📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ

    ಹಳೆಯ ದ್ವೇಷಕ್ಕೆ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಆರೋಪಿ ವಿರುದ್ಧ  ವೇನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವೇಣೂರು, ಮೇ 20: ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ದೂರುದಾರರಾದ ಶ್ರೀಮತಿ ಸುಜಯ (33) ವೇಣೂರು ಸಮೀಪದ ದೇಲೋಡಿ ಮನೆ, ಆರಂಬೋಡಿ ಗ್ರಾಮ, ಇವರು ನೀಡಿದ ದೂರಿನಂತೆ, ಆರೋಪಿ ಪ್ರಸನ್ನ ಕುಮಾರ್ ಎಂಬಾತನು ಹತ್ತಿರದ ಸಂಬಂಧಿಏ ಆಗಿದ್ದಾನೆ. ದೂರುದಾರರ ಗಂಡನ ಸ್ವಂತ ತಮ್ಮನೇ ಆಗಿರುವ ಆರೋಪಿಯು, ಸುಮಾರು 3-4 ವರ್ಷಗಳ ಹಿಂದೆ  ತನ್ನ ಸಂಬಂಧಿ ಸತೀಶ್ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲಿಗೆ ಹೋಗಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು “ಆರೋಪಿ ಜೀವನಪರ್ಯಂತ ಜೈಲಿನಲ್ಲಿ ಕೊಳೆಯಬೇಕು” ಎಂದು  ಹೇಳುತ್ತಿದ್ದರು ಎಂಬ ಕಾರಣಕ್ಕೆ ಆರೋಪಿ ದ್ವೇಷ ಆರೋಪಿಯು ದ್ವೇಷ ಸಾಧಿಸುತ್ತಿದ್ದನು ಎನ್ನಲಾಗಿದೆ.

    Also Read  ಅರೆಬೈಲ್ ಘಾಟ್ ನ ಕಾರು ಅಫಘಾತ ವ್ಯವಸ್ಥಿತ ಕೊಲೆ…!

    ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ಆಗಾಗ ಪಿರ್ಯಾದಿದಾರರ ತಾಯಿಯೊಂದಿಗೆ ಗಲಾಟೆ ನಡೆಸಿ, “ನಿನ್ನನ್ನು ಮತ್ತು ನಿನ್ನ ಮಗಳನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

    ದಿನಾಂಕ 19 ರಂದು ಮಧ್ಯಾಹ್ನ 12:45 ರಿಂದ 1:00 ಗಂಟೆಯ ಮಧ್ಯೆ, ಆರೋಪಿ ಪ್ರಸನ್ನ ಕುಮಾರ್ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ದೆಲೋಡಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಉದ್ದನೆಯ ಕತ್ತಿಯಿಂದ ಪಿರ್ಯಾದಿದಾರರ ತಾಯಿಯ ತಲೆ, ಮುಖ ಹಾಗೂ ಕೈಕಾಲುಗಳಿಗೆ ಕಡಿದು ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

    ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ತಕ್ಷಣ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 39/2026, ಕಲಂ 329(4), 352, 118(2), 109 BNS 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
    ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ರಾಮನ ಹೆಸರಲ್ಲಿ ‘ರಾವಣ’ ರಾಜ್ಯ-ಕರ್ನಾಟಕಕ್ಕೂ ತಟ್ಟಿದ ಕಳಂಕ!ರಾಮನ ಹೆಸರಲ್ಲಿ ಭಕ್ತರಿಗೇ ನಾಮ-ಅಯೋಧ್ಯೆಯ ಕೋಟಿಕೋಟಿ ಲೂಟಿಗೆ ಬೀದರ್ ಕನೆಕ್ಷನ್!
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    ₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    “ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
    ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?