📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..

ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಎಚ್ಚರಿಕೆ

ಬೆಳ್ಳಾರೆ/ಸವಣೂರು:
ಸಾಮಾನ್ಯವಾಗಿ ಸ್ನೇಹ ಮತ್ತು ನಂಬಿಕೆಯಿಂದ ಆರಂಭವಾಗುವ ಹಣಕಾಸಿನ ವ್ಯವಹಾರಗಳು ಕೆಲವೊಮ್ಮೆ ಭಯಾನಕ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಅದಕ್ಕೆ ಸರಿಯಾಗಿ ಮಾರುಕಟ್ಟೆಯು ವ್ಯವಹಾರಗಳಿಲ್ಲದೆ ವಿಪರೀತ ಆರ್ಥಿಕ ನಷ್ಟ ಉಂಟಾಗಿ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಗಳಂತಹ ನಿರ್ಧಾರಗಳಿಗೆ ಬಲಿಯಾಗ್ತಿರೋ ಆರ್ಥಿಕ ಪರಿಸ್ಥಿತಿ ನಡುವೆ ಪೂರಕವಾಗಿ ಸವಣೂರು ಪೇಟೆಯಲ್ಲಿ ನಡೆದ ಹಲ್ಲೆ ಪ್ರಕರಣ ಗಮನ ಸೆಳೆದಿದೆ.

ಕೇವಲ ₹50 ಸಾವಿರ ಸಾಲದ ವಿಚಾರವಾಗಿ ಉಂಟಾದ ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ಹಿಂಸೆಗೆ ತಿರುಗಿ, ಸಾರ್ವಜನಿಕರ ಮುಂದೆ ರಕ್ತಸಿಕ್ತ ಘಟನೆಯಾಗಿ ಪರಿಣಮಿಸಿದೆ.

ಕುದ್ಮಾರು ಅಂಚೆ ಕಡಬ ನಿವಾಸಿಯಾದ ಮೋನಪ್ಪ ಗೌಡ (32) ಎಂಬವರು ಮೊಟ್ಟೆ ಲೈನ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದು, ಸುಮಾರು ಒಂದು ವರ್ಷಗಳ ಹಿಂದೆ ತಮ್ಮ ಪರಿಚಯದ ಮೋಕ್ಷಿತ್ ಇಡ್ಯಾಡಿ ಎಂಬವರಿಗೆ ₹50,000 ಸಾಲವಾಗಿ ನೀಡಿದ್ದರು. ಆದರೆ ದೀರ್ಘಕಾಲವಾದರೂ ಹಣ ಮರಳಿ ಸಿಗದ ಹಿನ್ನೆಲೆಯಲ್ಲಿ ಮೋನಪ್ಪ ಗೌಡರು ಹಲವಾರು ಬಾರಿ ಕೇಳಿದ್ದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಘಟನೆ ಹೇಗೆ ನಡೆದಿದೆ?

07 ಮಾರ್ಚ್ 2026ರಂದು ಸಂಜೆ ತಮ್ಮ ವ್ಯಾಪಾರದ ಕೆಲಸಕ್ಕಾಗಿ ಸವಣೂರು ಪೇಟೆಗೆ ಬಂದಿದ್ದ ಮೋನಪ್ಪ ಗೌಡರು, ಅಲ್ಲಿನ ಬಾಬು ಬೇಕರಿಅಂಗಡಿಯಲ್ಲಿ ಮೋಕ್ಷಿತ್ ಇರುವುದನ್ನು ಕಂಡು ನೇರವಾಗಿ ಅಂಗಡಿಗೆ ತೆರಳಿ ಹಣವನ್ನು ವಾಪಾಸು ನೀಡುವಂತೆ ಕೇಳಿದ್ದಾರೆ.

ಆದರೆ ಮಾತಿನ ಚಕಮಕಿ ತೀವ್ರಗೊಂಡಿದ್ದು, ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ತಿಳಿದುಬಂದಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಮೋನಪ್ಪ ಗೌಡರು ಅಲ್ಲಿಂದ ಹೊರಟು ತಮ್ಮ ವಾಹನದ ಬಳಿ ಹೋಗಿ ಕುಳಿತುಕೊಳ್ಳಲು ಯತ್ನಿಸಿದ ವೇಳೆ, ಮೋಕ್ಷಿತ್ ಮತ್ತು ಅವನ ತಮ್ಮ ರಂಜಿತ್ ಹಿಂಬದಿಯಿಂದ ಬಂದು ಮರದ ದೊಣ್ಣೆಯಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮೋನಪ್ಪ ಗೌಡರ ಅಣ್ಣ ನಾರಾಯಣ ಗೌಡ ಮಧ್ಯಪ್ರವೇಶಿಸಲು ಬಂದಾಗ, ರಂಜಿತ್ ಅವರನ್ನು ಎಳೆದಾಡಿ ತಳ್ಳಾಟ ನಡೆಸಿದ್ದಾನೆ ಎನ್ನಲಾಗಿದೆ. ಅಷ್ಟರಲ್ಲಿ ಸ್ಥಳಕ್ಕೆ ಸಾರ್ವಜನಿಕರು ಸೇರುವುದನ್ನು ಕಂಡ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಪ್ರಕರಣ ದಾಖಲು

ಈ ಘಟನೆ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 20/2026 ದಾಖಲಾಗಿ, ಕಲಂ 352, 118(1) ಜೊತೆಗೆ 3(5) BNS-2023 ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿವಾದಗಳು ಮತ್ತು ವೈಯಕ್ತಿಕ ಅಹಂಕಾರದಿಂದ ಸಣ್ಣ ವಿಷಯಗಳೂ ಹಿಂಸೆಗೆ ತಿರುಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಈ ಘಟನೆ ಕೆಲವು ಕಠಿಣ ಪ್ರಶ್ನೆಗಳನ್ನು ಎತ್ತಿದೆ,ಹಣದ ವ್ಯವಹಾರಗಳಲ್ಲಿ ನಂಬಿಕೆ ಕುಸಿಯುತ್ತಿದೆಯೇ?ಮಾತಿನ ಜಗಳಗಳು ಏಕೆ ಕ್ಷಣಾರ್ಧದಲ್ಲಿ ಹಿಂಸೆಗೆ ತಿರುಗುತ್ತಿವೆ?ಸಾರ್ವಜನಿಕ ಸ್ಥಳಗಳಲ್ಲೇ ಹಲ್ಲೆಗಳು ನಡೆಯುವುದು ಕಾನೂನು ಭಯ ಕಡಿಮೆಯಾಗಿದೆ ಎನ್ನುವುದೇ?

ಈ ರೀತಿಯ ಘಟನೆಗಳು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಪೇಟೆ ಪ್ರದೇಶಗಳಲ್ಲೇ ಹಲ್ಲೆಗಳು ನಡೆದರೆ ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ವ್ಯಾಪಾರಿಗಳ ನಡುವೆ ನಂಬಿಕೆ ಕಡಿಮೆಯಾಗುವುದು,ಸಾಲ ಮತ್ತು ವ್ಯವಹಾರ ಸಂಬಂಧಗಳಲ್ಲಿ ಅನುಮಾನಗಳು ಹೆಚ್ಚಾಗುತ್ತವೆ.ಸಮಸ್ಯೆಗಳನ್ನು ಸಂಭಾಷಣೆ ಅಥವಾ ಕಾನೂನು ಮೂಲಕ ಬಗೆಹರಿಸುವ ಬದಲು ಶಕ್ತಿಯ ಮೂಲಕ ಬಗೆಹರಿಸಲು ಯತ್ನಿಸುವ ಪ್ರವೃತ್ತಿ ಹೆಚ್ಚಬಹುದು.

ಹಣಕಾಸಿನ ವ್ಯವಹಾರಗಳಲ್ಲಿ ಬರವಣಿಗೆಯ ದಾಖಲೆ ಮತ್ತು ಕಾನೂನುಬದ್ಧ ಒಪ್ಪಂದಗಳು ಅಗತ್ಯ. ಸಮಸ್ಯೆಗಳು ಉಂಟಾದರೆ ಪೊಲೀಸ್ ಅಥವಾ ನ್ಯಾಯಾಂಗ ಮಾರ್ಗವನ್ನು ಅನುಸರಿಸುವುದು ಸಮಾಜದ ಶಾಂತಿಯನ್ನು ಉಳಿಸಲು ಮುಖ್ಯ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಸಾರ್ವಜನಿಕರಲ್ಲಿ ವಿನಂತಿ …!
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….