📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು

ಬೆಂಗಳೂರು ಟು ಮುಂಬೈ ಸರಿಸುಮಾರು ಏಳುನೂರು ಕಿಲೋಮೀಟರ್ ಅಂತರವನ್ನು ಹೊಂದಿದೆ. ಉತ್ತಮವಾದಂತಹ ಹೆದ್ದಾರಿಯನ್ನು ಹೊಂದಿದ್ದರೂ ಸಹ, ಈಗಿನ ಸ್ಥಿತಿಯಲ್ಲಿ ಕಡಿಮೆ ಅಂದರೂ 12 ಗಂಟೆಯ ಜರ್ನಿ ಮಾಡಬೇಕಾಗುತ್ತದೆ. ಈ ಜರ್ನಿಯನ್ನು ಐದರಿಂದ ಐದೂವರೆ ಗಂಟೆ ಜರ್ನಿಗೆ ಇಳಿಸುವಂತಹ ಪ್ಲಾನಿಂಗ್  ಭಾರತ ಸರ್ಕಾರದಿಂದ ರೆಡಿಯಾಗಿದೆ.

ಸಚಿವ ನಿತಿನ್ ಗಡ್ಕರಿ

ಈ ಬಗ್ಗೆ ಸ್ವತಹ ನಿತಿನ್ ಗಡ್ಕರಿ ಯವರು ವಿವರವನ್ನು ನೀಡಿದ್ದಾರೆ. ಈಗಾಗಲೇ ಪುಣೆ ಮತ್ತು ಮುಂಬೈ ನಡುವೆ ಎಕ್ಸ್ಪ್ರೆಸ್ ವೇ ಇದೆ. ಈ ಒಂದು ಎಕ್ಸ್ಪ್ರೆಸ್ ವೇ ಇಂದಾಗಿ ಮುಂಬೈ ಪುಣೆ ನಡುವಿನ ಅಂತರ ಒಂದು ಗಂಟೆಗೆ ಇಳಿದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಮುಂಬೈನಿಂದ ಪುಣೆಗೆ ಕೇವಲ ಒಂದು ಗಂಟೆ ಪ್ರಯಾಣದ ಮೂಲಕ ತಲುಪಬಹುದು. ಅದೇ ರೀತಿಯ ಎಕ್ಸ್ಪ್ರೆಸ್ ವೇ ಬೆಂಗಳೂರು ಟು ಪುಣೆಗೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಕಾಮಗಾರಿಯನ್ನು ಕೇವಲ ಎರಡೇ ವರ್ಷದಲ್ಲಿ ಮುಗಿಸಿ ಲೋಕಾರ್ಪಣೆ ಮಾಡುವ ಪ್ಲಾನಿಂಗ್ ಹಾಕಿಕೊಳ್ಳಲಾಗಿದೆ ಎಂದು ಸ್ವತಹ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಅಷ್ಟ ಪಥವನ್ನು ಹೊಂದಿರುವಂತಹ ಈ ರಾಷ್ಟ್ರೀಯ ಹೆದ್ದಾರಿಯು, ತಡೆರಹಿತವಾಗಿರುತ್ತದೆ. ಎಲ್ಲಿಯೂ  ಪ್ರಯಾಣಕ್ಕೆ ಕುಂಠಿತವಾಗುವಂತಹ, ಅಡ್ಡಿ  ಆಗದ ಹಾಗೆ ನಿರಂತರ ಹಾಗೂ ವೇಗದ ಪ್ರಯಾಣಕ್ಕೆ ಅನುಕೂಲಕರವಾಗಿ ಈ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಗಡ್ಕರಿ, ಪ್ರತಿ ಗಂಟೆಗೆ  120 ಕಿಲೋಮೀಟರ್ ವೇಗದಲ್ಲಿ ನಿರಾತಂಕವಾಗಿ ಚಲಿಸಬಹುದು. ಈ ವೇಗದಲ್ಲಿ ಬೆಂಗಳೂರಿನಿಂದ ಹೊರಟರೆ, ಐದುವರೆ ಗಂಟೆಯಲ್ಲಿ ಮುಂಬೈ ತಲುಪಬಹುದಾಗಿದೆ. ಈ ಒಂದು ಎಕ್ಸ್ಪ್ರೆಸ್ ವೇ ರಾಜ್ಯದ ಬೆಳಗಾವಿ ಬಾಗಲಕೋಟೆ ಗದಗ ಕೊಪ್ಪಳ ಚಿತ್ರದುರ್ಗ ತುಮಕೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಈ ಒಂದು ಎಕ್ಸ್ಪ್ರೆಸ್ ವೇ ಪ್ರಾರಂಭವಾದ ನಂತರ ಬೆಂಗಳೂರು ಮುಂಬೈ ವಿಮಾನದ ಹಾರಾಟದಲ್ಲಿ ಸಾಕಷ್ಟು ವ್ಯತ್ಯಯವಾಗುತ್ತದೆ. ಮೊದಲು ಪುಣೆ ಮತ್ತು ಮುಂಬೈ ನಡುವೆ ಎರಡರಿಂದ ಮೂರು ಜಟ್ ಓಡಾಡುತ್ತಿತ್ತು. ಎಕ್ಸ್ಪ್ರೆಸ್ ವೇ ಯಾವಾಗ ಶುರುವಾಯಿತೋ, ಅಲ್ಲಿಂದ ಜೆಟ್ ಹಾರಾಟ ಬಂದ್ ಆಗಿದೆ. ಇದರ ಅರ್ಥ ಇಷ್ಟೇ, ಜನರು ಕಡಿಮೆ ಖರ್ಚಿನಲ್ಲಿ ವೇಗವಾಗಿ ಹೋಗಬಹುದಾದಂತಹ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರವು ಜನರಿಗೆ ಅಂತಹ ಆಯ್ಕೆಯನ್ನು ಕೊಡುವ ಕೆಲಸ ಮಾಡಬೇಕು. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತಿದೆ. ಆಗಲೇ ದೆಹಲಿ ಟು ರಾಜಸ್ಥಾನ್ ಎಕ್ಸ್ಪ್ರೆಸ್ ವೇ ಪ್ರಗತಿಯಲ್ಲಿದೆ. ಅದೇ ರೀತಿ ದೆಹಲಿ ಟು ಡೆಹ್ರಾಡೂನ್ ಎಕ್ಸ್ಪ್ರೆಸ್ ವೇ ಕಾಮಗಾರಿಯು ಬಹುತೇಕವಾಗಿ ಮುಗಿಯುತ್ತಿದೆ ಎಂದು ಸಚಿವ ಗಡಕರಿ ಹೇಳಿದ್ದಾರೆ  

COMMENTS

Login with Gmail to comment

ಇನ್ನಷ್ಟು ಸುದ್ದಿ

ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಸಚಿವ ಜಮೀರ್ ಕಥೆ ಗೋವಿಂದ!!!?
📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಬಾಲಗರ್ಭಿಣಿಯರ ಸಂಖ್ಯೆ 5975….!!
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ