📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ

    ಮಂಗಳೂರಿನ ಬೋಳೂರು ಅಮೃತಾನಂದಮಯಿ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ಕೈಂಕರ್ಯಾದ  ಕಾರ್ಯಕ್ರಮದ ವೇದಿಕೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಕೇಂದ್ರ ಸಚಿವರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತದೆ.

    ಇಂದು ಮತ್ತು ನಾಳೆ ಮಾತಾ ಅಮೃತಾನಂದಮಯಿ ದೇವಿ ಇವರ ಸತ್ಸಂಗ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಗಳ ಚಟುವಟಿಕೆಗಳು ನಗರದ ಬೋಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದಲ್ಲಿ ಜಗುರುಗುತ್ತಿದೆ.  ಧರ್ಮ ಜಾತಿ ಮತ ಭೇದವಿಲ್ಲದೆ ನಡೆಯುತ್ತಿ ರುವ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಕ್ತಿಯಿಂದ ಭಾಗವಹಿಸಿದ್ದಾರೆ. ಎರಡು ದಿನದ ಈ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆಂದು ಆಯೋಜಕರು ತಿಳಿಸಿದ್ದಾರೆ.

    ಇಂತಹ ಕಾರ್ಯಕ್ರಮದ ಸಾರ್ವಜನಿಕ ವೇದಿಕೆಯಲ್ಲಿ, ವಿವಿಧ ಗಣ್ಯರು ಭಾಗವಹಿಸಿದ್ದರು. ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ವಿಧಾನಸಭೆಯ ಸಭಾಪತಿ ಯುಟಿ ಖಾದರ್, ಸಂಸದ ಬ್ರಿಜೇಶ್ ಟೌಟ, ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    Also Read  ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!

    ಇಂತಹ ವೇದಿಕೆಯನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು  ರಾಜಕೀಯೆತರ ಹಾಗೂ ಜಾತಿ ಮತವಿಲ್ಲದ ವೇದಿಕೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸಿದರು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಸಚಿವ ಪ್ರಹಲ್ಲಾದ್ ಜೋಶಿ ಅವರು, ತಮ್ಮ ಭಾಷಣದ ಪ್ರಾರಂಭದಲ್ಲಿ ಮಾತಾ ಅಮೃತಾನಂದಮಯಿ ಅವರ ಆಧ್ಯಾತ್ಮಿಕ ಚಿಂತನೆ ಹಾಗೂ ಜ್ಞಾನಾರ್ಜನೆಯ ವಿಚಾರವಾಗಿ ಪ್ರಶಂಶಿಸಿ ಮಾತನಾಡಿದರು. ಬಡ ಮೀನುಗಾರರ ಕುಟುಂಬದಲ್ಲಿ ಜನಿಸಿದ ಅಮ್ಮನವರು, ಇವತ್ತು ಜಗತ್ತಿಗೆ ಜ್ಞಾನವನ್ನು ಕೊಡುತ್ತಿರುವಂತಹ ಕರುಣಾಮಯಿ  ಅಮ್ಮ ಆಗಿದ್ದಾರೆ ಎಂದು ಹೇಳಿದ ಸಚಿವರು, ಸಾಕಷ್ಟು ಬಡ ಕುಟುಂಬಗಳಿಗೆ ಸೂರನ್ನು ಕೊಟ್ಟಿದ್ದಾರೆ, ಉಚಿತ ಶಿಕ್ಷಣವನ್ನು ಕೊಡುತ್ತಿದ್ದಾರೆ, ಆರೋಗ್ಯ ಭಾಗ್ಯ ಕರುಣಿಸುತ್ತಿದ್ದಾರೆ ಎಂದು ಪ್ರಶಾಂತಿಸಿದರು. ಆನಂತರ ಮಾತನಾಡಿದ್ದು ಮಾತ್ರ ಸರಿಯಲ್ಲ ಅನ್ನೋದು ಸಾರ್ವಜನಿಕರಿಂದ ಕೇಳಿ ಬಂತು. 

    Also Read  ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!

    ಅಷ್ಟಕ್ಕೂ ಏನು ಮಾತನಾಡಿದರು? ಈ ವೇದಿಕೆಗೆ ಬರುವುದಕ್ಕಿಂತ ಮೊದಲು ಅಮ್ಮನವರನ್ನು ಭೇಟಿಯಾದಾಗ ಅಮ್ಮನವರು ನನ್ನಲ್ಲಿ ಹೇಳುತ್ತಾರೆ. ಈಗ ನೀವು ತುಂಬಾ ಕಷ್ಟವನ್ನ ಎದುರಿಸುತ್ತಿದ್ದೀರಿ. ಇಡೀ ಜಗತ್ತು ಅನೇಕ ವಿಚಾರದಿಂದ ಕಷ್ಟದಲ್ಲಿದೆ. ಮೋದಿಯವರು ಭಾರತವನ್ನು ಆ ಕಷ್ಟದಿಂದ ತಪ್ಪಿಸುವುದಕೋಸ್ಕರ ಶ್ರಮ ಪಡುತ್ತಿದ್ದಾರೆ. ಅವರ ಶ್ರಮಕ್ಕೆ ಬಲವಾಗಿ ನಾವು ನಿಮ್ಮ ಜೊತೆಗೆ ಇದ್ದೇವೆ ಯಾವುದಕ್ಕೂ ಹೆದರುವುದು ಬೇಡ. ಮೋದಿಯವರಿಗೆ ನಮ್ಮ ಸಂದೇಶ ತಿಳಿಸಿ ಎಂದು ನನಗೆ  ಅಮ್ಮ ಹೇಳಿದರು ಎಂದು ವೇದಿಕೆಯಲ್ಲಿ ಭಾಷಣ ಮಾಡಿದರು. ಈ ಭಾಷಣಕ್ಕೆ ಒಂದಷ್ಟು ಚಪ್ಪಾಳೆಯು ಬಂತು. ಹಾಗೆಯೇ ಮತ್ತೊಂದು ಕಡೆಯಲ್ಲಿ ಈ ಭಾಷಣದ ಬಗ್ಗೆ ಅಪಸ್ವರ ಎದ್ದಿದ್ದು ಅಲ್ಲಲ್ಲಿ ಕಂಡುಬಂತು.

    ಸಚಿವರು  ಧಾರ್ಮಿಕ ಸಾಮಾಜಿಕ ಆಧ್ಯಾತ್ಮ ವಿಚಾರವಾಗಿ ಸೇವೆಯ ವಿಚಾರವಾಗಿ ಮಾತನಾಡಿದ್ದು ಚೆನ್ನಾಗಿತ್ತು, ಆದರೆ ಅವರ ಭಾಷಣದ ಕೊನೆಯಲ್ಲಿ ಚುನಾವಣಾ ಭಾಷಣದ ತರ ಮಾತನಾಡಿದ್ದು ಸರಿಯಲ್ಲ ಎಂಬ ಮಾತು ಕೇಳಿ ಬಂತು. ಪಕ್ಷದ ವೇದಿಕೆಯಲ್ಲಿ ಅವರು ಇಂತಹ ಮಾತುಗಳನ್ನಾಡಿಕೊಳ್ಳಲಿ ಅದು ಬಿಟ್ಟು ಅಮ್ಮನ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ಈ ರೀತಿಯ ಮಾತನಾಡಿದ್ದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    ಕಾರಿನೊಳಗೆ ಇಬ್ಬರು ಪೊಲೀಸರ ಮೃತದೇಹ ಪತ್ತೆ
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಬಿಲ್‌ಗಾಗಿ ಶವ ತಡೆದರೆ ಹುಷಾರ್! ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕ್ರಮ?
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್