📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?

    ಈ ಗೊಂದಲಕ್ಕೆ ನೇರಾನೇರವಾಗಿ ಚುನಾವಣಾ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಟಿ ರಾಜೇಗೌಡ 200ರಷ್ಟು ಕಡಿಮೆ ಮತಗಳ  ಅಂತರದಿಂದ ಗೆದ್ದಿದ್ದರೆ ಎನ್ನುವುದು ಅವತ್ತಿನ ಚುನಾವಣಾ ಅಧಿಕಾರಿಗಳ ಘೋಷಣೆಯಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ ಮಾಜಿ ಶಾಸಕ ಜೀವರಾಜ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನ್ಯಾಯಾಲಯವು ಮೂರು ವರ್ಷದ ನಂತರ ಮರು ಎಣಿಕೆ ಮಾಡಲು ಆದೇಶ ನೀಡಿತು. ಆ ಆದೇಶದ ಪ್ರಕಾರ, ನಡೆದ ಕೌಂಟಿಂಗ್ನಲ್ಲಿ ಎಲ್ಲವೂ ಅಯೋಮಯ. ಹಾಗಾದ್ರೆ ದೇಶದ ಎಲ್ಲಾ ಕ್ಷೇತ್ರದಲ್ಲೂ ಇದೇ ರೀತಿಯ ಎಡವಟ್ಟುಗಳು ನಡೆದಿರಬಹುದು ಅಂತ ಊಹಿಸಬೇಕೇ?

    ಆವತ್ತು ಅಂದರೆ ಮೂರು ವರ್ಷದ ಹಿಂದೆ, ಚುನಾವಣೆಯ ಕೌಂಟಿಂಗ್ ಮುಗಿದ ತಕ್ಷಣ, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಅಲ್ಲಿ ಉಪಸ್ಥಿತರಿದ್ದ ಎಲೆಕ್ಷನ್ ಏಜೆಂಟ್ ರ ಸಹಿ ಪಡೆದೆಯಲಾಗುತ್ತದೆ. ಅವರ ಸಮ್ಮುಖದಲ್ಲೇ ಅವೆಲ್ಲಾ ಕೌಂಟಿಂಗ್ ನಡೆದಿರುತ್ತದೆ. ಹಾಗೆಯೇ  ಆ ಏಜೆಂಟರುಗಳ ಸಹಿಯನ್ನು  ಪಡೆಯಲಾಗಿರುತ್ತದೆ. ಒಂದೊಮ್ಮೆ ಸರಿಯಾದ ಎಣಿಕೆ ನಡೆದಿಲ್ಲ ಎಂದರೆ, ಆ ಏಜೆಂಟರುಗಳಿಗೆ ಸಹಿ ಹಾಕದೆ ಪ್ರತಿಭಟಿಸುವ ಅವಕಾಶವಿತ್ತು. ಆವತ್ತು, ಅದ್ಯಾವುದು ಆಗದ ಕಾರಣ, ಚುನಾವಣಾ ಅಧಿಕಾರಿಗಳು ರಾಜೇಗೌಡರನ್ನು ಗೆದ್ದ ಅಭ್ಯರ್ಥಿಯೆಂದು ಘೋಷಿಸಿದ್ದರು.

    Also Read  ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 

    ಇವತ್ತು, ಮರು ಎಣಿಕೆಯ ನಂತರ ಗೊಂದಲಗಳಾಗಿದೆ, ರಾಜೇಗೌಡರಿಗೆ ಬಿದ್ದ ಮತಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಅಸಿಂಧು ಮತಗಳೆಂದು ತಳ್ಳಲ್ಪಡುತ್ತದೆ. ಹಾಗಿದ್ದರೆ ಆವತ್ತು,  ಅಸಿಂದು ಮತವನ್ನು ಯಾಕೆ ಸಿಂಧೂ ಮಾಡಿದ್ದರು? ಆ ಅಸಿಂಧು ಮತಗಳನ್ನು ಸಿಂಧೂ ಮಾಡಲು ಜೀವರಾಜ್ಪರ   ಇದ್ದ ಏಜೆಂಟರು ಏಕೆ ಅವಕಾಶ ಕೊಟ್ಟಿದ್ದರು? ಈ ಎರಡೂ ಪ್ರಶ್ನೆ ಮುಖ್ಯವಾಗುತ್ತದೆ. ಜೀವರಾಜ ಗೆಲ್ಲಲಿ ಅಥವಾ ರಾಜೇಗೌಡ ಗೆಲ್ಲಲಿ ನಮಗೆ ಇಲ್ಲಿ ಅದು ಮುಖ್ಯವೇ ಅಲ್ಲ. ಆದರೆ ಜನರ ಮತಕ್ಕೆ ನ್ಯಾಯ ದೊರಕಬೇಕು. ಜನರ ತೀರ್ಪು ಯಾಸಿಟೀಸ್ ಬಹಿರಂಗವಾಗಬೇಕು. ಆದರೆ ಅವತ್ತು ಬಂದ ಮತದ ಲೆಕ್ಕ ಬೇರೆ, ಇವತ್ತು ಬಂದ ಮತದ ಲೆಕ್ಕವೆ ಬೇರೆ

    ಆದರೆ ಅದನ್ನು ನಾವು ಏನನ್ನಬೇಕು? ಅಧಿಕಾರಿಗಳು ಇಲ್ಲಿ ತಪ್ಪು ಮಾಡಿದ್ದಾರೆ ಎನ್ನಬೇಕಾಗುತ್ತದೆ? ಅಧಿಕಾರಿಗಳು, ಆವತ್ತು ತಪ್ಪು ಮಾಡಿದ್ದರೋ ಅಥವಾ ಇವತ್ತು ತಪ್ಪು ಮಾಡಿದ್ದಾರೋ?

    Also Read  ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು

    ಕೇವಲ ಖಡಕ್ ನಿರ್ಧಾರ ಪತ್ರಿಕೆಯಲ್ಲಿದ್ದರೆ ಸಾಲದು, ಇಲಾಖೆಯ ಅಧಿಕಾರಿಗಳು, ತಪ್ಪು ಮಾಡಿದಾಗ ಅವರ ಮೇಲೆ ಯಾವ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೀರಿ ಅನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು, ಅವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಇವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಆಗಿದ್ದಾರೆ, ಅಧಿಕಾರಿಗಳತಪ್ಪು ಅಲ್ಲಿ ಇದೆ ಅಂತಾಯ್ತು. ಹಾಗಿರುವಾಗ ಆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಲೇಬೇಕು ತಾನೆ? ಜನರ ಆದೇಶವನ್ನು ಅವರು ಬದಲಾಯಿಸಿದ್ದಾರೆ ಅಂತನ್ನಿಸಿಕೊಳ್ಳುವುದಿಲ್ಲವೇ? ಜನರ ಆದೇಶವನ್ನೇ ಬದಲಿಸುವಷ್ಟು ಈ ಅಧಿಕಾರಿಗಳು ಹೆಚ್ಚು ಕೊಂಡಿದ್ದಾರೆ ಎಂದರೆ, ಅವರನ್ನು ಸುಮ್ಮನೆ ಬಿಡುವುದು ತಪ್ಪಾಗುತ್ತದೆ ಜನದ್ರೋಹವಾಗುತ್ತದೆ. ಈಗ, ಮಾತನ್ನು ಕೇಳಬೇಕಂತಿಲ್ಲ ಸ್ವತಹ ನ್ಯಾಯಾಲಯವೇ ಅಧಿಕಾರಿಗಳ ಮೇಲೆ ಜನದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು. ಹಾಗೆಯೇ ಆ ತಪ್ಪಿತಸ್ಥರ ಮೇಲೆ ಆಗಬೇಕು. ಹೀಗಾದಾಗ ಇನ್ನೆಲ್ಲೋ ಜನರ ಮತವನ್ನು ತಿರುಗಿಸುವುದಕ್ಕೆ ಯಾರೂ ಹೋಗುವುದಿಲ್ಲ. ಜನರ ಮತಕ್ಕೆ ಇನ್ನೂ ಒಂದಿಷ್ಟು ಬಲ ಬರುತ್ತದೆ. ಕೆಲಸವಾಗದಿದ್ದರೆ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜಾಪ್ರಭುತ್ವವಾದಿಗಳು ಅಂತ ಎನಿಸಿಕೊಂಡವರು ಈ ಬಗ್ಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಅಷ್ಟೇ. ಎಲ್ಲಕ್ಕೂ ಹೆಚ್ಚಾಗಿ ನ್ಯಾಯಾಂಗದ ಜವಾಬ್ದಾರಿ ಇಲ್ಲಿ ಅತ್ಯಂತ ಮಹತ್ವದ್ದು. ತನ್ನ ಜವಾಬ್ದಾರಿಯನ್ನು ನ್ಯಾಯಾಂಗ ನಿಭಾಯಿಸುತ್ತದೆ ಎನ್ನುವ ನಂಬಿಕೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಂಗವು ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ, ಈ ಕಾರಣಕ್ಕಾಗಿ ಜನರು ಹೋರಾಟಕ್ಕೆ ಇಳಿಯದಂತೆ ನೋಡಿಕೊಳ್ಳಬಹುದು ಎಂಬುದು ಕ್ಷೇತ್ರದ ಜನರ ನಂಬಿಕೆಯಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!
    ಸುಮಂತ್ ನಿಗೂಢ ಸಾವು ಪ್ರಕರಣ: ತನಿಖೆಗೆ ಹೊಸ ತಿರುವು—ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ!
    “ರೈಲಿನಲ್ಲೇ ಇಂಥಾ ಕೃತ್ಯ! ನಾಗರಿಕ ಪ್ರಜ್ಞೆ ಎಲ್ಲಿದೆ?”
    MRPLನಲ್ಲಿ ಭಾರೀ ಸ್ಫೋಟದ ಸದ್ದು “ಬಾಯ್ಲರ್ ಬ್ಲಾಸ್ಟ್”…!ಕಾಟಿಪಳ್ಳ, ಜೋಕಟ್ಟೆ , ಕೃಷ್ಣಾಪುರದ ಜನರಲ್ಲಿ ಆತಂಕ — ಫೇಸ್‌-3 ಘಟಕದ ಬಳಿ ಘಟನೆ ಶಂಕೆ
    ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ಮಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು..!ಅಡೆಂಜದಲ್ಲಿ ನಕಲಿ ನೋಟಿನ ಕಾರ್ಖಾನೆ ಬಯಲು! ಏಳು ಮಂದಿ ಅರೆಸ್ಟ್‌, ಕೋಟಿ ಕೋಟಿ ವಂಚನೆಗೆ ಬ್ರೇಕ್
    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    420 ವಂಚನೆ ಪ್ರಕರಣದಲ್ಲಿ ಮಹಿಳೆಯ ಬಂಧನ – ಪೊಲೀಸ್ ತನಿಖೆ
    ಉಡುಪಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಸಂತೋಷ್ ಡಿ.ಎಸ್. ನೇಮಕ
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
    ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?
    ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು
    ಆಸ್ತಿ ಬರೆದುಕೊಟ್ಟ ಅಪ್ಪ ಬೇಡವಾದನಾ?92ರ ತಂದೆ ಕೋರ್ಟ್‌ನಲ್ಲಿ ಗೆದ್ದ ಕಥೆ!
    ಗುರುವಾಯನಕೆರೆ ಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
    ನಿವೇಶನ ಮೋಸದ ಆರೋಪ: ಶಾಸಕ ಎಸ್ ಟಿ ಸೋಮಶೇಖರ್ ಬೆಂಬಲಿಗ ಕೇಬಲ್ ಕೃಷ್ಣನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
    ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥