📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!

    ಅದು ಪವಿತ್ರವಾದಂತಹ ತಿರುಪತಿ ಕ್ಷೇತ್ರ. ಶ್ರೀಮನ್ನಾರಾಯಣನ ವಾಸಸ್ಥಾನ. ಅಂತಹ ಒಂದು ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ, ಸುಖ ಸಂಸಾರ ನಡೆಸುತ್ತಿದ್ದ ಕುಟುಂಬವೊಂದು ಪೂರ್ತಿಯಾಗಿ ನಾಶಗೊಂಡಿರುವಂತಹ ಆಘಾತಕಾರಿ ಘಟನೆ ಮೊನ್ನೆ ಮಧ್ಯಾಹ್ನ ನಡೆದಿದೆ.

    ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟ ಕೃಷ್ಣ ಪಾಳ್ಯದಲ್ಲಿ ಇಂತಹುದೊಂದು ಭೀಬತ್ಸ ಘಟನೆ ನಡೆದಿದೆ. ಈ ಒಂದು ಘಟನೆಯ ಹಿಂದೆ ಯಾರ ಕೈವಾಡವಿದೆ? ಎಂಬುವುದರ ಬಗ್ಗೆ ಅಲ್ಲಿನ ಪೊಲೀಸರು ವಿಪರೀತವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಐದು ಜನರು ಆಘಾತಕಾರಿ ರೀತಿಯಲ್ಲಿ ಸತ್ತು ಬಿದ್ದಿದ್ದಾರೆ.

    ವೆಂಕಟ ಕೃಷ್ಣ ಪಾಳ್ಯದ ನಿವಾಸಿಯಾದ ಮೋಹನ್ ಹಾಗೂ ಅವರ ತಾಯಿ ಚಂದ್ರಕಲಾ  ಮತ್ತು ಹೆಂಡತಿ ಹರಿತ, ಮಗ ಕೌಶಿಕ್ ಹಾಗೂ ಮಗಳು ಹರಿಣಿ ಇವಿಷ್ಟು ಜನರು ಅನುಮಾನಾಸ್ಪದ ರೀತಿಯಲ್ಲಿ ಹಾಡ ಹಗಲೇ ಸತ್ತು ಬಿದ್ದಿದ್ದರು.

    Also Read  ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು

    ಮೋಹನ್ ಕುಮಾರ್, ಇವರು ಇದೇ ವೆಂಕಟಪ್ಪ ಕೃಷ್ಣ ಪಾಳ್ಯದಲ್ಲಿ ಸಿಮೆಂಟ್ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆರ್ಥಿಕವಾಗಿ ಆಗಲಿ, ಕುಟುಂಬದ ವಿಚಾರದಲ್ಲಾಗಲಿ ಎಲ್ಲೂ ಕೂಡ ಒಂದು ಸಣ್ಣ ವ್ಯತ್ಯಾಸವು ಇರಲಿಲ್ಲ ಎನ್ನುವುದು ಆ ಕುಟುಂಬಕ್ಕೆ ತೀರಾ ಹತ್ತಿರದವರ ಹೇಳಿಕೆ. ಸಂತೋಷದಿಂದ ಇಡೀ ಕುಟುಂಬವು ಇದ್ದಂತಹ ಸಂದರ್ಭದಲ್ಲೇ, ಇದ್ದಕ್ಕಿದ್ದಂತೆಯೇ ಕುಟುಂಬಕ್ಕೆ ಕುಟುಂಬವೇ ನಾಶವಾಗುತ್ತದೆ ಅಂದರೆ ಇಡೀ ಊರು ದಿಗ್ಗಬ್ರಾಂತಗೊಳ್ಳದೆ ಇರುತ್ತದ?

    ಮೊನ್ನೆ ಮಧ್ಯಾಹ್ನ ಮೋಹನ್, ಮಧ್ಯಾಹ್ನದ ಊಟಕ್ಕೆ ಯಾವತ್ತು ಹೋಗುವಂತೆ ಮನೆಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಂಗಡಿಯನ್ನು ಅವರ ಭಾಮೈದ ನೋಡಿಕೊಳ್ಳುತ್ತಿದ್ದ. ಹಾಗೆ ಮನೆಗೆ ಹೋದ ವ್ಯಕ್ತಿ ತುಂಬಾ ಸಮಯವಾದರೂ ವಾಪಸ್ ಬರದ್ದನ್ನು ಗಮನಿಸಿ ಆ ಬಾಮೈದ ಸನಿಹದಲ್ಲೇ ಇರುವ ಮನೆಗೆ ಬಂದು ನೋಡಿದರೆ, ಮನೆಯ ಒಳಗೆ ಮೋಹನ್ ಕುಮಾರ್ ಅವರ ತಾಯಿ ಚಂದ್ರಕಲಾ ಮತ್ತು ಅವರ ಹೆಂಡತಿ ಹರಿತ ಅವರ ಬಾಡಿ ಬಿದ್ದಿರೋದನ್ನು ನೋಡಿ ಅಘಾತಗೊಳ್ಳುತ್ತಾನೆ . ತಕ್ಷಣವೇ ಪೊಲೀಸರಿಗೆ ಸುದ್ದಿ ಹೋಗುತ್ತದೆ. ಪೊಲೀಸರು ಬಂದು ಹುಡುಕಲು ಪ್ರಾರಂಭಿಸುತ್ತಿದ್ದಂತೆಯೇ, ಮೋಹನ್ ಕುಮಾರ್ ಹಾಗೂ ಅವರ ಮಕ್ಕಳಾದ ಕೌಶಿಕ್ ಮತ್ತು ಹರಿಣಿಈ ಮೂವರ ಮೂವರ ಬಾಡಿಯೂ ಹತ್ತಿರದಲ್ಲಿಯೇ ಇರುವ ರೈಲ್ವೆ ಟ್ರ್ಯಾಕಿನಲ್ಲಿ ಸಿಗುತ್ತದೆ. ಕನಿಷ್ಠ ಎರಡು ರೈಲು ಆಗಲೇ ಪಾಸಾದ ಕಾರಣ ಬಹುತೇಕ ಅವರ ಬಾಡಿ ನುಜ್ಜಂಗುಜ್ಜಾಗಿತ್ತು.

    Also Read  ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!

    ಮೋಹನ್ ಕುಮಾರ್ ಅವರ ಬಾಮೈದ ಹೇಳುವ ಪ್ರಕಾರ ಅವರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಸಂತೋಷಕರವಾಗಿರುವಂತಹ ಕುಟುಂಬ ಅದಾಗಿತ್ತು. ವ್ಯವಹಾರಿಕವಾಗಿಯೂ, ಆರ್ಥಿಕ ಸಂಕಷ್ಟಕ್ಕೆನು ಈಡಾಗಿರಲಿಲ್ಲ. ಮೋಹನ್ ಕುಮಾರ್ ಯಾವುದೇ ಒತ್ತಡಕ್ಕೂ ಒಳಗಾದಂತಹ ವ್ಯಕ್ತಿಯಲ್ಲ. ಹೀಗಿರುವಾಗ ಅವರು ಇಡೀ ಕುಟುಂಬದ ಜೊತೆಗೆಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಾಯಿಸಿ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆದಂತೆ ಕಾಣುತ್ತದೆ. ಇಡೀ ಕುಟುಂಬವನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸ್ಥಳೀಯರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

    ಒಂದೊಮ್ಮೆ ಇದು ಮೋಹನ್ ಕುಮಾರ್ ಅವರ ಆತ್ಮಹತ್ಯೆ ಅಂತನೇ ಇಟ್ಟುಕೊಳ್ಳುವ, ಮನೆಗೆ ಊಟಕ್ಕೆ ಬಂದವ ಹೆಂಡತಿ ಮತ್ತು ತಾಯಿಯನ್ನು ಬಲವಂತವಾಗಿ ಸಾಯಿಸಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ರೈಲ್ವೆ ಹಳಿಗೆ ಹಾಕಿ ಅವರನ್ನು ಸಾಯಿಸಿ ಸ್ವತಃ ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಂದರೆ, ನಂಬುವುದಾದರೂ ಹೇಗೆ? ಆತ ಮಕ್ಕಳನ್ನು ಸಹ, ಮನೆಯ ಒಳಗಡೆಯೇ ಸಾಯಿಸಬಹುದಿತ್ತು. ಮನೆಯಲ್ಲಿ ತಾಯಿ ಮತ್ತು ಅಜ್ಜಿಯ ಸಾವನ್ನು ನೋಡಿದಮೇಲೆ ಅವರು ಹೇಗೆ ಅಪ್ಪನ ಜೊತೆ ನಾರ್ಮಲ್ಲಾಗಿ ಹೊರಹೋಗಲು ಸಾಧ್ಯ? ಇಲ್ಲಿ ಕಾಣದ ಕೈ ಯಾವುದೋ  ಈ ಕೆಲಸ ಮಾಡಿದಂತಿದೆ ಅನ್ನುವುದು ಬಾಮೈದನ ಮತ್ತು ಊರಿನವರ ಸ್ಟೇಟ್ಮೆಂಟ್.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
    ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಭೀಕರ ಅಪಘಾತ ಮಹಿಳೆ ಬಲಿ
    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!
    ಕೆಸರೆರಚಾಟದ ನಡುವೆ SIR-ಪ್ರಜಾಪ್ರಭುತ್ವದ ಹಬ್ಬವೋ, ರಾಜಕೀಯ ಗೊಂದಲದ ಗೂಡೋ?
    ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
    ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು
    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
    ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಹೊಸ ತಿರುವು ಕೊಟ್ಟ ದೆಹಲಿ ಹೈಕೋರ್ಟ್!
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
    ಮಾಜಿ ಮುಖ್ಯಮಂತ್ರಿಗೆ ಉಂಡೇನಾಮ ತಿಕ್ಕಿದ ಸಚಿವ ಯಾರು?
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!