📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 

    ಕ್ರಿಕೆಟ್ ಮೈದಾನದಲ್ಲೇ ಕುಸಿದ ಕನಸು… ಶಿವಮೊಗ್ಗದ ಅಕ್ಷಯ್ ಎಸ್.ಎಲ್ ಹೃದಯಾಘಾತಕ್ಕೆ ಬಲಿ!

    ಬೆಂಗಳೂರು ನಗರದ ಎಸ್ಎಲ್ಆರ್ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ 3rd ಡಿವಿಷನ್ ಲೀಗ್ ಪಂದ್ಯಾವಳಿ ಮಧ್ಯೆ ಸಂಭವಿಸಿದ ದಾರುಣ ಘಟನೆ ಕ್ರಿಕೆಟ್ ವಲಯವನ್ನು ಶಾಕ್‌ಗೆ ಗುರಿಮಾಡಿದೆ. ಶಿವಮೊಗ್ಗ ಮೂಲದ ಕ್ರಿಕೆಟಿಗ ಅಕ್ಷಯ್ ಎಸ್.ಎಲ್, ಪಂದ್ಯ ಆಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

    ಅಕ್ಷಯ್ ಕೇವಲ ಸ್ಥಳೀಯ ಆಟಗಾರ ಮಾತ್ರವಲ್ಲ… ಕರ್ನಾಟಕ ಕ್ರಿಕೆಟ್ ವಲಯದಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದ ಪ್ರತಿಭಾವಂತ ಆಟಗಾರ. 2015ರಲ್ಲಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯನಾಗಿದ್ದ ಅವರು, ಕರ್ನಾಟಕ ಪರ 6 ರಣಜಿ ಹಾಗೂ 3 ಏಕದಿನ ಪಂದ್ಯಗಳನ್ನು ಆಡಿದ್ದರು. ಶಿವಮೊಗ್ಗದಲ್ಲೇ ಉತ್ತರ ಪ್ರದೇಶ ವಿರುದ್ಧ ಕರ್ನಾಟಕ ತಂಡದ ಪರ ಪಾದಾರ್ಪಣೆ ಮಾಡಿದ್ದ ಅಕ್ಷಯ್, ಮಧ್ಯಮ ವೇಗದ ಬೌಲರ್ ಜೊತೆಗೆ ಭರವಸೆಯ ಬ್ಯಾಟರ್ ಆಗಿಯೂ ಹೆಸರು ಮಾಡಿದ್ದರು.

    Also Read  ಏನಿದು 'ಲಾಸ್ಟ್ ಲೈವ್' ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…

    ಘಟನೆಯ ದಿನವೂ ಅಕ್ಷಯ್ ಅತ್ಯಂತ ಉತ್ಸಾಹದಿಂದ ಪಂದ್ಯದಲ್ಲಿ ಭಾಗಿಯಾಗಿದ್ದರು. ನಾಲ್ಕು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿ ಒಂದು ಪ್ರಮುಖ ವಿಕೆಟ್ ಪಡೆದಿದ್ದರು. ಆದರೆ ಆಟದ ಮಧ್ಯೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅಂಪೈರ್‌ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

    ಅದಾದ ಬಳಿಕ ನೀರು ಕುಡಿದ ತಕ್ಷಣವೇ ಅಕ್ಷಯ್ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಅಲ್ಲಿ ಇದ್ದ ಆಟಗಾರರು ಮತ್ತು ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ದುರ್ಘಟನೆ ಇದೀಗ ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೊರಗೆ ಫಿಟ್ ಆಗಿ ಕಾಣಿಸುವ ಯುವ ಆಟಗಾರರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಿರಂತರ ಫಿಟ್ನೆಸ್, ಒತ್ತಡದ ಜೀವನಶೈಲಿ, ದೇಹದ ಒಳಗಿನ ಅಜ್ಞಾತ ಆರೋಗ್ಯ ಸಮಸ್ಯೆಗಳು ಇಂತಹ ದುರಂತಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

    Also Read  ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!

    ಕ್ರಿಕೆಟ್ ಮೇಲಿನ ಅಪಾರ ಪ್ರೀತಿಯ ಜೊತೆ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅಕ್ಷಯ್, ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್‌ನ ಹೆಮ್ಮೆಯ ಆಟಗಾರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕೆಎಸ್‌ಸಿಎ ಹಾಗೂ ಶಿವಮೊಗ್ಗ ಕ್ರಿಕೆಟ್ ವಲಯದಿಂದ ಭಾರೀ ಸಂತಾಪ ವ್ಯಕ್ತವಾಗಿದೆ.

    ಒಬ್ಬ ಪ್ರತಿಭಾವಂತ ಕ್ರಿಕೆಟಿಗನ ಬದುಕು ಮೈದಾನದಲ್ಲೇ ಅಂತ್ಯವಾದ ಘಟನೆ ಇದೀಗ ಎಲ್ಲರ ಮನಸ್ಸನ್ನೂ ಭಾರವಾಗಿಸಿದೆ… 🕯️

    ##Shivamogga #CricketNews #HeartAttack #BreakingNews #SportsTragedy #KSCA

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
    ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
    ₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!
    AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ? ದೆಹಲಿ–ಬೆಂಗಳೂರು ರಾಜಕೀಯ ಚಟುವಟಿಕೆ ಜೋರು, ಹೈಕಮಾಂಡ್ ನಿರ್ಧಾರದತ್ತ ರಾಜ್ಯದ ಚಿತ್ತ
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
    ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ವಿಧಾನಸೌಧದಲ್ಲಿ ಡಿಕೆಶಿ–ಕಟೀಲ್ ಭೇಟಿ -ರಾಜಕೀಯದಲ್ಲಿ ಬಿಸಿ ಚರ್ಚೆ