📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 

ತೀವ್ರ ರಕ್ತಸ್ರಾವ ವಾಗುತ್ತಿದ್ದರೂ ,ಶಕ್ತಿಹೀನನಾಗಿದ್ದರೂ ಮಾನವೀಯತೆ ಮರೆತಿಲ್ಲ: ಐವರು ಗೆಳೆಯರನ್ನು ಕಾಪಾಡಿದ 9ನೇ ತರಗತಿಯ ಬಾಲಕನ ಸಾಹಸ
ಬಳ್ಳಾರಿ ಖಾಸಗಿ ವಸತಿ ಶಾಲೆಯ ಸಹಪಾಠಿಗಳ ಮೇಲಿನ ಕೊಲೆ ಮತ್ತು ಮಾರಣಾಂತಿಕ ಹಲ್ಲೆಗಳ ಆರೋಪಿ ಬಾಲಕನ ಸುಳಿವು ನೀಡಿದ ಪರಿಸರದ సిసిటివి ಕ್ಯಾಮೆರಾ, ಘಟನೆ ಬಳಿಕ ನಾಪತ್ತೆಯಾಗಿದ್ದ
ಬಾಲಕ ಸೈಕಲ್ ನಲ್ಲಿ ತೆರಳಿ ,ಫೋನ್‌ನಲ್ಲಿ
ಮಾತನಾಡುತ್ತಿರುವ ದೃಶ್ಯಗಳ ಜಾಡು ಹಿಡಿದು
ಕೂಲಂಕಷವಾಗಿ ದೃಶ್ಯಾವಳಿಗಳನ್ನು ಪರಿಶೀಲಿಸಿ
ಅಂತಿಮವಾಗಿ ಬಾಲಕನನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ತಲೆಯಲ್ಲೂ ಎದೆಯಲ್ಲೂ ಗಂಭೀರ ಗಾಯಗಳಾಗಿದ್ದರೂ, ರಕ್ತಸ್ರಾವದಿಂದ ನಲುಗುತ್ತಿದ್ದರೂ ಸಹ ತನ್ನ ಗೆಳೆಯರ ಜೀವವನ್ನು ಉಳಿಸಲು ಹೋರಾಡಿದ ಒಬ್ಬ ಬಾಲಕನ ಧೈರ್ಯ ಮತ್ತು ಮಾನವೀಯತೆ ಬಳ್ಳಾರಿ ಜಿಲ್ಲೆಯ ಖಾಸಗಿ ವಸತಿ ಶಾಲೆಯ ಘಟನೆಯಲ್ಲಿ ಬೆಳಕಿಗೆ ಬಂದಿದೆ.
ಮಾರ್ಚ್ 7ರ ರಾತ್ರಿ ನಡೆದ ಈ ಆತಂಕಕಾರಿ ಘಟನೆಯಲ್ಲಿ, ವಸತಿ ನಿಲಯದಲ್ಲಿ ಇದ್ದ ಒಟ್ಟು 12 ವಿದ್ಯಾರ್ಥಿಗಳ ಪೈಕಿ ಏಳು ಮಂದಿ ಒಂದೇ ಕೊಠಡಿಯಲ್ಲಿ ಮತ್ತು ಇನ್ನೂ ಐವರು ಮೇಲಿನ ಕೊಠಡಿಯಲ್ಲಿ ತಂಗಿದ್ದರು. ಇದೇ ವೇಳೆ, ಏಕಾಏಕಿ ಒಬ್ಬ ವಿದ್ಯಾರ್ಥಿ ಸಮೀಪದಲ್ಲಿದ್ದ ಏಳು ಸಹಪಾಠಿಗಳ ಮೇಲೆ ದಾಳಿ ನಡೆಸಿದನು.

ಈ ದಾಳಿಯಲ್ಲಿ 9ನೇ ತರಗತಿಯ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದನು. ತಲೆಯಲ್ಲೂ ಎದೆಯಲ್ಲೂ ಬಿದ್ದ ಪೆಟ್ಟಿನಿಂದ ರಕ್ತಸ್ರಾವವಾಗುತ್ತಿದ್ದರೂ, ಆತ ತನ್ನ ನೋವನ್ನು ಮರೆತು ಮೇಲಿನ ಕೊಠಡಿಯಲ್ಲಿ ಮಲಗಿದ್ದ ಐವರು ಸಹಪಾಠಿಗಳತ್ತ ತೆವಳುತ್ತ ಸಾಗಿದನು.

ಬಲಹೀನಗೊಂಡಿದ್ದರೂ ಆತ ಬಾಗಿಲು ತಟ್ಟಿ, “ಬಾಗಿಲು ತೆರೆಯಬೇಡಿ” ಎಂದು ಎಚ್ಚರಿಸಿದನು. ಅವನ ಸಮಯೋಚಿತ ಎಚ್ಚರಿಕೆಯಿಂದ ಐವರು ವಿದ್ಯಾರ್ಥಿಗಳು ಅಪಾಯದಿಂದ ಪಾರಾದರು.

ಪ್ರಸ್ತುತ ಗಾಯಗೊಂಡ ಬಾಲಕನಿಗೆ ಬಿಎಂಸಿಆರ್‌ಸಿ ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾತನಾಡಿದ ಬಾಲಕ, ಆ ರಾತ್ರಿ ನಡೆದ ಘಟನೆಯ ವಿವರವನ್ನು ಹಂಚಿಕೊಂಡಿದ್ದಾನೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹ್ಮದ್ ಹ್ಯಾರಿಸ್ ಸುಮೇರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ, “ತೀವ್ರ ಗಾಯಗೊಂಡಿದ್ದರೂ ಸಹ ತನ್ನ ಗೆಳೆಯರನ್ನು ಎಚ್ಚರಿಸಿ ದಾಳಿಯಿಂದ ರಕ್ಷಿಸಿದ ಬಾಲಕನ ಧೈರ್ಯ ಮತ್ತು ಮಾನವೀಯತೆ ಶ್ಲಾಘನೀಯ,” ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಶಾಲೆಯ ಆಡಳಿತ ಮಂಡಳಿಯ ಹೊಣೆಗಾರಿಕೆ, ಮಕ್ಕಳ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳು, ವಸತಿ ನಿಲಯದ ಪರವಾನಗಿ ಹಾಗೂ ಘಟನೆಯ ಹಿನ್ನೆಲೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಗಾಯಗೊಂಡಿದ್ದರೂ ಸಹ ತನ್ನ ನೋವನ್ನು ಮರೆತು ಇತರರ ಜೀವ ಉಳಿಸಲು ಜೀವ ಪಣ ತೊಟ್ಟು ಗೆಳೆಯರಿಗಾಗಿಸಹಾಯ ಮಾಡಲು ಮುಂದಾದ ಈ ಬಾಲಕನ ಸಾಹಸ ಎಲ್ಲರಿಗೂ ಪ್ರೇರಣೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ