📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಚಿವ ಜಮೀರ್ ಕಥೆ ಗೋವಿಂದ!!!?

ದಾವಣಗೆರೆ ಬೈ ಎಲೆಕ್ಷನ್ ವಿಚಾರ ನಮಗೆ ಗೊತ್ತೇ ಇದೆ. ಅನವಶ್ಯಕವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಮೂಗು ತೋರಿಸಿ ಗೊಂದಲವನ್ನು ಉಂಟು ಮಾಡಿರುವಂತಹ ವ್ಯಕ್ತಿ, ಇದೆ ಜಮೀರ್ ಅಹ್ಮದ್ ಖಾನ್. ಈ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಅಂತ  ಆಗಾಗ ತೋರಿಸಿಕೊಳ್ಳುತ್ತಾ ಬಂದಂತಹ ವ್ಯಕ್ತಿ. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ  ಪಕ್ಷದಲ್ಲಿ ರಾಜ್ಯಮಟ್ಟದ ಯಾವುದೇ ಜವಾಬ್ದಾರಿಯು ಇಲ್ಲ. ಹಾಗಿದ್ದರೂ ಪಕ್ಷದ ಇತರ ಮುಸ್ಲಿಂ ನಾಯಕರನ್ನು ಓವರ್ ಟೇಕ್ ಮಾಡಿ ಮುಸ್ಲಿಂ ಸಮುದಾಯದ ಪ್ರಷ್ನತೀತ ನಾಯಕ ಎಂಬ ಸ್ಥಾನಕ್ಕೆ ಬಂದು ಕೂರುವ ಪ್ರಯತ್ನಕ್ಕೆ ಕೈ ಹಾಕಿದ್ದ. ಅದರ ಭಾಗವೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಕರಣ.

ಎಸ್ ಇದೀಗ ಸಚಿವ ಸ್ಥಾನಕ್ಕೆ ಸಂಚುಕಾರವನ್ನು ತಂದುಕೊಳ್ಳುತ್ತಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್. ಗೋವಿಂದಾನಿ ಗೋವಿಂದ ಎಂಬಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ ಸಚಿವ ಜಮೀರ್ ಅಹಮದ್ ಖಾನ್. ಸಹಕರಿಸಿದಂತಹ ಎಂಎಲ್ಸಿ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ಎನ್ನುವವರು ಸಹ ಇದೀಗ ಅಡಗತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದೇ ಪ್ರಥಮ ಬಾರಿಗೆ ಸೋಲುವ ಭಯ ಕಾಡುತ್ತಿದೆ. ಅಷ್ಟಕ್ಕೂ ಸೋಲುತ್ತಿರುವವರು ಸಣ್ಣವರೇನಲ್ಲ ಶಾಮನೂರು ಶಿವಶಂಕ್ರಪ್ಪ ಎಂಬ ದಾವಣಗೆರೆಯ ದನಿಯ ಮೊಮ್ಮಗ ಸೋಲಿನ ಅಂಚಿಗೆ ತಲುಪುತ್ತಿದ್ದಾರೆ.

ಈ ಸೋಲು ಕೇವಲ ಶ್ಯಾಮನೂರು ಕುಟುಂಬಕ್ಕೆ ಸಲ್ಲುವಂತದ್ದಲ್ಲ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡುವಂತಹ ಸೋಲಾಗಲಿದೆ. ಒಂದೊಮ್ಮೆ ಈ ಸೋಲು ಖಚಿತವಾದರೆ ಅದರ ಎಲ್ಲಾಶಯ ಯಾವ ಮುಲಾಜು ಇಲ್ಲದೆ ಜಮೀರ್ ಅಹ್ಮದ್ ಖಾನ್ ಅವರಿಗೆ ಸಲ್ಲುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಸಂದರ್ಭದಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲೂ ಗೆಲುವು ಆಡಳಿತ ಪಕ್ಷದ ಪರವಾಗಿರಬೇಕು. ಆದರೆ ಯಾವ ಲಕ್ಷಣವು ಕಾಣುತ್ತಿಲ್ಲ ಅದಕ್ಕೆ ಕಾರಣ ಬೇರೇನೂ ಅಲ್ಲ ಕಾಂಗ್ರೆಸ್ ಒಳಗಿನಿಂದಲೇ ಗಣದಂತೆ ಕೆಲಸ ಮಾಡುತ್ತಿರುವವರೇ ಕಾರಣ. ಅಂತವರನ್ನು ಪಕ್ಷವು ಅಥವಾ ಸರ್ಕಾರವೋ ಅತಿ ಎತ್ತರ ಕೈ ಇಟ್ಟುಕೊಂಡ ಕಾರಣ ಸಾಕಷ್ಟು ಡ್ಯಾಮೇಜ್ ಈ ಕ್ಷೇತ್ರದ ಮೇಲಾಗುತ್ತಿದೆ.

ಜಮೀರ್ ಅಹಮದ್ ಖಾನ್ ನಾನೊಬ್ಬ ಮುಸ್ಲಿಂ ಸಮಾಜದ ನಾಯಕನಾಗಬೇಕು ಅಂತಿದ್ದರೆ ಈ ಪಕ್ಷಗಳ ಅವಶ್ಯಕತೆ ಯಾಕೆ ಬೇಕಿತ್ತು? ಓವೈಸಿ ತರನೋ ಅಥವಾ ಮುಸ್ಲಿಂಲೀಗ್ ಪಕ್ಷಗಳ ಜೊತೆಗೆ ಕಾಣಿಸಿಕೊಳ್ಳಬಹುದಿತ್ತು.  ಆದರೆ ಜಮೀರ್ ಅಹಮದ್ ಖಾನ್ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಅದರ ಲಾಭವನ್ನು ಪಡೆದುಕೊಂಡರು. ಇವತ್ತು ಮಿನಿಸ್ಟರ್ ಆಗಿದ್ದಾರೆ ಅಂದರೆ ಅದಕ್ಕೆ ಕಾರಣ ಈ ಎರಡು ಪಕ್ಷ ಕಾರಣ. ಅಂತಹ ಜಮೀರ್ ಅಹ್ಮದ್ ಖಾನ್, ಹಣಕಾಸಿನ ವಿಚಾರದಲ್ಲಿ ಏನೇ ಮಾಡಿರಲಿ ಎಷ್ಟೇ ಮಾಡಿರಲಿ ಅದು ಬೇರೆ ವಿಚಾರ. ಪವರ್ ಹಾಗೂ ರಾಜಕಾರಣದಲ್ಲಿ ಅವರಿಗೆ ಒಂದು ಸ್ಥಾನ ಕೊಟ್ಟಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಅದೇ ಜಮೀರ್ ಅಹಮದ್ ಖಾನ್ ಈ ಬಾರಿ ಕಾಂಗ್ರೆಸ್ ಪಾಲಿಗೆ ವಿಲನ್ ಆದರ? ಕಾಂಗ್ರೆಸ್ ಪಕ್ಷಕ್ಕೆ ಬ್ಯಾಕ್ ಸ್ಟಾಬ್ ಮಾಡಿದರಾ?

ಈಗ ಬರುತ್ತಿರುವ ಸುದ್ದಿ ಅದನ್ನೇ ಹೇಳುತ್ತಿದೆ ನೋಡಿ. ದಾವಣಗೆರೆ ವಿಧಾನಸಭಾ ಉಪಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಕೆಂಡಮಂಡಲವಾಗಿದೆ. ಆಂತರಿಕ ಲೆಕ್ಕಾಚಾರದ ಪ್ರಕಾರ ಗೆಲವು ಕಷ್ಟ ಎಂಬ ವಿಚಾರ ತಿಳಿದು ಬಂದಿದೆ. ಹಾಗಾಗಿ ಪಕ್ಷವು ಅಲ್ಲಿ ನಡೆದ ವಿಚಾರ ಹಾಗೂ ಏನೆಲ್ಲಾ ಇಂಟರ್ನಲ್ ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಆಂತರಿಕ ವಾದಂತಹ ತನಿಖೆಯನ್ನು ಮಾಡಿದೆ. ನೇತೃತ್ವವನ್ನು  ಸಲೀಂ ಅಹಮದ್ ಅವರು ವಹಿಸಿದ್ದರು. ಒಟ್ಟಿನಲ್ಲಿ ಏನೆಲ್ಲಾ ಆಯಿತು ಅನ್ನುವುದರ ಸಂಪೂರ್ಣ ವಿವರವನ್ನು ಒಳಗೊಂಡ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ಗೆ ಉಸ್ತುವಾರಿ ನಾಯಕ ಸುರ್ಜೆವಾಲಾ ಥ್ರೂ ಕಳಿಸಲಾಗಿದೆ. 

ತನಿಕಾ ವರದಿಯ ಆದಾರದ ಮೇಲೆ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರಲಿದೆ ಅಷ್ಟಕ್ಕೂ ವರದಿಯಲ್ಲಿ ಏನಿದೆ?

ಆ ಪಕ್ಷದ ಆಂತರಿಕ ವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ ಆತನಿಕ ವರದಿಯಲ್ಲಿ ದೊಡ್ಡ ಬಾಂಬೆ ಇದೆ. ಆ ವರದಿಯ ಆಧಾರದಲ್ಲಿ ಕ್ರಮವೇನಾರು ಆದರೆ, ಜಮೀರ್ ಅಹ್ಮದ್ ಖಾನ್ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತ. ಅಷ್ಟೇ ಅಲ್ಲ ಪಕ್ಷದಿಂದಲೂ ಹೊರ ಹೋಗಬೇಕಾಗುತ್ತದೆ. ಜಮೀರ್ ಅಹ್ಮದ್ ಖಾನ ಅಷ್ಟೇ ಅಲ್ಲ, ಎಂಎಲ್‌ಸಿಗಳಾದ ನಸಿರ್ ಅಹಮದ್ ಹಾಗೂ ಅಬ್ದುಲ್ ಜಬ್ಬಾರ್ ಸಹ ಜಮೀರ್ ಅಹ್ಮದ್ ಖಾನ್ ಮಾತು ಕೇಳಿದ ಕಾರಣದಿಂದಾಗಿ ಕಾಂಗ್ರೆಸ್ ನಿಂದ ಹೊರದಬ್ಬಲ್ಪಡುಬಹುದು ಎನ್ನಲಾಗುತ್ತಿದೆ.

ಆ ವರದಿಯ ಪ್ರಕಾರ, ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟಲು ಕಾರಣವೇ ಈ ಮೂವರು ನಾಯಕರು ಕಾರಣ. ಅವರು ಸಮುದಾಯಕ್ಕೆ ಟಿಕೆಟ್ ಕೇಳುವುದು ತಪ್ಪಲ್ಲ, ಆದರೆ ಪಕ್ಷವೂ ನಿರ್ಧಾರ ಮಾಡಿದ ಕ್ಯಾಂಡಿಡೇಟ್ ಪರವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬೇಕು ಆ ಕೆಲಸವು ಇವರಿಂದ ಆಗಿಲ್ಲ ಅನ್ನುವುದು ಆ ತನಿಖಾ ವರದಿಯಲ್ಲಿ ಇದೆಯಂತೆ. ಅಷ್ಟೇ ಅಲ್ಲ ಇನ್ನೂ ಒಂದು ಗಂಭೀರವಿದೆ. 

ಇಲ್ಲಿ ಎಸ್ ಡಿ ಪಿ ಐ ದಿಂದ ಅಫ್ಜಲ್ ಕೊಡ್ಲಿಪೇಟೆ ಎನ್ನುವವರು ಅಭ್ಯರ್ಥಿಯಾಗಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಹಣದ ಸಹಾಯವನ್ನು ಬೆನಾಮೀ ಮೂಲಕ ಈ ಮೂವರು ನಾಯಕರು ಮಾಡಿದ್ದಾರೆ ಎನ್ನುವುದು ಆಂತರಿಕ ತನಿಖೆಯ ವರದಿಯಲ್ಲಿ ಇದೆಯಂತೆ. ಹೇಗಿದ್ದಾಗ ಪಕ್ಷವು ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುತ್ತದೆಯೇ? ಸಿದ್ದರಾಮಯ್ಯನವರು ಇಂತಹ ಸಂದರ್ಭದಲ್ಲಿ ತಮ್ಮ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಜಮೀರ ಅಹ್ಮದ್ ಖಾನ್ ರಕ್ಷಣೆಗೆ ನಿಲ್ಲಲು ಸಾಧ್ಯವೇ? ಕುತೂಹಲಕರ ವಿಚಾರವಾಗಿ ಮಾರ್ಪಾಡಾಗಿದೆ ಈ ಪ್ರಕರಣ ಏನಾಗುತ್ತದೋ ಕಾದು ನೋಡ್ಬೇಕು.

COMMENTS

Login with Gmail to comment

ಇನ್ನಷ್ಟು ಸುದ್ದಿ

ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!