📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?

ಕರ್ನಾಟಕದ ಮಣ್ಣಿನಲ್ಲಿ ನಿಂತು, ಕನ್ನಡದ ಅನ್ನ ಉಣ್ಣುತ್ತಾ, ಕನ್ನಡದ ಗಾಳಿಯನ್ನು ಉಸಿರಾಡುತ್ತಾ, ಕರ್ನಾಟಕದ ಮಂತ್ರಿಯಾಗಿ ಮೆರೆಯುತ್ತಾ, ಅಧಿಕಾರದ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು “ಕಾಲೇಜು ಕ್ಯಾಂಪಸ್‌ನಲ್ಲಿ ಕನ್ನಡ ಮಾತನಾಡಬೇಡಿ” ಎನ್ನುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಅವರ ಈ ಇತ್ತೀಚಿನ ಹೇಳಿಕೆ ಕೇವಲ ಒಂದು ಸೂಚನೆಯಲ್ಲ, ಇದು ಆರು ಕೋಟಿ ಕನ್ನಡಿಗರ ಅಸ್ಮಿತೆಗೆ ಬಗೆದ ದ್ರೋಹ.
ಇವರು ಯಾರ ಪ್ರತಿನಿಧಿ?
ಸಚಿವರ ಈ ಹೇಳಿಕೆಯನ್ನು ಕೇಳಿದರೆ ಒಂದು ಅನುಮಾನ ಕಾಡುತ್ತದೆ—”ಇವರು ಕರ್ನಾಟಕದ ಮಂತ್ರಿಯೋ, ಅಥವಾ ವಿದೇಶದ ಯಾವುದೋ ಜನಪ್ರತಿನಿಧಿಯೋ ಅಥವಾ ರಾಜ್ಯಪಾಲನೋ? ಕರ್ನಾಟಕದ ನೆಲದಲ್ಲಿ ಕನ್ನಡ ಬೇಡ ಎನ್ನುವ ಇವರಿಗೆ ಇಲ್ಲಿನ ಭಾಷೆ, ಸೊಗಡು ಮತ್ತು ಸಂಸ್ಕೃತಿಯ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಂತಿದೆ. ಬ್ರಿಟಿಷರು ಹೋದರೂ ಇವರಂತಹವರಲ್ಲಿ ಇನ್ನೂ ಆ ‘ಗುಲಾಮಿ ಮಾನಸಿಕತೆ’ ಜೀವಂತವಾಗಿದೆ ಎಂಬುದು ಈ ಹೇಳಿಕೆಯಿಂದ ಸಾಬೀತಾಗಿದೆ.
ಕನ್ನಡ ಇಲ್ಲದಿದ್ದರೆ ಕರ್ನಾಟಕ ರಾಜ್ಯವೇಕೆ?
ಸಚಿವರಿಗೆ ಒಂದು ನೇರ ಪ್ರಶ್ನೆ “ಈ ನೆಲದಲ್ಲಿ ಕನ್ನಡವೇ ಇಲ್ಲ ಎಂದಮೇಲೆ ಕರ್ನಾಟಕ ಎಂಬ ರಾಜ್ಯವೇಕೆ ಇರಬೇಕು?” ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳು ವಿಂಗಡಣೆಯಾದ ಇತಿಹಾಸ ಸಚಿವರಿಗೆ ತಿಳಿದಿಲ್ಲವೇ? ಈ ರಾಜ್ಯದ ಅಸ್ತಿತ್ವವೇ ಕನ್ನಡದ ಮೇಲಿದೆ. ಅಂತಹದರಲ್ಲಿ ಶಿಕ್ಷಣ ಸಂಸ್ಥೆಗಳಿಂದ ಕನ್ನಡವನ್ನು ಹೊರದಬ್ಬುವುದು ಎಂದರೆ ಕರ್ನಾಟಕದ ಆತ್ಮವನ್ನೇ ಕೊಂದಂತೆ ಆಗುವುದಿಲ್ಲವೇ?
ಯಾರ ಖುಷಿಗಾಗಿ ಈ ಹೇಳಿಕೆ?
ಸಚಿವರು ಈ ಉದ್ಧಟತನದ ಹೇಳಿಕೆಯನ್ನು ಯಾರ ಪ್ರೀತಿ ಗಳಿಸಲು ನೀಡಿದ್ದಾರೆ? ಬಂಡವಾಳಶಾಹಿಗಳ ಲಾಭಕ್ಕಾಗಿ ಅಥವಾ ಪರಭಾಷಿಕ ಉದ್ಯಮಿಗಳ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಶಿಕ್ಷಣ ಇಂದು ಉದ್ಯಮಿಗಳ ಪಾಲಿಗೆ ಲಾಭದಾಯಕ “ಮಾರಾಟದ ವಸ್ತು”ವಾಗಿ ಮಾರ್ಪಟ್ಟಿದೆ. ಅಂತಹ ಉದ್ಯಮಿಗಳ ಹಿತ ಕಾಯಲು ಹೋಗಿ, ನಮ್ಮ ನಾಡಿನ ಸಂಸ್ಕೃತಿಯನ್ನು ಬಲಿ ಕೊಡುತ್ತಿರುವ ಸಚಿವರು ಕನ್ನಡಕ್ಕೆ ದೊಡ್ಡ ಆಪತ್ತಾಗಿ ಪರಿಣಮಿಸಿದ್ದಾರೆ. ಶಿಕ್ಷಣದ ವ್ಯಾಪಾರೀಕರಣ ಮತ್ತು ಕನ್ನಡದ ಅಸ್ತಿತ್ವ ಪ್ರತಿ ಮಗುವಿನ ಮೂಲಭೂತ ಹಕ್ಕಾಗಬೇಕಿದ್ದ ಶಿಕ್ಷಣವನ್ನು ಇಂದು ದಂಧೆಯನ್ನಾಗಿ ಮಾಡಿಕೊಂಡಿರುವ ಶಿಕ್ಷಣ ಮಾಫಿಯಾದ ಹಿತ ಕಾಯಲು ಸರ್ಕಾರ ನಿಂತಂತಿದೆ.
ಖಾಸಗಿ ಕಾಲೇಜುಗಳಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತೆ ಮಾಡಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರುವ ಮೂಲಕ ನಮ್ಮ ಮಣ್ಣಿನ ಬೇರುಗಳನ್ನು ಕಿತ್ತುಹಾಕುವ ಸಂಚು ಇದರ ಹಿಂದೆ ಅಡಗಿದೆ.
ಉನ್ನತ ಸ್ಥಾನಕ್ಕೆ ಇವರು ಅರ್ಹರೇ?
ಕನ್ನಡ ವಿರೋಧಿ ಧೋರಣೆ ಹೊಂದಿರುವ ವ್ಯಕ್ತಿ ಉನ್ನತ ಶಿಕ್ಷಣ ಮಂತ್ರಿಯಾಗಿ ಮುಂದುವರಿಯುವುದು ಕರ್ನಾಟಕಕ್ಕೆ ಮಾಡುವ ಅಪಮಾನ. ಸಚಿವರ ಈ ನಿಲುವು ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲಾಗಿದೆ.
ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಲಿ
ಕನ್ನಡ ಭಾಷೆಯನ್ನು ಕೀಳಾಗಿ ಕಾಣುವ ಮತ್ತು ನಿರ್ಬಂಧಿಸುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು.
ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ನಡೆದರೆ ಕನ್ನಡಿಗರು ಸುಮ್ಮನಿರಲಾರರು.
ಮೂಲಭೂತ ಹಕ್ಕಾದ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವುದನ್ನು ನಿಲ್ಲಿಸಿ, ಕನ್ನಡದ ಅಸ್ತಿತ್ವ ಕಾಪಾಡಲು ಮುಂದಾಗಬೇಕು.
ಕನ್ನಡ ಎಂದರೆ ಬರಿ ಭಾಷೆಯಲ್ಲ, ಅದು ನಮ್ಮ ಉಸಿರು. ಆ ಉಸಿರನ್ನೇ ಕಟ್ಟುವ ಕೆಲಸಕ್ಕೆ ಕೈ ಹಾಕಿದರೆ ಕನ್ನಡಿಗರ ಆಕ್ರೋಶದ ಮುನಿಸಿಗೆ ಸಚಿವರು ಉತ್ತರಿಸಬೇಕಾಗುತ್ತದೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ

COMMENTS

Login with Gmail to comment

ಇನ್ನಷ್ಟು ಸುದ್ದಿ

ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಬಾಲಗರ್ಭಿಣಿಯರ ಸಂಖ್ಯೆ 5975….!!
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!