📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ

    ಮೇ ನಾಲ್ಕರಂದು ಚುನಾವಣೆಯ ಫಲಿತಾಂಶ ಬಂದಿದೆ. ಬಹುತೇಕವಾಗಿ ಫಲಿತಾಂಶ ಬಂದು ಒಂದು ವಾರ ಕಳೆದು ಹೋಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ ಎರಡು ಕಡೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡಿನಲ್ಲಿ ಇದೀಗ ನೂತನ ಸರ್ಕಾರ ರಚನೆಯಾಗುತ್ತಿದೆ. ಆದರೆ ಕೇರಳದಲ್ಲಿ ನ್ನೂ ಸರ್ಕಾರ ರಚನೆಯ ಕಗ್ಗಂಟು ಮುಂದುವರೆದಿದೆ.

    ಕಾಂಗ್ರೆಸ್ ಎಷ್ಟು ದುರ್ಬಲವಾಗಿದೆ ಅನ್ನುವುದಕ್ಕೆ ಇದೊಂದು ಸಾಕ್ಷಿ ಸಾಕು ನೋಡಿ. ಕೇರಳದಲ್ಲಿ ಬಹುಮತವನ್ನು ಪಡೆದಿರುವಂತಹ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಎಂ ಯಾರಾಗಬೇಕು ಅನ್ನುವುದರಲ್ಲಿಯೇ ಸಮಯ ಕಳೆಯುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಷ್ಟು ವೀಕ್ ಅನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ.

    ಕೆಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಾಲ್ ಹಾಗೂ ವಿಡಿ ಸತೀಶನ್ ಇವರ ಮಧ್ಯೆ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಕೇರಳ ಕಾಂಗ್ರೆಸ್ಸಿನಲ್ಲಿ  ಸತೀಶನ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದರೆ, ಆಯ್ಕೆಯಾದ ಶಾಸಕರ ಅಭಿಪ್ರಾಯವು, ಕೆಸಿ ವೇಣುಗಪಾಲ್ ಪರವಾಗಿದೆ. ಚೆನ್ನಿತಾಲ್ ಪರವಾಗಿಯೂ ಒಂದಷ್ಟು ಶಾಸಕರು ಬ್ಯಾಟ್ ಬೀಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಈಗ ತಲೆನೋವು ಶುರುವಾಗಿದೆಯಂತೆ.

    Also Read  ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ

    ಕಾಂಗ್ರೆಸ್ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಿದೆ ಅನ್ನುವುದಕ್ಕೆ ಇದೇ ಸಾಕ್ಷಿ. ಕೆ ಸಿ ವೇಣುಗೋಪಾಲ್ ಕೇರಳದ ಮುಖ್ಯಮಂತ್ರಿಯಾದರೆ, ರಾಷ್ಟ್ರೀಯ ಕಾಂಗ್ರೆಸ್ಗೆ ಹಿನ್ನಡೆಯಾಗುತ್ತದೆ ಎಂಬ ಪರಿಜ್ಞಾನ ಇರಬೇಕು. ಈಗಾಗಲೇ ವೇಣುಗೋಪಾಲ್ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಹಾಗೆಯೇ ರಾಷ್ಟ್ರದ ಬಹುತೇಕ ರಾಜ್ಯಗಳಿಗೆ ಚಿರಪರಿಚಿತ ಮುಖವಾಗಿದೆ. ಹೀಗಿರುವಾಗ, ಇಂತಹ ನಾಯಕರನ್ನು ಪಕ್ಷವು ಒಂದು ರಾಜ್ಯದ ಮುಖ್ಯಮಂತ್ರಿ ಮಾಡಿ ರಾಷ್ಟ್ರೀಯ ಕೈವೊಂದನ್ನು ಕಳೆದುಕೊಳ್ಳಬೇಕೇ? ಸತೀಶನ್ ಮತ್ತು ಚೆನ್ನಿತ್ತಲ್ ನಡುವೆ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಬುದ್ದಿವಂತಿಕೆಯ ನಡೆಯಾಗುತ್ತದೆ. ಶಶಿ ತರೂರ್ ಕಾಂಗ್ರೆಸ್ ನಿಷ್ಠೆಯನ್ನು ಕಳೆದುಕೊಳ್ಳದಿದ್ದಲ್ಲಿ ಬಹುಶಹ ಅವರಿಗೆ ಈಗ ಅವಕಾಶ ದೊಡ್ಡ ಪ್ರಮಾಣದಲ್ಲಿ ಇರುತ್ತಿತ್ತು. ಅಂತಹ ಅವಕಾಶವನ್ನು ಸ್ವಸಹ ತರೂರು ಕಳೆದುಕೊಂಡಿದ್ದಾರೆ ಎನ್ನಬಹುದು.

    ಕಾಂಗ್ರೆಸ್ ಹೈಕಮಾಂಡ್ಗೆ ಕೇರಳ ಸರ್ಕಾರ ರಚನೆಯ ಕುರಿತು ಹಾಗೂ ಮುಖ್ಯಮಂತ್ರಿ ಆಯ್ಕೆಯ ಕುರಿತು ಯಾವುದೇ ಸಮಸ್ಯೆ ಎದುರಾಗಬಾರದಿತ್ತು. ಈ ಸಮಸ್ಯೆ ಎದುರಾಗಿದೆ ಎಂದರೆ, ಪಕ್ಷದ ವೀಕ್ ನೆಸ್ ಅನ್ನು ಅದು ಓಪನ್ ಮಾಡಿ ಸಾರ್ವಾಜನಿಕವಾಗಿ ತೋರಿಸುತ್ತದೆ ಅಂತಲೇ ಲೆಕ್ಕ. ಈಗಾಗುತ್ತಿರುವುದು ಅದೇ ಆಗಿದೆ. ಒಂದು ವಾರ ಕಳೆದರೂ ಬಹುಮತವಿರುವ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ ಎಂದರೆ, ಇದು ಇಡೀ ದೇಶಕ್ಕೆ ಕಾಂಗ್ರೆಸ್ಸಿನ ದೌರ್ಬಲ್ಯದ ಬಗ್ಗೆ ದೊಡ್ಡ ಮೆಸೇಜನ್ನು ಕೊಡುತ್ತದೆ ಅನ್ನುವುದನ್ನು ಅರಿಯದಷ್ಟು ದಡ್ಡರು ಹೈಕಮಾಂಡ್ ಸ್ಥಾನದಲ್ಲಿ ಕೂತಂತೆ ಕಾಣುತ್ತಿದೆ. ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಒಂದೊಮ್ಮೆ ಕೇಸೀ ವೇಣುಗೋಪಾಲ್ ರವರನ್ನು ಕೇರಳದ ಮುಖ್ಯಮಂತ್ರಿ ಯನ್ನಾಗಿ ಮಾಡಿದರೆ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ನ ದೌರ್ಬಲ್ಯ ಬಹಿರಂಗವಾಗಿ ಹರಾಜ್ ಆಗುತ್ತಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    ಕರಾವಳಿ ಗಣೇಶೋತ್ಸವ ಭರ್ಜರಿ ಸಿದ್ಧತೆ… ಭದ್ರತೆಯ ನಡುವೆ ಭಕ್ತಿ, ಸಂಭ್ರಮ!
    ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅಪಮಾನ!
    ಬ್ರಹ್ಮಾವರ ಕೆಂಜೂರಿನಲ್ಲಿ ಅನ್ನಭಾಗ್ಯದ ಅಕ್ಕಿ  ಅಕ್ರಮ ದಾಸ್ತಾನು- 15 ಕ್ವಿಂಟಲ್‌ಗೂ ಅಧಿಕ ಅಕ್ಕಿ ವಶ
    ವಿಧಾನಸೌಧದಲ್ಲಿ ಡಿಕೆಶಿ–ಕಟೀಲ್ ಭೇಟಿ -ರಾಜಕೀಯದಲ್ಲಿ ಬಿಸಿ ಚರ್ಚೆ
    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    “ಬೇಕಾದರೇ ನನಗೆ ಪೊರಕೆಲಿ ಹೊಡಿರಿ ಆದ್ರೆ ಅಧಿಕಾರಿಗಳಿಗಲ್ಲ”- ಡಿಕೆಶಿ “ಭೂಮಿ ಉಳಿಸಿಕೊಳ್ಳಲು ಹೋರಾಡಿದ ರೈತರ ಮೇಲೆ ಕೊಲೆ ಕೇಸ್? ಬಿಡದಿ ವಿವಾದದ ಬಗ್ಗೆ ರಾಜ್ಯಾದ್ಯಂತ ಆಕ್ರೋಶ!
    ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್..! ಸರ್ಕಾರದ ಹೊಸ ಕಠಿಣ ನಿಯಮ
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?