📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”

    ಬೆಂಗಳೂರು: ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಡಿ. ದೇವರಾಜ ಅರಸು ಸಂಘದ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಸೋಮಣ್ಣ ಅವರ ರಾಜಕೀಯ ಬದುಕಿನ ಆರಂಭದ ದಿನಗಳನ್ನು ನೆನಪಿಸುವ ಮೂಲಕ ಕಿಡಿಕಾರಿದ್ದಾರೆ.

    ಅವರು ಸೋಶಿಯಲ್ ಮೀಡಿಯಾದ ವೇದಿಕೆಯಲ್ಲಿ ಈ ರೀತಿಯ ಕಮೆಂಟ್ ಮಾಡಿದ್ದಾರೆ ಹಾಗೂ ಕೇಂದ್ರ ಸಚಿವ ಸೋಮಣ್ಣಗೆ ನೆನಪಿಸುವ ಕೆಲಸ ಮಾಡಿದ್ದಾರೆ. “ಸೋಮಣ್ಣ ಅವರು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಹಳೆ ಗುಡ್ಡದಹಳ್ಳಿಯಲ್ಲಿ ಕಾರ್ಪೊರೇಟರ್‌ ಚುನಾವಣೆಗೆ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ನನ್ನ ಬಳಿ ಬರುತ್ತಿದ್ದರು. ಅಂದು ನೆರವಾದವರನ್ನು ಇಂದು ಮರೆತಿರುವುದು ವಿಷಾದಕರ” ಎಂದು ಅವರು ಹೇಳಿದ್ದಾರೆ.

    Also Read  ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ

    “ಕಾಲಕ್ಕೆ ತಕ್ಕಂತೆ ಪಕ್ಷ ಬದಲಾಯಿಸಿ, ರಾಜಕೀಯವಾಗಿ ಬೆಳೆದು ತುಮಕೂರು ಸಂಸದರಾಗಿದ್ದು, ರಾಜ್ಯ ಸಚಿವರಾಗುವ ಮಟ್ಟಕ್ಕೆ ಏರಿದ್ದೀರಿ. ಇದಕ್ಕೆ ಹಲವು ವ್ಯಕ್ತಿಗಳ ಹಾಗೂ ಹಿರಿಯರ ಆಶೀರ್ವಾದ ಮತ್ತು ಸಹಕಾರವೂ ಕಾರಣ ಎಂಬುದನ್ನು ಮರೆಯಬಾರದು” ಎಂದು ಅವರು ಟೀಕಿಸಿದ್ದಾರೆ.

    “ಇಂದು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವ ಮಟ್ಟಕ್ಕೆ ಬೆಳೆದಿದ್ದೀರಿ. ಆದರೆ ಒಮ್ಮೆ ಹಿಂದಿರುಗಿ ನಿಮ್ಮ ರಾಜಕೀಯ ಪಯಣವನ್ನು ನೋಡಿಕೊಳ್ಳಿ. ಅಧಿಕಾರದ ಮದ ಹಾಗೂ ಹಣದ ಮದದಲ್ಲಿ ಹಿಂದೆ ನೆರವಾದವರನ್ನು ಮರೆಯಬೇಡಿ. ಉಂಡ ತಟ್ಟೆಯನ್ನು ಮರೆಯುವುದು ಸರಿಯಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಕಷ್ಟದ ಸಮಯದಲ್ಲಿ ಬೆಂಬಲ ನೀಡಿದವರನ್ನು ಒಮ್ಮೆ ನೆನಪಿಸಿಕೊಳ್ಳಿ. ಹಣ, ಅಧಿಕಾರ ಮತ್ತು ಅಂತಸ್ತು ಶಾಶ್ವತವಲ್ಲ. ಹಳೆ ಗುಡ್ಡದ ಸ್ಮಶಾನಕ್ಕೆ ಒಮ್ಮೆ ಹೋಗಿ ನೋಡಿದರೆ, ಹಿಂದೆ ಮೆರೆದಿದ್ದವರ ಅಂತಿಮ ಗತಿ ಏನಾಗಿದೆ ಎಂಬುದು ಅರಿವಾಗುತ್ತದೆ. ಎಲ್ಲರೂ ಕೊನೆಗೆ ಮಣ್ಣಾಗಿ, ಬೂದಿಯಾಗಿದ್ದಾರೆ” ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

    Also Read  ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…

    ಸೋಮಣ್ಣ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಹಾಯ ಮಾಡಿದವರನ್ನು ಮರೆಯದೆ, ಸಂಯಮದಿಂದ ಮಾತನಾಡಬೇಕು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತುಕೊಂಡು ರಾಜಕೀಯದಲ್ಲಿ ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಸೋಮಣ್ಣ ಅವರ ರಾಜಕೀಯ ನಡೆ ಹಾಗೂ ರಾಹುಲ್ ಗಾಂಧಿ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ವಾಗ್ದಾಳಿ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಅಮೆರಿಕ–ಇರಾನ್ ಸಂಘರ್ಷಕ್ಕೆ ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ! ಕದನ ವಿರಾಮ ಸಂಪೂರ್ಣ ವಿಫಲ..
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
    ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
    ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ
    ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!
    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಸಾರ್ವಜನಿಕರಲ್ಲಿ ವಿನಂತಿ …!