📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ

    ನವದೆಹಲಿ/ಲೇಹ್: ದೇಶಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುವಾಗ ವ್ಯಕ್ತಿ ಒಂದೇ. ಆದರೆ ವ್ಯವಸ್ಥೆಯಲ್ಲಿ ಕೊಡುವ ಪ್ರಾಮುಖ್ಯತೆ ಮಾತ್ರ ಬೇರೆ ಬೇರೆ. ಇದೇ ಪ್ರಶ್ನೆಯನ್ನು ಈಗ ಜನಸಾಮಾನ್ಯರು ಕೇಳುತ್ತಿದ್ದಾರೆ.

    2011 ರಲ್ಲಿ ಅಣ್ಣಾ ಹಜಾರೆ ಲೋಕಪಾಲ್‌ಗಾಗಿ ಉಪವಾಸ ಸತ್ಯಾಗ್ರಹ ಮಾಡಿದಾಗ ಪ್ರತಿ ಚಾನಲ್‌ಗಳಲ್ಲಿ 24 ಗಂಟೆ ಲೈವ್ ಪ್ರಸಾರವಾಗಿತ್ತು. ಅದೇ ರೀತಿ ಲಡಾಖ್‌ಗಾಗಿ, ಪರಿಸರಕ್ಕಾಗಿ, ಸಂವಿಧಾನದ 6ನೇ ಪರಿಚ್ಛೇದಕ್ಕಾಗಿ ಹೋರಾಡುತ್ತಿರುವ ಸೋನಂ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಮಾಡಿದಾಗ ಮುಖ್ಯವಾಹಿನಿಗಳಲ್ಲಿ ಆ ಮಟ್ಟದ ಪ್ರಚಾರ ಕಾಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಸೋನಂ ವಾಂಗ್ಚುಕ್ ಯಾರು?

    “Three Idiots” ಸಿನಿಮಾದ “ಫುಂಗ್ಸುಕ್ ವಾಂಗ್ಡು” ಪಾತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿ ಇವರೇ.

    ಪರಿಚಯ: ಇಂಜಿನಿಯರ್: ಶೈಕ್ಷಣಿಕ ಸುಧಾರಣೆಗಾಗಿ “SECMOL” ಸಂಸ್ಥೆ ಸ್ಥಾಪಿಸಿದವರು ಪರಿಸರವಾದಿ: ಲಡಾಖ್‌ನ ಮರುಭೂಮಿಯಲ್ಲಿ “ಐಸ್ ಸ್ತೂಪ” ತಂತ್ರಜ್ಞಾನದಿಂದ ನೀರಿನ ಸಮಸ್ಯೆ ಪರಿಹರಿಸಿದವರ ವಿಜ್ಞಾನಿ ಮತ್ತು ಸಾಮಾಜಿಕ ಹೋರಾಟಗಾರ: ಸುಸ್ಥಿರ ಅಭಿವೃದ್ಧಿ, ಸ್ಥಳೀಯ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವವರು

    Also Read  ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ

    “ಜನರಿಗಾಗಿ, ಭೂಮಿಗಾಗಿ ಹೋರಾಡುವವರು ನಿಜವಾದ ದೇಶಭಕ್ತರು” ಎಂಬ ಸಂದೇಶದೊಂದಿಗೆ ಅವರು ಲಡಾಖ್‌ಗೆ 6ನೇ ಪರಿಚ್ಛೇದ ರಕ್ಷಣೆ, ಪರಿಸರ ರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

    ಜನರ ಪ್ರಶ್ನೆ

    “ಅಣ್ಣಾ ಹಜಾರೆ ಉಪವಾಸ ಮಾಡಿದಾಗ ಪ್ರತಿ ಚಾನಲ್‌ನಲ್ಲಿ ಲೈವ್ ಇತ್ತು. ಆದರೆ ಸೋನಂ ವಾಂಗ್ಚುಕ್ ಅವರು ಲಡಾಖ್‌ನ ಹಿಮದಲ್ಲಿ ಕುಳಿತು ದೇಶಕ್ಕಾಗಿ ಉಪವಾಸ ಮಾಡಿದಾಗ ಯಾವ ಚಾನಲ್ ತೋರಿಸಿತು?” – ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪ್ರಶ್ನೆ. ಜನರು ಹೇಳುತ್ತಿರುವುದು:
    “ಮಾಧ್ಯಮ ಲೋಕವು TRP, ರಾಜಕೀಯ ಲಾಭ ನೋಡಿ ಸುದ್ದಿ ತೋರಿಸುತ್ತಿದೆಯೇ? ಜನಪರ ಹೋರಾಟಗಾರರನ್ನು ನಿರ್ಲಕ್ಷಿಸುತ್ತಿದೆಯೇ? ಇದರಿಂದ ನಮ್ಮ ಪ್ರಸಾರ ಮಾಧ್ಯಮ ಯಾವ ಗತಿಗೆ ಹೋಗಿದೆ ಎಂಬುದು ಗೊತ್ತಾಗುತ್ತದೆ.” ಎಂಬುದಾಗಿದೆ.

    Also Read 

    ಹಿರಿಯ ಪತ್ರಕರ್ತರೊಬ್ಬರ ಪ್ರಕಾರ, “ಯಾವುದೇ ಸತ್ಯಾಗ್ರಹವಾಗಲಿ, ಅದು ಜನಪರವಾಗಿದ್ದರೆ ಮಾಧ್ಯಮಗಳು ಜಾತಿ, ಪ್ರದೇಶ, ರಾಜಕೀಯ ನೋಡದೆ ಪ್ರಸಾರ ಮಾಡಬೇಕು. ಸೋನಂ ವಾಂಗ್ಚುಕ್ ಅವರ ಹೋರಾಟ ಲಡಾಖ್‌ನ ಭವಿಷ್ಯಕ್ಕೆ ಸಂಬಂಧಿಸಿದ್ದು. ಅದನ್ನು ನಿರ್ಲಕ್ಷಿಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ”

    ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೆ ದೇಶದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. “ನಾನು ನಿಮ್ಮ ಜೊತೆ ಇದ್ದೇನೆ. ಜೈ ಹಿಂದ್” ಎಂಬ ಸಂದೇಶಗಳು ಅವರಿಗೆ ರವಾನೆಯಾಗುತ್ತಿವೆ.

    ಒಬ್ಬ ಇಂಜಿನಿಯರ್, ವಿಜ್ಞಾನಿ, ಪರಿಸರವಾದಿ ದೇಶಕ್ಕಾಗಿ ಉಪವಾಸ ಮಾಡುವಾಗ ಮಾಧ್ಯಮಗಳು ಮೌನವಾಗಿದ್ದರೆ, ಅದು ದೇಶ-ಧರ್ಮಕ್ಕೆ ಮಾಡುವ ದ್ರೋಹವೇ ಎಂದು ಜನರು ಹೇಳಲು ಪ್ರಾರಂಭಿಸಿದ್ದಾರೆ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    RSS ಕಾರ್ಯಕ್ರಮಕ್ಕೆ ಹೋದದ್ದಕ್ಕೆ ಅಮಾನತು: ಸರ್ಕಾರಿ ನೌಕರನ ಪರ ನಿಂತ KAT
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
    ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    BRICS ಸಭೆಯಲ್ಲಿ UAE ಮೇಲೆ ಇರಾನ್ ಕಿಡಿ! ಇಸ್ರೇಲ್–ಇರಾನ್ ಯುದ್ಧ – ಇಸ್ರೇಲ್‌ಗೆ UAE ಗುಪ್ತ ಬೆಂಬಲವೇ?
    ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ