📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್

    ED ಹೆಸರಲ್ಲಿ, 25 ಲಕ್ಷಕ್ಕೆ ಡಿಮ್ಯಾಂಡ್ ….ಬ್ಯಾಂಕ್ ಮ್ಯಾನೇಜರ್, ಪೊಲೀಸರ ಕಾರ್ಯ ಹ್ಯಾಟ್ಸಾಫ್ …

    ನೀವು ನಂಬ್ತೀರೋ ಬಿಡ್ತೀರೋ ಇದು ಮೊನ್ನೆ ಮೊನ್ನೆ ನಡೆದ ಘಟನೆ. ಎಂಥವರನ್ನೂ ತಮ್ಮ ಖೆಡ್ಡಕ್ಕೆ ಬಿಳಿಸಿ ಕೊಳ್ಳುತ್ತಾರೆ ಎನ್ನುವುದಕ್ಕೆ ಉದಾರಣೆಯೇ ಈ ಪ್ರಕರಣ ನೋಡಿ. ಮಾನಸಿಕವಾಗಿ ಸದೃಢರಾಗಿರುವಂತಹ, ವಿದ್ಯಾವಂತರೂ ಆಗಿರುವಂತಹ, ಹಿರಿಯ ಡಾಕ್ಟರ್ ಹಾಗೂ ಅವರ ಹೆಂಡತಿ ಇಬ್ಬರನ್ನು ಭಯ ಹುಟ್ಟಿಸಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ ಚಾಲಾಕಿ ವಂಚಕರ ಕಥೆ ಇದು.

    ಜಿಲ್ಲೆಯ ಜನರಿಗೆ ಇದು ಪಾಠವೂ ಆಗುತ್ತದೆ. ಹಾಗೆಯೇ ಆಡಳಿತ ವ್ಯವಸ್ಥೆಯು ಈ ಬಗ್ಗೆ ಒಂದು ಪರ್ಫೆಕ್ಟ್ ನಿರ್ಧಾರಕ್ಕೆ ಬರಬೇಕು ಅನ್ನುವುದಕ್ಕೆ ಪಾಠವು ಹೌದು. ಮಾನಸಿಕವಾಗಿ ಸದೃಢರಾದ ವ್ಯಕ್ತಿಯನ್ನೇ ದುರ್ಬಲಗೊಳಿಸಿ ಅವರಿಂದ ವಸೂಲಿ ಮಾಡುತ್ತಾರೆ ಆ ವಂಚಕರು. ಎಂತಹ ಕತರ್ನಾಕ್ ಇರಬಹುದು ನೀವೇ ಊಹಿಸಿ. ಯಾವುದೇ ಕಾಲ್ಪನಿಕ ಕ್ರೈಂ ಸ್ಟೋರಿ ಅಲ್ಲ. ಅದೆಲ್ಲೋ ದೂರದ ಊರಿನಲ್ಲಿ ನಡೆದದ್ದು ಅಲ್ಲ. ನಮ್ಮೆಲ್ಲರಿಗೂ ಸನಿಹದಲ್ಲೇ, ಮಂಗಳೂರು ನಗರದಲ್ಲಿಯೇ ಕೆಲವೇ ದಿನಗಳ ಹಿಂದೆ ನಡೆದಂತಹ ರೋಚಕ ರಿಯಲ್ ಕ್ರೈಂ ಸ್ಟೋರಿ. ಮೋಸಗಾರರು ಹೆಣದ ಬಲೆಯಿಂದ ಪಾರಾಗುವುದು ಸುಲಭವಿರಲಿಲ್ಲ. ಬಹುತೇಕವಾಗಿ ಎಲ್ಲವನ್ನು ಕಳೆದುಕೊಳ್ಳಲು ಸಿದ್ದರಾಗಿದ್ದಂತಹ ವ್ಯಕ್ತಿಯನ್ನು ಬಚಾವ್ ಮಾಡಿದ್ದಾದರೂ ಯಾರು?

    ಪತ್ರಿಕೆಗಳ ಮೂಲಕ, ಸೋಶಿಯಲ್ ಮೀಡಿಯಾಗಳ ಮೂಲಕ ಹೀಗೆ ಹತ್ತು ಹಲವು ರೀತಿಯಲ್ಲಿ ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅದೇ ಮೀಡಿಯಾಗಳ ಮೂಲಕವೇ ಜನರನ್ನು ಕೆಡ್ಡಕ್ಕೆ ಬೀಳಿಸುವ ಪ್ರಯತ್ನವು ನಡೆಯುತ್ತಿದೆ. ಜನರು ಯಾವುದನ್ನು ನಂಬಬೇಕು? ಸೋಶಿಯಲ್ ಮೀಡಿಯಾ ಇರಲಿ ಮೆಸೇಜು ವಾಟ್ಸಾಪ್ ಗಳಿರಲಿ ಅಥವಾ ಫೋನ್ ಕರೆನೇ ಇರಲಿ. ಅದು ಲೀಗಲಿ ಸರಿಯಲ್ಲ, ಯಾವುದೇ ದೂರು ದುಮ್ಮಾನಗಳು ಲೋಕಲ್ ಅಧಿಕಾರಿಗಳ ಮೂಲಕವೇ ಅಧಿಕೃತ ನೋಟಿಸ್ ಬೈ ಹ್ಯಾಂಡ್ ನೀಡುವುದನ್ನು ಕಡ್ಡಾಯಗೊಳಿಸಬೇಕು. ಯಾವುದೇ ಫೋನ್ ಕರೆ ಮೆಸೇಜ್ ಅಧಿಕೃತವಲ್ಲ ಅನ್ನುವುದನ್ನು ಸರ್ಕಾರವು ಎಲ್ಲಾ ಇಲಾಖೆಗಳಿಗೆ ತಿಳಿಸುವ ಮೂಲಕ ಅದನ್ನು ನಿಯಮವಾಗಿಸಬೇಕು. ಕಾರಣ, ಜನರಿಗೆ ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದು ಎನ್ನುವ ಪೂರ್ಣ ಜ್ಞಾನ ಇಲ್ಲ. ಎಂಥವರಿಗೂ ಆ ಜ್ಞಾನ ಬಾರದು ಕೂಡ. ಇದನ್ನೇ ಮುಂದಿಟ್ಟುಕೊಂಡು ಮೋಸಗಾರರು, ವಂಚಕರು ತಮ್ಮ ಕ್ರಿಮಿನಲ್ ಆಕ್ಟಿವಿಟೀಸ್ ಅನ್ನು ಮುಂದುವರಿಸುತ್ತಾರೆ. ಸಾರ್ವಜನಿಕರನ್ನು ಬೆಸ್ತು ಬೆಳಿಸುತ್ತಾರೆ. ಹಾಗಾಗಿ ಸರ್ಕಾರವೇ ಇದಕ್ಕೊಂದು ತಕ್ಕ ಶಾಸ್ತಿ ಮಾಡಬೇಕಿದೆ.

    ಸೋಶಿಯಲ್ ಮೀಡಿಯಾ ಇರಲಿ, ಪೋನೆ ಇರಲಿ, ಕೇವಲ ಮಾತನಾಡಲು ಮಾತ್ರವೇ ಅದು. ಬೆದರಿಸುವುದಕ್ಕೂ ಅಲ್ಲ, ವಿಶ್ವಾಸಾರ್ಹವೂ ಅಲ್ಲ ಅನ್ನೋದನ್ನು ಸರ್ಕಾರ ಮಾನ್ಯ ಮಾಡಬೇಕಿದೆ.
    ಎಸ್, ವಿಚಾರಕ್ಕೆ ಬರುವ. ಮಂಗಳೂರಿನ ಕದ್ರಿ ಪ್ರದೇಶದಲ್ಲಿ ವಾಸವಾಗಿರುವ ಹಿರಿಯ ಡಾ. ಒಬ್ಬರನ್ನು ಈ ಡಿಜಿಟಲ್ ವಂಚಕರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ. ಒಂದು ಗಂಟೆ ಎರಡು ಗಂಟೆಯಲ್ಲ, ಬರೋಬ್ಬರಿ ಏಳು ದಿನಗಳ ಕಾಲ ದಿನದ 24 ಗಂಟೆಯನ್ನು ವಿಡಿಯೋ ಕಾಲ್ ಮೂಲಕ ಹೌಸ್ ಅರೆಸ್ಟ್ ಮಾಡಿಟ್ಟಿದ್ದರು ಎಂಬ ಸ್ಪೋಟಕ ವಿಚಾರ ಬಂದಿದೆ ನೋಡಿ.
    ಅವರ ಹೆಸರು ಡಾಕ್ಟರ್ ರಾಮ್ ಮೋಹನ್. ಹಿರಿಯ ಕಣ್ಣಿನ ಡಾಕ್ಟರ್. ಕದ್ರಿ ಪ್ರದೇಶದಲ್ಲಿ ಮನೆ ಮಾಡಿಕೊಂಡಿರುವ ಅವರು, ಅಲ್ಲಿಯೇ ಟ್ರೀಟ್ಮೆಂಟನ್ನು ನೀಡುತ್ತಾರೆ. ಅದೇ ಡಾ. ರಾಮ್ ಮೋಹನ್ ರವರನ್ನು ಇ.ಡಿ ಹೆಸರಿನಲ್ಲಿ ಕೆಡ್ಡಕ್ಕೆ ಬಿಳಿಸುತ್ತಾರೆ. ಹೌದು ಅಪರಿಚಿತ ನಂಬರ್ನಿಂದ ಕರೆಯೊಂದು ಬರುತ್ತದೆ, ಸಹಜವಾಗಿ ರಾಮ್ ಮೋಹನ್ ರವರು ಯಾವುದೋ ಪೇಷಂಟ್ ಪಾರ್ಟಿ ಇರಬಹುದು ಎಂಬ ಕಾರಣಕ್ಕೆ ಆ ಕರೆಯನ್ನು ಸ್ವೀಕರಿಸುತ್ತಾರೆ. ತಕ್ಷಣವೇ ಗಂಭೀರವಾದ ವಾಯ್ಸ್ ಬರುತ್ತದೆ. ದೆಹಲಿಯ ಇ.ಡಿ ಕಚೇರಿ ಇಂದಲೇ, ಡಿಸಿಗ್ನೇಶನನ್ನು ಹೇಳಿಕೊಂಡ ವ್ಯಕ್ತಿ, ರಾಮು ಮೋಹನ್ ರವರನ್ನು ನಿಧಾನವಾಗಿ ಸಂಮೋಹನಕ್ಕೆ ತೆಗೆದುಕೊಳ್ಳುತ್ತಾರೆ. ರಾಮ್ ಮೋಹನ್ ಅವರ ಮಾತನ್ನು ನಂಬಲಾರಂಬಿಸುತ್ತಾರೆ.
    ಡಾಕ್ಟರ್ ರಾಮ ಮೋಹನ್ ಬುದ್ಧಿವಂತರು ,ವಿದ್ಯಾವಂತರು ಅಷ್ಟು ಬೇಗ ನಂಬುವಂತಹ ವ್ಯಕ್ತಿಯು ಅಲ್ಲ. ಆದರೂ ಅವರ ಗಟ್ಟಿತನ ಈ ವಂಚಕರ ಎದುರು ನಿಲ್ಲಲಿಲ್ಲ ನೋಡಿ. ಯಾವುದೋ ಒಬ್ಬ ವ್ಯಕ್ತಿಯ ಹೆಸರು ಹೇಳಿಕೊಂಡು ಅವರಿಗೂ ನಿಮಗೂ ಸಂಬಂಧವಿದೆ, ನಿಮ್ಮ ಅಕೌಂಟಿನಿಂದ ಅವರ ಅಕೌಂಟಿಗೆ ಹಣ ಟ್ರಾನ್ಸ್ಫರ್ ಆಗಿದೆ ಅಂತೆಲ್ಲ ಕಥೆ ಕಟ್ಟಿ ಅದಕ್ಕೆ ಬೇಕಾದ ಡಿಜಿಟಲ್ ಸಾಕ್ಷ್ಯವನ್ನು ಕ್ರಿಯೇಟ್ ಮಾಡಿ ಇವರಿಗೆ ತೋರಿಸುತ್ತಾ ಎನ್ಕ್ವೈರಿ ನೆಪದಲ್ಲಿ ಸಂಪೂರ್ಣವಾಗಿ ರಾಮ್ ಮೋಹನ್ ರವರನ್ನು ಜರ್ಜರಿತರನ್ನಾಗಿಸುತ್ತಾರೆ.
    ತಕ್ಷಣವೇ ವಿಡಿಯೋ ಕಾಲಿಗೆ ಬರಲು ಹೇಳುತ್ತಾರೆ ಹಾಗೆಯೇ ಐ ಎಂ ಓ ಎಂಬ ಆಪನ್ನು ಡೌನ್ಲೋಡ್ ಮಾಡಿಕೊಳ್ಳಲು ಹೇಳುತ್ತಾರೆ. ಅದರ ಮೂಲಕ ಅವರ ವಾಯ್ಸ್ ಕೇಳುತ್ತಲೇ ಇರಬೇಕು, ವಿಡಿಯೋ ಆಫ್ ಮಾಡುವ ಹಾಗಿಲ್ಲ ಎಂಬ ಕಂಡಿಶನ್ ನೊಂದಿಗೆ ಶುರುವಾದ ಎನ್ಕ್ವೈರಿಯು ಸುಪ್ರೀಂ ಕೋರ್ಟಿಗೂ ಹೋಗುತ್ತದೆ. ಸಮನ್ಸ್ ಕೂಡ ಬರುತ್ತದೆ. ಎಲ್ಲವೂ ಇವರ ಕುಳಿತಲ್ಲಿಯೇ ಆಗುತ್ತಿರುತ್ತದೆ ಆ ಕಡೆಯಿಂದಲೂ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಆಫೀಸ್, ಕೋರ್ಟ್ ಎಲ್ಲಾ ದೃಶ್ಯಕ್ಕೂ ಹೊಂದಿಕೆಯಾಗುವಂತಹ ಪ್ರದೇಶಗಳನ್ನು ಸೃಷ್ಟಿಸಿ ಕೊಂಡಿದ್ದಾರವರು. ಅದನ್ನೆಲ್ಲ ನೋಡುತ್ತಿದ್ದ ಡಾ.ರಾಮೋಹನ್ ಅವರ ಮಾತನ್ನು ನಂಬುತ್ತಾ ಸಾಗುತ್ತಾರೆ. ಅಷ್ಟೇ ಅಲ್ಲ, ಈ ಡಿ ಅಧಿಕಾರಿ ಹೇಳುತ್ತಾರೆ. ನೀವು ಇನ್ನೋಸೆಂಟ್ ಇರಬೇಕು, ಆದರೆ ನಾವು ಏನು ಮಾಡೋದು. ಇಲ್ಲಿರುವ ಸಾಕ್ಷಿಗಳು ನಿಮ್ಮ ವಿರುದ್ಧವಾಗಿದೆ. ನೀವು ತನಿಖೆಗೆ ಸಹಕರಿಸಬೇಕು ಅಂತ ಹಂತಹಂತವಾಗಿ ಒತ್ತಡ ಹೇರುತ್ತ ಸಾಗುತ್ತಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ದಿನಗಳ ಕಾಲ ದಿನದ 24 ಗಂಟೆಯೂ ಆ ವಿಡಿಯೋ ಕಾಲ್ ಆನಿರಬೇಕು. ಆ ಮನೆಯಲ್ಲಿ ಒಂದೇ ಒಂದು ಮಾತುಗಳು ಕೂಡ ಅವರಿಗೆ ಕೇಳಲೇಬೇಕು. ಆ ರೀತಿಯ ವ್ಯವಸ್ಥೆಯನ್ನು ಅವರು ಮಾಡಿಕೊಂಡು ಹೋಗುತ್ತಾರೆ. ಮನೆಗೆ ಯಾರೇ ಬರಲಿ, ಇವರಿಗೆ ಬಂದವರು ಯಾರು ಅಂತ ಹೇಳಬೇಕು. ಹಾಗೆಯೇ ಬಂದವರಲ್ಲಿ ಏನು ಮಾತನಾಡಬೇಕು ಅಂತಲೂ ಅವರೇ ಹೇಳಿಕೊಡುತ್ತಾರೆ. ಹಾಗೆಯೇ ಮಾತನಾಡಬೇಕು. ಕೆಲಸಕ್ಕೆ ಬರುವವರಲ್ಲಿ ಬೇಗ ಬೇಗ ಕೆಲಸ ಮಾಡಿ ಹೋಗಲು ಹೇಳಬೇಕು ಈ ರೀತಿಯ ನಿರ್ದೇಶನಗಳನ್ನು ಅವರ ಹೆಂಡತಿಗೆ ಈ ನಕಲಿ ಇ.ಡಿ ಅಧಿಕಾರಿಗಳು ಕೊಡುತ್ತಾರೆ.
    ಸುಪ್ರೀಂ ಕೋರ್ಟ್ ವಕೀಲರು ಜಡ್ಜ್ಗಳು ಎಲ್ಲವೂ ಅಲ್ಲಿ ಪಾತ್ರಧಾರಿಗಳಾಗಿ ಬರುತ್ತದೆ. ಇದನ್ನೆಲ್ಲಾ ನೋಡಿದಾಗ ಡಾ.ರಾಮ ಮೋಹನ್ ಹೆದರದೆ ಇರಲು ಸಾಧ್ಯವೇ? ಅರೆಸ್ಟ್ ಮಾಡಲಾಗುತ್ತದೆ ಅನ್ನುವಷ್ಟರ ಮಟ್ಟಿಗೆ ಅವರು ಹೆದರಿಸಿರುತ್ತಾರೆ. ಸುಳ್ಳು ಪ್ರಕರಣ ಅಂತ ಎಷ್ಟೇ ಹೇಳಿದರು ಅದನ್ನು ನೀವು ಕೋರ್ಟಿನಲ್ಲಿ ಪ್ರೂವ್ ಮಾಡಬೇಕು ಅಂತ ಹೇಳುವ ಮೂಲಕ ಇವರನ್ನು ತಣ್ಣಗಾಗಿಸುತ್ತಾರೆ. ಅಷ್ಟೊತ್ತಿಗೆ ಡಾಕ್ಟರ್ ರಾಮಮೋಹನ್ ಬಹುತೇಕವಾಗಿ ದುರ್ಬಲರಾಗುತ್ತಾರೆ. ವಂಚಕರಿಗೆ ಬೇಕಾಗಿದ್ದು ಇದೆ.
    ನಮ್ಮ ಮಾತನ್ನು ಕೇಳಬೇಕು. ಅಲ್ಲಿಂದ ಶುರುವಾಗುತ್ತದೆ ಒತ್ತಡಗಳು. ಇವರ ಮೂಲಕವೇ ವಂಚಕರು ಅವರ ಆರ್ಥಿಕ ಪರಿಸ್ಥಿತಿ ಎಷ್ಟು ಡೆಪಾಸಿಟ್ ಇದೆ ಎಲ್ಲೆಲ್ಲಿ ಏನೇನು ಪ್ರಾಪರ್ಟೀಸ್ ಇದೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ.
    ಎಲ್ಲೇ ಹೋಗುವುದಿದ್ದರೂ, ಮೊಬೈಲ್ ವಿಡಿಯೋ ಕಾಲ್ ಆನಲ್ಲಿರಬೇಕು. ಯಾರಲ್ಲಿ ಮಾತನಾಡುವುದಿದ್ದರೂ ಅವರಲ್ಲಿ ಪರ್ಮಿಷನ್ ತೆಗೆದುಕೊಂಡೇ ಮಾತನಾಡಬೇಕು. ಹಿಂದಿನಿಂದ ಕೈ ಸನ್ನೆಯಿಂದ ಏನನ್ನು ಮಾಡುವ ಹಾಗಿಲ್ಲ. ಎಲ್ಲಾ ಕರಾರುಗಳ ಮೂಲಕ ಡಾಕ್ಟರನ್ನು ಕಟ್ಟಿ ಹಾಕಲಾಗಿತ್ತು.
    ಅಷ್ಟು ಹೊತ್ತಿಗೆ ಬರೋಬ್ಬರಿ ಆರು ದಿನ ಕಳೆದು ಹೋಗಿದೆ ಅವರು ಹೌಸ್ ಅರೆಸ್ಟ್ ಆಗಿ. ಏಳನೆಯ ದಿನ, ಅಧಿಕಾರಿಗಳು ಸುಪ್ರೀಂ ಕೋರ್ಟ್ ಕಲಾಪಗಳ ಮೂಲಕವೇ ಡಾಕ್ಟರ್ ರಾಮಮೋಹನ್ ಅವರ ಎಲ್ಲಾ ಚಿರ ಹಾಗೂ ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪರ್ಮಿಷನ್ ಕೇಳುತ್ತಾರೆ. ಅದಕ್ಕೆ ಸುಪ್ರೀಂ ಕೋರ್ಟ್, ಡಾಕ್ಟರ್ ರಾಮ ಮೋಹನ್ ಈ ಪ್ರಕರಣದಲ್ಲಿ ಎಷ್ಟು ಪರ್ಸೆಂಟ್ ಆರೋಪಿ ಅಂತ ಕಾಣಿಸುತ್ತದೆ ಎಂದು ಪ್ರಶ್ನೆಸುತ್ತಡೆ . ಅದಕ್ಕ ಅವರು, 22 ಪರ್ಸೆಂಟ್ ಅಂತ ಉತ್ತರಿಸುತ್ತಾರೆ. 22 ಪರ್ಸೆಂಟ್ ಆಗಿದ್ದರೆ ಅರೆಸ್ಟ್ ಯಾಕೆ ಮಾಡಬೇಕು? ಅವರ ಎಲ್ಲಾ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಬೇಕು? 25 ಲಕ್ಷ ಡೆಪಾಸಿಟ್ ಇಡಲು ಹೇಳಿ ಎಂದು ಆದೇಶಿಸುತ್ತಾರೆ. ಆದೇಶದ ಅಣತಿಯಂತೆ ಡಾ. ರಾಮಮೋಹನ್ ರವರು 25 ಲಕ್ಷವನ್ನು ಸುಪ್ರೀಂ ಕೋರ್ಟಿಗೆ ಡೆಪಾಸಿಟ್ ಆಗಿ ಇಡಬೇಕು. ಅದನ್ನು ಈ ಕ್ಷಣವೇ ಡೆಪಾಸಿಟ್ ಮಾಡಬೇಕು ಅಂತ ಇ.ಡಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಂತೆಯೇ, ರಾಮ್ ಮೋಹನ್ ಅವರು ಬಂಧನ ಭೀತಿಯಿಂದ ಪಾರಾದೆ ಎಂಬ ನಿರಾಳತೆಯಿಂದ 25 ಲಕ್ಷ ಡೆಪಾಸಿಟ್ ಇಡುವ ಸಲುವಾಗಿ ಮಲ್ಲಿಕಟ್ಟೆಯ ಎಸ್ ಬಿ ಐ ಬ್ಯಾಂಕಿನ ಶಾಖೆಗೆ ಹೋಗುತ್ತಾರೆ. ಅಲ್ಲಿ ಹೋದಾಗಲೂ ಕೂಡ ಗೌಪ್ಯವಾಗಿ ವಿಡಿಯೋ ಕಾಲ್ ಆನ್ ಆಗಿಯೇ ಇದೆ. ಅಲ್ಲಿನ ಮ್ಯಾನೇಜರ್ ಉತ್ತರಪ್ರದೇಶ ಮೂಲದ ಸೌರಭ ಎನ್ನುವ ವ್ಯಕ್ತಿಗೆ, ಯಾಕೋ ಅನುಮಾನ ಬಂದಿದೆ. ಮೋಹನ್ ರವರು ಸರಿಯಾಗಿ ಉತ್ತರ ಕೊಡುತ್ತಿಲ್ಲ, 25 ಲಕ್ಷ ಡೆಪಾಸಿಟ್ ವಿಥ್ ಡ್ರಾ ಮಾಡುವುದಕ್ಕೆ ಹಾತರೋಯುತ್ತಿದ್ದಾರೆ. ಇದರಿಂದ ಮ್ಯಾನೇಜರ್ ಅನುಮಾನ ಹೆಚ್ಚಾಗಿದೆ. ಅವರು ಗೌಪ್ಯವಾಗಿ ರಾಮ್ ಮೋಹನ್ ರವರನ್ನು ಅಲ್ಲಿಯೇ ಕೂರಿಸಿ, ಕದ್ರಿ ಪೊಲೀಸರಿಗೆ ಇಂಫಾರ್ಮ್ ಮಾಡಿದ್ದಾರೆ.
    ತಕ್ಷಣವೇ ಇನ್ಸ್ಪೆಕ್ಟರ್ ಅನಂತಪದ್ಮನಾಭ ಹಾಗೂ ಸಿಬ್ಬಂದಿಗಳು ಬ್ಯಾಂಕಿಗೆ ಬಂದಿದ್ದಾರೆ. ಏನೇ ಹೇಳಿದರು ಡಾಕ್ಟರ್ ರಾಮ ಮೋಹನ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ವಂಚಕರು ನೀಡಿದ ಕೋರ್ಟಿನ ದಾಖಲೆಗಳು ಹಾಗೂ ಇಡೀ ಕಚೇರಿಯ ರೀತಿ ರಿವಾಜುಗಳು ಅವರಲ್ಲಿ ಅದೇ ಸತ್ಯ ಅಂತಲೇ ಭಾಸವಾಗಿತ್ತು. ಈ ಸಂದರ್ಭದಲ್ಲಿ, ಏನೇ ಬಂದರೂ ನಾವಿದ್ದೇವೆ, ಹೆದರಬೇಡಿ ಡಾಕ್ಟ್ರೇ, ನಿಮಗೇನು ಆಗುವುದಿಲ್ಲ ಕರ್ನಾಟಕ ಪೊಲೀಸರ ಮೇಲೆ ನಂಬಿಕೆ ಇಡಿ ಅಂತ ಸ್ವತಹ ಅನಂತಪದ್ಮನಾಭ ಡಾಕ್ಟರ್ ಗೆ ಹೇಳುತ್ತಾರೆ. ಬ್ಯಾಂಕ್ ಮ್ಯಾನೇಜರ್ ಕೂಡ ತಿಳುವಳಿಕೆ ಹೇಳುತ್ತಾ ಹೋಗುತ್ತಾರೆ. ಯಾವಾಗ ವಂಚಕರಿಗೆ ತಾವು ಸಿಕ್ಕಾಕಿಕೊಳ್ಳುತ್ತೇವೆ ಅಂತ ಅನಿಸುತ್ತದೆಯೋ, ಆಗವರು ಗಪ್ ಚುಪ್ ಆಗುತ್ತಾರೆ. ಎಸ್ಕೇಪ್ ಆಗುತ್ತಾರೆ. ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಇಷ್ಟೆಲ್ಲಾ ಅನಾಹುತವನ್ನು ಕಾನೂನಿನ ಸುಳಿಗೆ ಸಿಲುಕಿ ಕೊಳ್ಳುವಂತೆ ಮಾಡಿರುವುದಿಲ್ಲ. ಎಸ್ಕೆಪಾಗಲು ಏನು ಬೇಕೋ ಎಲ್ಲವನ್ನು ಮಾಡಿಕೊಂಡಿರುತ್ತಾರೆ. ಆದರೆ ಅದನ್ನು ಮೀರಿ, ನಮ್ಮ ಪೊಲೀಸರು ಈ ವಂಚಕರನ್ನು ಹೆಡೆಮುರಿ ಕಟ್ಟುತ್ತಾರೆಂಬ ನಂಬಿಕೆಯಲ್ಲಿ ಡಾ. ರಾಮಮೋಹನ್ ಇದ್ದಾರೆ.
    ಅವರ ಮನವಿ ಇಷ್ಟೇ, ಎಲ್ಲಾ ಕಡೆ ಮಲ್ಲಿಕಟ್ಟೆ ಬ್ರಾಂಚ್ ನಲ್ಲಿರುವ ಎಸ್ ಬಿ ಐ ಬ್ಯಾಂಕಿನ ಮ್ಯಾನೇಜರ್ ಸೌರಬ ತರದವರು ಇರಬೇಕು. ಹಾಗೆಯೇ ಮಂಗಳೂರಿನ ಅದರಲ್ಲೂ ಕದ್ರಿ ಪೊಲೀಸರ ತರದವರು ಇದ್ದರೆ, ಇಂತಹ ಕ್ರಿಮಿನಲ್ ಆಕ್ಟಿವಿಟೀಸ್ ಗೆ ಜಾಗ ಇರುವುದಿಲ್ಲ. ಜನರು ಜಾಗೃತ ರಾಗಬೇಕು. ನಮ್ಮ ಜಾಗೃತೆ ಎಷ್ಟಿದ್ದರೂ ಸಾಲದು. ನಾನು ಬೆಸ್ತು ಬೀಳುವುದಿಲ್ಲ ಅಂತ ಅಂದುಕೊಂಡಿದ್ದೆ. ಈಗ ಗೊತ್ತಾಯ್ತು, ವಂಚಕರು ಎಂತವರನ್ನು ಬೆಸ್ತು ಬಿಳಿಸುತ್ತಾರೆ ಅಂತ. ಅಪರಿಚಿತ ನಂಬರ್ ಗಳನ್ನು ಆದಷ್ಟು ಅವಾಯ್ಡ್ ಮಾಡಿ ಎಂಬ ಮನವಿಯನ್ನು ಜಿಲ್ಲೆಯ ಜನರಿಗೆ ಡಾ. ರಾಮಮೋಹನ್ ರವರು ಮಾಡಿದ್ದಾರೆ.

    Also Read  ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ....

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ✈️ ಮಂಗಳೂರಿನ ಮುಡಿಗೆ ಮತ್ತೆರಡು ಚಿನ್ನದ ಗರಿ!
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಮಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು..!ಅಡೆಂಜದಲ್ಲಿ ನಕಲಿ ನೋಟಿನ ಕಾರ್ಖಾನೆ ಬಯಲು! ಏಳು ಮಂದಿ ಅರೆಸ್ಟ್‌, ಕೋಟಿ ಕೋಟಿ ವಂಚನೆಗೆ ಬ್ರೇಕ್
    ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    ಉರ್ವಸ್ಟೋರ್ ಮೈದಾನದಲ್ಲಿ ಕತ್ತಿಯಿಂದ ಕಡಿದು ಹತ್ಯೆಗೆ ಯತ್ನ : ಆರೋಪಿ ಬಂಧನ
    ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ