📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio

13 ವರ್ಷಗಳ ನಿರೀಕ್ಷೆಯ ಬಳಿಕ… ಮಗನ ನೋವನ್ನು ಮುಗಿಸಲು ತಾಯಿಯ ಪ್ರಾರ್ಥನೆ: ದೇವರಲ್ಲಿ ನಮ್ಮೆಲ್ಲರ ಎಲ್ಲರ ಪ್ರಾರ್ಥನೆಯೂ ಒಂದೇ  —ಈ ನೋವಿನ ಬದುಕಿನಿಂದ ಹರೀಶ್ ಅವರಿಗೆ ಶಾಂತಿ ದೊರಕಲಿ…ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರಕಲಿ. 

ಕೆಲವು ಘಟನೆಗಳು ಸುದ್ದಿ ಮಾತ್ರವಾಗುವುದಿಲ್ಲ… ಅವು ಮಾನವ ಹೃದಯವನ್ನು ನಡುಗಿಸುವ ನಿಜ ಜೀವನದ ಪ್ರಶ್ನೆಗಳಾಗುತ್ತವೆ. ಮುಂದೆ ಓದಿ….

ಮಗನ ಭವಿಷ್ಯಕ್ಕಾಗಿ ಕನಸು ಕಂಡ ಒಂದು ಕುಟುಂಬದ ಜೀವನದಲ್ಲಿ ನಡೆದ ಘಟನೆ ಇಂದು ದೇಶದ ಮನಸ್ಸನ್ನು ತಟ್ಟುತ್ತಿದೆ.

ಹೆತ್ತವರೊಂದಿಗೆ ಕೊನೆ ಕ್ಷಣಗಳು

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಆಗುವ ಕನಸು ಹೊತ್ತಿದ್ದ ಹರೀಶ್ ರಾಣಾ. ಕುಟುಂಬದ ಹೆಮ್ಮೆ, ತಾಯ್ತಂದೆಯ ಆಶೆ, ಸಹೋದರಿಯ ಆತ್ಮೀಯತೆ — ಎಲ್ಲವೂ ಅವನಲ್ಲೇ ನೆಲೆಸಿದ್ದವು. ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ಜೀವನವು 2013ರ ಆಗಸ್ಟ್ ತಿಂಗಳಲ್ಲಿ, ರಕ್ಷಾಬಂಧನ್ ದಿನದಂದು ಒಂದು ಕ್ಷಣದಲ್ಲಿ ಸಂಪೂರ್ಣವಾಗಿ ಬದಲಾಗಿತು.

ಆ ದಿನ ಅವನು ತನ್ನ ಸಹೋದರಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಅಕ್ಕನ ಜೊತೆಗಿನ ಆ ಪ್ರೀತಿಯ ಮಾತುಕತೆ ಅವನ ಜೀವನದ ಕೊನೆಯ ಜಾಗೃತ ಕ್ಷಣವಾಗಿಬಿಡುತ್ತದೆ ಎಂದು ಯಾರಿಗೂ ಊಹಿಸಲೂ ಸಾಧ್ಯವಾಗಿರಲಿಲ್ಲ. ಮಾತುಕತೆ ನಡೆಯುತ್ತಿದ್ದಾಗಲೇ ಅವನು ಪಿಜಿ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದನು.

ಆ ಕ್ಷಣದಿಂದ ಹರೀಶ್ ಮತ್ತೆ ಎದ್ದೇ ಇಲ್ಲ.

ಅವನ ದೇಹ ಬದುಕಿತ್ತು… ಆದರೆ ಅವನ ಜಗತ್ತು ನಿಶ್ಚಲವಾಗಿತ್ತು. ವೈದ್ಯಕೀಯ ಪೋಷಣೆಯ ನೆರವಿನಿಂದ ಜೀವ ಸಾಗುತ್ತಿತ್ತು. ಆದರೆ ವೈದ್ಯರು ನೀಡಿದ ಆಶೆಯ ಬೆಳಕು ವರ್ಷಗಳಿಂದ ಕಾಣಿಸಲೇ ಇಲ್ಲ. ದಿನಗಳು ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು… ಹೀಗೆ 13 ವರ್ಷಗಳು ಕಳೆಯಿತು.

ಈ ಅವಧಿಯಲ್ಲಿ ತಾಯ್ತಂದೆಗಳು ಮಗನನ್ನು ಒಮ್ಮೆಯಾದರೂ ಕಣ್ಣು ತೆರೆದು ನೋಡಬಹುದು ಎಂಬ ಆಶೆಯನ್ನು ಬಿಟ್ಟಿರಲಿಲ್ಲ. ಮಗನ ಕೈ ಹಿಡಿದು ಕಾದು ಕುಳಿತರು. ಪ್ರತಿದಿನವೂ ದೇವರ ಬಳಿ ಒಂದೇ ಪ್ರಾರ್ಥನೆ — “ನಮ್ಮ ಮಗ ಮತ್ತೆ ಎದ್ದುಕೊಳ್ಳಲಿ”.

ಆದರೆ ಕಾಲ ಕಠಿಣವಾಗಿತ್ತು.

ಒಂದು ದಿನ ಆ ಪ್ರಾರ್ಥನೆ ಬದಲಾಗಿತು.

“ಓ ದೇವರೆ… ನನ್ನ ಮಗನಿಗೆ ದೀರ್ಘಾಯುಷ್ಯ ಬೇಡ… ಈ ನೋವಿನ ಬದುಕಿನಿಂದ ಅವನನ್ನು ಮುಕ್ತಗೊಳಿಸು.”

ತಾಯಿಯ ಬಾಯಿಂದ ಹೊರಬಂದ ಈ ಮಾತುಗಳು ಎಷ್ಟು ನೋವಿನಿಂದ ಹುಟ್ಟಿದವು ಎಂಬುದನ್ನು ಊಹಿಸುವುದೇ ಕಷ್ಟ. ತನ್ನ ಹೃದಯದ ತುಂಡಿಗಾಗಿ ಮರಣವನ್ನು ಕೇಳುವುದು — ಅದು ಯಾವುದೇ ತಾಯಿಗೆ ಅತಿ ದೊಡ್ಡ ಪರೀಕ್ಷೆ.

ಹರೀಶ್ ಈಗ 32 ವರ್ಷ. 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ ಅವನ ಜೀವನದ ಬಗ್ಗೆ ಕೊನೆಗೂ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ತಾಯ್ತಂದೆಯ ಮನವಿ ಆಧರಿಸಿ, ನ್ಯಾಯಾಲಯವು ಪ್ಯಾಸಿವ್ ಯೂಥನೇಷಿಯಾ (Passive Euthanasia) ಗೆ ಅನುಮತಿ ನೀಡಿತು.

ಈ ತೀರ್ಪು ಕೇವಲ ಕಾನೂನು ನಿರ್ಧಾರವಲ್ಲ… ಅದು ಒಂದು ಕುಟುಂಬದ ನೋವಿನ ಗುರುತಿಸುವಿಕೆ.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತು — ಹರೀಶ್‌ನ ತಾಯ್ತಂದೆಗಳು ತಮ್ಮ ಮಗನನ್ನು ಎಂದಿಗೂ ಬಿಟ್ಟುಹೋಗಲಿಲ್ಲ. ಪ್ರೀತಿಯ ಅರ್ಥ ಸುಖದ ಸಮಯದಲ್ಲಿ ಮಾತ್ರ ಅಲ್ಲ, ಅತ್ಯಂತ ಕಠಿಣ ಕ್ಷಣಗಳಲ್ಲಿ ಸಹ ಆರೈಕೆ ಮಾಡುವುದು.

13 ವರ್ಷಗಳ ಕಾಲ ಅವರು ಮಗನ ಬಳಿಯೇ ನಿಂತಿದ್ದರು.

ತಾಯ್ತಂದೆಗಳು ಕಣ್ಣೀರಿನಿಂದ ಕೇಳಿದರು — “ಯಾವ ತಾಯ್ತಂದೆ ತಮ್ಮ ಮಗನಿಗಾಗಿ ಇದನ್ನು ಬಯಸುತ್ತಾರೆ?”

ಆದರೆ ಪ್ರತಿದಿನ ಮಗನ ನೋವನ್ನು ನೋಡುವುದು ಅವರಿಗೆ ಇನ್ನೂ ಕಠಿಣವಾಗಿತ್ತು.

ಈ ಕುಟುಂಬವು ಆಧ್ಯಾತ್ಮಿಕ ಸಂಸ್ಥೆ ಬ್ರಹ್ಮಕುಮಾರಿಗಳೊಂದಿಗೆ ಸಂಬಂಧ ಹೊಂದಿದೆ. ಇಂದು ಬ್ರಹ್ಮಕುಮಾರಿ ಶಿಕ್ಷಕಿ ಲವ್ಲಿ ದೀದಿ ಹರೀಶ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ಏಮ್ಸ್ ಆಸ್ಪತ್ರೆಗೆ ಕಳುಹಿಸುವ ಸಂದರ್ಭದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು.

ಆ ಕ್ಷಣ ಮನೆ ತುಂಬಾ ನಿಶ್ಶಬ್ದವಾಗಿತ್ತು.

ತಾಯಿ ಮಗನ ಕೈ ಹಿಡಿದಿದ್ದಳು. ತಂದೆಯ ಕಣ್ಣುಗಳಲ್ಲಿ ಮಾತಿಲ್ಲದ ನೋವು. ಮನೆಯ ಪ್ರತಿಯೊಂದು ಗೋಡೆಯೂ ಈ ಕುಟುಂಬದ 13 ವರ್ಷಗಳ ಹೋರಾಟಕ್ಕೆ ಸಾಕ್ಷಿಯಾಗಿತ್ತು.

ಒಂದು ಕುಟುಂಬದ ಕನಸುಗಳು… ಒಂದು ಅಕ್ಕನ ರಕ್ಷಾಬಂಧನ್ ಮಾತುಗಳು… ಒಂದು ತಾಯಿಯ ಪ್ರಾರ್ಥನೆ… ಮತ್ತು 13 ವರ್ಷಗಳ ನಿರೀಕ್ಷೆ.

ಹರೀಶ್ ರಾಣಾ ಕಥೆ ಕೇವಲ ಒಂದು ಘಟನೆ ಅಲ್ಲ. ಅದು ಪ್ರೀತಿ, ಸಹನೆ, ನೋವು ಮತ್ತು ತಾಯ್ತಂದೆಯ ಅಸಾಧಾರಣ ತ್ಯಾಗದ ಕಥೆ.

#Godsblessing#Ishwari brahmakumaris#judgement#miracle#peace#soul#supreme court

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಸಚಿವ ಜಮೀರ್ ಕಥೆ ಗೋವಿಂದ!!!?
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್