📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”

    ಶಾಶ್ವತ ಪರಿಹಾರ ಯಾವಾಗ?ಮಂಗಳೂರಿನ ನೂರಾರು ಬೀದಿಬದಿ ವ್ಯಾಪಾರಿಗಳ ಅಳಲು

    ಮಂಗಳೂರು, ಜುಲೈ 3: ಮಂಗಳೂರು ನಗರದ ಸಂಡೇ ಬಜಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಗರಪಾಲಿಕೆ ನಡೆಸುತ್ತಿರುವ ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ವ್ಯಾಪಾರಿಗಳು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ನೂರಕ್ಕೂ ಹೆಚ್ಚು ವ್ಯಾಪಾರಿಗಳು ಸಾಮೂಹಿಕವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, “ಬೀದಿ ವ್ಯಾಪಾರವೇ ನಮ್ಮ ಜೀವನಾಧಾರ. ನಮ್ಮ ಮಕ್ಕಳ ಭವಿಷ್ಯ ಈ ಸಣ್ಣ ವ್ಯಾಪಾರದ ಮೇಲೆ ನಿಂತಿದೆ. ನಮ್ಮ ಬದುಕುವ ಹಕ್ಕನ್ನು ಕಾಪಾಡಿ, ಪರ್ಯಾಯ ಸ್ಥಳ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿಗಳು ಮನವಿಯನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಬೀದಿಬದಿ ವ್ಯಾಪಾರಿಗಳ ಸಂಘವು ಸೂಕ್ತವಾದ ಮೂರು ಸ್ಥಳಗಳನ್ನು ಸೂಚಿಸಿದರೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಾಧ್ಯವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬೆಳಿಗ್ಗೆಯಿಂದ ಕಾಯುತ್ತಿದ್ದ ವ್ಯಾಪಾರಿಗಳನ್ನು ಮಧ್ಯಾಹ್ನ ಸಭೆಯ ನಡುವೆಯೇ ಭೇಟಿ ಮಾಡಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳ ನಡೆ ವ್ಯಾಪಾರಿಗಳಲ್ಲಿ ಆಶಾಭಾವನೆ ಮೂಡಿಸಿತು.

    ಆದರೆ ಈ ಬೆಳವಣಿಗೆ ಮಂಗಳೂರಿನಲ್ಲಿ ಬಹುಕಾಲದಿಂದ ಚರ್ಚೆಯಾಗುತ್ತಿರುವ ಒಂದು ದೊಡ್ಡ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ. ಫುಟ್‌ಪಾತ್ ನಿರ್ಮಿಸಿರುವುದು ವ್ಯಾಪಾರಕ್ಕಾಗಿ ಅಲ್ಲ; ಅದು ಪಾದಚಾರಿಗಳು ಸುರಕ್ಷಿತವಾಗಿ ನಡೆಯಲು ಇರುವ ಸಾರ್ವಜನಿಕ ಹಕ್ಕಿನ ಸ್ಥಳ. ವೃದ್ಧರು, ಮಕ್ಕಳು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಅಂಗವಿಕಲರು ಸೇರಿದಂತೆ ಎಲ್ಲರೂ ಫುಟ್‌ಪಾತ್ ಬಳಸುವ ಕಾನೂನುಬದ್ಧ ಹಕ್ಕು ಹೊಂದಿದ್ದಾರೆ. ಫುಟ್t‌ಪಾತ್ ಅತಿಕ್ರಮಣಗೊಂಡಾಗ ಜನರು ಅನಿವಾರ್ಯವಾಗಿ ರಸ್ತೆ ಮೇಲೆ ನಡೆಯಬೇಕಾಗುತ್ತದೆ. ಇದು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ.

    Also Read  ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ

    ಆದರೆ ಸಾರ್ವಜನಿಕರಲ್ಲಿ ಮತ್ತೊಂದು ಪ್ರಶ್ನೆಯೂ ಕೇಳಿಬರುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ, ಕ್ರಮವೂ ಎಲ್ಲರ ಮೇಲೂ ಒಂದೇ ರೀತಿಯಲ್ಲಿ ಇರಬಾರದೇ? 

    ಮಂಗಳೂರಿನ ಬಂದರ್, ಕಾರ್‌ಸ್ಟ್ರೀಟ್, ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಸೇರಿದಂತೆ ಹಲವು ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಅನೇಕ ಶಾಶ್ವತ ಅಂಗಡಿಗಳೂ ತಮ್ಮ ಸರಕುಗಳನ್ನು ಫುಟ್‌ಪಾತ್‌ಗಳ ಮೇಲೆ ಇಡುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಕಡೆ ಅಂಗಡಿಗಳ ಪ್ರದರ್ಶನ ಸಾಮಗ್ರಿ, ಬೋರ್ಡ್‌ಗಳು ಮತ್ತು ವಸ್ತುಗಳಿಂದ ಫುಟ್‌ಪಾತ್ ಸಂಪೂರ್ಣ ಮುಚ್ಚಲ್ಪಟ್ಟಿರುತ್ತದೆ. ಇಂತಹ ಸಂದರ್ಭಗಳಲ್ಲಿ ಪಾದಚಾರಿಗಳು ರಸ್ತೆಗಿಳಿದು ನಡೆಯಬೇಕಾಗುತ್ತದೆ.

    ಈ ಹಿನ್ನೆಲೆಯಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ – ಕೇವಲ ಸಂಡೇ ಬಜಾರ್ ಅಥವಾ ಸಣ್ಣ ಬೀದಿಬದಿ ವ್ಯಾಪಾರಿಗಳ ಮೇಲಷ್ಟೇ ಕ್ರಮ ಏಕೆ? ಶಾಶ್ವತ ಅಂಗಡಿಗಳಿಂದ ಆಗುತ್ತಿರುವ ಫುಟ್‌ಪಾತ್ ಅತಿಕ್ರಮಣದ ವಿರುದ್ಧವೂ ಸಮಾನ ಕಾನೂನು ಜಾರಿಯಾಗಬಾರದೇ?ಕಾನೂನು ಆಯ್ದವರ ಮೇಲೆ ಮಾತ್ರ ಜಾರಿಯಾದರೆ ನ್ಯಾಯದ ಬಗ್ಗೆ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ ಎಂಬುದು ಸಾರ್ವಜನಿಕ ಅಭಿಪ್ರಾಯ.

    ನಗರದ ಹಲವಾರು ನಾಗರಿಕರು ಹೇಳುವಂತೆ, “ಸಮಸ್ಯೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ; ಆದರೆ ಶಾಶ್ವತ ಪರಿಹಾರದ ಬಗ್ಗೆ ಕಡಿಮೆ ಚರ್ಚೆಯಾಗುತ್ತದೆ.” ಬೀದಿಬದಿ ವ್ಯಾಪಾರಿಗಳು ನಗರ ಆರ್ಥಿಕತೆಯ ಒಂದು ಭಾಗ. ಮತ್ತೊಂದೆಡೆ ಪಾದಚಾರಿಗಳ ಸುರಕ್ಷಿತ ಸಂಚಾರವೂ ಮೂಲಭೂತ ಹಕ್ಕು. ಆದ್ದರಿಂದ ಎರಡನ್ನೂ ಸಮತೋಲನಗೊಳಿಸುವ ವ್ಯವಸ್ಥೆ ಅಗತ್ಯವಾಗಿದೆ.

    Also Read  ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು

    ಕಾನೂನು ಏನು ಹೇಳುತ್ತದೆ? ಬೀದಿಬದಿ ವ್ಯಾಪಾರಿಗಳಿಗೂ ಜೀವನೋಪಾಯದ ಹಕ್ಕಿದೆ. ಅದೇ ವೇಳೆ ಸಾರ್ವಜನಿಕ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಸುರಕ್ಷಿತವಾಗಿ ಬಳಸುವ ಹಕ್ಕು ನಾಗರಿಕರಿಗೂ ಇದೆ. ಈ ಎರಡೂ ಹಕ್ಕುಗಳ ನಡುವೆ ಸಮತೋಲನ ಸಾಧಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ. ಸೂಕ್ತ ವಲಯಗಳನ್ನು ಗುರುತಿಸಿ, ನಿಯಮಬದ್ಧವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು ಮತ್ತು ಪಾದಚಾರಿಗಳಿಗೆ ಅಡೆತಡೆ ಆಗದಂತೆ ವ್ಯವಸ್ಥೆ ಮಾಡುವುದು ಆಡಳಿತಾತ್ಮಕ ಹೊಣೆಗಾರಿಕೆಯ ಭಾಗವಾಗಿದೆ.

    ಹಾಗಾದರೆ ಪರಿಹಾರವೇನು? ನಗರದ ವಿವಿಧ ಭಾಗಗಳಲ್ಲಿ ಯೋಜಿತ ಹಾಕರ್ಸ್ ಝೋನ್ ಅಥವಾ ಸ್ಟ್ರೀಟ್ ವೆಂಡಿಂಗ್ ಝೋನ್ಗಳನ್ನು ಅಭಿವೃದ್ಧಿಪಡಿಸಬಹುದು. ಕುಡಿಯುವ ನೀರು, ಶೌಚಾಲಯ, ಕಸ ನಿರ್ವಹಣೆ, ವಾಹನ ನಿಲುಗಡೆ, ವಿದ್ಯುತ್ ಮತ್ತು ಭದ್ರತೆ ಸೇರಿದಂತೆ ಮೂಲಸೌಕರ್ಯ ಒದಗಿಸಿದರೆ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಅನುಕೂಲವಾಗುತ್ತದೆ. ಡಿಜಿಟಲ್ ನೋಂದಣಿ, ಗುರುತಿನ ಚೀಟಿ, ನಿಗದಿತ ಸಮಯ ಹಾಗೂ ನಿಗದಿತ ಸ್ಥಳದ ವ್ಯವಸ್ಥೆಯಿಂದ ಅವ್ಯವಸ್ಥೆ ಕಡಿಮೆಯಾಗಬಹುದು.

    ಸ್ಟೇಟ್ ಬ್ಯಾಂಕ್ ಸಮೀಪ ಈಗಾಗಲೇ ಬೀದಿಬದಿ ವ್ಯಾಪಾರಿಗಳಿಗಾಗಿ ಸ್ಥಳ ಮೀಸಲಿಟ್ಟಿರುವ ಕುರಿತು ಸ್ಥಳೀಯವಾಗಿ ಉಲ್ಲೇಖವಾಗುತ್ತದೆ. ಆದರೆ ಆ ಸ್ಥಳದಲ್ಲಿ ವ್ಯಾಪಾರ ಮಾಡಲು ಹಲವರು ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಅದರ ಹಿಂದಿನ ಕಾರಣಗಳು ಯಾವುವು? ಗ್ರಾಹಕರ ಸಂಚಾರ ಕಡಿಮೆಯೇ? ಮೂಲಸೌಕರ್ಯದ ಕೊರತೆಯೇ? ವಾಹನ ನಿಲುಗಡೆ ಸಮಸ್ಯೆಯೇ? ಅಥವಾ ಜನರ ಓಡಾಟ ಇಲ್ಲದ ಕಾರಣ ವ್ಯಾಪಾರ ನಷ್ಟವಾಗುತ್ತಿದೆಯೇ? ಎಂಬುದನ್ನು ಆಡಳಿತ ಮತ್ತು ವ್ಯಾಪಾರಿಗಳ ಸಂಘಗಳು ಸೇರಿ ಅಧ್ಯಯನ ಮಾಡಿ ಸೂಕ್ತ ತಿದ್ದುಪಡಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

    Also Read  ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 

    ಸಾರ್ವಜನಿಕರ ಧ್ವನಿ ಒಂದೇ: “ಕಾನೂನು ಜಾರಿಯಾಗಬೇಕು. ಆದರೆ ಅದು ಎಲ್ಲರಿಗೂ ಸಮಾನವಾಗಿರಬೇಕು. ಫುಟ್‌ಪಾತ್ ಅತಿಕ್ರಮಿಸಿದವರು ಸಣ್ಣ ವ್ಯಾಪಾರಿಗಳೇ ಆಗಲಿ ಅಥವಾ ದೊಡ್ಡ ಅಂಗಡಿ ಮಾಲೀಕರೇ ಆಗಲಿ, ನಿಯಮ ಉಲ್ಲಂಘಿಸಿದರೆ ಒಂದೇ ರೀತಿಯ ಕ್ರಮವಾಗಬೇಕು.”

    ತಜ್ಞರ ಅಭಿಪ್ರಾಯವೂ ಇದೇ ದಿಕ್ಕಿನಲ್ಲಿದೆ. ಮೊದಲ ಹಂತದಲ್ಲಿ ಜಾಗೃತಿ, ನಂತರ ನೋಟಿಸ್, ಬಳಿಕ ದಂಡ ಮತ್ತು ಪುನರಾವರ್ತನೆ ಮಾಡಿದರೆ ಕಠಿಣ ದಂಡ ಹಾಗೂ ವಸ್ತು ವಶಪಡಿಸಿಕೊಳ್ಳುವಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮಾತ್ರ ನಗರದಲ್ಲಿ ಶಿಸ್ತು ಮೂಡಬಹುದು. ಆಯ್ದವರ ಮೇಲೆ ಮಾತ್ರ ಕ್ರಮವಲ್ಲ, ಎಲ್ಲರಿಗೂ ಒಂದೇ ಕಾನೂನು ಎಂಬ ಸಂದೇಶ ಸ್ಪಷ್ಟವಾಗಿ ತಲುಪಿದಾಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ.

    ಮಂಗಳೂರು ಸ್ಮಾರ್ಟ್, ಸ್ವಚ್ಛ ಮತ್ತು ಪಾದಚಾರಿ ಸ್ನೇಹಿ ನಗರವಾಗಬೇಕಾದರೆ, ಪಾದಚಾರಿಗಳ ಹಕ್ಕು, ಸಣ್ಣ ವ್ಯಾಪಾರಿಗಳ ಜೀವನೋಪಾಯ ಮತ್ತು ಕಾನೂನಿನ ಸಮಾನ ಜಾರಿ – ಈ ಮೂರರ ನಡುವೆ ಸಮತೋಲನ ಸಾಧಿಸುವ ಆಡಳಿತಾತ್ಮಕ ನಿರ್ಧಾರವೇ ಕಾಲದ ಅಗತ್ಯವಾಗಿದೆ.

    ##Mangaluru #StreetVendors #FootpathEncroachment #DakshinaKannada #PublicIssue

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ಅಸ್ಸಾಂನಲ್ಲಿ ಪ್ರವಾಹದ ಆರ್ಭಟಕ್ಕೆ ಸಾವಿನ ಸಂಖ್ಯೆ 61ಕ್ಕೆ, 7 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ …!
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    “ಜೈನ ಸಮುದಾಯದ ಪೂಜ್ಯ ಭಟ್ಟಾರಕರು,ಪ್ರಮುಖ ಗಣ್ಯರು ಡಿ.ಕೆ. ಶಿವಕುಮಾರ್ ಭೇಟಿ-ವಿಧಾನಸೌಧದಲ್ಲಿ ಮಹತ್ವದ ಚರ್ಚೆ…!
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
    40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ಉಮ್ಮತ್ತಿ ಹಣ್ಣು ಆನ್‌ಲೈನ್‌ನಲ್ಲೂ ಸಿಗುತ್ತಾ? ಗ್ರಾಹಕರೇ ಎಚ್ಚರ!