📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!

    ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆ ಇಂದ ಬಂದಂತಹ 2000 ಹಣವನ್ನು  ಸೌದತ್ತಿ ಎಲ್ಲಮ್ಮ  ದೇವಿಗೆ ಸಮರ್ಪಣೆ ಮಾಡಲು ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ – ತಿಮ್ಮಾಪುರದ 850 ಮಹಿಳೆಯರು ಸ್ವಯಂ ನಿರ್ಧಾರ ಮಾಡಿ ಒಟ್ಟು  ₹17 ಲಕ್ಷ ರೂಪಾಯಿಯನ್ನು  ಎಲ್ಲಮ್ಮ ದೇವಿಯ ಪದತಲದಡಿ ಅರ್ಪಿಸಿದ್ದಾರೆ ! /Grihalakshmi – 850 women from Thimmapur donate ₹17 lakh! To Yallama temple Gadaga

    ಇಂತಹುದೊಂದು  ಅಭೂತಪೂರ್ವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ  ತಿಮ್ಮಾಪುರ ಗ್ರಾಮದ  ಸುಮಾರು 850 ಮಹಿಳೆಯರ ಸ್ವಯಂ ನಿರ್ಧಾರದಿಂದ ನಡೆದಿದೆ. 

    ಆ ಮಹಿಳೆಯರು ಯಾರ ಒತ್ತಡಕ್ಕೂ ಒಳಗಾಗದೆ ತಮ್ಮೊಳಗೆ ತಾವು ನಿರ್ಧರಿಸಿಕೊಂಡು ಆ ಊರಿನ ಗ್ರಹಲಕ್ಷ್ಮಿ ಯೋಜನೆಯ ಬಹುತೇಕ 850 ಫಲಾನುಭವಿಗಳು ಒಟ್ಟಾಗಿ ತಮ್ಮ ಒಂದು ತಿಂಗಳ ಯೋಜನೆಯ ಹಣವನ್ನು ಎಲ್ಲಮ್ಮ ದೇವಿಯ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ನಿರ್ಧರಿಸಿದರು ಹಾಗೂ ಅದರಂತೆಯೇ ನಡೆದುಕೊಂಡರು. ಆ ಎಲ್ಲಾ 850 ಮಹಿಳೆಯರ ಒಂದು ತಿಂಗಳ ಗ್ರಹಲಕ್ಷ್ಮಿ ಯೋಜನೆಯ ಮೊತ್ತ ₹17 ಲಕ್ಷ ಆಗುತ್ತದೆ. ಅದನ್ನು Yellamma Templeಗೆ ದೇಣಿಗೆಯಾಗಿ ನೀಡಿದ್ದಾರೆ. ಸರ್ಕಾರ ನೀಡಿದ ಸಹಾಯ ನಮ್ಮ ಕುಟುಂಬದ ನೆರವಿಗೆ. ಅದರಲ್ಲಿ ಒಂದು ಭಾಗವನ್ನು ದೇವಿಗೆ ಅರ್ಪಿಸೋಣ” ಎಂಬ ಆಲೋಚನೆ ಗ್ರಾಮದಲ್ಲಿ ಒಗ್ಗಟ್ಟಿನ ಸಂಕಲ್ಪವಾಗಿ ರೂಪುಗೊಂಡಿತು.
    ಭಕ್ತಿ ಮತ್ತು ಏಕತೆಯ ಮೇಳೈಸಿತು.

    Also Read   ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ

    ಇತಿಹಾಸ ಪ್ರಸಿದ್ಧ  ಯಲ್ಲಮ್ಮ ದೇವಿಯ ಮೇಲಿನ ಭಕ್ತಿಯೇ ಈ ಕಾರ್ಯಕ್ಕೆ ಮೂಲ ಪ್ರೇರಣೆ. ದೇವಾಲಯದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ನೆರವಾಗಬೇಕು ಎಂಬ ಮನೋಭಾವದಿಂದ ತಿಮ್ಮಾಪುರದ  ಮಹಿಳೆಯರು ಈ ದೇಣಿಗೆಯನ್ನು ಸಮರ್ಪಿಸಿದ್ದಾರೆ.

    ಗ್ರಾಮೀಣ ಮಹಿಳೆಯರ ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಮನೋಭಾವ ಈ ಘಟನೆಯ ಮೂಲಕ ಸ್ಪಷ್ಟವಾಗಿದೆ. 

    ಸರ್ಕಾರದ ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸುವ ಮೂಲಕ  ಈ ಮಹಿಳೆಯರು ಮಾದರಿಯಾಗಿ ಕಾಣುತ್ತಾರೆ. ಮಹಿಳಾ ಸಬಲೀಕರಣದ ನಿಜವಾದ ಶಕ್ತಿಗೆ ಸಾಕ್ಷಿಯಾಗುತ್ತಲೇ, ಭಕ್ತಿ ಮತ್ತು ಸಮಾಜಮುಖಿ ಚಿಂತನೆಯ ಸಂಯೋಜನೆ ಅದ್ಭುತವಾಗಿ ಗೋಚರಿಸುತ್ತದೆ.  ಬಹಳ ಮುಖ್ಯವಾಗಿ ಗ್ರಾಮೀಣ  ಮಟ್ಟದಲ್ಲಿನ ಮಹಿಳೆಯರ ಏಕತೆಯ ಈ ಶಕ್ತಿಯು ರಾಜ್ಯದ ಇತರ ಮಹಿಳೆಯರಿಗೆಷ್ಟೇ ಅಲ್ಲ ಪುರುಷರಿಗೂ ಮಾದರಿ ಎನಿಸುವಂತಿದೆ.

    Also Read  ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ

    ತಿಮ್ಮಾಪುರದ ಈ 850 ಮಹಿಳೆಯರ ಮಹಾಸಂಕಲ್ಪ  ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
    ಒಬ್ಬಳ ಗ್ರಾಹಲಕ್ಷ್ಮಿಯ 2000ರೂ ಚಿಕ್ಕದಾಗಿ ಕಾಣಬಹುದು, ಆದರೆ 850 ಮಹಿಳೆಯರ ಒಗ್ಗಟ್ಟಿನ  ಸಂಕಲ್ಪ ದಿಂದಾಗಿ ಅದು 17 ಲಕ್ಷ ರೂಪಾಯಿಗಳ ಮಹಾಸಾಗರವಾಗಿ ಪರಿವರ್ತಿತವಾಗಿದೆ! ಇದು ಕೇವಲ ಹಣದ ಸಂಗ್ರಹವಲ್ಲ, ಇದು ಮಹಿಳಾ ಶಕ್ತಿ, ಆತ್ಮವಿಶ್ವಾಸ ಮತ್ತು ಸಂಘಟನೆಯ ಸಂಕೇತವಾಗಿದೆ. ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಮಹಿಳೆಯರು Gruha Lakshmi ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ನೆರವು 2000ರೂ ಹಣವನ್ನು  ಭಕ್ತಿಭಾವದಿಂದ ಮತ್ತು ದೇವಿಯ ಆಶೀರ್ವಾದಕ್ಕಾಗಿ  ಈ ದೇಣಿಗೆಯನ್ನು ನೀಡಿದರು. ಮಹಿಳೆಯರು “ಈ ಹಣ ನಮ್ಮ ಮನೆಗೆ ಸರ್ಕಾರ ನೀಡಿದ ನೆರವು, ಅದರಲ್ಲಿ ಒಂದು ತಿಂಗಳ ನೆರವನ್ನು ದೇವಿಗೆ ಅರ್ಪಿಸುತ್ತೇವೆ” ಎಂದು ಹೇಳಿದ್ದಾರೆ

    Also Read  2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ

    ತಿಮ್ಮಾಪುರ ಗ್ರಾಮದ ಮಹಿಳೆಯರು  ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಿ, “ನಾವು ಒಂದಾದರೆ ಅಸಾಧ್ಯವೆಂಬುದೇ ಇಲ್ಲ” ಎಂಬ ಸಂದೇಶವನ್ನು ಘೋಷಿಸಿದ್ದಾರೆ.
    ಸಾಮಾನ್ಯವಾಗಿ “ಏಕತೆ” ಎಂಬ ಪದವನ್ನು ನಾವು ಕೇಳುತ್ತೇವೆ. ಆದರೆ ಅದನ್ನು ಕೃತ್ಯದಲ್ಲಿ ತೋರಿಸಿದರೆ ಅದು ಇತಿಹಾಸವಾಗುತ್ತದೆ. ಇಂತಹ ಇತಿಹಾಸವನ್ನು ನಿರ್ಮಿಸಿರುವುದು  ತಿಮ್ಮಾಪುರದ ಹೆಮ್ಮೆಯ ಮಹಿಳೆಯರು ಅನ್ನಬಹುದು.

    • -ಪ್ರಿಯಾ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?
    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
    ಬಿಲ್‌ಗಾಗಿ ಶವ ತಡೆದರೆ ಹುಷಾರ್! ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕ್ರಮ?
    ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    6 ವರ್ಷದ ಮಗಳಿಗಾಗಿ IPS ದಂಪತಿ ನಡುವೆ ಕದನ..ತಡರಾತ್ರಿ ಠಾಣೆ ಮೆಟ್ಟಿಲೇರಿದ ಪತ್ನಿ!
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ!