📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ

ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಜೀವನ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪ್ರತಿ ತಿಂಗಳು ₹50 ಸಾವಿರ ಮಾಸಾಶನ, ಉಚಿತ ವಸತಿ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ₹5 ಲಕ್ಷ ಹಣಕಾಸು ನೆರವು ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಸದಸ್ಯರು ಆಸಿಡ್ ದಾಳಿಗೊಳಗಾದ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಚಿವರು ಈ ಭರವಸೆ ನೀಡಿದರು.

ಪ್ರಸ್ತುತ ₹10 ಸಾವಿರ ಮಾತ್ರ ಪಿಂಚಣಿ

ಸಚಿವರು ನೀಡಿದ ಮಾಹಿತಿಯ ಪ್ರಕಾರ, 2022ರ ಏಪ್ರಿಲ್ 11ರಂದು ಹೊರಡಿಸಿದ ಸರ್ಕಾರದ ಆದೇಶದಂತೆ ಸದ್ಯ ರಾಜ್ಯದಲ್ಲಿ 59 ಆಸಿಡ್ ಸಂತ್ರಸ್ತರಿಗೆ ಪ್ರತಿ ತಿಂಗಳು ₹10 ಸಾವಿರ ಪಿಂಚಣಿ ನೀಡಲಾಗುತ್ತಿದೆ.

ಆದರೆ ರಾಜ್ಯದಲ್ಲಿ ಒಟ್ಟು 169 ಆಸಿಡ್ ದಾಳಿ ಸಂತ್ರಸ್ತರು ಗುರುತಿಸಲ್ಪಟ್ಟಿದ್ದಾರೆ. ಈ ಎಲ್ಲರಿಗೂ ನೆರವು ವಿಸ್ತರಿಸುವ ಕುರಿತು ಸರ್ಕಾರ ಚರ್ಚೆ ನಡೆಸಲಿದೆ ಎಂದು ಸಚಿವರು ಹೇಳಿದರು.

“ಮಾಸಾಶನವನ್ನು ₹50 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಹಾಗೂ ಎಲ್ಲಾ 169 ಸಂತ್ರಸ್ತರಿಗೂ ನೀಡುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು,” ಎಂದು ಡಾ. ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಭಾವುಕ ಚರ್ಚೆ

ಪರಿಷತ್ ಸದಸ್ಯ ಕೆ. ಶಿವಕುಮಾರ್ ನಿಯಮ 72ರಡಿ ವಿಷಯವನ್ನು ಮುಂದಿಟ್ಟು ಆಸಿಡ್ ದಾಳಿಗೊಳಗಾದ ಮಹಿಳೆಯರ ಸಂಕಷ್ಟಗಳನ್ನು ವಿವರಿಸಿದರು. ಇದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಸಹ ಧ್ವನಿಗೂಡಿಸಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರು ಮುಖ್ಯವಾಗಿ ಈ ಸಮಸ್ಯೆಗಳನ್ನು ಉಲ್ಲೇಖಿಸಿದರು:

ಸಂತ್ರಸ್ತರಿಗೆ ಸರಿಯಾದ ಪರಿಹಾರ ಮತ್ತು ಮಾಸಾಶನ ಸಿಗುತ್ತಿಲ್ಲ

ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಯಾಸಿಡ್ ದಾಳಿ ನಡೆಸಿರುವ ಆರೋಪಿಗಳಿಗೆ ಶಿಕ್ಷೆ ಆಗುವುದು ವಿರಳವಾಗಿದೆ ಎಂಬ ವಿಚಾರ ಗಂಭೀರವಾಗಿ ಚರ್ಚೆಗೆ ಬಂತು

ಸರ್ಕಾರ ಭರವಸೆ ನೀಡಿದರೂ ಇಲ್ಲಿಯವರೆಗೆ ಮನೆ ನೀಡಿಲ್ಲ

ವಸತಿ ಹಾಗೂ ಸ್ವಯಂ ಉದ್ಯೋಗಕ್ಕೆ ನೆರವು…ಸಂತ್ರಸ್ತರ ಪುನರ್ವಸತಿ ಉದ್ದೇಶದಿಂದ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಸಂತ್ರಸ್ತರ ವಾಸಸ್ಥಳಗಳಲ್ಲೇ ವಸತಿ ಸೌಲಭ್ಯ ಕಲ್ಪಿಸುವುದು

ಸ್ವಯಂ ಉದ್ಯೋಗಕ್ಕಾಗಿ ₹5 ಲಕ್ಷ ನೆರವು ನೀಡುವುದು

ಈಗಿರುವ ನೆರವಿನ ಮಾನದಂಡಗಳನ್ನು ಸರಳೀಕರಿಸುವುದು  ಆಸಿಡ್ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ  ಆಸಿಡ್ ದಾಳಿ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆಸಿಡ್ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಿಶೇಷ ತ್ವರಿತ ನ್ಯಾಯಾಲಯಗಳ ಸ್ಥಾಪನೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಆಸಿಡ್ ದಾಳಿ ಪ್ರಕರಣಗಳ ಶೀಘ್ರ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು (ಫಾಸ್ಟ್ ಟ್ರ್ಯಾಕ್ ಕೋರ್ಟ್) ಸ್ಥಾಪಿಸಲಾಗುವುದು ಎಂದು ಹೇಳಿದರು.

ಹೆಚ್ಚುವರಿ ನೆರವು

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹2 ಲಕ್ಷವರೆಗೆ ನೆರವು ನೀಡಲಾಗುವುದು ಎಂದು ಘೋಷಿಸಿದರು

COMMENTS

Login with Gmail to comment

ಇನ್ನಷ್ಟು ಸುದ್ದಿ

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ಸಾರ್ವಜನಿಕರಲ್ಲಿ ವಿನಂತಿ …!
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ