📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ

    ಯಶಸ್ಸು ತಂದಿಟ್ಟ ಇಂಟರ್ನ್‌ಗೆ ಸಿಕ್ಕಿತು ಶಾಕ್!ಟಾಕ್ಸಿಕ್ ಕಂಪನಿಗಳ ಬಗ್ಗೆ ಇರಲಿ ಎಚ್ಚರ!

    ಒಂದು ಸಣ್ಣ ಸ್ಟಾರ್ಟ್‌ಅಪ್ (Startup) ಕಂಪನಿಯಲ್ಲಿ ಕೇವಲ 6 ಜನ ಕೆಲಸ ಮಾಡುತ್ತಿದ್ದರು. ಅಲ್ಲಿಗೆ AI ಇಂಟರ್ನ್ ಆಗಿ ಸೇರಿದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಹಗಲು ರಾತ್ರಿ ಕಷ್ಟಪಟ್ಟು ಕಂಪನಿಯ ಇಡೀ ತಾಂತ್ರಿಕ ವ್ಯವಸ್ಥೆಯನ್ನು (SLM Infrastructure) ತಾನೊಬ್ಬನೇ ಸಿದ್ಧಪಡಿಸಿದ್ದ. ಕಂಪನಿಯ ಖರ್ಚನ್ನು ಶೇಕಡಾ 95 ರಷ್ಟು ಕಡಿಮೆ ಮಾಡಿ, ಬರೋಬ್ಬರಿ 7 ಕ್ಕೂ ಹೆಚ್ಚು ಹೊಸ ಗ್ರಾಹಕರನ್ನು (Clients) ತಂದುಕೊಟ್ಟಿದ್ದ!

    ಒಂದು ವಾಟ್ಸಾಪ್ ಮೆಸೇಜ್…ಎಲ್ಲಾ ಉಲ್ಟಾ!

    ತನ್ನ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಸಂಬಳ ಹೆಚ್ಚಿಸಬೇಕು (Raise) ಎಂದು ಆ ಇಂಟರ್ನ್ ಮ್ಯಾನೇಜರ್‌ಗೆ ಒಂದು ಸಾಮಾನ್ಯ ವಾಟ್ಸಾಪ್ ಮೆಸೇಜ್ ಕಳುಹಿಸಿದ. ಅಷ್ಟಕ್ಕೇ ಆ ಕಂಪನಿಯ ಮ್ಯಾನೇಜ್‌ಮೆಂಟ್ ಕಂಗಾಲಾಯಿತು! ಸಂಬಳ ಹೆಚ್ಚು ಮಾಡುವುದನ್ನು ಬಿಟ್ಟು, “ನೀನು ಮಾಡಿದ್ದೆಲ್ಲಾ ಬರೀ ಸಣ್ಣ ಪುಟ್ಟ ಟೆಸ್ಟ್ ಅಷ್ಟೇ” ಎಂದು ಆತನ ಸಾಧನೆಯನ್ನು ಕೀಳಾಗಿ ಕಂಡರು. ಅಷ್ಟೇ ಅಲ್ಲ, ಆ ಒಂದೇ ಒಂದು ಮೆಸೇಜ್‌ಗಾಗಿ ಆತನನ್ನು ಕೆಲಸದಿಂದಲೇ ತೆಗೆದುಹಾಕಿದರು!

    Also Read  ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್

    ಕಂಪನಿಯ CEO ಆ ಇಂಟರ್ನ್‌ಗೆ ಬರೋಬ್ಬರಿ 30 ನಿಮಿಷಗಳ ಕಾಲ ಕ್ಲಾಸ್ ತಗೊಂಡರು. “ನಿನಗೆ ಕೇವಲ ಹಣದ ಆಸೆ (Money-minded). ನಿನ್ನ ಮೆಸೇಜ್ ನೋಡಿ ನಮ್ಮ ಮ್ಯಾನೇಜರ್ ಹೃದಯವೇ ಒಡೆದುಹೋಗಿದೆ” ಎಂದು ನಾಟಕೀಯವಾಗಿ ಮಾತನಾಡಿದರು.

    ಇಂಟರ್ನ್ ಆಕ್ರೋಶ: “ಅವರು ‘ನಮ್ಮಿಂದ ಇಷ್ಟೇ ಹಣ ಕೊಡಲು ಸಾಧ್ಯ’ ಎಂದು ನೇರವಾಗಿ ಹೇಳಬಹುದಿತ್ತು, ನಾನೂ ಒಪ್ಪುತ್ತಿದ್ದೆ. ಆದರೆ ನನ್ನ 4 ತಿಂಗಳ ಕಷ್ಟದ ಕೆಲಸವನ್ನು ಮರೆತು, ಈ ರೀತಿ ಮಾಡಿದ್ದು ಸರಿ ಇಲ್ಲ. ನಾನು ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ!” ಎಂದು ಆ ಇಂಟರ್ನ್ ತನ್ನ ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ಪಡೆದು ಅಲ್ಲಿಂದ ಹೊರಬಂದಿದ್ದಾನೆ.

    ಈ ವಿಷಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸ್ಟಾರ್ಟ್‌ಅಪ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ:

    • ಇಂಟರ್ನ್‌ಗೆ ಬೆಂಬಲ: “ಬ್ರದರ್, ಧೃತಿಗೆಡಬೇಡ. ನಿನ್ನ ಯೋಗ್ಯತೆಯನ್ನು ಯಾರ ಮುಂದೆಯೂ ಕಡಿಮೆ ಮಾಡಿಕೊಳ್ಳಬೇಡ. ನಿನ್ನನ್ನು ಕಳೆದುಕೊಂಡಿದ್ದು ಆ ಕಂಪನಿಯ ದುರಾದೃಷ್ಟ. ನಿನ್ನ ಜ್ಞಾನದೊಂದಿಗೆ ಮುಂದೆ ಸಾಗು, ನಿನಗೆ ಒಳ್ಳೆ ಭವಿಷ್ಯವಿದೆ” ಎಂದು ಜನರು ಧೈರ್ಯ ತುಂಬುತ್ತಿದ್ದಾರೆ.
    • ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಛೀಮಾರಿ: “ಕೆಲಸ ಮಾಡಿಸಿಕೊಳ್ಳುವಾಗ ಪ್ರೊಫೆಷನಲ್, ಸಂಬಳ ಕೇಳಿದರೆ ಡ್ರಾಮಾನಾ?” ಎಂದು ನೆಟ್ಟಿಗರು ಕಂಪನಿಯ CEO ಕಾಲೆಳೆಯುತ್ತಿದ್ದಾರೆ.
    Also Read  ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!

    ಒಟ್ಟಿನಲ್ಲಿ, ಪ್ರತಿಭೆಗೆ ಬೆಲೆ ಕೊಡದ ಟಾಕ್ಸಿಕ್ (Toxic) ಕಂಪನಿಗಳಿಂದ ದೂರ ಇರುವುದೇ ಒಳ್ಳೆಯದು ಎಂಬ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ!

    ##EmployeeRights #CorporateReality"##KnowYourWorth"##StartupCulture##ToxicWorkplace"

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಮಚ್ಚು ದಾಳಿ: ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
    ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಭಾರತೀಯರ ಟ್ರಾವೆಲ್ ಲಿಸ್ಟ್‌ನಿಂದ ಯುರೋಪ್ ಔಟ್.. ಲಂಡನ್, ಪ್ಯಾರಿಸ್ ಬಿಟ್ಟು ಥೈಲ್ಯಾಂಡ್, ಮಲೇಷ್ಯಾ ಜಪಾನ್‌ನತ್ತ ಪ್ರವಾಸಿಗರ ದಂಡು ..
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
    ಅರೆಬೈಲ್ ಘಾಟ್ ನ ಕಾರು ಅಫಘಾತ ವ್ಯವಸ್ಥಿತ ಕೊಲೆ…!
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ