📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…

    ಉಡುಪಿ: ಉಡುಪಿಯ ಕಲ್ಸಂಕ ಜಂಕ್ಷನ್‌ನಲ್ಲಿರುವ ಮಾರ್ಕೆಟ್‌ 99 ಪ್ರೈವೇಟ್‌ ಲಿಮಿಟೆಡ್‌ ಶಾಖೆಯಲ್ಲಿ ಸುಮಾರು ₹13.39 ಲಕ್ಷ ಹಣಕಾಸು ವಂಚನೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಸ್ಟೋರ್‌ ಮ್ಯಾನೇಜರ್‌ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಂಸ್ಥೆಯ ಏರಿಯಾ ಮ್ಯಾನೇಜರ್‌ ಬೀಲಾ ಲಕ್ಷ್ಮೀ ನಾರಾಯಣ ಅವರು ನೀಡಿದ ದೂರಿನ ಪ್ರಕಾರ, ಆರೋಪಿಯಾಗಿರುವ ನಜೀರ್‌ ಆಹಮ್ಮದ್‌ ಖಾಸಿಂಖಾನ್‌ ಕಳೆದ ಎರಡು ವರ್ಷಗಳಿಂದ ಸಂಸ್ಥೆಯಲ್ಲಿ ಸಹಾಯಕ ಸ್ಟೋರ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್‌ ವ್ಯವಹಾರಗಳು ಹಾಗೂ ನಗದು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದರು.

    ಸಂಸ್ಥೆಯ ಪರವಾಗಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ರೆಡಿಯಂಟ್‌ ಕ್ಯಾಶ್‌ ಮ್ಯಾನೇಜ್ಮೆಂಟ್‌ ಸರ್ವೀಸಸ್‌ ಸಂಸ್ಥೆ ಠೇವಣಿ ಸ್ಲಿಪ್‌ಗಳೊಂದಿಗೆ ಆರೋಪಿಗೆ ಹಸ್ತಾಂತರಿಸುತ್ತಿತ್ತು. ಆದರೆ 2025ರ ಡಿಸೆಂಬರ್‌ 18ರಂದು ನಡೆದ ಆಡಿಟ್‌ ವೇಳೆ ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ನಂತರ 2025ರ ಜುಲೈ 14ರಿಂದ ಡಿಸೆಂಬರ್‌ 15ರವರೆಗಿನ ಠೇವಣಿ ಸ್ಲಿಪ್‌ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ತಿದ್ದುಪಡಿ ಹಾಗೂ ನಕಲಿ ದಾಖಲೆಗಳ ಬಳಕೆ ನಡೆದಿರುವುದು ಬೆಳಕಿಗೆ ಬಂದಿದೆ.

    Also Read  ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!

    ಪರಿಶೀಲನೆಯಲ್ಲಿ ಆರೋಪಿಯು ದಾಖಲೆಗಳನ್ನು ತಿದ್ದಿ ಸಂಸ್ಥೆಗೆ ಒಟ್ಟು ₹13,39,000 ಹಣದ ವಂಚನೆ ಎಸಗಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 80/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316, 318, 336 ಮತ್ತು 340ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

    ##Udupi #Market99 #FraudCase #CrimeNews #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    MRPL ಸ್ಫೋಟದ ಭೀಕರತೆಗೆ 9 ಜನಕ್ಕೆ ತೀವ್ರ ಗಾಯ ….ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ…!
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..
    ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    2 ನಿಮಿಷ ತಡವಾದರೆ ಒಂದು ವರ್ಷ ಶಿಕ್ಷೆಯೇ? –ವಿದ್ಯಾರ್ಥಿಯ ಭವಿಷ್ಯಕ್ಕಿಂತ ಗಡಿಯಾರದ ಮುಳ್ಳು ದೊಡ್ಡದಾಯಿತೇ? 
    ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
    ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
    ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಜುಲೈ 1ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿ…ಪಾಸ್‌ಪೋರ್ಟ್, ರೈಲ್ವೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್… ಒಂದೇ ದಿನದಲ್ಲಿ ಹಲವು ದೊಡ್ಡ ಬದಲಾವಣೆಗಳು