📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ

    13 ವರ್ಷದ ಕಂದಮ್ಮನ ಆಕ್ರಂದನ ಕೇಳಿಸದ ಕಾನೂನು ವ್ಯವಸ್ಥೆ .!ಐದು ದಿನಗಳು… 30ಕ್ಕೂ ಹೆಚ್ಚು ನರಾಧಮರ ಪೈಶಾಚಿಕ ನರಕಯಾತನೆ! ರಕ್ಷಿಸಬೇಕಾದ ರಿಕ್ಷಾ ಚಾಲಕನೇ ಮಾರಿದಾಗ, ಹೋಟೆಲ್ ಕೋಣೆಗಳಲ್ಲಿ ಕಣ್ಣೀರಿಟ್ಟ ಆ ಮಗುವಿನ ಆರ್ತನಾದಕ್ಕೆ ನಮ್ಮ ವ್ಯವಸ್ಥೆ ಇನ್ನೂ ಕಿವುಡಾಗಿದೆಯೇ? ಇದು ಕೇವಲ ಅತ್ಯಾಚಾರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಬಿದ್ದ ಭೀಕರ ಕೊಡಲಿಪೆಟ್ಟು.ಕಾನೂನಿನ ಓರೆಕೋರೆಗಳ ನಡುವೆ ಕ್ರೂರಿಗಳು ರಾಜಾತಿಥ್ಯ ಅನುಭವಿಸಬೇಕೇ? ವರ್ಷಗಟ್ಟಲೆ ಕಾಯುವ ತಾಳ್ಮೆ ಈಗ ಸಾರ್ವಜನಿಕರಿಗಿಲ್ಲ. ಹೆಣ್ಣುಮಕ್ಕಳ ರಕ್ಷಣೆ ಕೇವಲ ಭಾಷಣಕ್ಕೆ ಸೀಮಿತವಾಗದಿರಲಿ; ಮಗುವಿನ ಬಾಳನ್ನು ನರಕವಾಗಿಸಿದ ಆ ರಾಕ್ಷಸರಿಗೆ ತಕ್ಷಣದ ಮರಣದಂಡನೆಯೇ ಸೂಕ್ತ ಪ್ರಾಯಶ್ಚಿತ್ತ! ಅಲ್ಲವೇ?

    ಹೋಟೆಲ್‌ಗಳು ನೆಲಸಮವಾಗಿರಬಹುದು, ಆದರೆ ಆ ಮಗುವಿನ ಮನಸ್ಸಿಗೆ ಆದ ಗಾಯ ಮಾಯುವುದೇ? ರಾಜಕೀಯ ಬದಿಗಿಟ್ಟು, ಸ್ವಾರ್ಥ ಬಿಟ್ಟು ದೇಶದ ಯುವಶಕ್ತಿ ಒಂದಾಗಬೇಕಿದೆ. ಹೆಣ್ಣಿನ ತಂಟೆಗೆ ಬಂದರೆ ಬದುಕುಳಿಯುವುದಿಲ್ಲ ಎಂಬ ಭಯ ಪ್ರತಿಯೊಬ್ಬ ರಾಕ್ಷಸನ ಎದೆಯಲ್ಲೂ ಬಿತ್ತಬೇಕಾಗಿದೆ.

    ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಡಿ; ದೇಶದ ಹೆಣ್ಣುಮಕ್ಕಳ ಅಸ್ತಿತ್ವಕ್ಕಾಗಿ ಈಗ ಧ್ವನಿ ಎತ್ತಿ!

    ಜೂನ್ 18ರಂದು ಈ 13 ವರ್ಷದ ಶಾಲಾ ಬಾಲಕಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದಾಗ ತಡರಾತ್ರಿಯಾಗಿದೆ. ಮನೆಗೆ ಮರಳಲು ಸಹಾಯ ಕೋರಿ ಈಕೆ ರಾಮಬಾಬು ಎಂಬ ಇ-ರಿಕ್ಷಾ ಚಾಲಕನ ವಾಹನ ಹತ್ತಿದ್ದಾಳೆ. ಆದರೆ, ಆ ನರಾಧಮ ಚಾಲಕ ಬಾಲಕಿಯನ್ನ ಮನೆಗೆ ತಲುಪಿಸುವ ಬದಲು ಹೋಟೆಲ್ ಮಾಲೀಕರಿಗೆ ಮಾರಾಟ ಮಾಡಿದ್ದಾನೆ. ಕೇವಲ 13 ವರ್ಷದ ಹಸುಗೂಸಿನಂತಿದ್ದ ಬಾಲಕಿಯನ್ನ ನಗರದ ‘ಜಾಯ್ ಇನ್’, ‘ಸಫೈರ್ ಇನ್’, ‘ಡ್ರೀಮ್’ ಮತ್ತು ‘ಖುಂಗರ್’ ಎಂಬ ಹೋಟೆಲ್‌ಗಳಲ್ಲಿ ಇಟ್ಟು, ಸುಮಾರು 5 ದಿನಗಳ ಕಾಲ 30ಕ್ಕೂ ಹೆಚ್ಚು ಕ್ರೂರಿಗಳು ಸತತವಾಗಿ ಅತ್ಯಾಚಾರವೆಸಗಿ ಪೈಶಾಚಿಕ ಆನಂದ ಹೊಂದಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದ ಆ ಮಗುವಿಗೆ ಧ್ವನಿ ಅಡಗಿಸಲು ಬಲವಂತವಾಗಿ ಮದ್ಯವನ್ನು ಕುಡಿಸಲಾಗುತ್ತಿತ್ತು ಎಂದು ಬಾಲಕಿ ಎಫ್‌ಐಆರ್‌ನಲ್ಲಿ ನೀಡಿದ ಹೇಳಿಕೆ ಕೇಳಿದರೆ ಎಂತಹ ಕಠಿಣ ಹೃದಯಿಯೂ ಕರಗುತ್ತದೆ.

    Also Read  ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ

    ಸಿಸ್ಟಮ್ ಹಾಗೂ ಕಾನೂನಿನ ಲೋಪದೋಷಗಳ ವಿರುದ್ಧ ಆಕ್ರೋಶ.

    ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿನ ದೀರ್ಘಾವಧಿಯ ತನಿಖೆ, ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ತಾಂತ್ರಿಕ ಲೋಪದೋಷಗಳನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹ ರಾಕ್ಷಸರು ತಪ್ಪು ಮಾಡಿ ವರ್ಷಗಟ್ಟಲೆ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಾರೆ. ಮಗು ಕಾಣೆಯಾದಾಗ ತಕ್ಷಣವೇ ಕಾರ್ಯಪ್ರವೃತ್ತರಾಗದ ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಹಾಗೂ ನಗರದಲ್ಲಿ ಅವೇಧನೀಯವಾಗಿ ನಡೆಯುತ್ತಿದ್ದ ಅನಧಿಕೃತ ಹೋಟೆಲ್‌ಗಳ ದಂಧೆ ಈ ಭೀಕರ ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ. ತನಿಖೆ, ಸಾಕ್ಷ್ಯಾಧಾರಗಳ ಹೆಸರಿನಲ್ಲಿ ಆರೋಪಿಗಳಿಗೆ ಜಾಮೀನು ಸಿಗುವಂತಾಗುವುದು ಮತ್ತು ಮರಣದಂಡನೆ ಜಾರಿಯಾಗಲು ದಶಕಗಳೇ ಕಳೆಯುವುದು ಇಂದಿನ ಸಾರ್ವಜನಿಕರಲ್ಲಿ ಕಾನೂನಿನ ಭಯವನ್ನು ಇಲ್ಲದಂತಾಗಿಸಿದೆ.

    ಪ್ರಸ್ತುತ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳು:

    ಜೂನ್ 22 ರಂದು ಬಾಲಕಿಯನ್ನು ಹೋಟೆಲ್‌ನಿಂದ ರಕ್ಷಿಸಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಸ್ಫೋಟಗೊಂಡಿದೆ.ಪ್ರಸ್ತುತ ಶ್ರೀಗಂಗಾನಗರದ ಪೊಲೀಸ್ ಇಲಾಖೆಯು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಹೋಟೆಲ್ ಮಾಲೀಕರು, ಮ್ಯಾನೇಜರ್‌ಗಳು ಮತ್ತು ರಿಕ್ಷಾ ಚಾಲಕ ಸೇರಿದಂತೆ ಇದುವರೆಗೆ 14ಕ್ಕೂ ಹೆಚ್ಚು ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೃತ್ಯಕ್ಕೆ ಬಳಕೆಯಾದ 4 ಹೋಟೆಲ್‌ಗಳನ್ನು ಜೆಸಿಬಿ ಮತ್ತು ಹೈಡ್ರಾಲಿಕ್ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ನೆಲಸಮ ಮಾಡಿದೆ.

    Also Read  ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ... 

    ಸಾರ್ವಜನಿಕರ ಧ್ವನಿ ಮತ್ತು ಸೂಕ್ತ ಶಿಕ್ಷೆಯ ಆಗ್ರಹ:

    ಯಾವ ನರಾಧಮರು ಇಂತಹ ಕೃತ್ಯವೆಸಗಿದ್ದಾರೋ ಅವರಿಗೆ ಯಾವುದೇ ಮಾನವೀಯ ಹಕ್ಕುಗಳು ಇರಬಾರದು ಎಂಬುದು ಇಡೀ ಸಮಾಜದ ಮುಕ್ತ ಧ್ವನಿಯಾಗಿದೆ. ಇಂತಹ ಕ್ರೂರಿಗಳಿಗೆ ಯಾವುದೇ ತಡವಿಲ್ಲದೆ, ತಕ್ಷಣವೇ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ತಂಟೆಗೆ ಬರಲು ಇಂತಹ ರಾಕ್ಷಸರು ನೂರು ಬಾರಿ ಯೋಚಿಸುತ್ತಾರೆ. ರಾಜಕೀಯ ಲಾಭ-ನಷ್ಟ ಅಥವಾ ಸಂಘಟನೆಗಳ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ದೇಶದ ಯುವಜನತೆ, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ನಾಗರಿಕನೂ ಪಕ್ಷಾತೀತವಾಗಿ ಈ ಘಟನೆಯ ವಿರುದ್ಧ ಧ್ವನಿ ಎತ್ತಬೇಕಿದೆ. ಈ ಮಗುವಿಗೆ ಸಿಗುವ ತ್ವರಿತ ನ್ಯಾಯವೇ ಇನ್ನುಳಿದ ಹೆಣ್ಣುಮಕ್ಕಳಿಗೆ ಸಿಗುವ ನಿಜವಾದ ರಕ್ಷಣೆಯಾಗಬಲ್ಲದು.

    Also Read  “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!

    ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇಡೀ ಮಾನವಕುಲವೇ ತಲೆತಗ್ಗಿಸುವಂತೆ ಮಾಡಿದೆ.ಇಂದು ಶ್ರೀಗಂಗಾನಗರದ ಮಗಳು, ನಾಳೆ ನಮ್ಮದೇ ಮನೆಯ ಮಗುವಾಗಿರಬಹುದು. ಇದು ಪಕ್ಷಗಳ ಹೋರಾಟವಲ್ಲ, ಮಾನವೀಯತೆಯ ಉಳಿವಿಗಾಗಿ ನಡೆಯಬೇಕಾದ ಕ್ರಾಂತಿ. ಯಾವುದೇ ತಡವಿಲ್ಲದೆ ತ್ವರಿತ ನ್ಯಾಯ ಸಿಗುವವರೆಗೂ ನಮ್ಮ ಆಕ್ರೋಶದ ಧ್ವನಿ ಅಡಗದಿರಲಿ!

    ##JusticeForGanganagarVictim #HangTheRapistsImmediately #ProtectOurDaughters #NoDelayInJustice #StrictLawsAgainstMonsters

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ, ಯಂಗ್ ಜಡ್ಜ್ ಆತ್ಮಹತ್ಯೆ
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ರಸ್ತೆ ಮಧ್ಯೆಯೇ ದೌರ್ಜನ್ಯ! ಸೇಫ್ ಇಂಡಿಯಾ’ ಮಾತು vs ಜಮುಯಿ ಸತ್ಯ!
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
    “ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌