📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

     ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..

    ಸಾಮಾನ್ಯವಾಗಿ ಉದ್ಯೋಗಕ್ಕಾಗಿ ಜನರು ಅರ್ಜಿ ಮತ್ತು ರೆಸ್ಯೂಮ್ ಕಳುಹಿಸುತ್ತಾರೆ. ಆದರೆ 19 ವರ್ಷದ ನಿಸರ್ಗ ಅಧಿಕಾರಿ ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ತೋರಿಸುವ ,ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಆನ್‌ಸ್ಕ್ರೀನ್ ಪೋರ್ಟಲ್‌ನಲ್ಲಿದ್ದ ಭದ್ರತಾ ದೌರ್ಬಲ್ಯಗಳನ್ನು ವಿವರಿಸುವ ಗುರುತಿಸಿದ ಅಲ್ಲಿನ ದೌರ್ಬಲ್ಯಗಳು, ಆನ್‌ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆ ಅಳವಡಿಕೆಯನ್ನು ಸುತ್ತುವರಿದಿರುವ ವಿವಾದದ ಆ ಒಂದು ಬ್ಲಾಗ್ ಲೇಖನದ ಮೂಲಕವೇ IIT ಕಾನ್ಪುರದ ಗಮನ ಸೆಳೆದರು.

    ಇದು ಇಂದಿನ ಯುವಕರಿಗೆ ಒಂದು ದೊಡ್ಡ ಸಂದೇಶ – ಕೇವಲ ಪ್ರಮಾಣಪತ್ರಗಳಲ್ಲ, ನಿಮ್ಮ ನೈಜ ಕೌಶಲ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವೇ ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ಯುವಕರೇ, ನಿಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಿ, ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು ನಿಮ್ಮ ಕೆಲಸದ ಮೂಲಕ ನಿಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ. ಅವಕಾಶಗಳು ಆಗ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

    Also Read  ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!

    ಇಂದಿನ ಯುವಜನತೆಗೆ ಇದು ಕೇವಲ ಒಂದು ಸುದ್ದಿ ಅಲ್ಲ, ಒಂದು ದೊಡ್ಡ ಸ್ಫೂರ್ತಿ . ಅವಕಾಶಗಳು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ ಎಂಬ ಮಾತಿದೆ. ಆದರೆ ನಿಮ್ಮಲ್ಲಿ ಅಸಾಧಾರಣ ಪ್ರತಿಭೆ, ಕೌಶಲ್ಯ ಮತ್ತು ಪರಿಶ್ರಮ ಇದ್ದರೆ ಅವಕಾಶಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತವೆ ಎಂಬುದಕ್ಕೆ ನಿಸರ್ಗ ಅಧಿಕಾರಿ ಜೀವಂತ ಉದಾಹರಣೆಯಾಗಿದ್ದಾರೆ.

    12ನೇ ತರಗತಿ ಪರೀಕ್ಷೆ ಮುಗಿಸಿದ ಕೆಲವೇ ದಿನಗಳಲ್ಲಿ ನಿಸರ್ಗ ಅಧಿಕಾರಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ IIT ಕಾನ್ಪುರದಲ್ಲಿ ಉದ್ಯೋಗ ಪಡೆದಿದ್ದಾರೆ. ಸೈಬರ್ ಭದ್ರತಾ ಕ್ಷೇತ್ರದಲ್ಲಿ ಅವರ ಅದ್ಭುತ ಪ್ರತಿಭೆಯನ್ನು ಗುರುತಿಸಿದ IIT ಕಾನ್ಪುರ, ತನ್ನ C3iHub ತಂತ್ರಜ್ಞಾನ ನವೋದ್ಯಮ ಕೇಂದ್ರದಲ್ಲಿ Open-Source Intelligence (OSINT) ಮತ್ತು Threat Intelligence Engineer ಆಗಿ ನೇಮಕ ಮಾಡಿದೆ.

    Also Read  ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..

    ನಿಸರ್ಗ ಅವರು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ವಿಶ್ಲೇಷಿಸಿ, ವೆಬ್‌ಸೈಟ್‌ಗಳು ಹಾಗೂ ಅಪ್ಲಿಕೇಶನ್‌ಗಳಲ್ಲಿ ಇರುವ ಭದ್ರತಾ ದೌರ್ಬಲ್ಯಗಳನ್ನು ಪತ್ತೆಹಚ್ಚುವಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಈ ಪ್ರತಿಭೆಯೇ IIT ಕಾನ್ಪುರ ನಿರ್ದೇಶಕರ ಗಮನ ಸೆಳೆದಿದ್ದು, ಅಂತಿಮವಾಗಿ ಅವರಿಗೆ ಉದ್ಯೋಗದ ಅವಕಾಶ ತಂದುಕೊಟ್ಟಿದೆ.

    ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ನಿಸರ್ಗ ಅವರ ಬಳಿ ದೊಡ್ಡ ಪದವಿ ಇರಲಿಲ್ಲ, ವರ್ಷಗಳ ಅನುಭವವೂ ಇರಲಿಲ್ಲ. ಆದರೆ ಅವರಲ್ಲಿ ಇದ್ದದ್ದು ಕೌಶಲ್ಯ, ಕಲಿಯುವ ಹಂಬಲ ಮತ್ತು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಧೈರ್ಯ. ಅದೇ ಅವರ ಯಶಸ್ಸಿನ ಗುಟ್ಟು.

    ಇಂದಿನ ಯುವಕರು ಅಂಕಗಳ ಹಿಂದೆ ಮಾತ್ರ ಓಡುವುದಕ್ಕಿಂತ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಡಿಜಿಟಲ್ ಮಾರ್ಕೆಟಿಂಗ್, ಡೇಟಾ ಅನಾಲಿಸಿಸ್ ಅಥವಾ ಯಾವುದೇ ಕ್ಷೇತ್ರವಾಗಿರಲಿ, ನಿರಂತರವಾಗಿ ಕಲಿಯುವ ಮನೋಭಾವ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ.

    ##NisargaAdhikary #IITKanpur #YouthInspiration #SkillMatters #CyberSecurity #SuccessStory #IndianTalent #MotivationKannada

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಅಪ್ಪನ ಶವದ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಮಗು…!ಧಾರವಾಡದಲ್ಲಿ ಬೆಚ್ಚಿಬೀಳಿಸಿದ ವೈದ್ಯ ಕುಟುಂಬ ದುರಂತ..!ಪತ್ನಿ ಪೊಲೀಸ್ ವಶದಲ್ಲಿ, ತನಿಖೆ ತೀವ್ರ .
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಮಂಗಳೂರು ಹಂಪನಕಟ್ಟೆಯಲ್ಲಿ ಶೂ ಅಂಗಡಿಗೆ ಬೆಂಕಿ; ಅಪಾರ ನಷ್ಟ, ಅವಘಡದಿಂದ ಎಚ್ಚೆತ್ತ ವ್ಯಾಪಾರಿಗಳು…!
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
    ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ರಾಜ್ಯ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೊಸ ಸಾರಥಿ!
    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?
    ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!