📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ

    ಉಡುಪಿ: ಜಿಲ್ಲಾ ಆಸ್ಪತ್ರೆಯ ಆಡಳಿತದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ತಾರತಮ್ಯದ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಬ್ಲಡ್ ಬ್ಯಾಂಕ್ ಅಧಿಕಾರಿ ವೀಣಾ ದೇವಿ ಅವರ ವಿರುದ್ಧ ಜಿಲ್ಲಾ ಶಸ್ತ್ರಚಿಕಿತ್ಸಕರು ವಿನಾಕಾರಣ ನೋಟಿಸ್ ನೀಡಿ ಅನಗತ್ಯವಾಗಿ ಸಿಲುಕಿಸುವ ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಆದರೆ ಇದೇ ವೇಳೆ ಮೂಳೆ ರೋಗ ತಜ್ಞರಾದ ಡಾ. ಸಾಗರ್ ಅವರ ವಿರುದ್ಧ ಬಂದ ಗಂಭೀರ ದೂರುಗಳನ್ನು ಮುಚ್ಚಿ ಹಾಕಲಾಗುತ್ತಿದೆ ಎಂಬುದು ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ತಾರತಮ್ಯದ ಆರೋಪ
    ವೀಣಾ ದೇವಿ ಅವರಿಗೆ ನೋಟಿಸ್ ನೀಡಲಾಗಿದ್ದರೆ, ಅದೇ ರೀತಿಯ ಗಂಭೀರ ದೂರು ಬಂದಿದ್ದರೂ ಡಾ. ಸಾಗರ್ ಅವರಿಗೆ ಯಾವುದೇ ವಿವರಣೆ ಕೇಳದೆ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

    ವಿದ್ಯಾರ್ಥಿಗಳಿಂದ ಶಸ್ತ್ರಚಿಕಿತ್ಸೆ, ದೂರು

    Also Read  “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!

    ಡಾ. ಸಾಗರ್ ಅವರ ಮೇಲ್ವಿಚಾರಣೆಯಲ್ಲಿ ಕಲಿಯುವ ವಿದ್ಯಾರ್ಥಿಗಳೇ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಎಂದು ರೋಗಿಯೊಬ್ಬರು ನೇರ ದೂರು ನೀಡಿದ್ದರು. ಆದರೆ ಈ ಕುರಿತು ಯಾವುದೇ ತನಿಖೆ ನಡೆದಿಲ್ಲ ಎನ್ನಲಾಗಿದೆ. ಈ ದೂರು ನೀಡಿದ ರೋಗಿಯನ್ನೇ “ಮಾನಸಿಕ ರೋಗಿ” ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ವಿಡಿಯೋದಲ್ಲಿ ಹೇಳಿಕೆ ನೀಡಿ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪವೂ ಇದೆ.

    • ಖಾಸಗಿ ಆಸ್ಪತ್ರೆಗೆ ರೆಫರ್: ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ಆಯುಷ್ಮಾನ್ ಯೋಜನೆಯ ಹೆಸರಿನಲ್ಲಿ ಕಮಿಷನ್ ಆಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ.
    • ಹಾಜರಾತಿ ನಿಯಮ ಉಲ್ಲಂಘನೆ: ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದಿರುವುದು ಮತ್ತು ಬಯೋಮೆಟ್ರಿಕ್ ಹಾಜರಾತಿ ಹಾಕದಿರುವುದು.
      ಖರೀದಿಯಲ್ಲಿ ಅವ್ಯವಹಾರ: ಮೂಳೆ ಶಸ್ತ್ರಚಿಕಿತ್ಸೆಯ ವೇಳೆ ಬಳಸುವ implant ಖರೀದಿಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎಂದು ಸಿಬ್ಬಂದಿ ವಲಯದಲ್ಲಿ ಚರ್ಚೆಯಾಗುತ್ತಿದೆ.
      ಸಾರ್ವಜನಿಕರ ಪ್ರಶ್ನೆ:
      ಮೂಳೆ ಶಸ್ತ್ರಚಿಕಿತ್ಸೆಯ ದೊಡ್ಡ ಹಗರಣ ಮತ್ತು ಸಾರ್ವಜನಿಕ ಆಕ್ರೋಶದಿಂದ ಗಮನ ಬೇರೆಡೆಗೆ ತಿರುಗಿಸಲು ಈಗ ವೀಣಾ ದೇವಿ ಅವರ ವಿರುದ್ಧ ಸುಳ್ಳು ನಾಟಕವಾಡಲಾಗುತ್ತಿದೆಯೇ? ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಿ, ತಪ್ಪಿತಸ್ಥರನ್ನು ರಕ್ಷಿಸುವ ಇಂತಹ ದ್ವಿಮುಖ ನೀತಿಯನ್ನು ಖಂಡಿಸಬೇಕಿದೆ.
    Also Read  “ಸೌಜನ್ಯಾ ಕೇಸ್ ಮತ್ತೆ ಓಪನ್!”14 ವರ್ಷಗಳ ಬಳಿಕ ಸೌಜನ್ಯಾ ಪ್ರಕರಣಕ್ಕೆ ಮತ್ತೆ ಮರುಜೀವ!ಸುಪ್ರೀಂ ‘ರೀ-ಸ್ಟಾರ್ಟ್’!

    ಈ ಎಲ್ಲಾ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರಪೇಕ್ಷ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಉಡುಪಿ ಜಿಲ್ಲಾ ಸರ್ಜನ್ ಬಗ್ಗೆ ಸಾರ್ವಜನಿಕರಲ್ಲಿ ಏಕೆ ಹೆಚ್ಚುತ್ತಿದೆ ಅನುಮಾನ?ಉಡುಪಿ ಜಿಲ್ಲಾ ಸರ್ಜನ್ ಅಶೋಕ್ ಕುಮಾರ್ ಸುತ್ತ ರಾಜಕೀಯ, ವರ್ಗಾವಣೆ ಮತ್ತು ಪ್ರಶ್ನೆಗಳ ಸುಳಿಗಾಳಿ!

    ಉಡುಪಿ ಅಶೋಕ್ ಅವರನ್ನು ಅವರ ಹುಟ್ಟಿದ ಸಮಾಜದ ಕಾರಣಕ್ಕಾಗಿ ಸಹಿಸಿಕೊಳ್ಳಲಾಗುತ್ತಿದೆಯಾ ಎಂಬ ಸಂಶಯವಿದೆ. ಪಕ್ಷ ಭೇದ ಮರೆತು ಆ ಸಮಾಜದ ಮುಖಂಡರು ಈ ವ್ಯಕ್ತಿಯ ಜೊತೆಗೆ ಅನ್ಯೋನ್ಯತೆಯಿಂದ ಇದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ತೀರಾ ಇತ್ತೀಚೆಗೆ ಈ ವ್ಯಕ್ತಿಗೆ ಆಡಳಿತ ಪಕ್ಷದ ಉಡುಪಿ ಬ್ಲಾಕ್ ನಿಂದ ಸನ್ಮಾನ ಬೇರೆ ಆಗಿದೆ ಅನ್ನುವುದು ಸಾರ್ವಜನಿಕರ ಬೇಗುದಿಯಾಗಿದೆ.

    Also Read  14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ

    ನಿಜ ಹೇಳಬೇಕು ಎಂದರೆ ಜಿಲ್ಲಾ ಸರ್ಜನ್ ಅಶೋಕ್ ಕುಮಾರ್ ಗೆ ಇಲ್ಲಿಂದ ವರ್ಗಾವಣೆಯಾಗಿತ್ತು .ಆದರೆ ಇಲ್ಲಿಂದ ಹೋಗಲು ಸುತಾರಾಂ ಒಪ್ಪುತ್ತಿಲ್ಲವಂತೆ ಎಲ್ಲೆಲ್ಲಿ ಯಾರ್ಯಾರನ್ನಾದರೂ ಹಿಡಿದು ಮತ್ತೆ ವಾಪಸ್ ಬಂದು ಇಲ್ಲಿಯೇ ಕೂರುತ್ತಾನೆ ಅನ್ನೋದು ಸಾರ್ವಜನಿಕವಾಗಿ ಹರಡಿಕೊಂಡಿರುವ ಸುದ್ದಿ. ಆ ಸುದ್ದಿ ನಿಜವೇ ಆಗಿರಬಹುದು ಅನ್ನುತ್ತದೆ ಅವರ ಇಲ್ಲಿನ ಜಂಡಾ ಸ್ಟೋರಿ..!

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು
    14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್….!!!!!!ಸುಪ್ರೀಂ ಕೋರ್ಟ್‌ಗೆ ಶಾಕಿಂಗ್ ವರದಿ!
    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
    ಏನಿದು ‘ಲಾಸ್ಟ್ ಲೈವ್’ ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ವಿದ್ಯಾರ್ಥಿಗಳಿದ್ದ ಎಮ್ಮೆಕೆರೆ ಲಕ್ಷ್ಮಿ ನಾರಾಯಣ ಹಾಲ್ ಬಾಲ್ಕನಿ ಏಕಾಏಕಿ ಕುಸಿದು ಬಿದ್ದು ಹಲವರಿಗೆ ಗಂಭೀರ ಗಾಯ ..! ಓರ್ವ‌ ವಿದ್ಯಾರ್ಥಿಯ ಬ್ರೈನ್ ಡೆಡ್…
    ತನ್ನ ಹಾಗೂ ನಾದಿನಿಯ ಮೂರುವರೇ ವರ್ಷದ ಮಕ್ಕಳನ್ನು ಬಾವಿಗೆ ಎಸೆದ ತಾಯಿ…!
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
    ಗೃಹ ಜ್ಯೋತಿ ….ಯೋಜನೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವಲ್ಲ; ಮೆಸ್ಕಾಂ ವ್ಯಾಪ್ತಿಯಲ್ಲೂ ಆಗಸ್ಟ್ ಅಂತ್ಯದವರೆಗೆ ಸರ್ವೇ ಮುಂದುವರಿಕೆ
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು
    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ