📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!

    ಲೋಹಗಢ ಕೋಟೆ ನಡುಕ: ಪ್ರೀತಿ ಹೆಸರಲ್ಲಿ ಭಾವಿ ಪತಿಯನ್ನೇ 400 ಅಡಿ ಪ್ರಪಾತಕ್ಕೆ ತಳ್ಳಿದ ಕ್ರೂರ ಕಥೆ!ಪ್ರಕೃತಿಯ ಸೌಂದರ್ಯ ನೋಡಲು ಹೋದವನು ಮನುಷ್ಯನ ವಿಕೃತ ಮನಸ್ಸಿಗೆ ಬಲಿಯಾದ!

    ನಂಬಿಕೆ ಅನ್ನೋದು ಪ್ರತಿಯೊಂದು ಸಂಬಂಧದ ಜೀವಾಳ. ಅದರಲ್ಲೂ ಮದುವೆಯಾಗಲಿರುವ ಹೆಣ್ಣು ತನ್ನ ಬಾಳ ಸಂಗಾತಿಯನ್ನು ಕಣ್ಣಿನ ರೆಪ್ಪೆಯಂತೆ ಕಾಯುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಈ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಹಸೆಮಣೆ ಏರಬೇಕಾಗಿದ್ದ ಕೋಟ್ಯಧಿಪತಿ ಉದ್ಯಮಿ, 26 ವರ್ಷದ ಕೇತನ್ ವಿಶಾಲ್ ಅಗರ್ವಾಲ್ ಎಂಬ ಯುವಕನನ್ನು ಆತನ ಭಾವಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಲೋಹಗಢ ಕೋಟೆಯ ೪೦೦ ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿರುವ ಘಟನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

    17 ಕೋಟಿಯ ಭವ್ಯ ಮದುವೆ ಕನಸು: ದುರಂತ ಅಂತ್ಯದ ಹಿನ್ನೆಲೆ

    ಪುಣೆಯ ಪಿಂಪ್ರಿ-ಚಿಂಚವಾಡದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ ಕೇತನ್, ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ ತಂದೆಯ ವ್ಯವಹಾರ ಕೈಗೆತ್ತಿಕೊಂಡಿದ್ದರು. ಇವರಿಗೂ ಮತ್ತು ೨೦ ವರ್ಷದ ಸಿಯಾ ಗೋಯಲ್ ಎಂಬ ಯುವತಿಗೂ ಪೋಷಕರು ನಿಶ್ಚಿತಾರ್ಥ ಮಾಡಿಸಿದ್ದರು. ಬರುವ ನವೆಂಬರ್‌ನಲ್ಲಿ ರಾಜಸ್ಥಾನದ ಜೈಪುರದಲ್ಲಿ ಸುಮಾರು ೧೭ ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಅರಮನೆ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳನ್ನೂ ಬುಕ್ ಮಾಡಲಾಗಿತ್ತು.

    Also Read  🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ

    ಆದರೆ, ಹೊರನೋಟಕ್ಕೆ ಅದ್ಧೂರಿಯಾಗಿ ಕಾಣುತ್ತಿದ್ದ ಈ ಸಂಬಂಧದ ಹಿಂದೆ ಒಂದು ಭೀಕರ ಕರಾಳ ಸಂಚು ಅಡಗಿತ್ತು. ಸಿಯಾಗೆ ಚೇತನ್ ಬಾಬುಲಾಲ್ ಚೌಧರಿ (22) ಎಂಬ ಪ್ರಿಯಕರನಿದ್ದನು ಮತ್ತು ಆಕೆಗೆ ಈ ಅರೇಂಜ್ಡ್ ಮ್ಯಾರೇಜ್ ಇಷ್ಟವಿರಲಿಲ್ಲ.

    ಜನ್ಮದಿನದ ನೆಪದಲ್ಲಿ ಮಸಣಕ್ಕೆ ಕರೆದೊಯ್ದ ಹೆಣ್ಣು!

    ಜೂನ್ ೧೮ ರಂದು ಸಿಯಾಳ ಹುಟ್ಟುಹಬ್ಬವಿತ್ತು. ಭಾವಿ ಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಕೇತನ್ ತಿಂಗಳಿನಿಂದ ಭರಪೂರ ಸಿದ್ಧತೆ ಮಾಡಿಕೊಂಡಿದ್ದರು. ಸ್ನೇಹಿತರೊಂದಿಗೆ ಲೋನಾವಾಲಾ ಸಮೀಪದ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಹೋಗಲು ಪ್ಲಾನ್ ಮಾಡಲಾಗಿತ್ತು. ಕೇತನ್ ಪ್ರೀತಿಯಿಂದ ಬಂದಿದ್ದರೆ, ಸಿಯಾ ಮಾತ್ರ ತನ್ನ ಪ್ರಿಯಕರ ಚೇತನ್‌ನೊಂದಿಗೆ ಸೇರಿ ಕೇತನ್‌ನನ್ನು ಮುಗಿಸಲು ಮೊದಲೇ ಸ್ಕೆಚ್ ಹಾಕಿದ್ದಳು.

    ಕೋಟೆಯ ತುದಿಯಲ್ಲಿ ಕೇತನ್ ಫೋಟೋಗೆ ಪೋಸ್ ನೀಡುತ್ತಿದ್ದಾಗ, ಸಿಯಾ ಮತ್ತು ಆಕೆಯ ಪ್ರಿಯಕರ ಸೇರಿ ಆತನನ್ನು ೪೦೦ ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ಆರಂಭದಲ್ಲಿ, “ಕೇತನ್ ಫೋಟೋ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದರು” ಎಂದು ಸಿಯಾ ಎಲ್ಲರನ್ನೂ ನಂಬಿಸಿ ನಾಟಕವಾಡಿದ್ದಳು. ಮೂರು ಗಂಟೆಗಳ ಕಷ್ಟದ ಕಾರ್ಯಾಚರಣೆಯ ನಂತರ ಕೇತನ್ ಶವ ಪತ್ತೆಯಾಗಿತ್ತು.

    Also Read  ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು

    ಪೊಲೀಸರ ತನಿಖೆ ಮತ್ತು ಕರಾಳ ಸತ್ಯದ ಅನಾವರಣ

    ಮೊದಲಿಗೆ ಇದು ಆಕಸ್ಮಿಕ ಅಪಘಾತ ಎಂದೇ ಭಾವಿಸಲಾಗಿತ್ತು. ಆದರೆ ಕೇತನ್ ತಂದೆ ವಿಶಾಲ್ ಅಗರ್ವಾಲ್ ಅವರಿಗೆ ಸಂಶಯ ಬಂದು ದೂರು ನೀಡಿದಾಗ, ಗ್ರಾಮಾಂತರ ಪೊಲೀಸರು ತನಿಖೆ ತೀವ್ರಗೊಳಿಸಿದರು.

    • ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ದಾಖಲೆ: ಸಿಯಾ ಮತ್ತು ಚೇತನ್ ನಡುವಿನ ಚಾಟ್‌ಗಳು ಹಾಗೂ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಭಾರಿ ಇನ್ಫರ್ಮೇಷನ್ ಸಿಕ್ಕಿತು.
    • ವಿಚಾರಣೆಯಲ್ಲಿ ತಪ್ಪೊಪ್ಪಿಗೆ: ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಸಿಯಾ ಮತ್ತು ಚೇತನ್ ಇಬ್ಬರೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.
    • ಮೊದಲೇ ನಡೆದಿತ್ತು ಕೊಲೆ ಯತ್ನ: ಜೂನ್ ೧೮ರ ಮುನ್ನ, ಅಂದರೆ ಜೂನ್ ೧೪ರಂದೂ ಇದೇ ಕೋಟೆಯ ತುದಿಯಿಂದ ಕೇತನ್‌ನನ್ನು ಸಿಯಾ ತಳ್ಳಿದ್ದಳು! ಆದರೆ ಅದೃಷ್ಟವಶಾತ್ ಕೇತನ್ ಮರವೊಂದನ್ನು ಹಿಡಿದು ಬದುಕುಳಿದಿದ್ದರು. ಆಗ ಸಿಯಾ, “ಅಲ್ಲಿ ಹಾವು ಇತ್ತು, ನಿನ್ನನ್ನು ಕಾಪಾಡಲು ತಳ್ಳಿದೆ” ಎಂದು ಸುಳ್ಳು ಹೇಳಿ ನಂಬಿಸಿದ್ದಳು ಎಂಬ ಆಘಾತಕಾರಿ ಸತ್ಯ ಈಗ ಹೊರಬಿದ್ದಿದೆ. ಪ್ರಸ್ತುತ ಪೊಲೀಸರು ಸಿಯಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

    ಎತ್ತ ಸಾಗುತ್ತಿದೆ…. ಮಾನವೀಯತೆ? ತಾಳ್ಮೆ? ನಂಬಿಕೆ?ಪ್ರೀತಿ?ವಿಶ್ವಾಸ? ಅಂದ್ರೇನು ಅನ್ನುವಷ್ಟುರ ಮಟ್ಟಿಗೆ…?

    ಹೆಣ್ಣನ್ನು ಸೃಷ್ಟಿಕರ್ತ ಪ್ರೀತಿ, ಕರುಣೆ, ಕ್ಷಮಾದಾತ್ರಿ ಮತ್ತು ತಾಳ್ಮೆಯ ಮೂರ್ತಿಯಾಗಿ ಸೃಷ್ಟಿಸಿದ್ದಾನೆ. ತಾಯಿ ಹೃದಯದ ಹೆಣ್ಣು ಇಷ್ಟೊಂದು ಕ್ರೂರಿಯಾಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬರನ್ನೂ ಕಾಡುತ್ತಿದೆ.

    ನಿಜ, ಯಾವುದೇ ಒಬ್ಬ ಹೆಣ್ಣು ಇಂತಹ ಕ್ರೂರ ನಿರ್ಧಾರಕ್ಕೆ ಸುಲಭವಾಗಿ ಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಪ್ರೀತಿ, ಸಂಬಂಧಗಳಿಗಿಂತ ಸ್ವಾರ್ಥ ಮತ್ತು ಅತಿಯಾದ ಆವೇಶವೇ ಮೇಲುಗೈ ಸಾಧಿಸುತ್ತಿದೆ. ಈ ಮದುವೆ ಸಿಯಾಗೆ ಇಷ್ಟವಿರಲಿಲ್ಲ ಎಂದಾದರೆ, ಆಕೆ ಮನೆಯವರನ್ನು ಒಪ್ಪಿಸಬಹುದಿತ್ತು, ನಿರಾಕರಿಸಬಹುದಿತ್ತು, ಅಥವಾ ಕೇತನ್ ಬಳಿಯೇ ನೇರವಾಗಿ ಹೇಳಿ ಸಂಬಂಧದಿಂದ ದೂರ ಸರಿಯಬಹುದಿತ್ತು. ಇಷ್ಟೆಲ್ಲಾ ದಾರಿಗಳಿದ್ದರೂ, ಒಂದು ಜೀವವನ್ನು ಅತ್ಯಂತ ಕ್ರೂರವಾಗಿ ಕೊಲ್ಲುವ ಹಾದಿ ಹಿಡಿದಿದ್ದು ಅಕ್ಷಮ್ಯ ಅಪರಾಧ.

    Also Read  ಭೀಕರ ಅಪಘಾತ ಮಹಿಳೆ ಬಲಿ

    ಇದೇ ರೀತಿ ಇತ್ತೀಚೆಗೆ ಪಂಜಾಬ್‌ನ ಮೊಹಾಲಿಯಲ್ಲೂ ಕಚೇರಿಯಲ್ಲೇ ಎಲ್ಲರ ಎದುರೇ ಪ್ರೀತಿಯ ವೈಫಲ್ಯಕ್ಕಾಗಿ ಸಹೋದ್ಯೋಗಿಯನ್ನು ಕೊಲೆ ಮಾಡಿದ ಘಟನೆ ನಡೆದಿತ್ತು. ಅಲ್ಲಿ ಸ್ನೇಹಿತರಿದ್ದರೂ, ಇಲ್ಲಿ ಜೊತೆಗೆ ಆಪ್ತರಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ನೋಡಿದರೆ “ಮಾನವೀಯತೆ ಎಲ್ಲಿದೆ? ಸಮಾಜ ಎತ್ತ ಸಾಗುತ್ತಿದೆ?” ಎಂಬ ಆತಂಕ ಮೂಡುತ್ತದೆ. ಸಂಬಂಧಗಳಲ್ಲಿ ಬಿರುಕು ಬಂದಾಗ ಅಥವಾ ಇಷ್ಟವಿಲ್ಲದಿದ್ದಾಗ ದೂರ ಸರಿಯುವ ತಾಳ್ಮೆ ಇರಬೇಕೇ ಹೊರತು, ಮತ್ತೊಬ್ಬರ ಬದುಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಈ ಘಟನೆ ಇಡೀ ಯುವ ಪೀಳಿಗೆಗೆ ಮತ್ತು ಸಮಾಜಕ್ಕೆ ಒಂದು ಕಹಿ ಎಚ್ಚರಿಕೆಯಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಬರಾಯಿಪುರ 12 ವರ್ಷದ ಬಾಲಕಿಯ ಅತ್ಯಾಚಾರದ ಕ್ರೌರ್ಯಕ್ಕಿಂತ ಈಗ ಎನ್‌ಕೌಂಟರ್‌ ಚರ್ಚೆಯ ಕೇಂದ್ರ!?ಆರೋಪಿ ಒಟ್ಟಿಗೆ … ಎಲ್ಲಾ ಸತ್ಯವೂ ಸತ್ತಿತೇ?
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
    ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
    2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ಇನ್ನೂ ಏಳು ದಿನ ಕರ್ನಾಟಕದ ಸಿಎಂ ಕುರ್ಚಿ ಕಾಲಿ… ಜೂನ್ 5 ರಂದು ಡಿಕೆ ಶಿವಕುಮಾರ್ ಪ್ರಮಾಣ ವಚನ!
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು