📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ


ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶ್ವಾಸಕ್ಕೆ ಧಕ್ಕೆಯೊಡ್ಡುವ ರೀತಿಯ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಪುಣ್ಯಶ್ರೀ (20), ತಂದೆ ಜಯರಾಮ ಜಿ, ಕಜೆ ಮನೆ, ಉತ್ತರ ಬೀರಮಂಗಿಲ, ಸುಳ್ಯ ಕಸಬಾ ಗ್ರಾಮದ ನಿವಾಸಿಯಾಗಿರುವವರು ನೀಡಿದ ದೂರಿನಂತೆ, ಅವರ ತಂದೆ ಜಯರಾಮ ಜಿ ಅವರು ಕಳೆದ ಸುಮಾರು 8 ವರ್ಷಗಳಿಂದ ಮೈಸೂರು ಮೂಲದ ಶೃತಿ @ ವಿಶ್ಮೀತ (37) ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ ಶೃತಿಗೆ ಸುಮಾರು ₹6 ಲಕ್ಷ ಸಾಲವಾಗಿ ನೀಡಿರುವುದು ತಿಳಿದುಬಂದಿದೆ.
ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಶೃತಿ ಸುಳ್ಯಕ್ಕೆ ಬಂದು ಹಣ ನೀಡುವುದಾಗಿ ತಿಳಿಸಿದ್ದಾಳೆ. ಅದರಂತೆ, ಏಪ್ರಿಲ್ 7, 2026 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಶೃತಿ ತನ್ನ ಸುಮಾರು 3 ವರ್ಷದ ಮಗಳೊಂದಿಗೆ ಪಿರ್ಯಾದಿದಾರರ ಮನೆಗೆ ಬಂದಿದ್ದಾಳೆ. ಬಳಿಕ ಸ್ವಲ್ಪ ಸಮಯದ ನಂತರ ಹಣ ತರಲು ಸುಳ್ಯ ಪೇಟೆಗೆ ಹೋಗುವುದಾಗಿ ಹೇಳಿ ಮನೆ ಬಿಡುತ್ತಿದ್ದಾಳೆ.
ಅಂದು ಮಧ್ಯಾಹ್ನ ಪಿರ್ಯಾದಿದಾರರು ಮನೆಗೆ ಬಂದು ಊಟ ಮಾಡಿ ಕೆಲಸಕ್ಕೆ ತೆರಳಿದ್ದು, ರಾತ್ರಿ ಸುಮಾರು 11 ಗಂಟೆಗೆ ಮನೆಗೆ ಬಂದಾಗ ಅಲ್ಮಾರಿಯ ಲಾಕರ್ ಒಡೆದು ಒಳಗಿದ್ದ ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನೆ ವೇಳೆ ಕಲ್ಲು ಮತ್ತು ಹಸಿರು ಬಣ್ಣದ ಬಳೆಗಳ ತುಂಡುಗಳು ಪತ್ತೆಯಾಗಿವೆ.
ಕಳುವಾಗಿರುವ ಚಿನ್ನಾಭರಣಗಳ ವಿವರ ಹೀಗಿದೆ:
24 ಗ್ರಾಂ ತೂಕದ 3 ಹಳೆಯ ಚಿನ್ನದ ಬಳೆಗಳು (₹1,92,000)
3 ಗ್ರಾಂ ತೂಕದ 2 ಕಿವಿಯೋಲೆಗಳು (₹24,000)
2 ಗ್ರಾಂ ತೂಕದ 3 ಉಂಗುರಗಳು (₹16,000)
½ ಗ್ರಾಂ ಚಿನ್ನದ ನಾಣ್ಯ (₹4,000)
14 ಗ್ರಾಂ ತೂಕದ ನಕ್ಲೇಸ್ (₹1,12,000)
16 ಗ್ರಾಂ ತೂಕದ ಚೈನ್ (ಪೆಂಡೆಂಟ್ ಸಹಿತ) (₹1,28,000)
1 ಗ್ರಾಂ ತೂಕದ 2 ಕಿವಿ ರಿಂಗ್‌ಗಳು (₹8,000)
2 ಗ್ರಾಂ ಬ್ರಾಸ್ ಲೈಟ್ (₹16,000)
ಒಟ್ಟು ಸುಮಾರು 62½ ಗ್ರಾಂ ಚಿನ್ನಾಭರಣಗಳು ಕಳವಾಗಿದ್ದು, ಅಂದಾಜು ಮೌಲ್ಯ ₹5 ಲಕ್ಷವಾಗಿರುತ್ತದೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 49/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 331(3) ಮತ್ತು 305 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?