📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ

    2024ರ ಪ್ರಶ್ನೆ ಪತ್ರಿಕೆ ಸೋರಿಕೆಯ ”ಮಾಸ್ಟರ್ ಮೈಂಡ್ ನಿರಪರಾಧಿ ಎಂದು ಸಿಬಿಐ ಘೋಷಣೆ” ಕೇಜ್ರಿವಾಲ್ ರಿಂದ ಪ್ರಧಾನಿಗೆ ಪ್ರಶ್ನೆ

    ನವದೆಹಲಿ: 2024ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಏನಾಯ್ತು ಅಂತ ಪ್ರಶ್ನಿಸುತ್ತ,  ಆಮ್ ಆದ್ಮಿ ಪಕ್ಷದ ಸಂಸದ ಮತ್ತು ಮಾಜಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಕೇಜ್ರಿವಾಲ್ ಅವರ ಆರೋಪವೇನು?

    ನಿನ್ನೆ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್, ”ಮೋದಿ ಅವರ ಭರವಸೆ ಎಷ್ಟು ಪೊಳ್ಳು ಎಂಬುದು ನಿನ್ನೆ ಸಾಬೀತಾಯಿತು” ಎಂದು ಕಿಡಿಕಾರಿದ್ದಾರೆ.

    ”2024ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ ಮೈಂಡ್ ಅನ್ನು ನಿರಪರಾಧಿ ಎಂದು ಸಿಬಿಐ ಘೋಷಿಸಿದೆ” ಎಂದು ಅವರು ಹೇಳಿದರು.

    Also Read  165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 

    ಪ್ರಧಾನಿ ಮೋದಿಗೆ 3 ಪ್ರಶ್ನೆ

    ಈ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟ ಕೇಜ್ರಿವಾಲ್, ”ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲದಿದ್ರೆ, ಮತ್ತೇಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಮಾತಾಡ್ತೀರಿ” ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಬೂಟಾಟಿಕೆ, ವಿದ್ಯಾರ್ಥಿಗಳ ಆಕ್ರೋಶವನ್ನು ಕಡಿಮೆ ಮಾಡಲು ಮಾಡುತ್ತಿರುವ ಒಂದು ಟ್ರಿಕ್ಸ್ ಎಂದವರು ಆರೋಪಿಸಿದ್ದಾರೆ.

    ನೀಟ್ ಪತ್ರಿಕೆ ಸೋರಿಕೆ ಪ್ರಕರಣ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಈಗ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಜನರಿಗೆ ಉತ್ತರ ಬೇಕಿದೆ ಎಂದು ಅವರು ಆಗ್ರಹಿಸಿದರು.

    ರಾಜಕೀಯ ವಲಯದಲ್ಲಿ ಚರ್ಚೆ

    ಕೇಜ್ರಿವಾಲ್ ಅವರ ಈ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಮತ್ತೆ ನೀಟ್ ಪ್ರಕರಣದ ಕುರಿತು ಚರ್ಚೆ ಆರಂಭವಾಗಿದೆ. ಸಿಬಿಐ ಈ ಕುರಿತು ಅಧಿಕೃತವಾಗಿ ಏನು ಹೇಳಿಕೆ ನೀಡಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

    Also Read  ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!

    ನೀಟ್ ಪರೀಕ್ಷೆಯ ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
    ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
    MRPL ಭೀಕರ ಸ್ಫೋಟ: ಮನೀಶ್ ಕರ್ಕೇರ ಬಲಿ; ರಾಜೇಶ್‌ಗೆ 35% ಸುಟ್ಟ ಗಾಯ, 8 ಮಂದಿಗೆ ಗಾಯ
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ನಿವೇಶನ ಮೋಸದ ಆರೋಪ: ಶಾಸಕ ಎಸ್ ಟಿ ಸೋಮಶೇಖರ್ ಬೆಂಬಲಿಗ ಕೇಬಲ್ ಕೃಷ್ಣನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಖಾದರ್‌ರ “ಉರ್ದು ಹಬ್ಬ “ಪ್ರಸ್ತಾಪಕ್ಕೆ ಬ್ರೇಕ್ ,ವಿಧಾನಸೌಧದ ಮೆಟ್ಟಿಲಲ್ಲಿ ಖಾಸಗಿ ಕಾರ್ಯಕ್ರಮ…!?
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ