📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್

2026– 27ರ ಬಜೆಟ್ಟಿನಲ್ಲಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಯಾವಾಗ ಇಂತಹದೊಂದು ಘೋಷಣೆ ಹೊರಬರುತ್ತದೆ ತಕ್ಷಣವೇ ಈ ಒಂದು ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಅನ್ನು ಪಡೆದುಕೊಳ್ಳಲು ಹಾಗೂ ಆ ಅಕಾಡೆಮಿಯ ಮೊದಲ ಅಧ್ಯಕ್ಷ ಸ್ಥಾನಕ್ಕೆ ಇರಲು ಪೈಪೋಟಿ ಶುರುವಾಗಿದೆ.

ಹೌದು, ಹವ್ಯಕ ಭಾಷೆಯಲ್ಲಿ ಸಾಕಷ್ಟು ಭಿನ್ನತೆ ಇದೆ ಹಾಗೂ ಹಲವು ಮಜಲುಗಳಿವೆ ಹಾಗೆಯೇ ಈ ಭಾಷಾ ಶ್ರೀಮಂತಿಕೆ ಅನನ್ಯ.

ಈ ಅಕಾಡೆಮಿಯಿಂದ ಹವ್ಯಕ ಭಾಷೆಯ ಬೆಳವಣಿಗೆ, ಉನ್ನತಿ ಎಷ್ಟರಮಟ್ಟಿಗೆ ಆಗುತ್ತದೋ ಗೊತ್ತಿಲ್ಲ. ಆದರೆ ಈ ಒಂದು ಅಕಾಡೆಮಿಯಿಂದ ರಾಜ್ಯದ ಸಣ್ಣದೊಂದು ಹವ್ಯಕ ಬ್ರಾಹ್ಮಣ ಸಮಾಜದ ಕಡೆಗೂ ಸರ್ಕಾರ ಪ್ರೀತಿಯಿಂದ ನೋಡುತ್ತದೆ ಅನ್ನುವುದನ್ನು ಈ ಒಂದು ಅಕಾಡೆಮಿ ಸ್ಥಾಪನೆಯಿಂದ ಸಾಬಿ ತಾಗುತ್ತಿದೆ ಎನ್ನಬಹುದಷ್ಟೇ.

ಅದಿರಲಿ, ಈಗ ಈ ಅಕಾಡೆಮಿ ಸ್ಥಾಪನೆಯ ವಿಚಾರವಾಗಿ ಕ್ರೆಡಿಟ್ ವಾರ್ ಶುರುವಾಗುತ್ತಿದೆ ಅನ್ನುವುದೇ ಹೊಸ ಬ್ರೇಕಿಂಗ್ ನ್ಯೂಸ್ ಆಗಿದೆ. ಒಂದು ಕಡೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ಹಲವು ಹಿರಿಯ ರಾಜಕಾರಣಿಗಳ ಜೊತೆಗೆ ನಂಟನ್ನು ಹೊಂದಿರುವಂತಹ ವಿಶ್ವೇಶ್ವರ ಭಟ್ಟರು ಈ ಕ್ರೆಡಿಟ್ ಪಡೆಯುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದ್ದಾರೆ. ಮತ್ತೊಂದು ಕಡೆ ಪುತ್ತೂರಿನ ಮಾಜಿ ಸಂಘ ಪರಿವಾರದ ನಾಯಕ ಲಕ್ಷ್ಮೀಶ್ ದಬಲಡ್ಕ ಈ ಒಂದು ಕ್ರೆಡಿಟ್ ಪಡೆಯುವ ನಿಟ್ಟಿನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಇನ್ನ್ಯಾರು ತೂರಿಕೊಂಡು ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ  ಈ ವಾರ್ ಇವರಿಬ್ಬರ ಮಧ್ಯೆ ನಡೆಯುತ್ತಿದೆ ಅನ್ನುವುದಂತೂ ದಿಟ.

ವಾಸ್ತವಕ್ಕೆ ಬರುವ. ಲಕ್ಷ್ಮೀಶ್ ದಬಲಡ್ಕ ಸಂಘ ಪರಿವಾರದಲ್ಲಿ ಗುರುತಿಸಿಕೊಂಡವರು. ತೀರಾ ಇತ್ತೀಚೆಗೆ ಕಾಂಗ್ರೆಸ್ ಕೋಟೆಯೊಳಕ್ಕೆ ಎಂಟ್ರಿ ಕೊಟ್ಟವರಾಗಿದ್ದಾರೆ. ಲಕ್ಷ್ಮೀಶ್ ದಬಲಡ್ಕ ದೊಡ್ಡ ಪ್ರಮಾಣದ,  ನಾಯಕರಲ್ಲದಿದ್ದರೂ ವಾಗ್ಮಿ ಅಂತೂ ಹೌದು. ಒಂದು ಸರ್ಕಾರವು ದಬಲಡ್ಕರವರ ಪ್ರಯತ್ನಕ್ಕೆ ಒ ಗುಟ್ಟು ಈ ಒಂದು ಅಕಾಡೆಮಿ ನಿರ್ಮಿಸುವ ನಿರ್ಧಾರ ಕೈಗೊಳ್ಳುತ್ತದಾ ಎಂಬ ಪ್ರಶ್ನೆಯು ಇಲ್ಲಿ ಮುಖ್ಯ ವೆನಿಸಿಕೊಳ್ಳುತ್ತದೆ. ಆದ್ರೂ ದಬಲಡ್ಕ್ ಹಠವಾದಿ,  ಹಿಡಿದ ಕೆಲಸವನ್ನು ಮಾಡುವವರೆಗೆ ನಿಲ್ಲುವವರಲ್ಲ. ಆದ್ರೂ ಸರ್ಕಾರ ಅವರೊಬ್ಬರ ಮಾತಿಗೆ ಓಕೆ ಅಂದಿತಾ?

ಹಾಗಂತ ದಬಲಡ್ಕರ ಪ್ರಯತ್ನ ಇಲ್ವೇ ಇಲ್ಲ ಅಂತ ಅನ್ನಲು ಸಾಧ್ಯವೂ ಇಲ್ಲ. ಇಲ್ಲಿ ಈಗಾಗಲೇ ಹಲವರು ಲಕ್ಷ್ಮೀಶ್ ದಬಲಡ್ಕ   ಅವರಿಗೆ ಶುಭಾಶಯಗಳನ್ನೂ ಹೇಳಿದ್ದಾರೆ ಹಾಗೂ ಈ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಅಂತ ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಕೂಡ.

ಒಂದು ಕಡೆ ಹೀಗಾಗುತ್ತಿದ್ದಂತೆಯೇ ಇನ್ನೊಂದು ಕಡೆಯಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ರವರ ಫೋಟೋ ದೊಂದಿಗೆ ಅವರ ಪ್ರಯತ್ನದಿಂದಾಗಿ ಈ ಒಂದು ಅಕಾಡೆಮಿ ಸ್ಥಾಪನೆಯಾಗಿದೆ ಎಂಬ ಒಕ್ಕಣೆಯೊಂದಿಗೆ ಅಭಿನಂದನೆಗಳು ಎಂಬ ಪೋಸ್ಟರ್ ಅನ್ನು  ಬಿತ್ತರಿಸಲಾಗುತ್ತಿದೆ. ಪತ್ರಿಕೆಗಳಲ್ಲಿ ಲೇಖನವು ಬರುತ್ತದೆ. ಬಿಜೆಪಿ ವಕ್ತಾರರಾದ ಹರಿಪ್ರಸಾದ್ ಕೋಣೆಮನೆ ಅವರಿಂದಲೂ ಲೇಖನ ಬರುತ್ತದೆ.  ಇಲ್ಲಿ  ಪೋಸ್ಟರ್ ನ್ನು ಗಿರಿಧರ ಕಜೆ ಹಾಕಿರುವುದು ಗಮನಾರ್ಹ. 

ವಿಶ್ವೇಶ್ವರ ಭಟ್ ಬಲಪಂಥೀಯ ಪತ್ರಕರ್ತರು ಎಂಬ ಲೇಬಲ್ ಈಗಾಗಲೇ ಅಂಟಿಸಿಕೊಂಡವರಾಗಿದ್ದಾರೆ. ಬಿಜೆಪಿಯಪರ ಎಂಬ ಹಣೆಪಟ್ಟಿಯು ಅವರಿಗಿದೆ. ಆದರೆ ನಿಜ ಸಂಗತಿ ಭಿನ್ನವಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆ ಬಹಳ ಆತ್ಮೀಯವಾದಂತಹ ಒಡನಾಟ ವಿಶ್ವೇಶ್ವರ ಭಟ್ಟರಗಿದೆ. ಎಂತಹುದೇ ಸಂದರ್ಭದಲ್ಲಿ ಕಾಂಗ್ರೆಸ್ನ ನಾಯಕರಿಗಿಂತಲೂ ಮುಖ್ಯವಾಗಿ ಮುಖ್ಯಮಂತ್ರಿಗಳು ವಿಶ್ವೇಶ್ವರ ಭಟ್ಟರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಎನ್ನುವುದು ಹಲವು ಕಡೆ ಋಜುವತಾಗಿದೆ.

ತೀರಾ ಇತ್ತೀಚೆಗೆ ಸಿದ್ದರಾಮಯ್ಯನವರು ಮಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಸಮೀಪ ಇರುವ ತಾಜ್ ಮಂಜುರಾಮ್ ಹೋಟೆಲ್ನಲ್ಲಿ ಅವರು ವಾಸ್ತವ್ಯ ಇರುತ್ತಾರೆ. ಅದೇ ಹೋಟೆಲಿನಲ್ಲಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಉಳಿದಿರುತ್ತಾರೆ ಹಾಗೂ ಮುಖ್ಯಮಂತ್ರಿಗಳ ಜೊತೆ ಆತ್ಮೀಯ ಬೇಟಿಯೂ ಆಗಿರುತ್ತದೆ . ಒಟ್ಟಿಗೆ ಊಟ ತಿಂಡಿ ಸಹ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಣ್ಣ ನಾಯಕರನ್ನು ಬಿಡಿ ಅನೇಕ ಹಿರಿಯ ನಾಯಕರುಗಳು ಸಹ ಮಂಜುರಾಮ್ ಹೋಟೆಲ್ ಲಾಂಚ್ ನಲ್ಲಿಯೇ ಕಾಯುತ್ತಿದ್ದನ್ನು ಕಾಣಬಹುದಿತ್ತು. ಇಲ್ಲಿ ಹೇಳಲು ಹೊರಟಿದ್ದು ಬೇರೆ ಏನು ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿಯ ಪತ್ರಕರ್ತರ ಜೊತೆಗೆ ಒಳ್ಳೆಯ ಆತ್ಮೀಯ ಸಂಬಂಧವನ್ನು ಹೊಂದಿದ್ದರು ಅನ್ನುವುದನ್ನು  ಹೇಳುತ್ತಿರುವುದು ಅಷ್ಟೇ.  ಇನ್ನು ಹವ್ಯಕ ಬ್ರಾಹ್ಮಣ ಸಮಾಜವು ಬಹುತೇಕವಾಗಿ ಬಿಜೆಪಿಯ ಜೊತೆಗೆ ಗುರುತಿಸಿಕೊಂಡಿದೆ ಅನ್ನುವುದು ಸುಸ್ಪಷ್ಟ. ಎಲ್ಲೋ ಅಲ್ಪಸ್ವಲ್ಪ ಮತದಾರರು ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಹಾಕಬಹುದು. ಇದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗಿರುವಾಗ ಸಿದ್ದರಾಮಯ್ಯನವರು ಈ ಒಂದು ಅಕಾಡೆಮಿಯನ್ನು ರಾಜಕೀಯ ಕಾರಣಕ್ಕಾಗಿ ಸ್ಥಾಪಿಸಿದ್ದಾರೆ ಎನ್ನಲು ಸಾಧ್ಯವಿಲ್ಲ. ಈ ಅಕಾಡೆಮಿ ಸ್ಥಾಪಿಸಿದ್ದರಿಂದ ಹವ್ಯಕ ಸಮಾಜ ಸಿದ್ದರಾಮಯ್ಯನವರಿಗಾಗಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಸೆಲ್ಯೂಟ್ ಹೊಡೆಯುವ ಯಾವ ಲಕ್ಷಣವೂ ಇಲ್ಲ. ಆದರೆ ಕೆಲವರು ತಮ್ಮ ವೈಯಕ್ತಿಕ ಲಾಭದ ಕಾರಣಕ್ಕೆ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೀತಾರೆ ಅನ್ನೋದು ಬೇರೆ ಮಾತು. ಸಿದ್ದರಾಮಯ್ಯನವರು ಈ ಒಂದು ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿದ್ದು  ರಾಜಕಾರಣದ ಲಾಭಕ್ಕೋಸ್ಕರ ಅಲ್ಲ ಅನ್ನುವುದಂತೂ ಸುಸ್ಪಷ್ಟವಾಗುತ್ತದೆ. ತುಂಬಾ ಆತ್ಮೀಯರ ಒತ್ತಡದ ಕಾರಣಕ್ಕೇ ಹೆಚ್ಚಿನ ಪ್ರಚಾರವಾಗಲಿ, ಹೋರಾಟವೇ ಆಗಲಿ, ಇಲ್ಲದಿದ್ದರೂ ಈ ಒಂದು ಅಕಾಡೆಮಿ ಸ್ಥಾಪನೆಯ ಘೋಷಣೆಯಾಗಿರುವುದು ಆಶ್ಚರ್ಯ ಅಲ್ಲದೆ ಮತ್ತೇನು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹದೊಂದು ಸ್ಥಾನವನ್ನು ಈ ಸಮಾಜಕ್ಕೆ ಕೊಡುತ್ತಾರೆಂಬ ನಿರೀಕ್ಷೆಯು ಆ ಸಮಾಜದ ಯಾರಲ್ಲೂ ಇರಲಿಲ್ಲ.

ಹಾಗಂತ ಕಾಂಗ್ರೆಸ್ಸಿನಲ್ಲಿ ಹವ್ಯಕ ಸಮಾಜದ ನಾಯಕರು ಇಲ್ಲ ಅಂತಲ್ಲ. ಹಲವು ನಾಯಕರುಗಳು ಕಾಂಗ್ರೆಸ್ ಜೊತೆಗೆ ಇದ್ದಾರೆ. ಇನ್ನು ಕೆಲವರು ಕಾಂಗ್ರೆಸ್ ಜೊತೆಗೂ ಇದ್ದಾರೆ ಬಿಜೆಪಿಯ ಜೊತೆಗೂ ಕಾಣಿಸಿಕೊಳ್ಳುತ್ತಾರೆ. ಅಂತಹ ನಾಯಕರೂ ಇದ್ದಾರೆ.

ಕಾಂಗ್ರೆಸ್ ನಲ್ಲಿ ಹವ್ಯಕ ಸಮಾಜದಿಂದ ಬಂದ ನಾಯಕರ ಪೈಕಿ ಅತ್ಯಂತ ಕಟ್ಟು ನಿಟ್ಟಾಗಿ ಹಾಗೂ ಖಡಕ್ಕಾಗಿ ಸೈದ್ಧಾಂತಿಕ ನಿಲುವನ್ನು ವ್ಯಕ್ತಪಡಿಸುತ್ತಿರುವುದು ಎಂ ಜಿ ಹೆಗಡೆ ಮಾತ್ರನೇ ಅನ್ನುವುದನ್ನು ಅವರ ಕಾರ್ಯವೇ ಎತ್ತಿ ತೋರಿಸುತ್ತದೆ. ಈ ವಿಚಾರವಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅವರು ಪತ್ರಿಕಾಗೋಷ್ಠಿಯನ್ನು ಒಬ್ಬ ಹವ್ಯಕ ಸಮಾದವರಗಿಯಲ್ಲ ಕಾಂಗ್ರೆಸ್ ನಾಯಕರಾಗಿ ಮಾಡಿದ್ದಾರೆ.

ಅದೇನೇ ಇರಲಿ, ಕಾಂಗ್ರೆಸ್ಸಿನ ಒಳಗೆ ಈಗ ಹವ್ಯಕ ಅಕಾಡೆಮಿ ಸ್ಥಾಪನೆಯ ವಿಚಾರವು ಬಹಳಷ್ಟು ಚರ್ಚೆಗೆ ಕಾರಣವಾಗಿದೆ ಅನ್ನುವುದಂತೂ ಸತ್ಯ. ಆದರೆ ಈ ಅಕಾಡೆಮಿಗೆ ಕರ್ತೃ ಯಾರು ಅನ್ನುವುದು ಮಾತ್ರ ಹೊರಗಡೆ ಬರುವ ಲಕ್ಷಣವಿಲ್ಲ. ಪರಿಣಾಮ ಈ ಕ್ರೆಡಿಟ್ ವಾರ್ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ವಾರ್ ನಿಲ್ಲಲು ಅಕಾಡೆಮಿಯು ತನ್ನ ಕಾರ್ಯ ಆರಂಭ ಮಾಡಬೇಕು ಅಷ್ಟೇ. ಅಲ್ಲಿಯವರೆಗೆ ಈ ವಾರ್ ಮುಂದುವರೆಯುತ್ತದೆ. ಭಹುಶಃ ಈ ವಾರ್ನಲ್ಲಿ ವಿಶ್ವೇಶ್ವರ ಭಟ್ಟರು ಒಂದು ಹಂತಕ್ಕೆ ಮಾಧ್ಯಮಗಳ ಸಹಾಯದಿಂದ  ಮೇಲೆ ಇದ್ದಂತೆ ಕಾಣಬಹುದು. ಆದರೆ ಕಾಂಗ್ರೆಸ್ ನ ಪಾಳೆಯಕ್ಕೆ ಅಂದರೆ ಕೋಟೆಯ ಒಳಕ್ಕೆ ಬಂದು ನಿಂತಂತಹ ಲಕ್ಷ್ಮೀಶ್ ದಬಲಡ್ಕ ಪರವಾಗಿ ಕಾಂಗ್ರೆಸ್ಸಿನ ಇತರ ನಾಯಕರು ಬೆನ್ನೆಲುಬಾಗಿ ಹೇಗೆ ನಿಲ್ಲುತ್ತಾರೆ ಅನ್ನುವುದರ ಮೇಲೆ ಉಳಿದದ್ದು  ನಿಂತಿರುತ್ತದೆ ಅನ್ನಬಹುದೇ?

ಒಂದು ಮೂಲದ ಪ್ರಕಾರ, ಸುಮಾರು ಎರಡು ವರ್ಷದ ಹಿಂದೆ ಲಕ್ಷ್ಮೀ ಶ್ ದಬಲಡ್ಕ್ ಚಿಕ್ಕಮಂಗಳೂರಿಗೆ ಹೋಗಿರುತ್ತಾರೆ, ಅಲ್ಲಿ ಸುಧೀರ್ ಮರೊಳಿ ಒಟ್ಟಿಗೆ ಮಾತನಾಡುತ್ತಿರುವಾಗ ರಾಜ್ಯದಲ್ಲಿ ಇರುವ ಸಣ್ಣ ಸಮಾಜವಾದ ಹವ್ಯಕ ಭಾಷೆಯ ಅಭಿವೃದ್ಧಿಗೂ ಒಂದು ಅಕಾಡೆಮಿ ರಚಿಸಬೇಕು. ಯಾಕೆ ರಚಿಸಬಾರದು ಎಂಬ ಪ್ರಶ್ನೆಯನ್ನು ಮರೋಳಿಯವರ ಮುಂದೆ ಇಡುತ್ತಾರೆ. ಆಗ ಮರೋಳಿಯವರು ಖಂಡಿತವಾಗಿಯೂ ಪ್ರಯತ್ನಿಸಿ, ನಾವೆಲ್ಲರೂ ಸಹಕರಿಸುತ್ತೇವೆ ಎಂಬ ಉತ್ತರವನ್ನು ನೀಡುತ್ತಾರೆ. ಅಲ್ಲಿಂದ ದಬಲಡ್ಕ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ನಡೆಸುತ್ತಾರಂತೆ. ಆ ಪ್ರಯತ್ನದಲ್ಲಿ ಸಾಗಿರುವಾಗಲೇ ಒಮ್ಮೆ ಬೆಂಗಳೂರಿನಲ್ಲಿ ಅಚಾನಕ್ಕಾಗಿ ವಿಶ್ವೇಶ್ವರ ಭಟ್ಟರು ಸಿಕ್ಕುತ್ತಾರೆ. ಆಗ ಸ್ವತಃ ದಬಲಡ್ಕ, ವಿಶ್ವೇಶ್ವರ ಭಟ್ಟರಿಗೆ ವಿಚಾರವನ್ನು ತಿಳಿಸುತ್ತಾರೆ ಅದಕ್ಕೆ ಭಟ್ಟರಿಂದ ಶಭಾಷ್ ಗಿರಿಯು  ಸಿಗುತ್ತದೆಯಂತೆ. ಲಕ್ಷ್ಮೀಶ್ ದಬಲಡ್ಕ ರವರ ಆತ್ಮೀಯರ ಪ್ರಕಾರ ಈ ಒಂದು ಕಾರ್ಯದಲ್ಲಿ ಹಲವರ ಸಹಕಾರ ಪಡೆದ ಪರಿಣಾಮ ಇವತ್ತು ಈ ಅಕಾಡೆಮಿ  ರಚನೆಯಾಗಿದೆ. ಆದರೆ ಈಗ, ಯಾರ್ಯಾರೋ ಕ್ರೆಡಿಟ್  ಪಡೆಯಲು ಶ್ರಮಿಸುತ್ತಿದ್ದಾರೆ ಅನ್ನುತ್ತಾರೆ. ಇರಲಿ ಈ ಅಕಾಡೆಮಿಯು ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದರೆ ಈ ಒಂದು ಅಕಾಡೆಮಿಯ ಸ್ಥಾಪನೆಯ ಕ್ರೆಡಿಟ್ ಬಹುಶಃ ಮುಖ್ಯಮಂತ್ರಿಗಳ ಕಿರೀಟಕ್ಕೆ ಹೋಗಬಹುದು.

ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್