📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?

ಉಡುಪಿ ನಗರಸಭೆ ಬರೀ ಬಡವರ ಅಕ್ರಮಗಳ ವಿರುದ್ಧ ಹೌಹಾರುವುದು ಬಿಟ್ರೆ ,ಶ್ರೀ ಮಂತರ ಅಕ್ರಮಗಳ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ಮೊನ್ನೆ ಮೊನ್ನೆಯಷ್ಟೇ ನಗರಸಭೆ ಪಕ್ಕದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ದ ಭೂಮಿಯಲ್ಲಿ ಜನಸಮಾನ್ಯರ ತೆರಿಗೆ ಕಟ್ಟುವ ಕಚೇರಿ ಮಾಡುವ ಉದ್ದೇಶಕ್ಕಾಗಿ ತಾತ್ಕಲಿಕ ಶೆಡ್ ಒಂದನ್ನು‌ ಕಟ್ಟಲು ಪ್ರಾರಂಭಿಸಿದ್ದರು,ಇದು ಗೊತ್ತಾಗುತ್ತಿದ್ದಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು, ಸ್ಪೈಡರ್ ಮ್ಯಾನ್ ( ಸ್ವಯಂಘೊಷಿತ ಸಾಮಾಜಿಕ ಕಾರ್ಯಕರ್ತ) ಫೋಟೊ ತೆಗೆದು ನಗರಸಭೆ ಅರೋಗ್ಯ ಇಲಾಖೆಗೆ ದೂರು ನೀಡಿದ್ದರು, ನಗರ ಸಭೆ ಅದೇ ವೇಗದಲ್ಲಿ ಅದನ್ನು ತೆರವುಗೊಳಿಸಿದ್ದರು.

ಅದರೆ ನಮ್ಮ ಬಹಿರಂಗ ಪ್ರಶ್ನೆ ಏನು ಅಂದ್ರೆ ಉಡುಪಿಯಲ್ಲಿ ಇಷ್ಟೊಂದು ಅಕ್ರಮ ಕಟ್ಟಡಗಳು ತಲೆ ಎತ್ತಿವೆ . ಒಬ್ಬನೇ ಒಬ್ಬ ಸಾಮಾಜಿಕ‌ ಕಾರ್ಯಕರ್ತ ಧ್ವನಿ ಎತ್ತಿಲ್ಲ. ಪುಟ್ಟ ಶೆಡ್ ವಿರುದ್ದ ದೂರು‌ ಕೊಟ್ಟವರು ನಗರಸಭೆ ಪಕ್ಕದಲ್ಲೇ ಕಟ್ಟಿರುವ ಚರ್ಚಿನ ಅಕ್ರಮ‌ ಕಟ್ಟಡದ ವಿರುದ್ದ ಯಾಕೆ ದೂರು ಕೊಟ್ಟಿಲ್ಲ.? ನಗರಸಭೆ ಯಾಕೆ ಚರ್ಚ್ ವಿರುದ್ದ ಕ್ರಮ ಕೈಗೊಂಡಿಲ್ಲ. ನಗರ ಸಭೆ ಪೌರಯುಕ್ತರು ಚರ್ಚ್ ಅಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿಕೊಂಡತ್ತಿದೆ.

ಅಲ್ಲ ಸ್ವಾಮೀ ಕಾನೂನು ಎಲ್ಲರಿಗೂ ಒಂದೇ ತಾನೇ…ಬಡವನ‌ ಶೆಡ್ ತೆರವು ಮಾಡುವುದಾದರೆ ಅಕ್ರಮ‌ ಚರ್ಚ್ ಕಟ್ಟಡ ಯಾಕೆ ತೆರವು ಮಾಡ್ತಾ ಇಲ್ಲ. ಪೌರಾ ಯುಕ್ತರು ಹಾಗೂ ಸಾಮಾಜಿಕ ಕಾರ್ಯ ಕರ್ತರ ಮೌನವೇಕೆ…?

ಇದೆಷ್ಟೇ ಅಲ್ಲ ನಗರದ ಸಿಟಿ ಸೆಂಟರ್ ಬಳಿ ನಿರ್ಮಾಣಗೊಂಡಿರುವ ಅಕ್ರಮ ಫುಡ್ ಸ್ಟಾಲ್ಗಳ ಬಗ್ಗೆ ಯಾಕೆ ಕ್ರಮ ಇಲ್ಲ.ಇದು ಕೂಡ ಅಕ್ರಮ ಅಲ್ಲವೇ…? ಅಭರಣ ಡೈಮಂಡ್ಸ್ ಕಟ್ಟಡ ಅಕ್ರಮ‌ ಅಲ್ಲವೇ…? ಇದನ್ನ ಯಾಕೆ ತೆರವುಗೊಳಿಸುತ್ತಿಲ್ಲ. ಬನ್ನಂಜೆ ಬಳಿ‌ ಡಿವೈಡರ್ ತೆರವುಗೊಳಿಸಿದ್ದು ಅಕ್ರಮ ಅಲ್ಲವೇ. ಕ್ರಮ ಯಾಕಿಲ್ಲ..?

ಮಲ್ಪೆ ಪೇಟೆಯಲ್ಲಿ ಬಂದರು ಇಲಾಖೆ ಭೂಮಿಯಲ್ಲಿ ಅಯ್ಯಪ್ಪ ಭಕ್ತರು ಕಟ್ಟಿರುವ ವಾಣಿಜ್ಯ‌ ಕಟ್ಟಡ ಅಕ್ರಮ ಅಲ್ಲವೇ….? ಮಲ್ಪೆ ಫಿಶ್ ಸೆಂಟರ್ ಎದುರುಗಡೆ ಕಟ್ಟಿರುವ ಫುಡ್ ಕಾರ್ನರ್ ಗಳು ಅಕ್ರಮ ಅಲ್ಲವೇ..?

ಕುಂಜಿಬೆಟ್ಟು ಬಳಿ ಮಾರ್ವಾಡಿಯೊಬ್ಬ ಕಟ್ಟುತ್ತಿರುವ ಅಕ್ರಮ ಕಟ್ಟಡ ವಿರುದ್ದ ಯಾಕೆ ನಗರಸಭೆ ಕಮ್ಮಿಷನರ್ ಅಬ್ಬರಿಸುವುದಿಲ್ಲ.
ಝಣ ಝಣ ಕಾಂಚಣಕ್ಕೆ ತಲೆ ಬಾಗಿದ್ದರಾ…..ಕಮ್ಮಿಷನರ್ …! ಅಥವಾ ಕಾಂಗ್ರೆಸ್ ಪುಢಾರಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರಾ..‌?
ವಿದ್ಯಾವಂತ ಅಧಿಕಾರಿಗಳು ಈ ರೀತಿ ಕೀಳು ಮಟ್ಟಕ್ಕೆ ಇಳಿದಿರುವುದು ಉಡುಪಿ ಜಿಲ್ಲೆಗೆ ಶೋಭೆ ತರುವಂತಹದ್ದಲ್ಲ. ನಗರಸಭೆ ಯುವ ಪೌರಯುಕ್ತರ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ನಿರ್ಮಾಣವಾಗಿದೆ.ಅದಷ್ಟು ಬೇಗ ಪೌರಯುಕ್ತರು ಈ ಮೇಲಿನ ಎಲ್ಲ ಅಕ್ರಮ ಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಸಣ್ಣ ಪುಟ್ಟ ವ್ಯವಹಾರ ಮಾಡುವವರ ಮೇಲೆ ಗದಾಪ್ರಹಾರ ಮಾಡುವ ಬದಲು ಚರ್ಚ್ ಬಿಲ್ಡಿಂಗ್ , ಸಿಟಿಸೆಂಟರ್ ಅಕ್ರಮ ಫುಡ್ ಸ್ಟಾಲ್ ಗಳು, ಅಭರಣ ಡೈಮಂಡ್ ಕಟ್ಟಡ, ಬನ್ನಂಜೆ‌ ಡಿವೈಡರ್ ಸೇರಿದಂತೆ ಹತ್ತಾರು ಅಕ್ರಮಗಳ‌ ವಿರುದ್ದ ಕ್ರಮ ಕೈಗೊಂಡು ಉಡುಪಿ ಜನ ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಹೆಚ್ಚಿಸಿಕೊಳ್ಳಿ, ಇದು ಎಲ್ಲರಿಗೂ ಅನ್ವಯ.

##SocialWorkers #MunicipalCouncil#illegal construction#latest news#PublicChallenge #SilenceOnCorruption#SpeakUp#Udupi nagarasabhe#udupi news

COMMENTS

Login with Gmail to comment

ಇನ್ನಷ್ಟು ಸುದ್ದಿ

ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಸಾರ್ವಜನಿಕರಲ್ಲಿ ವಿನಂತಿ …!
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್