📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..

    ಇತ್ತೀಚೆಗೆ ಚಿನ್ನದ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ಗಗನಕ್ಕೇರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಶ್ರಮವಿಲ್ಲದೆ ಕೋಟ್ಯಾಧಿಪತಿಗಳಾಗಲು ಕಳ್ಳತನವನ್ನೇ ಒಂದು ಫುಲ್-ಟೈಮ್ ಬಿಸಿನೆಸ್ (ಅಕ್ರಮ ವ್ಯವಹಾರ) ಮಾಡಿಕೊಂಡಿದ್ದಾರೆ! ಚಿನ್ನದ ದರ ಏರುತ್ತಿರುವ ಈ ಟ್ರೆಂಡ್ ಅನ್ನೇ ನಂಬಿ, ಇದನ್ನೇ ತಮ್ಮ ‘ಇನ್ವೆಸ್ಟ್‌ಮೆಂಟ್ ಪ್ಲಾನ್’ ಮಾಡಿಕೊಂಡಿದ್ದ ಖತರ್ನಾಕ್ ಬೆಂಗಳೂರು ಮೂಲದ ದಂಪತಿಯನ್ನು ಕುಣಿಗಲ್ ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹೆಡೆಮುರಿ ಕಟ್ಟಿದ್ದಾರೆ.

    ಮೇ 29 ರಂದು ಕುಣಿಗಲ್‌ನ ಹೌಸಿಂಗ್ ಬೋರ್ಡ್ ಕಾಲೋನಿಯ ರಿಜ್ವಾನ್ ಎಂಬುವವರ ಮನೆಯಲ್ಲಿ ಇಡೀ ಪ್ಲಾನ್ ಎಕ್ಸಿಕ್ಯೂಟ್ ಆಗಿತ್ತು. ರಿಜ್ವಾನ್ ಅವರು ಹೊಸ ನಿವೇಶನ (ಸೈಟ್) ಖರೀದಿಸಲು ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಮತ್ತು ಚಿನ್ನವನ್ನು ಮನೆಯಲ್ಲಿ ಇಟ್ಟಿದ್ದರು. ಚಿನ್ನದ ಬೆಲೆ ಪೀಕ್‌ನಲ್ಲಿರುವ ಈ ಸಮಯವನ್ನೇ ಹೊಂಚು ಹಾಕಿದ ಬೆಂಗಳೂರಿನ ರಾಮಚಂದ್ರಾಪುರದ ಮಂಜುನಾಥ್ ಮತ್ತು ಅನಿತಾ ದಂಪತಿ, ಮನೆ ಬೀಗ ಮುರಿದು ಕ್ಷಣಾರ್ಧದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿ ಪರಾರಿಯಾಗಿದ್ದರು.

    Also Read  ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ

    ಖತರ್ನಾಕ್ ಕಿಂಗ್‌ಪಿನ್ ಮಂಜುನಾಥ್: ಈತ ಸಾಮಾನ್ಯ ಕಳ್ಳನಲ್ಲ, ಕಳ್ಳತನದ ಲೋಕದ ಪಿಎಚ್‌ಡಿ ಹೋಲ್ಡರ್! ಈತನ ಮೇಲೆ ಈಗಾಗಲೇ ಬರೋಬ್ಬರಿ 35 ಕಳವು ಪ್ರಕರಣಗಳು ದಾಖಲಾಗಿವೆ ಎಂದರೆ ಈತನ “ನೆಟ್‌ವರ್ಕ್” ಮತ್ತು “ಎಕ್ಸ್‌ಪೀರಿಯೆನ್ಸ್” ಎಷ್ಟಿರಬಹುದು ಊಹಿಸಿ…!

    ಸಾಮಾನ್ಯವಾಗಿ ಗಂಡ ತಪ್ಪು ದಾರಿ ಹಿಡಿದರೆ ಹೆಂಡತಿ ಬುದ್ಧಿ ಹೇಳುತ್ತಾಳೆ, ಆದರೆ ಇಲ್ಲಿ ಸೀನ್ ಉಲ್ಟಾ ಇತ್ತು. ಗಂಡ ಕಷ್ಟಪಟ್ಟು ಕನ್ನ ಹಾಕಿ ತರುತ್ತಿದ್ದ ಒಡವೆಗಳನ್ನು, ಇಂದಿನ ಬಂಗಾರದ ಗರಿಷ್ಠ ದರಕ್ಕೆ ಮಾರ್ಕೆಟ್‌ನಲ್ಲಿ ಮಾರಿ ಅಥವಾ ಅಡವಿಟ್ಟು ಐಷಾರಾಮಿ ಜೀವನ ನಡೆಸುವುದು ಪತ್ನಿ ಅನಿತಾಳ ಮುಖ್ಯ ಕೆಲಸವಾಗಿತ್ತು. ಅಂದರೆ, ಇದೊಂದು ಪಕ್ಕಾ ವೆಲ್-ಪ್ಲಾನ್ಡ್ “ಫ್ಯಾಮಿಲಿ ಬಿಸಿನೆಸ್” ತರಹ ನಡೆದುಕೊಂಡು ಬರುತ್ತಿತ್ತು., ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದ “ಬಿಸಿನೆಸ್ ಪಾರ್ಟ್ನರ್” ಈಕೆ.

    Also Read  ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!

    ಆದರೆ, ಈ ಖದೀಮ ಜೋಡಿಯ ಆಟ ಸದಾ ನಡೆಯಲಿಲ್ಲ. 35 ಕೇಸ್‌ಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿದ್ದ ಈ ಜೋಡಿಯನ್ನು, ಕುಣಿಗಲ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಭರ್ಜರಿ ಕಾರ್ಯಾಚರಣೆ ನಡೆಸಿ ಈ ದಂಪತಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಬರೋಬ್ಬರಿ 25 ಲಕ್ಷ ರೂಪಾಯಿ ನಗದು, ಇಂದಿನ ಪೀಕ್ ರೇಟ್‌ನಲ್ಲಿ ಭಾರಿ ಮೌಲ್ಯ ಬಾಳುವ 31 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಬೆಲೆ ಏರಿದಂತೆ ಕಳ್ಳರ ಹಸಿವು ಮತ್ತು ಅವರ ಅಕ್ರಮ ಬಿಸಿನೆಸ್ ಹೇಗೆ ಸ್ಕೇಲ್ ಅಪ್ ಆಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!

    ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆಗಳನ್ನು ಮನೆಯಲ್ಲಿಡುವಾಗ ಸಾರ್ವಜನಿಕರು ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸದ್ಯಕ್ಕಂತೂ ಈ “ಖತರ್ನಾಕ್ ಬಿಸಿನೆಸ್ ಜೋಡಿ” ಕಂಬಿ ಎಣಿಸುತ್ತಿದೆ!

    ##ತುಮಕೂರುಬ್ರೇಕಿಂಗ್ #ಕ್ರೈಂಸುದ್ದಿ #ಚಿನ್ನದಬೆಲೆ #ಕುಣಿಗಲ್ #ಕಳ್ಳದಂಪತಿ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
    ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಪವಾಡವೇ? 33 ದಿನ ,775 ಗಂಟೆಗಳ ಬಳಿಕ ಸಮಾಧಿಯಿಂದ ಹೊರಬಂದ ಶಿವಯೋಗಿ ಶ್ರೀಗಳು……!!!!ಗದಗದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆ!ಪರಮ ಯೋಗವೇ?
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
    ಸ್ವಂತ ತಂಗಿಯೊಂದಿಗೆ ಅಕ್ರಮ ಸಂಬಂಧ- ಕುಟುಂಬ ಹಾಗೂ ಸಮಾಜದಲ್ಲಿ ಆತಂಕ
    MRPLನಲ್ಲಿ ಭಾರೀ ಸ್ಫೋಟದ ಸದ್ದು “ಬಾಯ್ಲರ್ ಬ್ಲಾಸ್ಟ್”…!ಕಾಟಿಪಳ್ಳ, ಜೋಕಟ್ಟೆ , ಕೃಷ್ಣಾಪುರದ ಜನರಲ್ಲಿ ಆತಂಕ — ಫೇಸ್‌-3 ಘಟಕದ ಬಳಿ ಘಟನೆ ಶಂಕೆ
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ಸೆಪ್ಟೆಂಬರ್‌ನಲ್ಲಿ ಚಿನ್ನ-ಬೆಳ್ಳಿ ಭಾರಿ ಕುಸಿತ: ಮುಂದಿನ ದಿನಗಳಲ್ಲೂ ಏರಿಳಿತ ಸಾಧ್ಯತೆ
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
    MRPL ಸ್ಫೋಟದ ಭೀಕರತೆಗೆ 9 ಜನಕ್ಕೆ ತೀವ್ರ ಗಾಯ ….ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ…!
    ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
     ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್