📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…

    2010 ಮೇ 22…
    ಆ ಬೆಳಗ್ಗೆ ಮಂಗಳೂರಿನ ಆಕಾಶ ಆ ದಿನ ಸಾಮಾನ್ಯ ಬೆಳಗ್ಗೆಯಂತೆ ಕಾಣುತ್ತಿತ್ತು. ದುಬೈನಿಂದ ಹಾರಿಬಂದಿದ್ದ Air India Express Flight 812 crashವಿಮಾನದಲ್ಲಿ ಅನೇಕ ಕುಟುಂಬಗಳ ಕನಸುಗಳು, ಭವಿಷ್ಯಗಳು, ನಿರೀಕ್ಷೆಗಳು ಕೂಡ ಇದ್ದವು. ದುಬೈಯಲ್ಲಿ ದುಡಿದು ಮನೆಗೆ ಮರಳುತ್ತಿದ್ದವರು… ಮಕ್ಕಳಿಗಾಗಿ ಆಟಿಕೆಗಳನ್ನು ತಂದ ತಂದೆಯರು… ವಯಸ್ಸಾದ ಅಮ್ಮನನ್ನು ನೋಡಲು ಬರುತ್ತಿದ್ದ ಮಕ್ಕಳು…. ಕೆಲವರು ವರ್ಷಗಳ ಬಳಿಕ ತಮ್ಮ ಮನೆಗೆ ಮರಳುತ್ತಿದ್ದರು… ಕೆಲವರು ಮಕ್ಕಳಿಗಾಗಿ… ಕೆಲವರು ವೃದ್ಧ ತಾಯಿಯನ್ನು ನೋಡಲು ಆತುರದಲ್ಲಿದ್ದರು…… ಎಲ್ಲರಿಗೂ ಅದು ಸಂತಸದ ಪ್ರಯಾಣವಾಗಬೇಕಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಆ ಪ್ರಯಾಣ ದುರಂತದ ಕಥೆಯಾಯಿತು.

    ಬೆಳಿಗ್ಗೆ ಸುಮಾರು 6.20ಕ್ಕೆ ವಿಮಾನ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ‘ಟೇಬಲ್-ಟಾಪ್’ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿತು. ಆದರೆ ರನ್‌ವೇ ದಾಟಿ ಮುಂದೆ ಸಾಗಿದ ವಿಮಾನ ಕೆಂಜಾರಿನ ಆಳವಾದ ಕಣಿವೆಗೆ ಉರುಳಿಬಿದ್ದು ಬೆಂಕಿಗಾಹುತಿಯಾಯಿತು. ಆ ಕ್ಷಣದ ಭೀಕರ ಸದ್ದು, ಆಕಾಶಕ್ಕೆ ಏರಿದ ಜ್ವಾಲೆಗಳು, ಜನರ ಕಿರುಚಾಟ… ಮಂಗಳೂರು ಎಂದಿಗೂ ಮರೆಯಲಾರದ ನೋವಿನ ದೃಶ್ಯವಾಗಿತ್ತು.

    Also Read  ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ

    166 ಮಂದಿಯಿದ್ದ ವಿಮಾನದಲ್ಲಿ 158 ಮಂದಿ ಸ್ಥಳದಲ್ಲೇ ಮೃತಪಟ್ಟರು. ಹಲವರು ಸಜೀವ ದಹನವಾಗಿದ್ದರು. ಮೃತರಲ್ಲಿ ಮಕ್ಕಳು, ಹಸುಗೂಸುಗಳು, ಮಹಿಳೆಯರು, ವಿಮಾನ ಸಿಬ್ಬಂದಿ ಎಲ್ಲರೂ ಸೇರಿದ್ದರು. ಕೇವಲ 8 ಮಂದಿ ಮಾತ್ರ ಬದುಕುಳಿದರು. ಅವರ ಬದುಕು ನಿಜಕ್ಕೂ ಪವಾಡವೇ ಸರಿ. ಆದರೆ ಅವರು ಹೇಳಿದ ಆ ಕ್ಷಣಗಳ ನೆನಪು ಕೇಳಿದರೂ ಇಂದಿಗೂ ಮೈ ಜುಮ್ಮೆನಿಸುತ್ತದೆ.

    ಅಪಘಾತದ ನಂತರ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಜೀವದ ಹಂಗು ತೊರೆದು ಸಹಾಯಕ್ಕೆ ಧಾವಿಸಿದ್ದರು. ಬೆಂಕಿಯ ಜ್ವಾಲೆಗಳ ನಡುವೆ ಹಲವರನ್ನು ಹೊರತೆಗೆದಲು ಯತ್ನಿಸಲಾಯಿತು. ಆದರೆ ಹಲವರ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದವು. ಅಂತಹ 12 ಮೃತದೇಹಗಳನ್ನು ಕೂಳೂರಿನ ಫಲ್ಗುಣಿ (ಗುರುಪುರ) ನದಿ ತೀರದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಆ ಕ್ಷಣ ಕುಟುಂಬಸ್ಥರ ಆಕ್ರಂದನ ಕಲ್ಲನ್ನೂ ಕರಗಿಸುವಂತಿತ್ತು.

    ನಂತರ ಆ ಸ್ಥಳದಲ್ಲೇ ಸರ್ಕಾರ ಸಂತ್ರಸ್ತರ ನೆನಪಿಗಾಗಿ ಸುಂದರ ಸ್ಮಾರಕ ಉದ್ಯಾನವನವನ್ನು ನಿರ್ಮಿಸಿತು. ಇಂದು ಆ ಸ್ಮಾರಕ ಕೇವಲ ಒಂದು ಉದ್ಯಾನವಲ್ಲ… ಅದು ನೂರಾರು ಜೀವಗಳ ಮೌನ ನೆನಪು. ಅಲ್ಲಿ ನಿರ್ಮಿಸಿರುವ ಸ್ಮಾರಕ ಶಿಲೆಯಲ್ಲಿ ಮೃತಪಟ್ಟವರ ಸ್ಮರಣೆ ಅಚ್ಚೊತ್ತಲಾಗಿದೆ. ಪ್ರತಿವರ್ಷ ಮೇ 22ರಂದು ಜಿಲ್ಲಾಡಳಿತ, ಸ್ಥಳೀಯರು ಹಾಗೂ ಮೃತರ ಕುಟುಂಬಸ್ಥರು ಅಲ್ಲಿಗೆ ಬಂದು ಹೂವಿನ ನಮನ ಸಲ್ಲಿಸುತ್ತಾರೆ. ಕೆಲವರು ಮೌನವಾಗಿ ನಿಂತು ಕಣ್ಣೀರು ಹಾಕುತ್ತಾರೆ… ಕೆಲವರು ತಮ್ಮ ಪ್ರೀತಿಪಾತ್ರರ ಫೋಟೋ ಹಿಡಿದು ಅಳುತ್ತಾರೆ… ಆ ಸ್ಥಳದಲ್ಲಿ ಇನ್ನೂ ಒಂದು ವಿಚಿತ್ರ ಮೌನದ ನೋವು ಅನುಭವವಾಗುತ್ತದೆ.

    Also Read  ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?"  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ

    ದುರಂತದ ನಂತರ ಪರಿಹಾರದ ಪ್ರಶ್ನೆಯೂ ದೊಡ್ಡ ಚರ್ಚೆಯಾಗಿತ್ತು. ಅನೇಕ ಕುಟುಂಬಗಳು ತಮ್ಮ ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದವು. ಕೆಲ ಮಕ್ಕಳ ಶಿಕ್ಷಣ ಮಧ್ಯದಲ್ಲೇ ನಿಂತಿತು… ಕೆಲ ಮನೆಗಳಲ್ಲಿ ಸಂಪಾದನೆ ಮಾಡುವ ಏಕೈಕ ವ್ಯಕ್ತಿಯೇ ಇರಲಿಲ್ಲ. ಪರಿಹಾರ ನೀಡಲು ಕಾನೂನು ಸಮಿತಿಯನ್ನು ನೇಮಿಸಲಾಯಿತು. ಕೆಲವು ಕುಟುಂಬಗಳಿಗೆ ಕೋಟ್ಯಾಂತರ ರೂಪಾಯಿ ಪರಿಹಾರ ದೊರಕಿದರೂ, “ನಮ್ಮವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ?” ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉಳಿಯಿತು. ಇನ್ನೂ ಕೆಲವು ಕುಟುಂಬಗಳು ನ್ಯಾಯಕ್ಕಾಗಿ ವರ್ಷಗಳ ಕಾಲ ಕಾನೂನು ಹೋರಾಟ ಮುಂದುವರಿಸಿವೆ.

    ಈ ದುರಂತ ದೇಶದ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿ ಉಳಿಯಿತು. ಬಳಿಕ ‘ಟೇಬಲ್-ಟಾಪ್’ ರನ್‌ವೇಗಳ ಸುರಕ್ಷತೆ ಬಗ್ಗೆ ದೇಶಾದ್ಯಂತ ಚರ್ಚೆಗಳು ಆರಂಭವಾದವು. ಪೈಲಟ್‌ಗಳ ತರಬೇತಿ, ಲ್ಯಾಂಡಿಂಗ್‌ ವ್ಯವಸ್ಥೆ ಮತ್ತು ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲಾಯಿತು.

    Also Read  ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?

    ಆದರೆ…
    ನಿಯಮಗಳು ಬದಲಾಗಬಹುದು…
    ವಿಮಾನ ನಿಲ್ದಾಣಗಳು ಸುಧಾರಿಸಬಹುದು…
    ಪರಿಹಾರ ಹಣ ಸಿಗಬಹುದು…
    ಆದರೆ ಆ ದಿನ ಕಳೆದುಹೋದ ಜೀವಗಳು ಮಾತ್ರ ಮತ್ತೆ ಮರಳಿ ಬರುವುದಿಲ್ಲ.

    ಇಂದಿಗೂ ಮಂಗಳೂರಿನಲ್ಲಿ ಮೇ 22 ಬಂದಾಗ ಹಲವರ ಮನಸ್ಸಿನಲ್ಲಿ ಅಗಾಧ ನೋವು ಎದ್ದೇಳುತ್ತದೆ —
    “ಆ ದಿನ ಆ ವಿಮಾನ ಸುರಕ್ಷಿತವಾಗಿ ಇಳಿದಿದ್ದರೆ… ಎಷ್ಟು ಮನೆಗಳು ಇಂದು ನಗುತ್ತಿರುತ್ತಿತ್ತೋ. …”

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
     ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ಗ್ರಾಮೀಣ ಕೋಟಾಕ್ಕೆ ಒಳಮೀಸಲು: ಅವಕಾಶವೇ? ರಾಜಕೀಯದ ಮತ್ತೊಂದು ಲೆಕ್ಕಾಚಾರವೇ?“ಗ್ರಾಮೀಣ ಮಕ್ಕಳಿಗೆ 7.5% ಕೋಟಾ; ಆದರೆ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು %?”
    ಅರ್ಧ ಸಂಬಳ ಸಾಕು ಮತ್ತು VIP ಸೌಲಭ್ಯಕ್ಕೆ ‘ನೋ’ ಎಂದ ನ್ಯಾಯಾಧೀಶ!
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    ರಿಲಯನ್ಸ್ ವಿರುದ್ಧ ಇ.ಡಿ ಬಿಗ್ ಹ್ಯಾಮರ್ – ₹1,021 ಕೋಟಿ ಮುಟ್ಟುಗೋಲು
    14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್….!!!!!!ಸುಪ್ರೀಂ ಕೋರ್ಟ್‌ಗೆ ಶಾಕಿಂಗ್ ವರದಿ!
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ
    ಉಡುಪಿಯ ಪ್ರತಿಷ್ಠಿತರನ್ನೇ ಟಾರ್ಗೆಟ್ ಮಾಡಿದ ಜೀನತ್ ವಿರುದ್ಧ ಮತ್ತೊಂದು ದೂರು? ₹15 ಲಕ್ಷ ಮೋಸದ ಹೊಸ ಆರೋಪ!?
    ಜಪಾನ್ ಟೆಕ್ನಾಲಜಿ ಬಳ್ಳಾರಿಗೆ ಎಂಟ್ರಿ!ನಿರ್ಮಲಾ ಸೀತಾರಾಮನ್ ಹಸಿರು ಕ್ರಾಂತಿಗೆ ಚಾಲನೆ… ಇದು ಸಾಮಾನ್ಯ ಯೋಜನೆ ಅಲ್ಲ.1 ಲಕ್ಷ ಸಸಿಗಳು, 300 ಎಕರೆ ಭೂಮಿ ..
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಬಾಳೆಕುದ್ರು ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆಕ್ರೋಶ; ಶಿರ್ವ, ಜಾಗೆಲೆ ಬೃಹತ್ ಪ್ರತಿಭಟನೆ
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು