📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!

    ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಹಂತಹಂತವಾಗಿ ವಿಫಲ ಗೊಳಿಸುವ ನೀರಿನಲ್ಲಿ ಸಾರಿಗೆ ಸಂಸ್ಥೆಯ ಮುಖ್ಯಸ್ಥರೇ ಸಾಗುತ್ತಿದ್ದಾರೆ ಎಂಬ ಸುದ್ದಿಯು ಬರುತ್ತಿದೆ.

    ಹಿಂದಿನ ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಅನುಷ್ಠಾನಗೊಂಡ ಯೋಜನೆಯನ್ನು ನಿಲ್ಲಿಸಲು ಆಗದಿರುವ ಕಾರಣ, ಯೋಜನೆಯು ಇರುವಂತೆಯೇ ಅದನ್ನು ವಿಫಲಗೊಳಿಸಲು ಪ್ಲಾನ್ ಮಾಡಲಾಗಿದೆ ಎಂಬುದು ಸಾರಿಗೆ ಸಂಸ್ಥೆಯ ಇನ್ನರ್ ಮಾಹಿತಿಯಾಗಿದೆ.

    BMTC, KSRTC, KRTC ಹಾಗೂ NWKRTC ಈ ನಾಲ್ಕು ಸಂಸ್ಥೆಗಳೇ ಕರ್ನಾಟಕ ಸಾರಿಗೆ ವ್ಯವಸ್ಥೆಯನ್ನು ಬಹುಪಾಲು ನೋಡಿಕೊಳ್ಳುತ್ತಿರೋದು. ಈ ನಾಲ್ಕು ಸಂಸ್ಥೆಗಳಿಗೂ ಬೇರೆಬೇರೆ MD ಗಳಿದ್ದರೆ. ಅವರೇ ಎಲ್ಲವನ್ನೂ ನಿರ್ಧಾರ ಮಾಡೋದು. ಈ ನಾಲ್ಕು MDಗಳು ಒಟ್ಟಾಗಿಯೇ ಈಗ ಶಕ್ತಿಯೋಜನೆಯನ್ನು ಹಂತಹಂತವಾಗಿ ಆಳಕ್ಕೆ ತಳ್ಳಿ ಸಂಸ್ಥೆಯ ಆದಾಯ ಹೆಚ್ಚಿಸುವ ಬಗ್ಗೆ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

    Also Read  ಹೆಡ್‌ಲೈಟ್ ಇಲ್ಲ... ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!

    ಅಷ್ಟಕ್ಕೂ ಏನಾಗಿದೆ

    ಗಂಡುಮೆಟ್ಟಿನ ನಾಡು ಖ್ಯಾತಿಯ ಹುಬ್ಬಳ್ಳಿ ಡಿಪೋದಿಂದ ಈ ಹಿಂದೆ ಬೀದರ್ಗೆ ಪ್ರತಿದಿನ ಬಸ್ ಹೋಗುತ್ತಿತ್ತು. ಅದನ್ನು ಪ್ಲಾನ್ ಮಾಡಿ, ಬೀದರ್ ಬದಲು ಬೀದರ್ ಮೂಲಕವೇ ಹೈದರಾಬಾದಿಗೆ ಓಡಿಸಲು ಪ್ರಾರಂಭಿಸಿದರು. ರಾಜ್ಯದ ಒಳಗೆ ಓಡಾಡುವ ಬಸ್ ಶಕ್ತಿಯೋಜನೆ ವ್ಯಾಪ್ತಿಗೆ ಬರುತ್ತದೆ. ಮಹಿಳೆಯರ ಆಧಾರ ಕಾರ್ಡ್  ನೋಡಿ ಉಚಿತ ಪ್ರಯಾಣ ಕೊಡಲಾಗುತ್ತಿತ್ತು. ಯಾವಾಗ ಈ  ಬಸ್ ಹೈದ್ರಾಬಾದ್ ಗೆ ಹೋಗಲು ಪ್ರಾರಂಭಿಸಿತೋ ಅವತ್ತಿನಿಂದ ಆ ಬಸ್, ಶಕ್ತಿಯೋಜನೆಯಿಂದ ಹೊರ ಬಂತು. ಹೊರ ರಾಜ್ಯಕ್ಕೆ ಹೋಗುವ ಬಸ್ಗೆ ಆಧಾರ್ ಕಾರ್ಡ್ ನಡೆಯಲ್ಲ. ಈ ಕಾರಣಕ್ಕಾಗಿಯೇ, nwksratc md ಹುಬ್ಬಳ್ಳಿ ಬೀದರ್ ಬಸ್ ಬದಲಾಯಿಸಿ ಬೀದರ್ ವಾಯ ಹೈದರಾಬಾದಿಗೆ ಓಡಿಸಿ ಶಕ್ತಿಯೋಜನೆಯಿಂದ ಹೊರಗಿಟ್ಟರು.

    Also Read  Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’

    ಈಗ ಪ್ರತಿ ದಿನ ಹುಬ್ಬಳ್ಳಿ ಇಂದ ಬೆಂಗಳೂರಿಗೆ ರಾತ್ರಿ 9.08ಕ್ಕೆ ಹೊರಡುತ್ತಿದ್ದ ಬಸ್ ನಿಲ್ಲಿಸಲಾಗಿದೆ. ಈ ಬಸ್ ನಷ್ಟದಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರತಿ ಟ್ರಿಪ್ 50ಸಾವಿರ ದುಡಿಯುತ್ತಿದ್ದರು, ಅದನ್ನು ಏಕಾಏಕಿ ನಿಲ್ಲಿಸಲಾಗಿದೆ ಎನ್ನಲಾಗಿದೆ. ಈ ರೂಟ್ ಬಸ್ ಇವತ್ತಿನಿಂದ ಮಹಾರಾಷ್ಟ್ರದ ತುಳುಜಪುರಕ್ಕೆ ಬೆಳಿಗ್ಗೆ 8ಗಂಟೆಗೆ ಹೋಗುತ್ತಿದೆ. ಹೊರ ರಾಜ್ಯಕ್ಕೆ ಹೋಗುತ್ತಿರುವ ಕಾರಣ ಇದಕ್ಕೆ ಆಧಾರ್ ಕಾರ್ಡ್ ಅನ್ವಯಿಸದು.

    ಹೀಗೆ ಹಂತ ಹಂತವಾಗಿ ಶಕ್ತಿಯೋಜನೆಯನ್ನು ಕತ್ತು ಹಿಡಿದು ಹಿಸುಕುವ ಕಾರ್ಯ ನಡೆಯುತ್ತಿದೆ ಎಂಬುದು ಸಂಸ್ಥೆಯ ಒಳಗಿನಿಂದಲೇ ಕೇಳಿ ಬರುತ್ತಿದೆ.

    ಸರ್ಕಾರ ಮೊದಲು ಪ್ರತಿ ಆಧಾರ ಕಾರ್ಡ್ ಟಿಕೆಟಿಗೆ 60%ಹಣವನ್ನು ಸಂಸ್ಥೆಗೆ ನೀಡುತ್ತಿತ್ತಂತೆ. ಈಗ ಅದನ್ನು 25%ಗೆ ತರಲು ಹೊರಟಿದೆಯಂತೆ. ಹಾಗಾಗಿ ಸಾರಿಗೆ ಸಂಸ್ಥೆಯ MD ಗಳು ಶಕ್ತಿಯೋಜನೆಯನ್ನು ವಿಫಲ ಗೊಳಿಸಿ ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸಾರಿಗೆ ಸಚಿವರಿಗೆ ಇದರ ಬಗ್ಗೆ ಗೊತ್ತಿತ್ತು, ಅವರ ಮೌಖಿಕ ಒಪ್ಪಿಗೆಯ ಮೇಲೆ ಈ ತಂತ್ರ ಹೆಣೆಯಲಾಗಿದೆ ಅಂತಲೂ ಹೇಳುತ್ತಾರೆ ಸಾರಿಗೆ ಸಿಬ್ಬಂಧಿಗಳು.

    Also Read  ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…

    ಒಟ್ಟಿನಲ್ಲಿ ಜನಪ್ರಿಯ ಯೋಜನೆಯನ್ನು ಸಾರಿಗೆ ಸಂಸ್ಥೆಯು ಮುಗಿಸಲು ಹೊರಟಿದೆಯೋ, ಅಥವಾ ಈ ತಂತ್ರಗಾರಿಕೆಯಲ್ಲಿ ಸರ್ಕಾರವೂ ಇನ್ವಾಲ್ವ್  ಆಗಿದೆಯೋ ಗೊತ್ತಿಲ್ಲ ಅನ್ನುತ್ತಿದ್ದಾರೆ ಸಾರಿಗೆ ಸಿಬ್ಬಂಧಿಗಳು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಅಧಿಕಾರಿಗಳಿಗೆ ಲಂಚವೋ? ಗೌರವ ಧನವೋ ….!ಶಿವಲಿಂಗೇಗೌಡ “ಹೇಳಿಕೆ”ಭಾರಿ ವಿವಾದ…!
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!
    ಪೊಲೀಸರಿಂದ ಕ್ರೂರವಾಗಿ ತಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!
    ಸ್ಮಾರ್ಟ್‌ಫೋನ್ ಅಗ್ಗವಾಗುತ್ತಾ? ಮೊಬೈಲ್ ಖರೀದಿಗೆ ಇದು ‘Wait & Watch’ ಟೈಮ್!
    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
     “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಅಪ್ಪಿಕೊಳ್ಳುವ ಅಮ್ಮನ ಕೈಗಳೇ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ರೆ … ಎಂಥ ದುರ್ವಿಧಿ..!
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ಸುಮಂತ್ ನಿಗೂಢ ಸಾವು ಪ್ರಕರಣ: ತನಿಖೆಗೆ ಹೊಸ ತಿರುವು—ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ!