📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …

    ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇತ್ತೀಚೆಗಷ್ಟೇ ಭಾರಿ ಬದಲಾವಣೆಯಾಗಿದ್ದು, ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ಸರ್ಕಾರವು ಸಾರ್ವಜನಿಕರಿಗಾಗಿ ಹಲವು ಜನಪ್ರಿಯ ಹಾಗೂ ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ.

    ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ‘ಸುವೇಂದು ಅಧಿಕಾರಿ’ ಸರ್ಕಾರದ ಬಿಗ್ ಆಫರ್…

    ಪಶ್ಚಿಮ ಬಂಗಾಳದಲ್ಲಿ ದಶಕಗಳ ಬಳಿಕ ತೃಣಮೂಲ ಕಾಂಗ್ರೆಸ್ (TMC) ಆಡಳಿತಕ್ಕೆ ಬ್ರೇಕ್ ಹಾಕಿ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿಯ ಸುವೇಂದು ಅಧಿಕಾರಿ ಅವರು ರಾಜ್ಯದ ಜನತೆಗೆ ಸಾಲು ಸಾಲು ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಮಹಿಳಾ ಸಬಲೀಕರಣ, ಬಡವರ ಹಸಿವು ನೀಗಿಸುವುದು ಹಾಗೂ ಶೈಕ್ಷಣಿಕ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಮೂರು ಪ್ರಮುಖ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

    Also Read  ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ 'ಟೀನ್ ಪ್ರೆಗ್ನೆನ್ಸಿ'! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?

    1. ಅನ್ನಪೂರ್ಣ ಯೋಜನೆ (Annapurna Yojana): ಮಹಿಳೆಯರಿಗೆ ₹3,000 ಮಾಸಿಕ ಧನಸಹಾಯ!ಮೇ 27 ರಿಂದಲೇ ಈ ಯೋಜನೆಯ ಅರ್ಜಿ ನಮೂನೆಗಳನ್ನು (Forms) ರಾಜ್ಯ ಸಚಿವಾಲಯದಿಂದ ವಿತರಿಸಲು ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹3,000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

    ಜೊತೆಗೆ, ಜೂನ್ 1 ರಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನೂ ಈಗಾಗಲೇ ಅನುಮೋದಿಸಲಾಗಿದೆ.

    2. ಕೇವಲ ₹5 ಕ್ಕೆ ‘ಮಾಚ್-ಭಾತ್’ (ಮೀನು ಮತ್ತು ಅನ್ನದ ಊಟ)!ಬಂಗಾಳಿ ಸಂಸ್ಕೃತಿಯಲ್ಲಿ ಮೀನು ಮತ್ತು ಅನ್ನಕ್ಕೆ (Maach-Bhaat) ಅತ್ಯಂತ ಪ್ರಮುಖ ಸ್ಥಾನವಿದೆ. ಬಡವರಿಗೂ ಪೌಷ್ಟಿಕ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಸಬ್ಸಿಡಿ ದರದ ಕ್ಯಾಂಟೀನ್ ಯೋಜನೆಯನ್ನು ವಿಸ್ತರಿಸಿದೆ.ಸುಮಾರು 400 ಪ್ರತ್ಯೇಕ ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ವಾರಕ್ಕೆ ಎರಡು ಬಾರಿ ಕೇವಲ ₹5 ಕ್ಕೆ ಮೀನು ಊಟ ಸಿಗುತ್ತೆ.ಈ ಹಿಂದೆ ಇದ್ದ ಕ್ಯಾಂಟೀನ್‌ಗಳಲ್ಲಿ ₹5 ಕ್ಕೆ ಮೊಟ್ಟೆ-ಅನ್ನ ನೀಡಲಾಗುತ್ತಿತ್ತು. 

    Also Read  ಭರತ್ ತಿವಾರಿ ಎನ್‌ಕೌಂಟರ್ -ಬಿಹಾರ ಎಡಿಜಿಪಿಯಿಂದಲೇ ಪೊಲೀಸ್ ಲೋಪದ ಒಪ್ಪಿಗೆ: ಶಾಹಪುರ SHO ಸೇರಿ 5 ಅಧಿಕಾರಿಗಳು ಸಸ್ಪೆಂಡ್!

    3. ಶಾಲಾ-ಕಾಲೇಜುಗಳ ಬಳಿ ಮದ್ಯದ ಅಂಗಡಿಗಳಿಗೆ ಬ್ರೇಕ್!

    ರಾಜ್ಯದಲ್ಲಿ ಯುವ ಪೀಳಿಗೆ ಹಾದಿ ತಪ್ಪುವುದನ್ನು ತಡೆಯಲು ಮತ್ತು ಧಾರ್ಮಿಕ ಸ್ಥಳಗಳ ಪವಿತ್ರತೆಯನ್ನು ಕಾಪಾಡಲು ಸರ್ಕಾರ ಕಠಿಣ ನಿಯಮ ತಂದಿದೆ.ಇನ್ಮುಂದೆ ಯಾವುದೇ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ದೇವಸ್ಥಾನ/ಪ್ರಾರ್ಥನಾ ಮಂದಿರಗಳ 1 ಕಿಲೋಮೀಟರ್ (1 KM) ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು (Liquor Shops) ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸಿಎಂ ಖಡಕ್ ಆಗಿ ಹೇಳಿದ್ದಾರೆ.


    4. ಪ್ರತ್ಯೇಕ ‘ಆಯುಷ್’ (AYUSH) ಇಲಾಖೆ ಸ್ಥಾಪನೆ
    ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ. ಈವರೆಗೆ ರಾಜ್ಯ ಆರೋಗ್ಯ ಇಲಾಖೆಯ ಭಾಗವಾಗಿದ್ದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (AYUSH) ವಿಭಾಗವನ್ನು ಆರೋಗ್ಯ ಇಲಾಖೆಯಿಂದ ಬೇರ್ಪಡಿಸಿ, ಸ್ವತಂತ್ರ ‘ಆಯುಷ್ ಇಲಾಖೆ’ಯನ್ನು ರಚಿಸಲಾಗುವುದು ಎಂದು ಸುವೇಂದು ಅಧಿಕಾರಿ ಪ್ರಕಟಿಸಿದ್ದಾರೆ.

    Also Read  ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ

    ಇದು ಕೇವಲ ಆಡಳಿತಗಾರರ ಆಡಳಿತವಲ್ಲ, ಬದಲಿಗೆ ಕಾನೂನಿನ ಆಡಳಿತ” ಎಂದು ಹೇಳಿರುವ ಸಿಎಂ ಸುವೇಂದು ಅಧಿಕಾರಿ, ಅಧಿಕಾರಿಗಳು ಮತ್ತು ಶಾಸಕರ ನಡುವೆ ನೇರ ಸಮನ್ವಯ ಸಾಧಿಸಲು ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುತ್ತಿರುವ ಈ ಹೊಸ ಯೋಜನೆಗಳು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ.

    ##SuvenduAdhikari #AnnapurnaYojana #WestBengalNews #FishRice5Rs #LiquorBanBengal #BengalNewGovt #KannadaWebNews #TrendingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ರಾಜ್ಯ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೊಸ ಸಾರಥಿ!
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ಕರ್ನಾಟಕದಲ್ಲಿ 2,222 KEO AI, PCಗಳ ಲೋಕಾರ್ಪಣೆ
    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ – ಕಾರಣ ಮೊಬೈಲ್‌ನಲ್ಲಿ ಆಟ
    ಉಡುಪಿಯಲ್ಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಮಹಿಳೆಗೆ ₹65 ಲಕ್ಷ ವಂಚನೆ
    ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!
    717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!
    ಇನ್ನೂ ಏಳು ದಿನ ಕರ್ನಾಟಕದ ಸಿಎಂ ಕುರ್ಚಿ ಕಾಲಿ… ಜೂನ್ 5 ರಂದು ಡಿಕೆ ಶಿವಕುಮಾರ್ ಪ್ರಮಾಣ ವಚನ!
    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    ಅಧಿಕಾರಿಗಳಿಗೆ ಲಂಚವೋ? ಗೌರವ ಧನವೋ ….!ಶಿವಲಿಂಗೇಗೌಡ “ಹೇಳಿಕೆ”ಭಾರಿ ವಿವಾದ…!
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…