📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?

    ಉಡುಪಿ: ಇಂದು ಉಡುಪಿ ಜಿಲ್ಲೆಯ ಆರು ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಲ್ಲಿನ ಅಧಿಕಾರಿಗಳಿಗೆ ಶಾಪ್ ನೀಡಿದ್ದಾರೆ. ದಾಳಿಯ ವೇಳೆ ಪಲ್ಲವು ಅಧಿಕಾರಿಗಳ ವಿಚಾರವಾಗಿ ಒಂದಷ್ಟು ಎವಿಡೆನ್ಸ್ ಸಿಕ್ಕಿದೆ ಎನ್ನಲಾಗುತ್ತಿದೆ. ಲೋಕಾಯುಕ್ತ ಪೊಲೀಸರು ಸಂಪೂರ್ಣವಾಗಿ ಜಾಲಾಡುತ್ತಿದ್ದಾರೆ, ಕಡತಗಳ ಪರಿಶೀಲನೆಯಲ್ಲಿ ಸಂಜೆಯಾದರೂ ನಿರತರಾಗಿದ್ದಾರೆ.

    ಸಾರ್ವಜನಿಕರ ಪದೇ ಪದೇ ಬರುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಇಂದು ಬೆಳ್ಳಂ ಬೆಳಗ್ಗೆ 6 ತಾಲೂಕ್ ಆಫೀಸ್ ಗಳಿಗೆ ದಾಳಿ ನಡೆಸಿದ್ದಾರೆ.  ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ, ಕಾಪು ಹಾಗೂ ಬೈಂದೂರು ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬ್ರಹ್ಮಾವರದ ಕಚೇರಿಗೆ ಕಳೆದ ತಿಂಗಳಿನಲ್ಲಷ್ಟೇ ದಾಳಿ ನಡೆದಿತ್ತು. ಹಾಗೆಯೇ ಅಲ್ಲಿನ ವಿಚಾರ ತನಿಖೆಯಲ್ಲಿದೆ.

    Also Read  ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨

    ಈ ಕಾರ್ಯಾಚರಣೆಯಲ್ಲಿ ಉಡುಪಿ ಲೋಕಾಯುಕ್ತ ಎಸ್ ಪಿ ಹಾಲ್ ಮೂರ್ತಿ ನೇತ್ರತ್ವದಲ್ಲಿ  ಮಂಗಳೂರು  ಡಿವೈಎಸ್ಪಿ, ಉಡುಪಿಯ ಒಬ್ಬರು ಹಾಗೂ ಮಂಗಳೂರಿನ ನಾಲ್ಕು ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಸೇರಿದಂತೆ ಒಟ್ಟು ಆರು ಪೊಲೀಸ್ ನಿರೀಕ್ಷಕರ ತಂಡಗಳು ತಾಲೂಕು ಕಚೇರಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಲೋಕಾಯುಕ್ತ ಉಡುಪಿ ಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಹೆಬ್ರಿ ತಾಲೂಕು ಕಚೇರಿಯಲ್ಲಿ ಕಡತ ಪರಿಶೀಲನಾ ಕಾರ್ಯ ನಡೆಯುತ್ತಿದೆ.

    ತಾಲೂಕು ಕಚೇರಿಗಳಲ್ಲಿನ ಬಾಕಿ ಕಡತಗಳು, ಕಡತ ವಿಲೇವಾರಿ ಹಾಗೂ ಸಾರ್ವಜನಿಕರ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

    ಲೋಕಾಯುಕ್ತ ಸಂಸ್ಥೆಯ ರಾಜ್ಯದಾದ್ಯಂತದ ನಿಗಾ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆಯೇ ಬ್ರಹ್ಮಾವರ ತಾಲೂಕು ಕಚೇರಿಗೆ ದಾಳಿ ನಡೆಸಿ ಬಹಳ ದಿನಗಳಿಂದ ಪೆಂಡಿಂಗ್ ಇಟ್ಟುಕೊಂಡಿರುವ ಕಡತಗಳ ಪರಿಶೀಲನೆ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

    Also Read  ಬೆಂಗಳೂರಿಗರಿಗೆ BIG TRAFFIC ALERT! ಸೆ.4ರಿಂದ ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್… ಬೈಕ್, ಆಟೋ ಸವಾರರು ಈ ಮಾಹಿತಿ ತಪ್ಪದೇ ಓದಿ!

    ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ದಾಳಿಯ ಬಗ್ಗೆ, ಸಾರ್ವಜನಿಕರಲ್ಲಿ ಆಕ್ರೋಶವು ಇದೆ. ದಾಳಿ ನಡೆಸಿದ ನಂತರ ಅಧಿಕಾರಿಗಳಿಗೆ ಯಾವುದೇ ಪನಿಷ್ಮೆಂಟ್ ಆಗುವುದು ಗೊತ್ತೇ ಆಗುವುದಿಲ್ಲ. ಜನಸಾಮಾನ್ಯರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಷ್ಟೇ ಗೊತ್ತಿರುತ್ತದೆ. ಆದರೆ ನಂತರದ ವಿಚಾರ ಗೊತ್ತಾಗುವುದಿಲ್ಲ.. ಅಧಿಕಾರಿಗಳು ಸಹ ಕೆಲಸದಲ್ಲಿ ಮುಂದುವರೆದಿರುತ್ತಾರೆ ಎಂಬ ವಿಚಾರವನ್ನು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಬಂಟ್ವಾಳ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ!ಸಂಜೆ ಜನಸಂದಣಿಯಲ್ಲೇ ರಕ್ತದೋಕುಳಿ..ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕ ದಾಳಿ ಕೊಚ್ಚಿ ಕೊಲೆ..!
    “ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಂದು ಮಗುವಿನ ಸುರಕ್ಷತೆಗೆ ಶಾಲೆಯೇ ಹೊಣೆ!”
    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
    AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ರಾಷ್ಟ್ರಪತಿ ಮುರ್ಮು ಅವರ ADC…ನ್ಯಾಷನಲ್ ಕ್ರಶ್ ಆಗಿದ್ದ ಮೇಜರ್ ರಿಷಭ್ ಸಂಬ್ಯಾಲ್ ಸೇನೆಗೆ ಗುಡ್‌ಬೈ!
    ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಅಪ್ಪಿಕೊಳ್ಳುವ ಅಮ್ಮನ ಕೈಗಳೇ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ರೆ … ಎಂಥ ದುರ್ವಿಧಿ..!
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಕಚೇರಿಯಿಂದ ರಸ್ತೆಗಿಳಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ …….!ಎಲ್ಲಾ ಅಕ್ರಮಕ್ಕೆ ಒಂದ್ಸಲ ಎಚ್ಚರಿಕೆ ನೋಟಿಸ್ , ನೆಕ್ಸ್ಟ್ ಟೈಮ್ ಸೀಜ್…!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
    ಬಿಹಾರದಲ್ಲಿ ಭೀಕರ ನೆರೆ: 12 ಜಿಲ್ಲೆಗಳ 22 ಲಕ್ಷ ಜನ ಸಂಕಷ್ಟದಲ್ಲಿ; ಗಂಗಾ ಅಪಾಯದ ಮಟ್ಟ ಮೀರಿ ಹರಿವು
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ