📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ

ಇದು ನಡೆದದ್ದು ಕರಾವಳಿಯಲ್ಲಲ್ಲ. ಕಲ್ಯಾಣ ಕರ್ನಾಟಕದಲ್ಲಿ ನಡೆದಂತಹ ಪ್ರಕರಣವಿದು. ಅವಳು ಮುಸ್ಲಿಂ ಸಂಪ್ರದಾಯದಂತೆ ಬೆಳೆದು ಬಂದ ಹುಡುಗಿಯಾಗಿದ್ದರೆ ಈತ ಹಿಂದೂ ಸಂಪ್ರದಾಯದಲ್ಲಿ ಬೆಳೆದು ಬಂದ ಹುಡುಗ. ಅವರಿಬ್ಬರ ನಡುವಿನ ಪ್ರೇಮ್ ಕಹಾನಿ ಧರ್ಮವನ್ನು ಮೀರಿ ನಿಂತಿತು. ಜಾತಿಯ ಬೇಲಿ ದಾಟಿ ಒಂದಾದರು. ಆದರೆ ಈಗ ಅವರಿಬ್ಬರ ಮನಸ್ಸಿನ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಧರ್ಮದ ಅಂಧಕಾರಕ್ಕೆ ತುತ್ತಾದವರು. ಶತಾಯಗತಾಯ ಅವರಿಬ್ಬರನ್ನು ಬೇರೆ ಮಾಡುವ ಪ್ರಯತ್ನ ನಡೆಸಿದ್ದಾರೆ.

ವನ ಹೆಸರು ಕೇಶವ, ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ನಿವಾಸಿ. ಅವಳೂ ಸಹ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ಹೆಣ್ಣು ಮಗಳು. ಕಟ್ಟರ್ ಮುಸ್ಲಿಂ ಸಂಪ್ರದಾಯಸ್ಥ ಮನೆತನದ ಹುಡುಗಿ ಅವಳು. ಇವತ್ತು ಅವರಿಬ್ಬರೇ ಕನಕಗಿರಿಯ ಶ್ರೀ ಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ದೇವಿಯ ಸನ್ನಿಧಿಯಲ್ಲಿ ಅರಿಶಿನ ಕೊಂಬನ್ನು ಕಟ್ಟಿಸಿಕೊಳ್ಳುವ  ಮೂಲಕ  ತಸ್ಲೀಮಾ ಕೇಶವನ ಸಂಗಾತಿಯಾಗಿದ್ದಾಳೆ.

ಇವರಿಬ್ಬರ ನಡುವಿನ ಪ್ರೇಮ ಕಹಾನಿ ನಾಲ್ಕು ದಿನದ ಹಿಂದಿನದ್ದಲ್ಲ ಬರೋಬ್ಬರಿ ಎರಡು ವರ್ಷದಿಂದ ನಡಿತಾ ಇರುವಂತಹ ಸಂಬಂಧವದು. ಇಬ್ಬರೂ ಕಾಲೇಜಿಗೆ ಹೋಗುತ್ತಿರುವಾಗ ಬಸ್ಸಿನಲ್ಲಿ ಕಣ್ಣು ಕಣ್ಣು ಬೆರೆತಾಗ ಆದ ಪರಿಚಯ, ಇವತ್ತು ದಾಂಪತ್ಯದವರೆಗೆ ಬಂದು ನಿಂತಿದೆ. ಎರಡು ವರ್ಷದ ಪ್ರೇಮವು ಒಡೆದು ಹೋಗುವ ಭಯದಲ್ಲಿ, ಪ್ರೇಮಿಗಳಿಬ್ಬರೂ ಮದುವೆಯಾಗುವ ಘಟ್ಟಿ ನಿರ್ಧಾರ ಮಾಡಿದ್ದಾರೆ.

ಹೌದು, ತಸ್ಲಿಮಾಳ ಮನೆಯಲ್ಲಿ, ಅವಳಿಗೆ ಮದುವೆ ಮಾಡಲು ಹುಡುಗನ ಹುಡುಕಲು ಪ್ರಾರಂಭಿಸಿದರು. ಆಗ ಭಯಕ್ಕೆ ಬಿದ್ದ  ತಸ್ಲೀಮ್, ಕೇಶವದಲ್ಲಿ ತಕ್ಷಣವೇ ಮದುವೆಯಾಗಲು ದುಂಬಾಲು ಬೀಳುತ್ತಾಳೆ. ಯಾವುದೇ ಕಾರಣಕ್ಕೂ ಇನ್ನೊಬ್ಬನ ಹೆಂಡತಿ ಆಗಲು ಅವಳು ಸಿದ್ದಲಿರಲಿಲ್ಲ. ಅಷ್ಟೇ ಅಲ್ಲ, ಧರ್ಮದ ಕಟ್ಟುಪಾಡು ಮತ್ತು ಆಚಾರ ವಿಚಾರಗಳನ್ನ ಬದಲಾಯಿಸಿಕೊಳ್ಳಲು ಅವಳು ರೆಡಿ ಇದ್ದಳು. ಅದಕ್ಕೆಲ್ಲ ಸಿದ್ದಳಾಗಿಯೇ ಕೇಶವನ ಜೊತೆಗೆ ಹೆಜ್ಜೆ ಹಾಕಿಯೇ ಬಿಟ್ಟಳು.

ಮದುವೆಯ ಸಂದರ್ಭದಲ್ಲಿ ಹುಡುಗಿಯ ಸಂಬಂಧಿಕರು ಯಾರು ಇರಲಿಲ್ಲ. ಹುಡುಗನ ಸಂಬಂಧಿಕರು ಕೆಲವರು ಭಾಗಿಯಾಗಿದ್ದರು. ಹಾಗೆ ಮದುವೆ ಮುಗಿಯುತ್ತಿದ್ದಂತೆಯೇ ತಮ್ಮ ವಕೀಲರ ಜೊತೆ ಸೀದಾ ಕೊಪ್ಪಳ ಜಿಲ್ಲಾ ಎಸ್ ಪಿ ಅವರನ್ನು ನವದಂಪತಿಗಳು ಭೇಟಿಯಾಗುತ್ತಾರೆ. ನಾವಿಬ್ಬರೂ ವಯಸ್ಕರರಾಗಿದ್ದೇವೆ. ಇಬ್ಬರು ಮನಪೂರ್ವಕವಾಗಿ ಇಷ್ಟಪಟ್ಟು ಮದುವೆಯಾಗಿದ್ದೇವೆ ಕೂಡ. ಮದುವೆಗೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ನಾವಿಬ್ಬರು ಭಯಮುಕ್ತವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡುವಂತಹ ವಾತಾವರಣವನ್ನ ಕ್ರಿಯೇಟ್ ಮಾಡಿಕೊಡಿ, ನಮಗೆ ರಕ್ಷಣೆ ಕೊಡಿ ಎಂದು ಅಧಿಕೃತವಾಗಿಯೇ ಮನವಿ ಮಾಡಿಕೊಂಡಿದ್ದಾರೆ. ಕೊಪ್ಪಳ ಜಿಲ್ಲಾ ಎಸ್ ಪಿ ಅವರು ಅವರ ಮನವಿಯನ್ನು ಪುರಸ್ಕರಿಸಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಯ ಮೂಲಕ ಯಾರೆಲ್ಲಾ ಬೆದರಿಕೆ ಹಾಕುತ್ತಾರೋ ಅವರಿಗೆ ಎಚ್ಚರಿಕೆ ಕೊಡುವ ಮೂಲಕ ನವ ದಂಪತಿಗಳಿಗೆ ಶುಭ ಕೋರಿದರು ಎನ್ನಲಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”