📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!

    ಮರೆಯಾದ ಒಬ್ಬ ಮಗಳ ಕನಸು, ಒಂದು ಕುಟುಂಬದ ತ್ಯಾಗ, ಒಂದು ವ್ಯವಸ್ಥೆಯ ಒತ್ತಡ… ಕೊನೆಗೆ ಎಂದೂ ಮರೆಯದ ವಿದಾಯ ಪತ್ರ..ಸಾವಿನಲ್ಲಿ ಅಂತ್ಯವಾದ ಬದುಕು..ಈಗಿನ ಮಕ್ಕಳು ಒತ್ತಡವನ್ನು ಸಹಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಅನ್ನೋದು ಇತ್ತೀಚಿನ ಇಂಥದೇ ಹಲವು ಸಾಲು ಸಾಲು ಘಟನೆಗಳು ಸಮಾಜದ ಹೆತ್ತವರ ಹಾಗೂ ವ್ಯವಸ್ಥೆಯ ಕಣ್ಣತೆರೆಸುವ ಎಚ್ಚರಿಕೆ ಘಂಟೆ…

    18 ವರ್ಷದ ಆಕಾಂಕ್ಷಾ ಚತುರ್ವೇದಿ. ಒಂದು ಸಾಮಾನ್ಯ ರೈತ ಕುಟುಂಬದ ಮಗಳು. ಆದರೆ ಅವಳ ಕನಸು ಮಾತ್ರ ಅಸಾಮಾನ್ಯವಾಗಿತ್ತು – ವೈದ್ಯೆಯಾಗಬೇಕು, ಅಪ್ಪ-ಅಮ್ಮನ ಕಷ್ಟಕ್ಕೆ ಪ್ರತಿಫಲ ಕೊಡಬೇಕು, ಕುಟುಂಬದ ಬದುಕು ಬದಲಿಸಬೇಕು. ಇದೇ ಕನಸನ್ನು ಹೊತ್ತು ವರ್ಷಗಳ ಕಾಲ ಹಗಲು-ರಾತ್ರಿ ಓದಿದ್ದ ಆಕಾಂಕ್ಷಾ ಇಂದು ಇಲ್ಲ. ಉಳಿದಿರುವುದು ಅವಳ ಕೊನೆಯ ಪತ್ರ ಮತ್ತು ಸಾವಿರಾರು ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸುವ ಪ್ರಶ್ನೆಗಳು ಮಾತ್ರ.

    ಮಧ್ಯಪ್ರದೇಶದ ಮಾವೊಗಂಜ್ ಜಿಲ್ಲೆಯ ಕೃಷನ್ ಕುಮಾರ್ ಚೌಬೆ ಇವರ ರೈತ ಕುಟುಂಬದಲ್ಲಿ ಹುಟ್ಟಿದ ಆಕಾಂಕ್ಷಾ, ವೈದ್ಯೆಯಾಗುವ ಗುರಿಗಾಗಿ ಮನೆಯವರಿಂದ ದೂರವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೂ ಮಗಳ ಕನಸು ನನಸಾಗಲಿ ಎಂಬ ಕಾರಣಕ್ಕೆ ತಂದೆ ಕೃಷ್ಣಕುಮಾರ್ ಚತುರ್ವೇದಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮಗಳ ಓದಿಗಾಗಿ ಅವರು ತಮ್ಮ ಸಾಮರ್ಥ್ಯ ಮೀರಿದ ತ್ಯಾಗ ಮಾಡಿದ್ದರು.

    Also Read  ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 

    “ಈ ಬಾರಿ ನಮ್ಮ ಮಗಳು ಡಾಕ್ಟರ್ ಆಗುತ್ತಾಳೆ. ನಮ್ಮ ಮನೆಯ ಕಷ್ಟಗಳೆಲ್ಲ ಮುಗಿಯುತ್ತವೆ” ಎಂಬ ಆಶಾಭಾವನೆ ಇಡೀ ಕುಟುಂಬದಲ್ಲಿತ್ತು. ಆಕಾಂಕ್ಷಾ ಕೂಡ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದರು. ಸುಮಾರು 650 ಅಂಕಗಳು ಬರಬಹುದು ಎಂದು ಪೋಷಕರಿಗೆ ಹೇಳಿಕೊಂಡಿದ್ದರು.

    ಆದರೆ ನಂತರ ನಡೆದ ಬೆಳವಣಿಗೆಗಳು ಅವಳ ಜೀವನವನ್ನೇ ಬದಲಿಸಿಬಿಟ್ಟವು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ, ಪರೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆ ಉದ್ಭವಿಸಿದ ಅನುಮಾನಗಳು, ಮರುಪರೀಕ್ಷೆಯ ಘೋಷಣೆ ಮತ್ತು ಭವಿಷ್ಯದ ಅನಿಶ್ಚಿತತೆ ಅವಳ ಮನಸ್ಸಿನ ಮೇಲೆ ಭಾರಿ ಹೊಡೆತ ನೀಡಿದವು. ವರ್ಷಗಳ ಪರಿಶ್ರಮ ಒಂದು ಕ್ಷಣದಲ್ಲಿ ಅರ್ಥ ಕಳೆದುಕೊಂಡಂತೆ ಅವಳಿಗೆ ಭಾಸವಾಗಿತ್ತು.

    ಕೊನೆಗೆ ಮೇ 20ರಂದು ಆಕಾಂಕ್ಷಾ ತನ್ನ ಕೊನೆಯ ಪತ್ರ ಬರೆದಳು.

    “ಅಪ್ಪ-ಅಮ್ಮ, ನಿಮ್ಮ ಮಗಳು ಓದಿ ಡಾಕ್ಟರ್ ಆಗುತ್ತಾಳೆ ಎಂದು ನೀವು ನಂಬಿದ್ದೀರಿ. ಆದರೆ ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಾನು ನಿಮ್ಮನ್ನು ನಿರಾಶೆಗೊಳಿಸುತ್ತಿದ್ದೇನೆ. ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತಮ ಅಂಕ ಬರುತ್ತದೆ ಎಂಬ ಖಾತರಿಯೂ ಇಲ್ಲ.”

    Also Read  ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..

    ಈ ಕೆಲವೇ ಸಾಲುಗಳಲ್ಲಿ ಒಬ್ಬ ವಿದ್ಯಾರ್ಥಿನಿಯ ಭಯ, ಆತಂಕ, ಒತ್ತಡ ಮತ್ತು ಅಸಹಾಯಕತೆ ಎಲ್ಲವೂ ಅಡಗಿಕೊಂಡಿದ್ದವು. ಕೆಲವೇ ಗಂಟೆಗಳ ಬಳಿಕ ಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡರು.

    ಒಬ್ಬ ವಿದ್ಯಾರ್ಥಿನಿಯ ಸಾವಿಗೆ ಕೇವಲ ಒತ್ತಡವೇ ಕಾರಣವಲ್ಲ, ವ್ಯವಸ್ಥೆಯ ವೈಫಲ್ಯವೂ ಕಾರಣ ಎಂಬ ಪ್ರಶ್ನೆ ಇಂದು ದೇಶದ ಮುಂದೆ ನಿಂತಿದೆ. ವರ್ಷಗಳ ಕಾಲ ಓದಿದ ವಿದ್ಯಾರ್ಥಿಗಳ ಭವಿಷ್ಯವನ್ನು ಕೆಲವರ ಅಕ್ರಮಗಳಿಂದ ಹಾಳು ಮಾಡಿದರೆ ಅದರ ಹೊಣೆ ಯಾರು ಹೊರುತ್ತಾರೆ? ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಪರೀಕ್ಷೆಯ ಮೇಲಿನ ದಾಳಿಯಲ್ಲ, ಲಕ್ಷಾಂತರ ಕುಟುಂಬಗಳ ಕನಸುಗಳ ಮೇಲಿನ ದ್ರೋಹ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ.

    ಈ ಘಟನೆ ಕೇವಲ ಒಬ್ಬ ವಿದ್ಯಾರ್ಥಿನಿಯ ಸಾವಿನ ಕಥೆಯಲ್ಲ. ಇದು ದೇಶದ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡದ ಪ್ರತಿಬಿಂಬವಾಗಿದೆ. ಅಂಕಗಳು, ರ‍್ಯಾಂಕ್‌ಗಳು, ಸೀಟುಗಳು ಮತ್ತು ಭವಿಷ್ಯದ ಭಯಗಳ ನಡುವೆ ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ನೋವು ಕಾಣಿಸದೇ ಹೋಗುತ್ತದೆ.

    Also Read  ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ

    ಇದೇ ಸಂದರ್ಭದಲ್ಲಿ ರಾಜಸ್ಥಾನದ ಕೋಟಾದಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕ್ಷಣ ವ್ಯವಸ್ಥೆಯ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸ್ಪರ್ಧೆ ಹೆಚ್ಚಾಗುತ್ತಿರುವಂತೆ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವೂ ಹೆಚ್ಚುತ್ತಿದೆ ಎಂಬುದನ್ನು ಈ ಘಟನೆಗಳು ಮತ್ತೊಮ್ಮೆ ನೆನಪಿಸಿವೆ.

    ಆಕಾಂಕ್ಷಾಳ ಸಾವಿನಿಂದ ಕಳೆದುಹೋದದ್ದು ಕೇವಲ ಒಂದು ಜೀವವಲ್ಲ. ಒಂದು ಕುಟುಂಬದ ಕನಸು, ಒಬ್ಬ ತಂದೆಯ ತ್ಯಾಗ, ಒಬ್ಬ ತಾಯಿಯ ನಿರೀಕ್ಷೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬಹುದಾಗಿದ್ದ ಒಬ್ಬ ಭವಿಷ್ಯದ ವೈದ್ಯೆ.

    ಯಾವುದೇ ಪರೀಕ್ಷೆ ಜೀವನಕ್ಕಿಂತ ದೊಡ್ಡದಲ್ಲ. ಒಂದು ಫಲಿತಾಂಶ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಕಳೆದುಹೋದ ಒಂದು ಜೀವ ಮತ್ತೆ ಮರಳಿ ಬರುವುದಿಲ್ಲ.

    ##NEET #AkankshaChaturvedi #StudentPressure #EducationSystem #MentalHealthAwareness #NEETExam #StudentLife #HeartBreakingStory #IndiaNews #Awareness

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
    ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
    ಮಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು..!ಅಡೆಂಜದಲ್ಲಿ ನಕಲಿ ನೋಟಿನ ಕಾರ್ಖಾನೆ ಬಯಲು! ಏಳು ಮಂದಿ ಅರೆಸ್ಟ್‌, ಕೋಟಿ ಕೋಟಿ ವಂಚನೆಗೆ ಬ್ರೇಕ್
    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡದ ಐತಿಹಾಸಿಕ ಟೆಸ್ಟ್ ಜಯ; ದೇಶದಲ್ಲಿ ಕ್ರಿಕೆಟ್‌ನಿಂದ ಟೆನಿಸ್‌ವರೆಗೆ… ಕ್ರೀಡೆಗಳತ್ತ ಹೆಚ್ಚುತ್ತಿರುವ ಆಸಕ್ತಿ..!
    ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಸೆಲೆಬ್ರಿಟಿಗಳು–ಇನ್‌ಫ್ಲುವೆನ್ಸರ್‌ಗಳಿಗೆ FSSAI ನೋಟಿಸ್ ….!ಹಣಕ್ಕಾಗಿ ಜಾಹೀರಾತು, ಜನರ ಆರೋಗ್ಯದ ಜೊತೆ ಆಟವೇ?
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    AI ಬಳಸಿ ನಕಲಿ ಹಾಲ್‌ಟಿಕೆಟ್: ಪೊಲೀಸ್ ಆಗಬೇಕಿದ್ದ ಕಡಬ ಯಜೇಶ್ ಬಿ.ಜೆ. ರೈ ಅರೆಸ್ಟ್!
    ಅರ್ಹ ಮತದಾರರಿಗೆ ರಿಲೀಫ್‌: ಹೆಸರು ಬಿಟ್ಟವರಿಗೆ ಮತ್ತೆ ಅವಕಾಶ!
    ರಿಲಯನ್ಸ್ ವಿರುದ್ಧ ಇ.ಡಿ ಬಿಗ್ ಹ್ಯಾಮರ್ – ₹1,021 ಕೋಟಿ ಮುಟ್ಟುಗೋಲು
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.