📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ

ಸುಳ್ಯ ಪಟ್ಟಣದ ಶ್ರೀರಾಮ್ ಪೇಟೆಯಲ್ಲಿರುವ ಬಾರ್‌ನಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಾರ್ಚ್ 14ರಂದು ಸಂಜೆ ನಡೆದಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಜನತಾ ಕಾಲೋನಿಯ ನಿವಾಸಿ ನಿತೇಶ್ ಆರ್.ಕೆ (33) ಅವರು ಸುಳ್ಯ ಕಸಬಾ ಗ್ರಾಮದ ಸುಳ್ಯ ಪೇಟೆಯ ಸಂಗಮ್ ಬಿಲ್ಡಿಂಗ್‌ನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದಾರೆ.

ಮಾರ್ಚ್ 14ರಂದು ನಿತೇಶ್ ಅವರು ತಮ್ಮ ಸ್ನೇಹಿತ ಹರೀಶ್ ಜೊತೆ ಸುಳ್ಯ ಸಮೀಪದ ಅರಂಬೂರು ಪ್ರದೇಶದಲ್ಲಿ ಪೇಂಟಿಂಗ್ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 5 ಗಂಟೆ ಸುಮಾರಿಗೆ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ಗೆ ತೆರಳಿ ವಾರದ ಲೆಕ್ಕಾಚಾರ ಮಾಡುತ್ತಿದ್ದರು. ಆ ವೇಳೆ ಹರೀಶ್ ಲೆಕ್ಕಾಚಾರದ ಪುಸ್ತಕದಲ್ಲಿ ವಿವರಗಳನ್ನು ಬರೆಯುತ್ತಿದ್ದರು.

ಸುಮಾರು ಸಂಜೆ 5.45ರ ವೇಳೆಗೆ ಬಾರ್‌ನಲ್ಲಿ ಇದ್ದ ಇಬ್ಬರು ಯುವಕರು ನಿತೇಶ್ ಅವರ ಬಳಿಗೆ ಬಂದು ಏಕಾಏಕಿ ಜಗಳಕ್ಕೆ ಮುಂದಾದರು. ಅವರಲ್ಲಿ ಒಬ್ಬನು ತನ್ನ ಕೈಯಲ್ಲಿ ಹಿಡಿದಿದ್ದ ಚೂರಿಯಿಂದ ಹರೀಶ್ ಅವರನ್ನು ಕೊಲ್ಲುವ ಉದ್ದೇಶದಿಂದ ಕುತ್ತಿಗೆಗೆ ಕೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಹರೀಶ್ ಚೂರಿಯನ್ನು ಹಿಡಿದು ತಡೆಯಲು ಪ್ರಯತ್ನಿಸಿದ್ದು, ನಿತೇಶ್ ಕೂಡ ಬಲವಾಗಿ ಚೂರಿಯನ್ನು ಹಿಡಿದುಕೊಂಡು ತಡೆಯಲು ಯತ್ನಿಸಿದ್ದಾರೆ.

ಆದರೂ ದಾಳಿಕೋರನು ಚೂರಿಯಿಂದ ಹರೀಶ್ ಅವರ ಎಡ ಕುತ್ತಿಗೆಗೆ ಕೊಯ್ದ ಪರಿಣಾಮ ರಕ್ತ ಗಾಯವಾಗಿದೆ. ಅಲ್ಲದೆ, ಚೂರಿಯನ್ನು ತಡೆಯುವ ವೇಳೆ ನಿತೇಶ್ ಮತ್ತು ಹರೀಶ್ ಅವರ ಎಡ ಕೈಗಳ ಅಂಗೈಗಳಿಗೆ ಕೂಡ ಗಾಯಗಳಾಗಿವೆ. ನೋವಿನಿಂದ ಇಬ್ಬರೂ ಬೊಬ್ಬೆ ಹಾಕುತ್ತಿದ್ದಂತೆ ಬಾರ್‌ನಲ್ಲಿ ಇದ್ದ ಇತರರು ಮಧ್ಯಪ್ರವೇಶಿಸಿ ಹೆಚ್ಚಿನ ಹಲ್ಲೆ ನಡೆಯದಂತೆ ತಡೆದಿದ್ದಾರೆ.

ನಂತರ ಗಾಯಗೊಂಡ ಇಬ್ಬರನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಬಳಿಕ ದಾಳಿ ನಡೆಸಿದವರ ಹೆಸರು ಹಾಗೂ ವಿಳಾಸ ಪತ್ತೆಯಾಗಿದ್ದು, ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಗಂಧದಗುಡ್ಡೆ ಕಾಂತಮಂಗಲ ನಿವಾಸಿಗಳಾದ ರಾಜೇಶ್ ಬಿ.ಆರ್ (27) ಮತ್ತು ದಯಾನಂದ್ (30) ಎಂಬವರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಹರೀಶ್ ಅವರ ಕುತ್ತಿಗೆಗೆ ಚೂರಿಯಿಂದ ಕೊಯ್ದು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಆದರೆ ಆರೋಪಿಗಳು ಹರೀಶ್ ಅವರನ್ನು ಯಾವ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 31/2026ರಡಿ BNS 2023ರ 118(1), 109 ಮತ್ತು 3(5) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

#bar#crime

COMMENTS

Login with Gmail to comment

ಇನ್ನಷ್ಟು ಸುದ್ದಿ

ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ