📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ

ಜಗತ್ತಿನ ಎಲ್ಲಾ ದೇಶಗಳನ್ನ ತನ್ನ ಹಿಡಿತದಲ್ಲಿಟ್ಟುಕೊಂಡು ಅಲ್ಲಿನ ಸಂಪತ್ತುಗಳ ಮೇಲೆ ತನ್ನ ಹಕ್ಕನ್ನು ಚಲಾಯಿಸಿಕೊಂಡಿರುವ ಅಮೇರಿಕಾ ಮೊದಲಿಂದಲೂ ಇದೇ ತೆರನಾದ ನಡೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಆದರೀಗ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ವಿಪರೀತ ಅನ್ನಿಸುವಷ್ಟು ಟೆರರ್ ಆಗಲಾರಂಭಿಸುತ್ತಿದೆ. ನೇರಾನೇರವಾಗಿ, ತನಗೆ ಬೇಕಾಗಿದ್ದನ್ನು ಹೋಗಿ ಕಿತ್ತುಕೊಳ್ಳುವಂತಹ ದುರವರ್ತನೆಯನ್ನು ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲ, ತನಗೆ ಬೇಕಾದ್ದನ್ನು ಪಡೆಯುವುದಕ್ಕಾಗಿ ಯಾರನ್ನು ಬೇಕಾದರೂ ಕೆಟ್ಟವರನ್ನಾಗಿ ಬಿಂಬಿಸಿ ಅವರ ಮೇಲೆ ದಾಳಿ ನಡೆಸಲು  ಹಿಂದೆಣಿಸದಂತಹ ವ್ಯಕ್ತಿತ್ವ. ಅವರ ಈ ವ್ಯಕ್ತಿತ್ವದಿಂದಾಗಿ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಯುದ್ಧ ಪ್ರಾರಂಭವಾಗಬಹುದು. ಅದರಿಂದ ಜಗತ್ತಿನ ಮೇಲಾಗುವ ಅಪಾಯವೇನು? ವಿಶ್ವ ಸಂಸ್ಥೆ ಎಂಬುದು ಲೆಕ್ಕಕ್ಕೇ ಇಲ್ಲದಂತಾಗಿಬಿಟ್ಟಿದೆ ಅಮೆರಿಕದ ಪಾಲಿಗೆ. ವಿಶ್ವಸಂಸ್ಥೆಯಾಗಲಿ ವಿಶ್ವದ ನ್ಯಾಯಾಂಗ ವ್ಯವಸ್ಥೆಯಾಗಲಿ ಯಾವುದು ಚಕಾರ ವೆತ್ತುತ್ತಿಲ್ಲ. ಖಡಕ್ ಸ್ಟೇಟ್ಮೆಂಟನ್ನೂ ನೀಡುತ್ತಿಲ್ಲ…….

ಇರಾನ್ ಸರ್ವೋಚ್ಛ ನಾಯಕ “ಆಯತುಲ್ಲಾ ಅಲಿ ಖಮೇನಿ” ಹಾಗೂ ಅವರ ಇಡೀ ಕುಟುಂಬ ಮತ್ತು ಅವರ ಹತ್ತಿರದವರನ್ನು ಕೊಂದು ಹಾಕುವುದರಲ್ಲಿ ಅಮೆರಿಕ ಹಾಗೂ ಇಸ್ರೇಲ್ ಯಶಸ್ವಿಯಾಗಿದೆ.

ಅಮೇರಿಕ ಅಧ್ಯಕ್ಷ “ಡೊನಾಲ್ಡ್ ಟ್ರಂಪ್,” ಇರಾನ್ ಮೇಲೆ ಕಳೆದ ನಾಲ್ಕೈದು ತಿಂಗಳಿನಿಂದ ವಿಪರೀತವಾಗಿ ಒತ್ತಡವನ್ನು ಹೇರುತ್ತಲೇ ಬಂದಿದ್ದಾರೆ. ಅಮೆರಿಕಾದ ಈ ಹಿಂದಿನ ಅಧ್ಯಕ್ಷರುಗಳೆಲ್ಲರೂ ಸಾರ್ವಜನಿಕವಾಗಿ ಸ್ವಲ್ಪ ಗೌರವಯುತವಾಗಿ ನಡೆದುಕೊಳ್ತಿದ್ದರು. ಜಗತ್ತಿನ ಮುಂದೆ ತೀರ ಸಣ್ಣವರಾಗದ ರೀತಿಯಲ್ಲಿ ನಡೆದುಕೊಳ್ಳುತ್ತಾ ಬಂದಿದ್ದರಾದರೂ, ಅವರ ಉದ್ದೇಶವು ಜಗತ್ತಿನ ಎಲ್ಲಾ ರಾಷ್ಟ್ರಗಳು ಅಮೆರಿಕಾದ ಮುಂದೆ ಮಂಡಿಯೂರಿ ಕೂರಬೇಕು ಎಂಬುದೇ ಉದ್ದೇಶವಾಗಿತ್ತು. ಆದರೆ ಈಗಿನ ಅಧ್ಯಕ್ಷರು ಎಲ್ಲಾ ಗೌರವವನ್ನು ಮೀರಿ, ಎಲ್ಲಾ ಮರ್ಯಾದೆಯ ರೇಖೆಯನ್ನು ದಾಟಿ ಮುಂದಕ್ಕೆ ನುಗ್ಗುತ್ತಿದ್ದಾರೆ. ತನಗೆ ಹೇಗೆ ಬೇಕೋ ಹಾಗೆ ಸಾಗುತ್ತಿದ್ದಾರೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅಪಾಯ ತಂದೊಡ್ಡುವಂತಹ ಟೆರರ್ ನಡೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

ಎಸ್, ಈಗ ಕೆಲವು ಸಮಯದ ಹಿಂದಿನ ಘಟನೆಯು ಇನ್ನೂ ನೆನಪಿದೆ. ಅಮೇರಿಕಾದ ಸನಿಹದಲ್ಲೇ ಇರುವಂತಹ ದೇಶ ಅದು. ಅದರ ಹೆಸರು ವೆನಿಜುವೆಲಾ. ಅದರ ಅಧ್ಯಕ್ಷ ನಿಕೋಲಸ್ ಮದುರೋ. ಇದ್ದಕ್ಕಿದ್ದಂತೆಯೇ ಮೊನ್ನೆ ಜನವರಿ 4 ಶುಕ್ರವಾರದಂದು ಈ ಡೊನಾಲ್ಡ್ ಟ್ರಂಪ್ ಎಂಬ ಮಹಾಶಯ ತನ್ನ ಸಶಕ್ತ ಸೈನಿಕರ ಪಡೆಯನ್ನು ರಾತ್ರೋರಾತ್ರಿ ವೆನಿಜುವೆಲಾದ ರಾಜಧಾನಿ ಕರಾಕಸ್ ಕಡೆಗೆ ನುಗ್ಗಿಸಿ ಬಿಡುತ್ತಾನೆ. ಹಾಗೆ ನುಗ್ಗಿಸಿದ ಟ್ರಂಪ್ ಮಹಾಶಯ ಕಾರ್ಯಾಚರಣೆಯ ವಿಡಿಯೋವನ್ನು ಲೈವ್ ಆಗಿ ನೋಡುತ್ತಿರುತ್ತಾನೆ ಶ್ವೇತಾ ಭವನದಲ್ಲಿ ಕೂತು. ಅವತ್ತು ಅಮೇರಿಕಾದ ಏರ್ ಫೋರ್ಸ್ ಸೈನಿಕರು ವೆನಿಜುವೆಲಾ ದೇಶಕ್ಕೆ ನುಗ್ಗಿ ಆ ದೇಶದ ಅಧ್ಯಕ್ಷರ ಮನೆಗೆ ಅವಂತವಾಗಿ ಹೋಗಿ, ಗಾಢ ನಿದ್ದೆಯಲ್ಲಿದ್ದ ಅಧ್ಯಕ್ಷರು ಹಾಗೂ ಅವರ ಹೆಂಡತಿ ಸಿಲಿಯ ಫ್ರೂಟ್ಸ್ ಇಬ್ಬರನ್ನು ಬಂಧಿಯನ್ನಾಗಿಸಿ ಅಮೆರಿಕಕ್ಕೆ ಕರೆದೊಯ್ಯುತ್ತಾರೆ. ಶನಿವಾರ ಬೆಳಿಗ್ಗೆ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಇಡೀ ಜಗತ್ತು ತಲ್ಲಣಗೊಂಡಿದೆ. ಅಮೇರಿಕಾವನ್ನು ಮೆಚ್ಚಿಕೊಳ್ಳುವವರು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡರೆ ಉಳಿದವರು ಅಸಹಾಯಕತನದಿಂದ ಒಂದೆರಡು ಸ್ಟೇಟ್ಮೆಂಟ್ ಕೊಟ್ಟು ಸುಮ್ಮನಾಗುತ್ತಾರೆ.

ಪ್ಲಡಿನ, ಅಮೇರಿಕ ಬೆoಬಲಿತ ಇರನಿಯನ್

ಇದಾಗುತ್ತಿದ್ದಂತೆಯೇ ಕೆನಡಾ ಮತ್ತು ಗ್ರೀನ್ಲ್ಯಾಂಡ್ ದೇಶಕ್ಕೂ ಸ್ವತಹ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕುತ್ತಾರೆ. ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಮಾತನ್ನಾಡುತ್ತಾರೆ. ಅಮೇರಿಕಾಕ್ಕೆ ಆ ದೇಶದಿಂದ ಬೆದರಿಕೆ ಇದೆ ಎಂಬ ಅಪವಾದವನ್ನು ಹೋರಿಸಿ ತಮ್ಮ ಆ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಈ ಮಹಾನುಭಾವ. ಜಗತ್ತಿನ ಅತ್ಯಂತ ಪ್ರಭಾವಶಾಲಿ ದೇಶವಾದ ಅಮೆರಿಕಾದ ಅಧ್ಯಕ್ಷರೇ, ಕೆನಡಾ ಮತ್ತು ಗ್ರೀನ್ಲ್ಯಾಂಡ್ ಮತ್ತು ವೆನಿಜುವೆಲಾ ಈ ಮೂರೂ ದೇಶವನ್ನು ಸೇರಿಸಿಕೊಂಡು, ಅಮೇರಿಕಾದ ನಕ್ಷೆಯನ್ನು ರಚಿಸಿ ಜಗತ್ತಿಗೆ ತೋರಿಸು ತಾರೆಂದರೆ ಲೆಕ್ಕಹಾಕಿ ಟ್ರoಪ್ ನಡೆ ಹೇಗಿರಬಹುದು ಎನ್ನೋದನ್ನು.

ರಷ್ಯಾ ಅಧ್ಯಕ್ಷರು
ಭಾರತದ ಪ್ರಧಾನಿಗಳು
ಚೀನಾ ಅಧ್ಯಕ್ಷರು

ಇದೆಲ್ಲವೋ ಜಗತ್ತಿನ ಕೆಲವು ದೇಶಗಳ ಪ್ರತಿನಿಧಿಗಳ ಎದುರೇ ನಡೆದಿದ್ದರೂ ಸಹ ಅವರ್ಯಾರು ಕಮಕ್ ಕಿಮಕ್ ಎನ್ನುವುದಿಲ್ಲ. ಬ್ರಿಟನ್ನಿನ ಕೇರ್ಸ್ಟಾರ್ಮರ್, ಜಾರ್ಜಿಯ ಮೆಲೋನಿ ಇಟಲಿ, ಉರ್ಸುಲಾವಾನ್ ಯುರೋಪ್, ಮ್ಯಾಕ್ರನ್ ಫ್ರೆಂಚ್, ಫ್ರೆಡ್ರಿಕ್ ಮಾರ್ಜ್ ಜರ್ಮನ್  ಇನ್ನೂ ಕೆಲವು ದೇಶದ ಪ್ರಮುಖರ ಮುಂದೆಯೇ ಈ ನಕ್ಷೆಯನ್ನು ತೋರ್ಪಡಿಸುತ್ತಾರೆ ಎಂದರೆ ಟ್ರಂಪ್ ಎಂಬ ವ್ಯಕ್ತಿಯ ನಡೆ ಎಷ್ಟು ಟೆರರ್ ಇರಬಹುದು ಎಂಬುದನ್ನು ನೀವೇ ಊಹಿಸಿ. ಇಡಿ ಜಗತ್ತಿಗೆ  ಇಂತಹ ವ್ಯಕ್ತಿಯಿಂದ ಅಪಾಯ ಕಟ್ಟಿಟ್ಟ ಬುತ್ತಿ. ಯಾವುದೇ ದೇಶದ ಮೇಲೆ ಮುನ್ನುಗುವ ಮೊದಲು ಅಂತರಾಷ್ಟ್ರೀಯ ಕಾನೂನು ಪಾಲನೆ ಅನಿವಾರ್ಯ ಅದು ಆಗಬೇಕು ಕೂಡ. ಆಗುತ್ತಿಲ್ಲ ಎಂದರೆ ಅದು ಗುಂಡಾರಾಜ್ಯ ಎನ್ನಿಸಿಕೊಳ್ಳುತ್ತದೆ. ಸದ್ಯಕ್ಕೆ ಟ್ರಂಪ್ ನಡೆ ಗುಂಡಾ ನಡೆಯಂತೆಯೇ ಕಾಣಿಸುತ್ತಿದೆ. ಅಂತರ್ರಾಷ್ಟ್ರೀಯ ಯಾವ ಕಾನೂನಿಗೂ ಮನ್ನಣೆಯನ್ನು ಕೊಡುತ್ತಿಲ್ಲ ಈ ಅಸ್ಸಾಮಿ. ಅತ್ತೆ ಏಕೆ ಅಮೇರಿಕಾ ದೇಶದ ನ್ಯಾಯಾಂಗದ ವಿರುದ್ಧವೇ ಅಸಮಾಧಾನದ ಮಾತನ್ನು ಬಹಿರಂಗವಾಗಿಯೇ ಆಡುತ್ತಾನೆ ಈ ಅಧ್ಯಕ್ಷ ಮಹಾಶಯ. ಹೀಗಿರುವಾಗ ಈ ವ್ಯಕ್ತಿ ಯಾರ ಮಾತನ್ನು ಕೇಳುವವರಲ್ಲ ತಮ್ಮ ಮನಸ್ಸಿಗೆ ಏನು ತೋಚುತ್ತದೋ ಅದನ್ನು ಮಾಡುತ್ತಾನೆ ತನಗೆ ಬೇಕಾಗಿದ್ದನ್ನು ಕಿತ್ತುಕೊಳ್ಳುತ್ತಾನೆ ತನ್ನ ಮುಂದೆ ಎಲ್ಲರೂ ಮಂಡಿಯೂರ ಬೇಕೆಂದು ಬಯಸುತ್ತಾನೆ. ಅವರ ಇಂತಹ ನಡೆಯೋ ಜಗತ್ತಿನ ಮೇಲೆ ಆಗುವಂತಹ ಪರಿಣಾಮ ಎಂತಹುದು?

ನಿಕೋಲಸ್ ದಂಪತಿಗಳು

ಅಮೇರಿಕಾ ನಡೆ ಯಾವತ್ತೂ ಹೀಗೆ

2003ರಲ್ಲಿ ಅಮೆರಿಕ ಇರಾಕ್ ಮೇಲೆ ಏಕೆ ಎರಗಿತು ಅನ್ನುವುದನ್ನು ಜಗತ್ತು ಓಪನ್ ಆಗಿ ಹೇಳಲು ತಯಾರಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬರಿಗೂ ಗೊತ್ತಿದೆ, ಅಮೇರಿಕಾವನ್ನು ಎದುರು ಹಾಕಿಕೊಳ್ಳಲು ಸಾಧ್ಯವಾಗದವರು ಬಾಯಿ ಮುಚ್ಚಿ ಕೂತಿದ್ದಾರಷ್ಟೇ. ಇರಾಕ್ನ ಅವತ್ತಿನ ಅಧ್ಯಕ್ಷ ಸದ್ದಾಮ್ ಹುಸೇನ್ ತನ್ನ ತೈಲ ಸಂಪತ್ತಿನಿಂದಾಗಿ ಇರಾಕ್ ಅನ್ನು ಸಮೃದ್ಧವನ್ನಾಗಿಸಿದ್ದ. ಆಂತರಿಕ ಬಂಡಾಯಗಳನ್ನು  ಚೂಟಿ ಹಾಕಲು ಸದ್ದಾಮ್ ಹುಸೇನ್ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದುದು ಸುಳ್ಳಲ್ಲ. ನಿರಂಕುಶತ್ವದ ನಡೆ ಪ್ರದರ್ಶಿಸುತ್ತಿದ್ದುದು ಹೊರತುಪಡಿಸಿದರೆ ಸದ್ದಾಮ್ ಹುಸೇನ್ ಅಮೆರಿಕ ಹೇಳುವಂತೆ ಅದು ಆರೋಪಿಸುವಂತೆ ಯಾವುದೇ ಜಗತ್ತಿಗೆ ಮಾರಕವಾಗುವಂತಹ ರಾಸಾಯನಿಕಗಳನ್ನಾಗಲಿ ಅಸ್ತ್ರಗಳನ್ನಾಗಲಿ ಶೇಖರಿಸಿರಲಿಲ್ಲ. ಅಮೇರಿಕಾ ಜಗತ್ತಿನ ಮುಂದೆ ಸದ್ದಾಂ ಹುಸೇನ್ ಇರಾಕ್ನ ಅಧ್ಯಕ್ಷ ಇಡೀ ಜಗತ್ತಿಗೆ ಬೆದರಿಕೆ ಒತ್ತುತ್ತಿದ್ದಾನೆ. ಮಾನವ ಕುಲವನ್ನೇ ನಾಶ ಮಾಡುವಂತಹ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ್ದಾನೆ ಎಂಬ ಅಪವಾದವನ್ನು ಅಮೆರಿಕ ಇರಕ್ ಮೇಲೆ ಹೊರಿಸಿತು.

ನಿಕೋಲಸ್ ಬಂಧನ

ಸತ್ಯ ಏನೆಂದರೆ ಇರಾಕ್ ತನ್ನ ತೈಲವನ್ನು ಅಮೆರಿಕನ್ ಡಾಲರ್ ನಿರ್ಲಕ್ಷಿಸಿ ತನ್ನದೇ ಲೋಕಲ್ ಕರೆನ್ಸಿಯ ಮೂಲಕ ಮಾರಾಟ ಮಾಡಲು ಪ್ರಾರಂಭಿಸಿತ್ತು. ಇದಕ್ಕೆ ಅಮೆರಿಕ ಒಡ್ಡಿದ ಪ್ರತಿರೋಧವನ್ನು ಸದ್ದಾಮ್ ಹುಸೇನ್ ಕ್ಯಾರೆ ಮಾಡಲಿಲ್ಲ. (ಡಿ ಡಾಲರೈಸೇಶನ್ ) ಇದನ್ನು ಓಪನ್ ಆಗಿ ಸದಾಮ್ ಹುಸೇನ್ ಹೇಳಿಕೊಳ್ಳಲು ಪ್ರಾರಂಭಿಸಿದ್ದು ಅಮೆರಿಕಾದ ಅಹಂಗೆ ಪೆಟ್ಟು ಕೊಟ್ಟಿತ್ತು.  ಇಡೀ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಅಮೆರಿಕವು ತನ್ನ ಡಾಲರನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಆ ಅಸ್ತ್ರವೇನಾದರೂ ಕೈ ತಪ್ಪಿದರೆ ಅಮೆರಿಕ ಝೀರೋ ಆಗುತ್ತದೆ ಎನ್ನುವುದು ಸ್ವತಃ ಅಮೆರಿಕನ್ನರಿಗೆ ಗೊತ್ತಿದೆ. ಹಾಗಾಗಿಯೇ ಅಮೆರಿಕನ್ನರು ತನ್ನ ಡಾಲರ್ ಪ್ರಭಾವ ಕುಗ್ಗದಂತೆ ಕಾಪಾಡಿಕೊಳ್ಳುತ್ತಾ ಅದನ್ನು ಕುಗ್ಗಿಸುವ ಅಥವಾ ನಿರ್ಲಕ್ಷಿಸುವ ಜಗತ್ತಿನ ಯಾವುದೇ ವ್ಯಕ್ತಿಯನ್ನಾದರೂ ಮುಗಿಸಿ ಬಿಡುವ ದಾರ್ಷ್ಶ್ಯ ತ ವನ್ನು ತೋರಿಸಿಕೊಂಡು ಬಂದಿದ್ದಾರೆ. ಸದ್ದಾಂ ಹುಸೇನ್ ಮೇಲು ಜಗತ್ತಿನ ಮುಂದೆ ಮಾನವ ಕುಲಕ್ಕೆ ಕಂಠಕ ಎಂಬ ಗುಮ್ಮನ್ನು ತೋರಿಸಿ ಅವನನ್ನು ಮುಗಿಸಲಾಗುತ್ತದೆ ಹಾಗೆಯೇ ಇರಾಕ್ ಮೇಲೆ ಅಲ್ಲಿನ ತೈಲ ಸಂಪತ್ತಿನ ಮೇಲೆ ಈಗಲೂ ಅಮೆರಿಕಾದ ಅಧಿಪತ್ಯ ಸಾಗಿದೆ. ಆದರೆ ಸದ್ದಾಮ್ ಹುಸೇನ್ ಮರಣ ನಂತರ ಇರಾಕ್ ಮಾನವ ಕುಲಕ್ಕೆ ಕಂಟಕ ತಂದೊಡ್ಡುವಂತಹ ರಾಸಾಯನಿಕ ಹಾಗೂ ಅಸ್ತ್ರವನ್ನು ಶೇಕರಿಸಿಟ್ಟಿದ್ದಾರೆ ಎಂಬ ಆರೋಪ ಮಾಡಿತಲ್ವಾ, ಅದಕ್ಕೆ ಸಾಕ್ಷ್ಯವು ಸಿಕ್ಕಿಲ್ಲ, ಯಾವುದೇ ರಾಸಾಯನಿಕ ಮತ್ತು ಅಸ್ತ್ರವು ಸಿಕ್ಕಿಲ್ಲ. ಹಾಗಿದ್ದರೆ ಅಮೆರಿಕಾದ ಆರೋಪ ಸುಳ್ಳು ಅಂತ ಆಯ್ತು ತಾನೇ? ತನ್ನ ಲಾಭ ಸ್ವಾರ್ಥಕ್ಕಾಗಿ ಒಂದು ದೇಶದ ಮೇಲೆ ಸಲ್ಲದ ಆರೋಪ ಹೋರಿಸಿ ಅಲ್ಲಿಯ ಅಧ್ಯಕ್ಷನನ್ನ ಮುಗಿಸಿತು ಅಂತ, ಇದರಿಂದ ರುಜುವಾತ್ ಆಗುತ್ತದೆ ತಾನೆ? ಆದರೆ ಇದನ್ನು ಪ್ರಶ್ನಿಸ ಬೇಕಾಗಿದ್ದ ಖಂಡಿಸಬೇಕಾಗಿದ್ದ ಜಗತ್ತಿನ ಇತರ ರಾಷ್ಟ್ರಗಳ್ಯಾರು ಆ ಧೈರ್ಯ ತೋರಿಸಲಿಲ್ಲ. ವಿಶ್ವಸಂಸ್ಥೆಯೂ ಸಹ ಅಮೆರಿಕಾದ ನಡೆಯ ವಿಚಾರದಲ್ಲಿ ಮೌನ ತಾಳುತ್ತದೆ. ಒಂದೇ ಒಂದು ಎಚ್ಚರಿಕೆಯನ್ನೂ ಕೊಡುವ ಧೈರ್ಯ ತೋರ್ಪಡಿಸಲಿಲ್ಲ.

ಸದ್ದಾಂ

ಅದು ಇರಾಕ್ ಕಥೆ, ಆದರೆ ವೆನಿಜುವೆಲಾದ ಕಥೆಯೇ ಬೇರೆ.

ಚಾವೇಸ್

ಚಾವೇಸ್

1999 ರಿಂದ 2013ರ ವರೆಗೆ 14 ವರ್ಷಗಳ ಕಾಲ ವೇನಿ ಜುವೆಲಾ ದೇಶವನ್ನು ಆಳಿದ ವ್ಯಕ್ತಿ  ಈ ಚಾವೇಸ್. ಇವತ್ತು ಭಾರತದಲ್ಲಿ ನರೇಂದ್ರ ಮೋದಿಯವರಿಗಿರುವಂತಹ ಜನಪ್ರಿಯತೆಯ ಎರಡರಷ್ಟು ಜನಪ್ರಿಯತೆಯನ್ನು ಚಾವೇಸ್ ಅವರ ದೇಶದಲ್ಲಿ ಹೊಂದಿದ್ದರು. ವೆನಿಜುವೆಲಾ ದಲ್ಲಿ ಇರುವಷ್ಟು ತೈಲ ಸಂಪತ್ತು ಬೇರೆಲ್ಲೂ ಇಲ್ಲ ಎನ್ನಲಾಗುತ್ತದೆ. ಇಡೀ ಜಗತ್ತಿಗೆ ಹತ್ತಾರು ದಶಕಗಳ ಕಾಲದವರೆಗೆ ತೈಲದ ಹಸಿವನ್ನು ಇಂಗಿಸುವಷ್ಟು ತೈಲ ಸಂಪತ್ತು ಆ ದೇಶದಲ್ಲಿದೆ. ಅಂತಹ ಸಂಪತ್ ಭರಿತ ದೇಶ ವೆನಿಜುವೆಲಾ. ಇದರ ಪರಿಣಾಮದಿಂದ ವೆನಿಜುವೆಲಾವನ್ನು ಅತ್ಯಂತ ಶ್ರೀಮಂತರ ರಾಷ್ಟ್ರವನ್ನಾಗಿ ಮಾಡುವತ್ತ ಅವತ್ತಿನ ಅಧ್ಯಕ್ಷ  ಚಾವೇಸ್ ಮುನ್ನಡೆದಿದ್ದರು.  ಅವತ್ತು ಚಾವೇಸ್ ಕೂಡ ಮಾಡಿದ ತಪ್ಪು ಬೇರೇನೂ ಅಲ್ಲ, ಅಮೆರಿಕಾದ ಡಾಲರನ್ನು ನಿರ್ಲಕ್ಷಿಸಿ ತಮ್ಮದೇ ಕರೆನ್ಸಿಯ ಮೂಲಕ ಜಗತ್ತಿನ ಜೊತೆಗೆ ವ್ಯವಹಾರ ನಡೆಸಲು ಮುಂದಾಗಿದ್ದು. ಅದು ಅಮೇರಿಕಾ ಹಾಗೂ ಯುರೂಪಿಯನ್ನರಿಗೆ ಕಣ್ಣು ಉರಿಯಲು ಕಾರಣವಾಗಿತ್ತು. ಇದರಿಂದ ರೊಚ್ಚಿಗೆದ್ದ ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಒಟ್ಟಾಗಿ ವೆನಿಜುವೇಲಾದ ಬಲ ಕುಗ್ಗಿಸಲು, ಆದೇಶದ ವಿರೋಧಪಕ್ಷಗಳಿಗೆ ಬೆಂಬಲ ನೀಡಲು ಪ್ರಾರಂಭಿಸಿದರು. ಆಂತರಿಕ ಬಂಡಾಯವನ್ನು ಎಬ್ಬಿಸಲು ಪ್ರಾರಂಭಿಸಿದರು. ಎಲ್ಲವನ್ನು ಸಹಿಸಿಕೊಂಡು ಮುನ್ನಡೆದಿದ್ದ  ಚಾವೇಸ್, ಜಗತ್ತಿನ ಮುಂದೆ ಅಮೇರಿಕಾ ಹಾಗೂ ಯುರೋಪಿಯನ್ನರ ವಿರುದ್ಧ ಲಾಜಿಕ್ ಆಗಿಯೇ ಮಾತನಾಡುತ್ತಿದ್ದರು. ನೇರ ನೇರವಾಗಿ ಖಂಡಿಸುತ್ತಿದ್ದರು, ಅಮೆರಿಕಾದ ಡಬಲ್ ಸ್ಟ್ಯಾಂಡ್ ಅನ್ನು ಬಹಿರಂಗವಾಗಿ ತೋರಿಸಿ ಖಂಡಿಸಿದ್ದು ಅಮೇರಿಕಾ ಹಾಗೂ ಅವರ ಮಿತ್ರ ರಾಷ್ಟ್ರಕ್ಕೆ ನುಂಗಲಾರದ ತುತ್ತಾಯಿತು. ಅಂತಹ ಚಾವೇಸ್ ಇದ್ದಕ್ಕಿದ್ದಂತೆಯೇ ಸತ್ತು ಹೋಗುತ್ತಾರೆ. ಅಮೇರಿಕಾ ಚಾವೇಸ್ಗೆ ಕ್ಯಾನ್ಸರ್ ಬಂದಿತ್ತು ಅಂತ ಸುದ್ದಿ ಹಬ್ಬಿಸುತ್ತದೆ. ಸತ್ಯವನ್ನು ಜಗತ್ತು ಇನ್ನೂ ತನ್ನ ಒಡಲಾಳದಲ್ಲಿಯೇ ಇಟ್ಟುಕೊಂಡಿದೆ. ಅಮೆರಿಕವನ್ನು ಎದುರು ಹಾಕಿಕೊಂಡ ವ್ಯಕ್ತಿ ಹೇಗೆ ಸಾಯುತ್ತಾರೆ ಅನ್ನುವುದಕ್ಕೆ ಚಾವೇಸ್ ಕೂಡ ಒಂದು ಉದಾಹರಣೆ ಅಂತ ಕೆಲವು ಬರಹಗಾರರು ಹೇಳುತ್ತಾರೆ.

ಇಸ್ರೇಲ್ ಹಾಗೂ ಅಮೇರಿಕ ಅಧ್ಯಕ್ಷರು

ಕೇವಲ ಚಾವೇಸಲ್ಲ, ಸೌತ್ ಅಮೆರಿಕಾದ ಸಾಕಷ್ಟು ಲೀಡರ್ಸ್ಗಳು ಅಮೆರಿಕಾದ ನಡೆಯನ್ನು ಪ್ರಶ್ನಿಸಿದಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಜಗತ್ತಿನ ಕ್ರೈಂ ಹಿಸ್ಟರಿಯಲ್ಲಿ ದಾಖಲಾಗಿದ್ದರು ಆ ಕ್ರೈಂ ಹಿಸ್ಟರಿಯ ಪೇಜಿನ ಮೇಲೆ ಪರದೆ ಎಳೆದಿಟ್ಟಿದ್ದಾರೆ ಅಷ್ಟೇ.

ಚಾವೇಸ್ ಬಲಗೈ ಬಂಟನೆ ಈ ನಿಕೋಲಸ್ ಮದುರೋ. ಚಾವೇಸ್ ನಂತರ ವೆನಿಜುವೆಲಾದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡರು ನಿಕಲೋಸ್. ಚಾವೇಸ್ರಷ್ಟು ಬೇಡ ಅವರ ಕಾಲು ಭಾಗದಷ್ಟು ಜನಪ್ರಿಯತೆಯನ್ನು ಗಳಿಸಿಕೊಳ್ಳುವಲ್ಲಿ ನಿಕೋಲಸ್ ಮಧುರು ಯಶಸ್ವಿಯಾಗಲಿಲ್ಲ ಅನ್ನುವುದು ಬೇರೆ ಮಾತು. ಚಾವೇಸ್ರ ರೀತಿಯಲ್ಲಿಯೇ ಸಾಗಿದ ಅವರು ಅಮೆರಿಕಕ್ಕೆ ಸೊಪ್ಪು ಹಾಕಿರಲಿಲ್ಲ. ಅಮೇರಿಕಾ ಹೇಳಿದಂತೆ ಕೇಳಿಕೊಂಡಿರಲಿಲ್ಲ ಸ್ವತಂತ್ರ ದೇಶವಾಗಿ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ತಮಗಿದೆ ಅಂತ ಭಾವಿಸಿದ್ದರು.

ಅಮೆರಿಕಕ್ಕೆ ಬೇಕಾದ್ದು ಬೇರೇನೂ ಅಲ್ಲ, ಅಲ್ಲಿನ ತೈಲ ಸಂಪತ್ತಿನ ಮೇಲೆ ಹಿಡಿತ. ಅದಕ್ಕೆ ಒಪ್ಪಿದವರು ಯಾರೇ ಅಧಿಕಾರ ನಡೆಸಿದರು ಅವರೆಷ್ಟೇ ಕೆಟ್ಟವರಾದರು ಅಮೆರಿಕಾಕ್ಕೆ ತೊಂದರೆ ಇಲ್ಲ. ಆದ್ರೆ ಅದರ ಆಟಕ್ಕೆ ಆಸ್ಪದ ಕೊಡದವರ ವಿರುದ್ಧ ತಿರುಗಿ ಬೀಳುತ್ತದೆ. ವೆನಿಜುವೆಲಾ ವಿಚಾರದಲ್ಲೂ ಅಮೆರಿಕ ಮಾಡಿದ್ದು ಇದೆ.  ಇಡೀ ಜಗತ್ತಿಗೆ, ವೆನಿಜುವೇಲಾದಿಂದ ಯಾರೂ ತೈಲ ಖರೀದಿಸ ಬಾರದು ಎಂದು ಇದೇ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಾಕೀತು ಮಾಡಿದ್ದರು. ಇದರಿಂದಾಗಿ ವೆಲೆಜುವೆಲಾ ಸಾಕಷ್ಟು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತದೆ. ಅಮೆರಿಕವನ್ನು ಎದುರು ಹಾಕಿಕೊಂಡು ವೆನಿಜುವೆಲಾದಿಂದ ಥೈಲ ಖರೀದಿಸಲು ಬಹುತೇಕ ರಾಷ್ಟ್ರಗಳು ಧೈರ್ಯ ಮಾಡಲಿಲ್ಲ. ಇಷ್ಟಾದರೂ ನಿಕೋಲಸ್ ಅಮೆರಿಕಾಕ್ಕೆ ಸರೆoಡರ ಆಗಲಿಲ್ಲ. ತಕ್ಷಣವೇ ಡೊನಾಲ್ಡ್ ಟ್ರಂಪ್ ನಿಕೋಲಸ್ ಮೇಲೆ ಡ್ರಗ್ ಅವ್ಯವಹಾರದ ಆರೋಪಹರಿಸುತ್ತಾರೆ. ಹಾಗೆ ಆರೋಪ ಹೊರಿಸಿ ಅಂತರಾಷ್ಟ್ರೀಯ ಎಲ್ಲಾ ಕಾನೂನನ್ನು ಮೀರಿ, ಲಕ್ಷ್ಮಣ ರೇಖೆಯ ಬೇಲಿ ದಾಟಿ, ಓಪನ್ ಆಗಿಯೇ ಒಂದು ದೇಶದ ಒಳಕ್ಕೆ ನುಗ್ಗಿ , ಅಲ್ಲಿನ ಅಧ್ಯಕ್ಷರನ್ನು ಬಂಧಿಸಿ ಎಳೆದು ತರುತ್ತಾರೆ ಎಂದರೆ ಏನರ್ಥ. ಇಡೀ ಜಗತ್ತಿನ ಎರಡು ಮೂರು ದೇಶಗಳನ್ನು ಹೊರತುಪಡಿಸಿ, ಇನ್ಯಾವ ದೇಶವು ಮಾತನಾಡುವ ಧೈರ್ಯವನ್ನೇ ತೋರಿಸಲಿಲ್ಲ ಅವತ್ತು.

ಇರಾನ್

ಜಗತ್ತಿನ ಮೂರನೇ ಅತಿದೊಡ್ಡ ತೈಲ ಸಂಪತ್ತನ್ನು ಹೊಂದಿರುವಂತಹ ರಾಷ್ಟ್ರ ಇರಾನ್. ಶಿಯಾ ಸಂಪ್ರದಾಯದ ನಾಡಾದ ಇರಾನ್, ಮೊದಲಿಂದಲೂ ಸಂಪತ್ ಭರಿತವಾಗಿದೆ. ಭಾರತಕ್ಕೆ ತೈಲವನ್ನು ಸರಬರಾಜು ಮಾಡುತ್ತಿದ್ದ ಇರಾನ್ಅದಕ್ಕೆ ಬದಲಾಗಿ ಭಾರತದಿಂದ ಗಾರ್ಮೆಂಟ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದು ಅಮೆರಿಕಕ್ಕೆ ಇಷ್ಟವಿರಲಿಲ್ಲ ಕೂಡ. ಆದರೆ ಇರಾನ್ನಿಂದ ಭಾರತಕ್ಕೆ ಬರುತ್ತಿದ್ದ ಕಚ್ಚಾ ತೈಲವು ಜಗತ್ತಿನ ಇತರ ದೇಶಗಳಿಂದ ಬರುತ್ತಿರುವ ತೈಲಗಳಿಗಿಂತ ಕಡಿಮೆ ಬೆಲೆಯಲ್ಲಿ ಬರುತ್ತಿತ್ತು.

ಇರಾನ್ ಕೂಡ ಅಮೆರಿಕಾದ ಡಾಲರನ್ನು ನಿರ್ಲಕ್ಷಿಸಿ ತನ್ನದೇ ಕರೆನ್ಸಿ ಅಥವಾ ಚಿನ್ನ ಇಲ್ಲವೇ ಇತರೆ ವಸ್ತುಗಳ ಮೂಲಕ ವಹಿವಾಟು ಮಾಡುತ್ತಿರುವುದು ಅಮೆರಿಕಾದ ಕೆಂಗಣ್ಣಿಗೆ ಕಾರಣವಾಗಿತ್ತು. ಇರಾನಿನ ಸುತ್ತಮುತ್ತಲು ಇರುವಂತಹ ಅರಬ್ ರಾಷ್ಟ್ರಗಳ ಮೇಲಿನ ತೈಲ ಸಂಪತ್ತಿನ ಮೇಲೆ ಅಮೆರಿಕ ಸಂಪೂರ್ಣ ಹಿಡಿತವನ್ನು ಹೊಂದಿದೆ. ಆದರೆ ಇರಾನ್ ತೈಲಸಂಪತ್ತಿನ ಮೇಲೆ ಹಿಡಿತ ಹೊಂದಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಅನ್ನುವುದೇ ಅಮೆರಿಕಾದ ಬೇಸರಕ್ಕೆ ಕಾರಣ. ಡೊನಾಲ್ಡ್ ಟ್ರಂಪ್ ಅಮೇರಿಕಾದ ಆ ಬೇಸರವನ್ನು ಕಡಿಮೆ ಮಾಡುವ ಸಲುವಾಗಿ ಇರಾನನ್ನು ತನ್ನ ಮುಂದೆ ಮಂಡಿಯೂರಿ ಕೂರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಹಲವು ಬಾರಿ ಬೆದರಿಕೆಯನ್ನು ಹಾಕುತ್ತಾರೆ. ಯಾವುದಕ್ಕೂ ಇರಾನಿನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇರಿ ಕೇರ್ ಮಾಡುವುದಿಲ್ಲ. ಟ್ರಂಪ್ಗೆ ಅವರದೇ ಮಾತಿನ ದಾಟಿಯಲ್ಲಿ   ಪ್ರತ್ಯುತ್ತರ ನೀಡುತ್ತಿದ್ದುದು ಅಮೆರಿಕಾದ ಇಗೋಗೆ ಮತ್ತಷ್ಟು ಹರ್ಟ್ ಆಯಿತು. ಹಾಗಾಗಿ ಈ ಸರ್ವೋಚ್ಚ ನಾಯಕನ ವಿರುದ್ಧ, ಇರಾನಿನಲ್ಲಿ ಧoಗೆಯನ್ನು ಎಬ್ಬಿಸುವಂತಹ ಕಾಯಕಕ್ಕೆ ಕೈ ಹಾಕುತ್ತಾರೆ. ಅಷ್ಟೇ ಅಲ್ಲ, ಇರಾನ್ ಸರ್ವೋಚ್ಚನಾಯಕನ ಮೇಲೆ ಹಲವು ಗುರುತರ ಆರೋಪಗಳನ್ನು ಮಾಡುತ್ತಾರೆ. ಉಗ್ರಗಾಮಿ ಎನ್ನುವ ಅರ್ಥದಲ್ಲೂ ಅವರ ಮೇಲೆ ಆರೋಪ ಹೊರಿಸಲಾಗುತ್ತದೆ. ಈ ಎಲ್ಲಾ ಆರೋಪಗಳ ಜೊತೆಗೇನೆ ಇರಾನನ್ನು ಕೆಣಕಲಾಗುತ್ತದೆ. ಇರಾನ್ ಅದಕ್ಕೆ ಪ್ರತ್ಯುತ್ತರವನ್ನು ನೀಡುತ್ತದೆ. ಪರಿಣಾಮ ಅಮೆರಿಕ ಇಸ್ರೇಲ್ ಜೊತೆಗೆ ಸೇರಿಕೊಂಡು ಇರಾನ್ ಸರ್ವೋಚ್ಛ ನಾಯಕನನ್ನು ಮುಗಿಸಿ ಹಾಕುತ್ತದೆ. ಇಂದಿಗೂ ಇರಾನ್ ಮಂಡಿಯೂರಿಲ್ಲ ಇದು ಟ್ರಂಪ್ ನ ಸಿಟ್ಟನ್ನು ಹೆಚ್ಚುಸುತ್ತಿದೆ. ಇತ್ತ ಇರಾನ್ ತನ್ನ ನಾಯಕನ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವ ಮಾತನಾಡುತ್ತಿದೆ. ಆದರೆ ಜಗತ್ತು ಮಾತ್ರ ಒಂದೆರಡು ದೇಶ ಹೊರತು ಪಡಿಸಿ ಮಾತನಾಡುತ್ತಿಲ್ಲ. ಜಗತ್ತಿನ ಅನೇಕ ರಾಷ್ಟ್ರಗಳನ್ನು ಅಮೆರಿಕ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಕಾರಣ, ಅವರು ಇರಾನ್ ವಿರುದ್ಧವೇ ಮಾತನಾಡುತ್ತಾರೆ. ಸದ್ಯಕ್ಕೆ ಅಮೆರಿಕಾದ ವಿರುದ್ಧ ನೇರವಾಗಿ ನಿಂತಿರುವ ರಷ್ಯಾ ಬಹಿರಂಗವಾಗಿ ಇರಾನ್ ಪರ ಅಮೆರಿಕ ವಿರುದ್ಧ ಮಾತನಾಡಿದೆ. ಚೀನಾ ಇನ್ನೂ ಒಂದೇ ಒಂದು ಮಾತನ್ನು ಆಡಿಲ್ಲ. ಜಗತ್ತಿನಲ್ಲಿ ಅಮೇರಿಕಾ ವಿರುದ್ಧ ಗಟ್ಟಿಯಾಗಿ ಮಾತನಾಡುವ ಕೆಲವೇ ಕೆಲವು ದೇಶಗಳಲ್ಲಿ ರಷ್ಯಾ, ಚೀನಾ ಜೊತೆಗೆ ಭಾರತವು ಇದೆ. ಆದರೆ ಇರಾನ್ ವಿಚಾರದಲ್ಲಿ ಚೀನಾದಂತೆಯೇ ಭಾರತವು ಮೌನವಾಗಿದೆ. ಭಾರತಕ್ಕೆ ಇರಾನ್ ತೈಲವು ಅತ್ಯಂತ ಮಹತ್ವದ್ದು. ಕಡಿಮೆ ದರದಲ್ಲೂ ಬರುತ್ತಿದ್ದಂತಹ ತೈಲದ ಮೇಲೆ ಅಮೆರಿಕ ಹಿಡಿತ ಸಾಧಿಸಿದರೆ ಅದರ ಬೆಲೆ ದುಪ್ಪಟ್ಟಾಗುವುದ್ರಲ್ಲಿ ಅನುಮಾನವೇ ಇಲ್ಲ. ಅದರಿಂದ ಭಾರತಕ್ಕೆ ಆರ್ಥಿಕ ನಷ್ಟ ಖಂಡಿತ. ತೈಲ ಬೆಲೆಯಲ್ಲಾಗುವ ಹೆಚ್ಚಳದಿಂದ, ಇತರ ವಸ್ತುಗಳ ಬೆಲೆಯೂ ಗಮನಾರ್ಹವಾಗಿ ಹೆಚ್ಚುತ್ತದೆ. ಇದರ ಪರಿಣಾಮವನ್ನು ಕೇವಲ ಭಾರತ ಅಲ್ಲ, ಜಗತ್ತು ಅನುಭವಿಸಲೇ ಬೇಕಾಗುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆದುಕೊಳ್ಳುತ್ತಿರುವ ರೀತಿ ಈಗಾಗಲೇ ಜಗತ್ತು ನೋಡುತ್ತಿದೆ. ಬೇಕಾಬಿಟ್ಟಿ ಸುಂಕಗಳನ್ನು ಹಾಕುವ ಮೂಲಕ ಜಗತ್ತಿನ ಬಹುತೇಕ ದೇಶಗಳಿಗೆ ಹೊಡೆತಗಳನ್ನು ಕೊಡುತ್ತಿದ್ದಾನೆ. ಅನಾರೋಗ್ಯಕರ ನಿರ್ಧಾರಗಳ ಮೂಲಕ ಎಲ್ಲಾ ವಿಭಾಗದವರಿಗೂ ತೊಂದರೆಯನ್ನು ಕೊಡುವುದರ ಮೂಲಕ, ಟ್ರoಪ್ ಎಂಬ ಈ ಮಹಾಶಯ ಹುಚ್ಚಾಟದ ನಡೆಯನ್ನು ಪ್ರದರ್ಶಿಸುತ್ತಿರುವುದು ಟೆರರ್ ಅನ್ನಿಸಿಕೊಳ್ಳದೇ ಇರುತ್ತದೆಯೇ?

COMMENTS

Login with Gmail to comment

ಇನ್ನಷ್ಟು ಸುದ್ದಿ

ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್