳ ಭಾರ.

    ವಿಷಯವನ್ನು ಕೇಳಿದ ಸಚಿವರು ಕೇವಲ ಭರವಸೆ ನೀಡಿ ಕಳುಹಿಸದೆ, ತಕ್ಷಣವೇ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚನೆ ನೀಡಿದರು. ವಿದ್ಯಾರ್ಥಿನಿ ಹಾಗೂ ಆಕೆಯ ತಂದೆಯನ್ನು ತಮ್ಮ ಕಾರಿನಲ್ಲೇ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ಗೆ ಕರೆದುಕೊಂಡು ಹೋಗಿ, ಮುಖ್ಯಮಂತ್ರಿ ಅವರ ಗಮನಕ್ಕೆ ಸಮಸ್ಯೆಯನ್ನು ತಂದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು.

    ಆದರೂ ಸಚಿವರ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಸಂಸದ ತೇಜಸ್ವಿ ಸೂರ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸಿದರು. ದೆಹಲಿಯ ತಮ್ಮ ಕಚೇರಿಯ ಸಾಯಿ ಬಾಲಾಜಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ವಿದ್ಯಾರ್ಥಿನಿಯನ್ನು ದೆಹಲಿಗೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.

    Also Read  ಬಾಳೆಕುದ್ರು ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆಕ್ರೋಶ; ಶಿರ್ವ, ಜಾಗೆಲೆ ಬೃಹತ್ ಪ್ರತಿಭಟನೆ

    ಈ ವೇಳೆ ವಿದ್ಯಾರ್ಥಿನಿಯ ತಂದೆಯ ವೃತ್ತಿಯನ್ನೂ ಸಚಿವರು ವಿಚಾರಿಸಿದರು. “ಆಟೋ ಓಡಿಸುತ್ತಾರೆ ಸರ್” ಎಂಬ ಉತ್ತರ ಕೇಳಿದ ಸಚಿವರು, ಮಗಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಆ ತಂದೆಯ ಪರಿಸ್ಥಿತಿಯನ್ನು ಅರಿತುಕೊಂಡರು.

    ವಿದ್ಯಾರ್ಥಿನಿಯ ಭವಿಷ್ಯಕ್ಕೆ ಯಾವುದೇ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸಚಿವ ಬಾಲಣ್ಣ ಅವರು ವಿದ್ಯಾರ್ಥಿನಿ ಹಾಗೂ ಆಕೆಯ ತಂದೆಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಸಿ, ದೆಹಲಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆಯೂ ಕ್ರಮ ಕೈಗೊಂಡರು.

    ಮರುದಿನ ಬೆಳಗ್ಗೆಯೇ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆಯೇ, ಸಮಸ್ಯೆಯ ಕುರಿತು ಯಾವುದೇ ಪ್ರಗತಿ ಕಂಡಿದೆಯೇ ಎಂಬುದನ್ನು ಖುದ್ದಾಗಿ ವಿಚಾರಿಸಿದರು. ಅಲ್ಲದೆ ಕೇಂದ್ರ ಸಚಿವ ಸೋಮಣ್ಣ ಅವರ ಗಮನಕ್ಕೂ ವಿಷಯವನ್ನು ತಂದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಸಹಕಾರ ಕೋರಿದರು.

    Also Read  ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!

    ಅಂತಿಮವಾಗಿ ತೇಜಸ್ವಿ ಸೂರ್ಯ ಹಾಗೂ ಸೋಮಣ್ಣ ಅವರ ಸಹಕಾರದೊಂದಿಗೆ ವಿದ್ಯಾರ್ಥಿನಿಯ ಪ್ರವೇಶಾತಿ ಸಮಸ್ಯೆ ಬಗೆಹರಿದಿದ್ದು, ಆಕೆಯ ಉನ್ನತ ಶಿಕ್ಷಣದ ಕನಸಿಗೆ ಮತ್ತೆ ದಾರಿ ತೆರೆದಿದೆ.

    ಈ ಘಟನೆ ಕೇವಲ ಪ್ರವೇಶಾತಿ ಸಮಸ್ಯೆ ಬಗೆಹರಿಸಿದ ಪ್ರಕರಣವಾಗಿ ಮಾತ್ರ ಉಳಿಯುವುದಿಲ್ಲ. ಮಗಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಒಬ್ಬ ತಂದೆಯ ಹೋರಾಟಕ್ಕೆ ಸಿಕ್ಕ ಬೆಂಬಲ, ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಒಬ್ಬ ವಿದ್ಯಾರ್ಥಿನಿಗೆ ದೊರೆತ ಭರವಸೆ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಮಾನವೀಯವಾಗಿ ಸ್ಪಂದಿಸಿದ ಸಚಿವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಸ್ಥಳೀಯ ರೈತರಿಂದಲೇ ಆಗ್ರಹ
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ಕಚೇರಿಯಿಂದ ರಸ್ತೆಗಿಳಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ …….!ಎಲ್ಲಾ ಅಕ್ರಮಕ್ಕೆ ಒಂದ್ಸಲ ಎಚ್ಚರಿಕೆ ನೋಟಿಸ್ , ನೆಕ್ಸ್ಟ್ ಟೈಮ್ ಸೀಜ್…!
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
    ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ
    ನಿವೇಶನ ಮೋಸದ ಆರೋಪ: ಶಾಸಕ ಎಸ್ ಟಿ ಸೋಮಶೇಖರ್ ಬೆಂಬಲಿಗ ಕೇಬಲ್ ಕೃಷ್ಣನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
    ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಏನಿದು ‘ಲಾಸ್ಟ್ ಲೈವ್’ ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    ರೈತರಿಗೆ ಬಿಗ್ ರಿಲೀಫ್! ಕೃಷಿ ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
    “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!