📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್

    ‘ನನ್ನ ಸೌಮ್ಯ ಸ್ವಭಾವ ದುರ್ಬಲ ಅಂತ ಅಂದ್ಕೊಬೇಡಿ!’ ಸ್ಪೀಕರ್ ಗರಂ ಆದದ್ದೇಕೆ? ವಿಧಾನಸಭೆಯಲ್ಲಿ ಅಪರೂಪಕ್ಕೆ ಗರಂ ಆದ ಸ್ಪೀಕರ್: “ಉತ್ತರ ಕೊಡದೇ ನಿರ್ಲಕ್ಷ್ಯಮುಂದುವರಿಸಿದರೇ ಕ್ರಮ ಎದಿರಿಸಬೇಕಾಗುತ್ತದೆ ”ಅಂತ ಖಡಕ್ ಆದ ಖಾದರ್ ನೋಡಿ ಒಂದು ಕ್ಷಣ ವಿಧಾನ ಸಭೆ ಗಂಭೀರ…. ಏಕೆ ಅಂತ ಡಿಟೇಲ್ಸ್ ಓದಿ…

    ಬೆಂಗಳೂರು: ಸಾಮಾನ್ಯವಾಗಿ ಸದನದಲ್ಲಿ ಹಾಸ್ಯಪ್ರಿಯವಾಗಿ ಮಾತನಾಡುವ, ಎಲ್ಲರ ಜೊತೆ ಸ್ನೇಹಭಾವದಿಂದ ವರ್ತಿಸುವ ವಿಧಾನಸಭಾಧ್ಯಕ್ಷ U. T. Khader ಶುಕ್ರವಾರ ಸದನದಲ್ಲಿ ಅಪರೂಪದ ಗಂಭೀರ ಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಸದನದಲ್ಲಿ ಕೇಳಲಾಗಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ (Unstarred Questions) ಸರಿಯಾದ ಸಮಯದಲ್ಲಿ ಉತ್ತರ ನೀಡದೆ ವಿಳಂಬ ಮಾಡುತ್ತಿರುವುದನ್ನು ಅವರು ಕಠಿಣವಾಗಿ ತರಾಟೆಗೆ ತೆಗೆದುಕೊಂಡರು.

    “ನನ್ನ ಸೌಮ್ಯ ಸ್ವಭಾವವನ್ನು ದುರ್ಬಲ ಎಂದು ಯಾರೂ ಭಾವಿಸಬೇಡಿ. ಮುಂದುವರೆದರೆ ಕ್ರಮ ಕೈಗೊಳ್ಳಬೇಕಾಗುತ್ತದೆ,” ಎಂದು ಸ್ಪೀಕರ್ ಖಾದರ್ ಖಡಕ್ ಎಚ್ಚರಿಕೆ ನೀಡಿದ ಕ್ಷಣ ಸದನದಲ್ಲಿ ಕ್ಷಣಕಾಲ ಗಂಭೀರ ವಾತಾವರಣ ನಿರ್ಮಾಣವಾಯಿತು.

    Also Read  ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ

    131 ಪ್ರಶ್ನೆಗಳಲ್ಲಿ ಉತ್ತರ ಕೇವಲ 50ಕ್ಕೆ!

    ಪ್ರಶ್ನೋತ್ತರ ಅವಧಿ ಮುಗಿದ ನಂತರ ಸಚಿವ Ramalinga Reddy ಅವರು ಸಂಸದೀಯ ವ್ಯವಹಾರಗಳ ಸಚಿವರ ಪರವಾಗಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಉತ್ತರ ಮಂಡಿಸಿದರು.

    ಆ ವೇಳೆ ಅವರು ನೀಡಿದ ಮಾಹಿತಿಯಂತೆ:
    ಒಟ್ಟು ಕೇಳಲಾದ ಪ್ರಶ್ನೆಗಳು: 131
    ಉತ್ತರ ನೀಡಿದ ಪ್ರಶ್ನೆಗಳು: 50 ಮಾತ್ರ
    ಇನ್ನೂ ಬಾಕಿ ಉಳಿದಿರುವ ಪ್ರಶ್ನೆಗಳು: 81

    ಈ ಮಾಹಿತಿ ಕೇಳುತ್ತಿದ್ದಂತೆಯೇ ಸದನದಲ್ಲಿ ವಿರೋಧ ಪಕ್ಷದಿಂದ ಆಕ್ರೋಶ ವ್ಯಕ್ತವಾಯಿತು.“ಸರ್ಕಾರಕ್ಕೆ ಜಡತ್ವ ಹಿಡಿದಂತಿದೆ!” – ಆರ್. ಅಶೋಕ್ ಕಿಡಿ

    ವಿಧಾನಸಭೆ ಪ್ರತಿಪಕ್ಷ ನಾಯಕ R. Ashoka ಸರ್ಕಾರದ ಕಾರ್ಯಕ್ಷಮತೆಯನ್ನು ತೀವ್ರವಾಗಿ ಪ್ರಶ್ನಿಸಿದರು ,ಅವರೂ ಕಿಡಿಕಾರುತ್ತಾ..:“ಸ್ಪೀಕರ್ ಅವರು ಇದೇ ವಿಷಯವನ್ನು ಮೂರನೇ ಬಾರಿ ಸೂಚಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಇಲಾಖೆಗಳಲ್ಲಿ ಯಾವುದೇ ಚಲನೆ ಕಾಣುತ್ತಿಲ್ಲ. ಸರ್ಕಾರಕ್ಕೆ ಜಡತ್ವ ಹಿಡಿದಂತಿದೆ.”

    Also Read  ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 

    ಅವರು ಮತ್ತಷ್ಟು ಒತ್ತಿ ಹೇಳಿದ್ದು:
    ಪ್ರಶ್ನೆಗಳಿಗೆ ಉತ್ತರ ನೀಡದೇ ವಿಳಂಬ ಮಾಡುವುದು ಜನಪ್ರತಿನಿಧಿಗಳ ಅವಮಾನ..
    ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಸ್ಪಷ್ಟತೆ ಇಲ್ಲ.
    ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಕೆಲಸ ಮಾಡುತ್ತಿಲ್ಲ.

    ಅಂತೂ ಸದನದಲ್ಲಿ ಶುಕ್ರವಾರದ ಘಟನೆ ಒಂದು ಸ್ಪಷ್ಟ ಸಂದೇಶ ನೀಡಿದೆ: “ಅಧಿಕಾರಿಗಳು ಜವಾಬ್ದಾರಿಯಾಗಬೇಕು”

    ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಸಮಯಕ್ಕೆ ಸರಿಯಾಗಿ ಉತ್ತರ ಅಗತ್ಯ, ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ, ಸದನದ ಗೌರವ ಕಾಪಾಡುವುದು ಎಲ್ಲರ ಜವಾಬ್ದಾರಿ

    ಸಾಮಾನ್ಯವಾಗಿ ಹಾಸ್ಯಪ್ರಿಯ ವ್ಯಕ್ತಿತ್ವ ಹೊಂದಿರುವ ಸ್ಪೀಕರ್ U. T. Khader ಈ ಬಾರಿ ಗಂಭೀರವಾಗಿ ಎಚ್ಚರಿಕೆ ನೀಡಿರುವುದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ.

    “ಫಾಲೋಅಪ್ ಇಲ್ಲದಿದ್ದರೆ ವರ್ಷವಾದರೂ ಉತ್ತರ ಇಲ್ಲ!”

    ಸ್ಪೀಕರ್ U. T. Khader ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸ್ಪಷ್ಟವಾಗಿ ಹೇಳಿದರು:
    ಅನೇಕ ಪ್ರಶ್ನೆಗಳಿಗೆ ವರ್ಷವಾದರೂ ಉತ್ತರ ಇಲ್ಲ.
    ಉಪಸಭಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿದರೂ ಫಲಿತಾಂಶ ಇಲ್ಲ.
    ಅಧಿಕಾರಿಗಳಿಂದ ಫಾಲೋಅಪ್ ಕೊರತೆ.

    Also Read  "ಅಮ್ಮ"ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ

    “ಸಿಎಂ ಗಮನಕ್ಕೆ ತರುತ್ತೇವೆ” – ಗೃಹ ಸಚಿವ ಪರಮೇಶ್ವರ್

    ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ G. Parameshwara ಸಮಸ್ಯೆಯನ್ನು ಒಪ್ಪಿಕೊಂಡು ,ಸ್ಪೀಕರ್ ಅಪರೂಪಕ್ಕೆ ಗಟ್ಟಿಯಾಗಿ ಮಾತನಾಡಿದ್ದಾರೆ,ಸಮಸ್ಯೆ ನಿಜವಾಗಿಯೂ ಇದೆ,ಈ ವಿಷಯವನ್ನು ಮುಖ್ಯಮಂತ್ರಿಯ ಗಮನಕ್ಕೆ ತರಲಾಗುತ್ತದೆ ಎಲ್ಲಾ ಸಚಿವಾಲಯಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಜನರ ಪ್ರಶ್ನೆಗಳಿಗೆ ಉತ್ತರವೇ ಇಲ್ಲವಾದರೆ ಅಭಿವೃದ್ಧಿ ಹೇಗೆ?

    ವಿಧಾನಸಭೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಸಾಮಾನ್ಯ ರಾಜಕೀಯ ವಿಷಯಗಳಷ್ಟೇ ಅಲ್ಲ. ಅವುಗಳಲ್ಲಿ:
    ರಸ್ತೆ ಅಭಿವೃದ್ಧಿ
    ಕುಡಿಯುವ ನೀರು
    ಶಾಲೆ ಮತ್ತು ಆಸ್ಪತ್ರೆಗಳ ಸಮಸ್ಯೆ
    ಗ್ರಾಮಗಳ ಮೂಲಸೌಕರ್ಯ
    ಯೋಜನೆಗಳ ಪ್ರಗತಿ…
    ಇಂತಹ ಜನಸಾಮಾನ್ಯರಿಗೆ ಸಂಬಂಧಿಸಿದ ಪ್ರಶ್ನೆಗಳು ಸೇರಿರುತ್ತವೆ.ಆ ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ, ಜನರ ಸಮಸ್ಯೆಗಳ ಪರಿಹಾರವೂ ವಿಳಂಬವಾಗುತ್ತದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರುನಾಡ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣದ ಬಾಗಿಲು ಓಪನ್! 18 ದೇಶಗಳ 80 ವಿವಿಗಳಿಂದ ಭರ್ಜರಿ ಆಫರ್
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
    Tel Aviv ಫ್ಲೈಟ್ನನಲ್ಲಿ ಪೈಲಟ್ ಜಗಳ..!ಧೈರ್ಯ ತೋರಿದ ಭಾರತೀಯ ಕ್ಯಾಪ್ಟನ್ ‌ ಸ್ಮಿತ್ ಮಚ್ಛಾರ್..ನೆತನ್ಯಾಹು ಶ್ಲಾಘನೆ
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
    🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
    ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
    ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು