📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?

    ಪ್ರವಾಸೋದ್ಯಮ ಇಲಾಖೆಗೆ ಜವಾಬ್ದಾರಿ ಅಂತ ಏನಾದರೂ ಇದೆಯಾ? ಅಥವಾ ಯಾವುದೋ ವ್ಯಕ್ತಿಗಳಿಗೆ ಅಥವಾ ಕಂಪನಿಗೆ  ಟೆಂಡರ್ ನೀಡಿ ಕೈ ತೊಳೆದುಕೊಳ್ಳುವುದಕ್ಕಷ್ಟೇ ಅವರ ಕಾರ್ಯವು ಸೀಮಿತವಾ? ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ಮೊದಲೇ ನೀಡಿತ್ತೋ ಅಥವಾ ಇಲ್ಲವೋ? ಇಲಾಖೆ ಮುನ್ಸೂಚನೆ ನೀಡಿದ್ದರೆ, ಅದರ ಪಾಲನೆ ಮಾಡಬೇಕಾದ್ದು ಯಾರು? ಸ್ಥಳೀಯ ಆಡಳಿತವು ಇಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ?

    ಮಧ್ಯ ಪ್ರದೇಶದ, ಜಬಲ್ಪುರ್ ನರ್ಮದಾ ನದಿಯಲ್ಲಿನ ದುರಂತಕ್ಕೆ ಇಲ್ಲಿಯವರೆಗೆ 13ಕ್ಕೂ ಹೆಚ್ಚು ಜನರು  ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು, ಮಗುವನ್ನು ಎದೆಗೆವಚಿ ಹಿಡಿದು ಸಾವನ್ನಪ್ಪಿರುವ ಫೋಟೋ ವೈರಲ್ ಆಗಿತ್ತು. ಈಗಲೂ ಆ ಫೋಟೋ ಮನ ಕಲಕುವಂತಿದೆ. ಅದು ತಿದ್ದಿದ ಫೋಟೋ ಇರಲಿ, ಒರಿಜಿನಲ್ ಫೋಟೋನೇ ಇರಲಿ, ಆ ವಿಷಯ ಅನವಶ್ಯಕ ಈಗ. ಯಾಕೆಂದರೆ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ.

    ದುರ್ಘಟನೆ ನಡೆಯುವುದು ಇದೇ ಮೊದಲಿನಲ್ಲ. ಸಾಕಷ್ಟು ದುರ್ಘಟನೆಗಳು ನಡೆದಿದೆ. ಮುಂದೆಯೂ ನಡೆಯಬಹುದು. ಆದರೆ ಆ ದುರ್ಘಟನೆಗಳಿಗೆ ಕಾರಣ ಮತ್ತು ನಿಷ್ಕಾಳಜಿ ಇದೆ ಅಂತ ಗೊತ್ತಾದರೆ ಅದನ್ನು ಕ್ಷಮಿಸಲಾಗದು. ಈಗ ಮಧ್ಯ ಪ್ರದೇಶದ ಜಬಲ್ಪುರ್ ದುರ್ಘಟನೆಗೆ ಸಂಬಂಧಿಸಿದಂತೆ, ವ್ಯವಸ್ಥೆಯ ತಪ್ಪುಗಳ ಬಗ್ಗೆಯೂ ಬಹಿರಂಗ ತನಿಖೆಯಾಗಬೇಕು. ಯಾವುದೋ ಒಂದು ಬೋಟ್ ಮಾಲೀಕ ಅಥವಾ ನಾವಿಕನ ಮೇಲೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುವ ಕೆಲಸ ಆಗಬಾರದು. ಬೋಟ್ ಮಾಲೀಕರು ಅಥವಾ ನಾವಿಕರು ತಮ್ಮ ಕೆಲಸವನ್ನು ಕಮರ್ಷಿಯಲ್ ಆಗಿ ಮಾಡುತ್ತಿರುತ್ತಾರೆ. ಅದರಲ್ಲಿ ತಪ್ಪು ಇಲ್ಲ. ಆದರೆ ಸಂಬಂಧಪಟ್ಟ ಇಲಾಖೆಯ ವತಿಯಿಂದ, ಅಲ್ಲಿ ನಿರ್ದೇಶನವು ಆಗಬೇಕಿತ್ತು ತಾನೆ? ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ದೇಶಸಿದಂತೆಯೇ ಬೋಟ್ ಮಾಲೀಕರು, ನಾವಿಕರು ನಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೇ ಅಲ್ಲಿರದಿದ್ದರೆ ಬೋಟ್ ಮಾಲೀಕರು ಅಥವಾ ನಾವಿಕರು ತಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಾರೆ. ಬಹುಶಹ ಅಲ್ಲಿ ಆದದ್ದು ಅದೇ ಇರಬೇಕು.

    Also Read  ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!

    ಹಾಗೆಯೇ, ಹವಾಮಾನ ವೈಪರಿತ್ಯದಿಂದಾಗಿ, ಇದ್ದಕ್ಕಿದ್ದಂತೆ ಬಿರುಬೀಸಾದ ಗಾಳಿ ಬೀಸಲು ಪ್ರಾರಂಭಿಸಿದ್ದರಿಂದ, ಬೋಟ್ ಮಗುಚಿ ಬಿತ್ತು ಅನ್ನೋದು ಸರಿಯೇ. ಆದರೆ ಹವಾಮಾನ ಇಲಾಖೆಗೆ ಇದರ ಅರಿವು ಇರಬೇಕಿತ್ತು ತಾನೆ? ಇಲಾಖೆಯು ತತಕ್ಷಣವೇ ಎಲ್ಲಾ ಕಡೆಯೂ ಮೆಸೇಜನ್ನು ಕಳುಹಿಸಿರಬೇಕಿತ್ತು. ಆ ಮೆಸೇಜನ್ನು ಆ ಇಲಾಖೆಯು ಕಳಿಸಿದೀಯೋ ಇಲ್ಲವೋ ಅದು  ಮುಖ್ಯ ಅನ್ನಿಸಿಕೊಳ್ಳುತ್ತದೆ. ಇಲಾಖೆಯ ವೈಪರಿತ್ಯದ ಮೆಸೇಜನ್ನು ಕಳುಹಿಸಿಲ್ಲ ಎಂದರೆ, ಹವಾಮಾನ ಇಲಾಖೆಯೇ ಈ ಎಲ್ಲಾ ಸಾವುಗಳಿಗೆ ಹೊಣೆ ಕೊರಬೇಕು.  ಹವಾಮಾನ ಇಲಾಖೆಯು ವೈಪರಿತ್ಯದ ಮೆಸೇಜನ್ನು ಕಳುಹಿಸಿದೆ ಅಂತಾದರೆ, ಆ ಮೆಸೇಜ್ ಯಾರಿಗೆ ಕಳುಹಿಸಿದ್ದು ಅನ್ನುವುದು ಇಲ್ಲಿ ಇಂಪಾರ್ಟೆಂಟ್ ಆಗುತ್ತದೆ.

    ನೋ ಡೌಟ್, ಇದು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಮ್ಯಾಟರ್. ಅವರ ನಿಶಾರೆಯಲ್ಲಿ ಪ್ರವಾಸೋದ್ಯಮದ, ಇಂತಹ ಚಟುವಟಿಕೆಗಳು ನಡೆಯುತ್ತವೆ. ಇಲಾಖೆಯ ಪ್ರತಿನಿಧಿಗಳು ಇಂತಹ ಸ್ಥಳಗಳಲ್ಲಿ ಖುದ್ದಾಗಿ ಇರಬೇಕು, ಹಾಗೂ ಅವರು ಬೋಟ್ ಮಾಲಕರಿಗೆ ಅಥವಾ ನಾವಿಕರಿಗೆ, ಸಿಬ್ಬಂದಿಗಳಿಗೆ ಗೈಡ್ ಮಾಡಬೇಕು. ಹವಾಮಾನ ಇಲಾಖೆಯಿಂದ ಬರುವ ಮೆಸೇಜನ್ನು ಆಧರಿಸಿ ತತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಆ ಕೆಲಸ ಮಾಡಲು ಅಲ್ಲಿ ಅಧಿಕಾರಿಗಳನ್ನು ನೇಮಿಸಿದ್ದರಾ?

    Also Read  ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!

    ಜನರು ಈ ದುರ್ಘಟನೆಯ ವಿಡಿಯೋ ಫೋಟೋಗಳನ್ನು ನೋಡಿ ಮನಸ್ಸು ಕೆಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಸಾಮಾನ್ಯವಾಗಿ , ಅಲ್ಲಿನ ಬೋಟ್ ಮಾಲೀಕ ಹಾಗೂ ನಾವಿಕರ ಬಗ್ಗೆ ಮಾತನಾಡುತ್ತಾರೆ ಎನ್ನುವುದು ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಅನೇಕ ಸತ್ಯಗಳು ಅಲ್ಲಿಯೇ ಹೂತು ಹೋಗುತ್ತವೆ. ತಪ್ಪಿತಸ್ಥರು ಬಚವಾಗುತ್ತಾರೆ ಕೂಡ. ಅದಕ್ಕೆ ಕಾರಣ, ವಿಷಯದ ಆಳಕ್ಕೆ ಹೋಗದೆ ಇರುವಂತದ್ದೇ ಆಗಿದೆ. ಮಧ್ಯಪ್ರದೇಶದ ಸರ್ಕಾರ, ಈ ವಿಚಾರದಲ್ಲಿ ಆಳವಾದ ತನಿಖೆಗೆ ಇಳಿಯಲೇಬೇಕು. ಹವಾಮಾನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇವೆರಡನ್ನೂ ಅಪರಾಧಿ ಸ್ಥಾನದಲ್ಲಿ ಕೂರಿಸಲೇಬೇಕಾಗುತ್ತದೆ. ಹಾಗೆಯೇ ಅವರು ತನಿಖೆಯನ್ನೂ ಎದುರಿಸಬೇಕು. ಅವರು ತನಿಖೆ ಎದುರಿಸಲು ರಾಜಕಾರಣಿಗಳು ಮತ್ತು ಸರ್ಕಾರ ಬಿಡುತ್ತದ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
    ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    ಹೊಲದಲ್ಲಿ ಹೂತಿಟ್ಟ ₹5 ಲಕ್ಷ… ತೆರೆದಾಗ ಶಾಕ್!
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ – ಕಾರಣ ಮೊಬೈಲ್‌ನಲ್ಲಿ ಆಟ
    ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಕರ್ನಾಟಕದ ನಂದನ್ ನಿಲೇಕಣಿ ನೇತೃತ್ವದಲ್ಲಿ ಭಾರತದ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರದ ಬಿಗ್ ಪ್ಲಾನ್!ಈಗ ರಾಷ್ಟ್ರೀಯ ಪರೀಕ್ಷೆಗಳಿಗೆ ಹೊಸ ರೂಪ ನಿಲೇಕಣಿ ಕೈಯಲ್ಲಿ!
    ಕಚೇರಿಯಿಂದ ರಸ್ತೆಗಿಳಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ …….!ಎಲ್ಲಾ ಅಕ್ರಮಕ್ಕೆ ಒಂದ್ಸಲ ಎಚ್ಚರಿಕೆ ನೋಟಿಸ್ , ನೆಕ್ಸ್ಟ್ ಟೈಮ್ ಸೀಜ್…!
    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
    book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಪೊರಕೆ ಹಿಡಿದ ಕೈಯಲ್ಲಿ ಫಾರ್ಚೂನರ್ ಕನಸು! SI ಬೆಳ್ಳಿಯಪ್ಪ ,ಸೇಸಪ್ಪನ ಬದುಕಿಗೆ ಹೊಸ ತಿರುವು….?!!!
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ಜಾರಕಿಹೊಳಿ ಮನೆಗೆ ED ದಾಳಿ; ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಕಾವು!
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ