📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ

    ಆಧ್ಯಾತ್ಮ ಜಗತ್ತಿನ ಸಂತರುಗಳ ಪೈಕಿ ಪ್ರಮುಖರಾದ ಅಮ್ಮ ಖ್ಯಾತಿಯ “ಮಾತಾ ಅಮೃತಾನಂದಮಯಿ ದೇವಿ” ಅವರು ಬರೋಬ್ಬರಿ ಏಳು ವರ್ಷದ ನಂತರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೇ 28 ಹಾಗೂ 29ರಂದು ಎರಡು ದಿನಗಳ ಕಾಲ “ಅಮೃತ ಸಂಗಮ 2026” ಇದರ ಅಡಿಯಲ್ಲಿ ಅನೇಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಕೊಳ್ಳಲಿದ್ದಾರೆಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ನಗರದ ಬೋಳೂರು ಸುಲ್ತಾನ್ ಬತ್ತೇರಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಹೆಚ್ಚು ದೇಶಗಳಿಂದ ಸುಮಾರು 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಅಮ್ಮನವರ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ದೇಶದ ಅನೇಕ ಕಡೆಯಿಂದ ಭಕ್ತರು ಹಾಗೂ ಆಧ್ಯಾತ್ಮಿಕ ಒಲವು ಹೊಂದಿರುವಂತವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ತಂಡೋಪತಂಡವಾಗಿ ಆಗಮಿಸಲಿದೆ. ಒಟ್ಟಾರೆ, ಎರಡು ದಿನದಲ್ಲಿ ಸುಮಾರು 50,000 ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

    Also Read  ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ

    ಎರಡು ದಿನಗಳ ಕಾಲ, ಮುಂಜಾನೆ 5:45 ರಿಂದ ಪ್ರಾರಂಭವಾಗುವ ಕಾರ್ಯಕ್ರಮಗಳು ನಿರಂತರವಾಗಿ ಸಂಜೆ 8 ಗಂಟೆಯವರೆಗೆ ವಿವಿಧ ಧಾರ್ಮಿಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ.  ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದ ಸಮಿತಿಯ ಪದಾಧಿಕಾರಿಗಳು, ಎರಡು ದಿನಗಳ ಕಾಲ ಮಧ್ಯಾಹ್ನ ಹಾಗೂ ಸಂಜೆ ಊಟದ ವ್ಯವಸ್ಥೆಯು ಇಲ್ಲಿರಲಿದೆ. ಬರುವ ಭಕ್ತಾದಿಗಳಿಗೆ ಯಾವುದೇ ಅನಾನುಕೂಲತೆ ಆಗದ ಹಾಗೆ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಬಸ್ಸಿನ ವ್ಯವಸ್ಥೆ ಹಾಗೂ ದೂರದಿಂದ ಬರುವವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಸ್ಪಷ್ಟಪಡಿಸಿದರು.

    ಒಟ್ಟು 22 ಬ್ರಹ್ಮ ಸ್ಥಾನಗಳನ್ನು ಭಾರತದಲ್ಲಿ ಅಮ್ಮನವರು ಸ್ಥಾಪಿಸಿದ್ದಾರೆ ಆ 22ರಲ್ಲಿ 19ನೇ ಬ್ರಹ್ಮ ಸ್ಥಾನವೇ ಮಂಗಳೂರಿನಲ್ಲಿರುವ ಈ ಬ್ರಹ್ಮ ಸ್ಥಾನ ಎಂದು ಹೇಳಿದ ಸಮಿತಿಯ ಪದಾಧಿಕಾರಿಗಳು, ಇಲ್ಲಿ ವಿಶೇಷ ಪೂಜೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. ಅದರಲ್ಲೂ ಹೆಚ್ಚಾಗಿ 28ರಂದು ರಾಹು ದೋಷ ನಿವಾರಣ ಪೂಜೆ ನಡೆಯಲಿದೆ. 29ರಂದು ಶನಿ ದೋಷ ನಿವಾರಣಾ ಪೂಜೆ ನಡೆಯಲಿದೆ. ಬ್ರಹ್ಮ ಸ್ಥಾನದಲ್ಲಿ ನಡೆಯುವ ದೋಷ ನಿವಾರಣ ಪೂಜೆಯು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಹಾಗಾಗಿ ಭಕ್ತರು ಇಲ್ಲಿ ನಡೆಯುವ ದೋಷ ನಿವಾರಣ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು.

    Also Read  ಹೀಗೇಕೆ ಅಂದ್ರು ಮೋದೀಜಿ…ವಿದೇಶ ಸುತ್ತಾಟ, ಚಿನ್ನದ ಶಾಪಿಂಗ್‌ಗೆ ‘ನೋ’!

    ಮುಖ್ಯವಾಗಿ ಅಮ್ಮನವರ ಆಶೀರ್ವಾದ ಪಡೆಯಲು ಪ್ರಪಂಚಾದ್ಯಂತದ ಭಕ್ತರು ಹಾತೊರೆಯುತ್ತಾರೆ. ನಾವು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಟೋಕನ್ ಸಿಸ್ಟಮ್ ಮಾಡಿದ್ದೇವೆ. ಯಾರು ಮೊದಲಿಗೆ ಬಂದು ಎಂಟ್ರಿ ಮಾಡಿಸುತ್ತಾರೋ, ಆ ಒಂದು ಸರತಿಯಂತೆ ಅಮ್ಮನವರ ದರ್ಶನಕ್ಕೆ ಟೋಕನ್ ದೊರಕಲಿದೆ. ಮೊದಲ ಬಾಂಧವರಿಗೆ ಮೊದಲ ದರ್ಶನ ಆ ರೀತಿಯ ಪ್ರಕಾರ ಅಮ್ಮನವರ ದರ್ಶನ ಹಾಗೂ ಆಶೀರ್ವಾದ ಪಡೆಯಲು ಭಕ್ತರಿಗೆ ಅನುಕೂಲತೆಯನ್ನು ಒದಗಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

    ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ಸುರೇಶ್ ಅಮೀನ್, ಉಪಾಧ್ಯಕ್ಷರಾದ ಡಾಕ್ಟರ್ ಜೀವರಾಜ್ ಸೊರಕೆ, ಸಿಎ ವಾಮನ್ ಕಾಮತ್, ವಸಂತ್ ಕುಮಾರ್ ಪೆರ್ಲ, ಸಿಎ ರಾಮನಾಥ್ ಹಾಗೂ ಅಡ್ವಕೇಟ್ ಸ್ವಸ್ತಿ ಶೆಟ್ಟಿ ಉಪಸ್ಥಿತರಿದ್ದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
    ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಬ್ರೇಕಿಂಗ್ ನ್ಯೂಸ್
    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ದರ್ಶನ್ ಆಪ್ತರ ‘ಮಾಫಿ ಸಾಕ್ಷಿ’ ಅರ್ಜಿ ಏಕೆ ಮಹತ್ವದ್ದು?
    ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    ರೈತರಿಗೆ ಬಿಗ್ ರಿಲೀಫ್! ಕೃಷಿ ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ
    ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    ಗ್ರಾಮೀಣ ಕೋಟಾಕ್ಕೆ ಒಳಮೀಸಲು: ಅವಕಾಶವೇ? ರಾಜಕೀಯದ ಮತ್ತೊಂದು ಲೆಕ್ಕಾಚಾರವೇ?“ಗ್ರಾಮೀಣ ಮಕ್ಕಳಿಗೆ 7.5% ಕೋಟಾ; ಆದರೆ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು %?”
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!