📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು

    ಬಂಟ್ವಾಳ, ಮೇ 24: ಪಾರ್ಸೆಲ್ ಡೆಲಿವರಿಗೆ ತೆರಳುತ್ತಿದ್ದ E-Cart ಕಂಪನಿಯ ಹಬ್ ಅಸಿಸ್ಟೆಂಟ್‌ಗೆ ದಾರಿ ಮಧ್ಯೆ ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ದೂರುದಾರರಾದ ಮಹಮ್ಮದ್ ಆರೀಸ್ (20), ಅರಳ ಗ್ರಾಮ, ಬಂಟ್ವಾಳ, ಇವರು E-Cart ಕಂಪನಿಯಲ್ಲಿ ಡೆಲಿವರಿ ಮತ್ತು ಹಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
    ದಿನಾಂಕ 23-05-2026 ರಂದು ಮಧ್ಯಾಹ್ನ 3:00 ಗಂಟೆಗೆ ದೂರುದಾರರು ಲೊರೆಟ್ಟೋದಿಂದ ಕಂಪನಿಯ TATA Inst ಟೆಂಪೊದಲ್ಲಿ ಪಾರ್ಸೆಲ್ ಡೆಲಿವರಿಗೆ ತೆರಳುತ್ತಿದ್ದರು. ಸಂಗಬೆಟ್ಟು ಗ್ರಾಮದ ಮಂಚಕಲ್ಲು ಎಂಬಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿದಾಗ, ಸಿದ್ದಕಟ್ಟೆ ಕಡೆಯಿಂದ ಬುಲೆಟ್ ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿ ಮಧು ಎಂಬಾತನು ಉಡಾಫೆಯಿಂದ ಮಾತನಾಡಿದ್ದಾನೆ. ಪಿರ್ಯಾದಿದಾರರು ಇದಕ್ಕೆ ಆಕ್ಷೇಪಿಸಿದಾಗ ವಾಗ್ವಾದ ನಡೆದಿದೆ.

    Also Read  ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?

    ನಂತರ ಮಧ್ಯಾಹ್ನ 3:10ಕ್ಕೆ ಪಿರ್ಯಾದಿದಾರರು ಎಳಿಯನಡುಗೋಡು ಗ್ರಾಮದ ಉಪ್ಪಿರಾ ಎಂಬಲ್ಲಿಗೆ ತಲುಪಿದಾಗ, ಅದೇ ಬುಲೆಟ್ ಸವಾರ ಮಧು ಅಲ್ಲಿಗೆ ಬಂದು ಟೆಂಪೊವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾನೆ. “ನೀನು ಇಲ್ಲಿಂದ ಹೋಗಬಾರದು, ನಿನ್ನ ಬಗ್ಗೆ ಕಂಪನಿಗೆ ಕಂಪ್ಲೇಂಟ್ ಮಾಡಬೇಕು, ಗಾಡಿ ತೆಗೆಯಬೇಡ” ಎಂದು ತಡೆದಿದ್ದಾನೆ.

    ಈ ವೇಳೆ ಪಿರ್ಯಾದಿದಾರರು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಯತ್ನಿಸಿದಾಗ, ಅಲ್ಲಿಗೆ ಬಂದ ಪಿರ್ಯಾದಿಗೆ ಪರಿಚಯವಿರುವ ಸಂದೀಪ, ನವೀನ ಹೆಗ್ಡೆ, ಯಶವಂತ ಆಚಾರ್ಯ ಮತ್ತು ಇತರರು ಮಧು ಜೊತೆ ಸೇರಿಕೊಂಡಿದ್ದಾರೆ. ಎಲ್ಲರೂ ಸೇರಿ ಪಿರ್ಯಾದಿದಾರರನ್ನು ತಡೆದು ಎಳೆದಾಡಿ, “ನೀನು ಬಾರೀ ವಿಡಿಯೋ ಮಾಡುತ್ತೀಯಾ” ಎಂದು ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ನೋವುಂಟಾಗಿ ಪಿರ್ಯಾದಿದಾರರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Also Read  ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು

    ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
    ‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!
    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಗ್ರಾಮೀಣ ಕೋಟಾಕ್ಕೆ ಒಳಮೀಸಲು: ಅವಕಾಶವೇ? ರಾಜಕೀಯದ ಮತ್ತೊಂದು ಲೆಕ್ಕಾಚಾರವೇ?“ಗ್ರಾಮೀಣ ಮಕ್ಕಳಿಗೆ 7.5% ಕೋಟಾ; ಆದರೆ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು %?”
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಲಂಚದ ವಿರುದ್ಧ ದೂರು ನೀಡಿದ್ದಕ್ಕೆ ರೈತನ ಮಗನ ವೃಷಣಗಳನ್ನೇ ಒಡೆದ ಪೊಲೀಸ್ ಕ್ರೌರ್ಯ!
    30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
    Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ಬರಾಯಿಪುರ 12 ವರ್ಷದ ಬಾಲಕಿಯ ಅತ್ಯಾಚಾರದ ಕ್ರೌರ್ಯಕ್ಕಿಂತ ಈಗ ಎನ್‌ಕೌಂಟರ್‌ ಚರ್ಚೆಯ ಕೇಂದ್ರ!?ಆರೋಪಿ ಒಟ್ಟಿಗೆ … ಎಲ್ಲಾ ಸತ್ಯವೂ ಸತ್ತಿತೇ?
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ